ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ವಿಶೇಷ ಅಭಿಯಾನ 4.0 ಅಡಿಯಲ್ಲಿ ಸ್ವಚ್ಛತೆಯ ಕುರಿತು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುವುದನ್ನು ಮುಂದುವರಿಸಿದೆ

Posted On: 26 SEP 2024 1:38PM by PIB Bengaluru

ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವ ಮತ್ತು ಸರ್ಕಾರದಲ್ಲಿ ಬಾಕಿಯಿತುವ ಕಡತಗಳನ್ನು ಕಡಿಮೆ ಮಾಡುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಸ್ಫೂರ್ತಿಯನ್ನು ಪಡೆದುಕೊಂಡು, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂ.ಹೆಚ್.ಐ) ತನ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.) ಮತ್ತು ಸ್ವಾಯತ್ತ ಸಂಸ್ಥೆಗಳ (ಎ.ಬಿ) ಜೊತೆಗೆ ಸತತ 4 ನೇ ಬಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ವ್ಯಾಪಕವಾದ ಯೋಜನೆಯನ್ನು ರೂಪಿಸುತ್ತಿದೆ. ಬಾಕಿಯಿರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನದ ವರ್ಷ (ಎಸ್.ಸಿ.ಡಿ.ಪಿ.ಎಂ) 4.0 ಅನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳೆಂದರೆ, 15 ನೇ - 30 ನೇ ಸೆಪ್ಟೆಂಬರ್ 2024 ರಿಂದ ಪೂರ್ವಸಿದ್ಧತಾ ಹಂತ ಮತ್ತು 2 ನೇ - 31 ಅಕ್ಟೋಬರ್ 2024 ರವರೆಗೆ ಮುಖ್ಯ ಹಂತವಾಗಿರುತ್ತದೆ.

ಸ್ವಚ್ಛತಾ ವಿಶೇಷ ಅಭಿಯಾನ 3.0 ಸಮಯದಲ್ಲಿ ಎಂ.ಹೆಚ್.ಐ ಉತ್ತಮ ಕಾರ್ಯಚಟುವಟಿಕೆ ಮಾಡಿದ್ದು, ವಿಶೇಷ ಅಭಿಯಾನ 3.0 ಸಮಯದಲ್ಲಿ, ಸಚಿವಾಲಯವು ರದ್ದಿ ವಿಲೇವಾರಿಯಿಂದ ಕಸಮುಕ್ತವಾದ ಬಾಹ್ಯ ಸ್ಥಳಾವಕಾಶದ ಶ್ರೇ ಣಿಯಲ್ಲಿ  ಇತರ ಸಚಿವಾಲಯಗಳ ಸಾಲಿನಲ್ಲಿ 2 ನೇ ಸ್ಥಾನವನ್ನು ಸಾಧಿಸಿದೆ. ಸುಮಾರು 21 ಲಕ್ಷ ಚದರ ಮೀಟರ್ ಅನ್ನು ಬಳಕೆಯೋಗ್ಯ ಸ್ಥಳವಾಗಿ ರೂಪಿಸಲಾಯಿತು. ಅನಗತ್ಯ ವಸ್ತುಗಳ ವಿಲೆವಾರಿ/ ಮಾರಾಟದಿಂದ ರೂ. 4.66 ಕೋಟಿ ಗಳ ಆದಾಯವನ್ನು ಗಳಿಸುವ ಮೂಲಕ ಇತರ ಎಲ್ಲಾ ಸಚಿವಾಲಯಗಳ ಆದಾಯ ಉತ್ಪಾದನೆಯಲ್ಲಿ ಕೂಡಾ ಎಂ.ಹೆಚ್.ಐ  5 ನೇ ಸ್ಥಾನವನ್ನು ಸಾಧಿಸಿದೆ.

Image

ಹೆಚ್.ಎಂ.ಟಿ. ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ರದ್ದಿಯನ್ನು ವಿಲೆವಾರಿ ಮಾಡಿ ಸ್ವಚ್ಛಗೊಳಿಸಲು ಎವೈಸಿಎಲ್ ಬೆಂಗಳೂರು, ಕರ್ನಾಟಕ, ಬಾಸ್ಮತಿಯಾ ಟೀ ಎಸ್ಟೇಟ್, ಅಸ್ಸಾಂನಲ್ಲಿ ಜಾಗವನ್ನು ಗುರುತಿಸಲಾಗಿದೆ.  ಹಿಂದಿನ ಕಾರ್ಯಕ್ಷಮತೆಯನ್ನು ಪುನರಾವರ್ತಿಸುವ ಉದ್ದೇಶದಿಂದ, ಸಚಿವಾಲಯವು ತನ್ನ ಸಿ.ಪಿ.ಎಸ್.ಇ.ಗಳು ಮತ್ತು ಎಬಿಗಳೊಂದಿಗೆ ಇದುವರೆಗೆ ಪ್ರಧಾನ ಹಂತದಲ್ಲಿ 111 ಹೊರಾಂಗಣ ಕಾರ್ಯಚಟುವಟಿಕೆಗಳನ್ನು ನಡೆಸಲು ಯೋಜಿಸಿದೆ. ವಿಶೇಷ ಅಭಿಯಾನದ 4.0ರಲ್ಲಿ 1.91 ಲಕ್ಷ ಚದರ. ಅಡಿ ವನ್ನು ಗುರುತಿಸಲಾಗಿದ್ದು, ಇದನ್ನು ಕಸ ಮುಕ್ತಗೊಳಿಸಲಾಗುವುದು ಮತ್ತು ಸರಿಸುಮಾರು 28,000 ಭೌತಿಕ ಕಡತಗಳನ್ನು ಪರಿಶೀಲನೆಗಾಗಿ ಗುರುತಿಸಲಾಗಿದೆ, ಅವುಗಳಲ್ಲಿ 5,700 (ಅಂದಾಜು) ಕಳೆದ ಅನಾವಶ್ಯಕವನ್ನು ತೆಗೆಯಬೇಕಾಗಿದೆ. ಅದೇ ರೀತಿ, 1.05 ಲಕ್ಷ (ಅಂದಾಜು) ಡಿಜಿಟಲ್ ಫೈಲ್ ಗಳನ್ನು ಪರಿಶೀಲನೆಗಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 86,000 (ಅಂದಾಜು) ಮುಚ್ಚ/ ತೆಗೆದು ಬಿಸಾಕಬೇಕಾಗಿದೆ.


*****



(Release ID: 2059263) Visitor Counter : 6


Read this release in: English , Urdu , Hindi , Tamil