ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

#ತಾಯಿಯಹೆಸರಲ್ಲಿಒಂದುಮರ (#एक_पेड़_माँ_के_नाम) ಮತ್ತು #ತಾಯಿಗಾಗಿನೆಡುವುದು (#Plant4Mother) ಯೋಜನೆಯಡಿಯಲ್ಲಿ ‘ಸ್ವಚ್ಛತಾ ಹಿ ಸೇವಾ 2024’ ಅಭಿಯಾನ ಮತ್ತು ಮರ ನೆಡುವ ಅಭಿಯಾನಗಳಲ್ಲಿ ಕೇಂದ್ರ ಬೃಹತ್  ಕೈಗಾರಿಕೆಗಳ ಸಚಿವಾಲಯ  ಭಾಗವಹಿಸಿದೆ


100 ಕ್ಕೂ ಹೆಚ್ಚು ಸ್ಥಳಗಳನ್ನು “ಗುರಿಯಿಟ್ಟ ಸ್ವಚ್ಛತಾ ಸ್ಥಳಗಳಾಗಿ” (ಕ್ಲೀನ್ಲಿನೆಸ್ ಟಾರ್ಗೆಟ್ ಯೂನಿಟ್‌ಗಳಾಗಿ – ಸಿಟಿಯುಗಳು)  ಆಯ್ಕೆ ಮಾಡಲಾಗಿದೆ, ಇವುಗಳನ್ನು ಸ್ವಚ್ಛ ಮತ್ತು ಆರೋಗ್ಯಕರ ಸ್ಥಳಗಳಾಗಿ ಪರಿವರ್ತಿಸುವ ಉದ್ದೇಶವಿದೆ

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರ ನೇತೃತ್ವದಲ್ಲಿ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ ನಲ್ಲಿ ಮರ ನೆಡುವ ಅಭಿಯಾನ ನಡೆಯಿತು

Posted On: 26 SEP 2024 1:40PM by PIB Bengaluru

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯ (ಎಂ.ಹೆಚ್.ಐ) ಇದರಡಿ ಬರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.ಗಳು) / ಸ್ವಾಯತ್ತ ಸಂಸ್ಥೆಗಳು (ಎ.ನಿ.ಗಳು) ಜೊತೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಜಲ ಶಕ್ತಿ ಸಚಿವಾಲಯದ ಬೆಂಬಲದೊಂದಿಗೆ 'ಸ್ವಚ್ಛತಾ ಹಿ ಸೇವಾ 2024' ಅಭಿಯಾನದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಕೊಳಕು ಮತ್ತು ಅಹಿತಕರವಾದ ಕಸದ ತಾಣಗಳನ್ನು (ಬ್ಲ್ಯಾಕ್ ಸ್ಪಾಟ್‌ಗಳು) ತೆರವುಗೊಳಿಸುವುದರ ಮೇಲೆ ಸ್ವಚ್ಛತೆಯನ್ನು ಕೇಂದ್ರೀಕರಿಸುವ ಮೂಲಕ, ನಾಗರಿಕರ ಭಾಗವಹಿಸುವಿಕೆಯೊಂದಿಗೆ, ನೈರ್ಮಲ್ಯ ಕಾರ್ಯಕರ್ತರ ಕೊಡುಗೆಯನ್ನು ಗುರುತಿಸುವುದು, ಕಳೆದ ದಶಕದ ಸಾಧನೆಗಳ ಮಾಹಿತಿ ನೀಡುವುದು ಮತ್ತು 'ಸಂಪೂರ್ಣ ಸ್ವಚ್ಛತೆ'ಗಾಗಿ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುವುದು ಮೊದಲಾದ ಚಟುವಟಿಕೆಗಳೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.

'ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ' ಅಭಿಯಾನದ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಅಭಿಯಾನದ ಆರಂಭಿಕ ಹಂತದಲ್ಲಿ 200 ಕ್ಕೂ ಹೆಚ್ಚು ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರವ್ಯಾಪಿ ನಿಟ್ಟಿನಲ್ಲಿ ಮಾಡಲು ಉದ್ಧೇಶಿಸಲಾಗಿದೆ. ನಿರ್ಲಕ್ಷಿತ / ಸವಾಲಿನ ಸ್ಥಳಗಳನ್ನು ಸಾಮಾನ್ಯವಾಗಿ ಕಪ್ಪು ಚುಕ್ಕೆಗಳು ಎಂದು ಕರೆಯಲಾಗುತ್ತದೆ , ಇಂತಹ 100 ಕ್ಕೂ ಹೆಚ್ಚು ಸ್ಥಳಗಳನ್ನು ಸ್ವಚ್ಛತೆಯ ಗುರಿ ಘಟಕಗಳಾಗಿ ಆಯ್ಕೆ ಮಾಡಲಾಗಿದೆ ( ಸಿಟಿಯು ಗಳು) ಈ ಮೂಲಕ ಇವುಗಳನ್ನು  ಸ್ವಚ್ಛ ಮತ್ತು ಆರೋಗ್ಯಕರ ಸ್ಥಳಗಳಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. 

ಬ್ರಿಡ್ಜ್ & ರೂಫ್ ಕಂ. (ಇಂಡಿಯಾ) ಲಿಮಿಟೆಡ್‌ನಿಂದ ಪಶ್ಚಿಮ ಬಂಗಾಳದ ಸಂತ್ರಗಾಚಿ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ (ಸಿಟಿಯು ಎಂದು ಗುರುತಿಸಲಾಗಿದೆ)

ಬ್ರಿಡ್ಜ್ ಮತ್ತು ರೂಫ್ ಕಂ. (ಇಂಡಿಯಾ) ಲಿಮಿಟೆಡ್ ನಿಂದ ಉತ್ತರಾಖಂಡದ ರುದ್ರಪ್ರಯಾಗ ಪ್ರಾಜೆಕ್ಟ್ ಸೈಟ್‌ ನಲ್ಲಿ ಸ್ವಚ್ಛತಾ ಅಭಿಯಾನ (ಸಿಟಿಯು ಎಂದು ಗುರುತಿಸಲಾಗಿದೆ).

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5 ಜೂನ್ 2024 ರಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ #ತಾಯಿಯಹೆಸರಲ್ಲಿಒಂದುಮರ (#एक_पेड़_माँ_के_नाम) ಮತ್ತು #ತಾಯಿಗಾಗಿನೆಡುವುದು (#Plant4Mother) ಯೋಜನೆಯಡಿಯಲ್ಲಿ ‘ಸ್ವಚ್ಛತಾ ಹಿ ಸೇವಾ 2024’ ಅಭಿಯಾನವನ್ನು ಪ್ರಾರಂಭಿಸಿದರು. ಅಭಿಯಾನವು ಭೂಮಿ ಅವನತಿಯನ್ನು ನಿಲ್ಲಿಸುವುದು ಮತ್ತು ಮರಗಳ ಬೆಳೆಸುವುದು, ಬರ ನಿರೋಧಕತೆಯನ್ನು ನಿರ್ಮಿಸುವುದು ಮತ್ತು ಮರುಭೂಮಿಯಾಗುವುದನ್ನು ತಡೆಯುವ ಗುರಿ – ಮುಂತಾದ ಅನೇಕ ಗುರಿಯನ್ನು ಹೊಂದಿದೆ. ದೇಶದಾದ್ಯಂತ ಎಲ್ಲಾ ಪಾಲುದಾರರನ್ನು ತೊಡಗಿಸಿಕೊಳ್ಳುವ ಮೂಲಕ ಸೆಪ್ಟೆಂಬರ್ 2024 ರ ವೇಳೆಗೆ 80 ಕೋಟಿ ಮರಗಳನ್ನು ಮತ್ತು ಮಾರ್ಚ್ 2025 ರ ವೇಳೆಗೆ 140 ಕೋಟಿ ಮರಗಳನ್ನು ನೆಡುವುದು ಈ ಅಭಿಯಾನದ ಗುರಿಯಾಗಿದೆ.

ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ಗುರಿಯನ್ನು ಸಾಧಿಸುವತ್ತ ದಾಪುಗಾಲು ಹಾಕುತ್ತಾ, ಸೆಪ್ಟೆಂಬರ್ 21, 2024 ರಂದು ಅಸ್ಸಾಂನ ಬೊಕಾಜನ್, ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ರೆಸಿಡೆನ್ಶಿಯಲ್ ಟೌನ್‌ಶಿಪ್ ನಲ್ಲಿ ಕೇಂದ್ರ ಬೃಹತ್ ಕೈಗಾರಿಕೆಗಳ ಮತ್ತು ಉಕ್ಕಿನ (ಎಚ್‌ಐ ಮತ್ತು ಸ್ಟೀಲ್) ಸಚಿವರಾದ  ಶ್ರೀ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮರ ನೆಡುವ ಅಭಿಯಾನವನ್ನು ನಡೆಸಲಾಯಿತು.

ಸನ್ಮಾನ್ಯ ಕೇಂದ್ರ ಬೃಹತ್ ಕೈಗಾರಿಕೆಗಳ ಮತ್ತು ಉಕ್ಕಿನ (ಎಚ್‌ಐ ಮತ್ತು ಸ್ಟೀಲ್) ಸಚಿವರಾದ  ಶ್ರೀ ಹೆಚ್.ಡಿ ಕುಮಾರಸ್ವಾಮಿಯವರಿಂದ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ಇದಲ್ಲದೆ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯ (ಎಂ.ಹೆಚ್.ಐ) ಇದರಡಿ ಬರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.ಗಳು) / ಸ್ವಾಯತ್ತ ಸಂಸ್ಥೆಗಳು (ಎ.ಬಿ.ಗಳು) ಗಿಡಗಳನ್ನು ನೆಡುವ ಅಭಿಯಾನ ಮುಂದುವರಿಸಿವೆ,  ಪರಿಣಾಮವಾಗಿ ಇದುವರೆಗೆ ತೊಂಬತ್ತೆರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ.

ಭೋಪಾಲ್ ಘಟಕದಲ್ಲಿ ಸಿ.ಐ.ಎಸ್.ಎಫ್.ನಿಂದ ಗಿಡ ನೆಡುವ ಅಭಿಯಾನ, ಮತ್ತು ದೆಹಲಿಯಲ್ಲಿ ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ (ಇಂಡಿಯಾ) ಲಿಮಿಟೆಡ್ ನಿಂದ ಭೇಲ್ ನಿಂದ ಗಿಡ ನೆಡುವ ಅಭಿಯಾನ

ಹಿಮಾಚಲ ಪ್ರದೇಶದ ರಾಜಬಾನ್‌ನಲ್ಲಿ ಸಿಸಿಐಯಿಂದ ಸಸಿ ನೆಡುವಿಕೆ ಮತ್ತು ಮಧ್ಯಪ್ರದೇಶದ ಧಾರ್ ನಲ್ಲಿ ನ್ಯಾಟ್ರಾಕ್ಸ್  ನಿಂದ ಸಸಿ ನೆಡುವಿಕೆ

 

*****



(Release ID: 2059261) Visitor Counter : 16


Read this release in: English , Urdu , Hindi , Tamil