ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನಡೆದ 2ನೇ ಆವೃತ್ತಿಯ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ವಸ್ತುಪ್ರದರ್ಶನ(ಮೇಳ) ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

Posted On: 25 SEP 2024 3:33PM by PIB Bengaluru

ಎಲ್ಲರಿಗೂ ಸಮಸ್ಕಾರ,

ಯೋಗಿಜಿ ಅವರ ಕ್ರಿಯಾಶೀಲ  ಆಡಳಿತದಲ್ಲಿ ದೇಶದಲ್ಲೇ ಅತಿದೊಡ್ಡ ರಾಜ್ಯವಾಗಿರುವ  ಉತ್ತರ ಪ್ರದೇಶವು ಅರಳುತ್ತಿದೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿದೆ. ಯೋಗಿಜಿ ಈ ರಾಜ್ಯಕ್ಕೆ ಪರಿವರ್ತನೀಯ ನಾಯಕರಾಗಿ ಹೊರಹೊಮ್ಮಿದ್ದಾರೆ, ಅದು ರಾಷ್ಟ್ರಕ್ಕೂ ಸಹಾಯ ಮಾಡುತ್ತಿದೆ. ಅವರ 24x7 ತಾಸುಗಳ ಆಡಳಿತ ವೈಖರಿ ಬಗ್ಗೆ ನಾನು ವಿಶೇಷವಾಗಿ ಆಶ್ಚರ್ಯಚಕಿತನಾಗಿದ್ದೇನೆ.

2ನೇ ಆವೃತ್ತಿಯ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ವಸ್ತುಪ್ರದರ್ಶನ(ಮೇಳ)ದ ಉದ್ಘಾಟನಾ ಸಮಾರಂಭದ ಭಾಗವಾಗಿರುವುದು ವೈಯಕ್ತಿಕವಾಗಿ ನನಗೆ ಸಂಪೂರ್ಣ ಸಂತಸ ತಂದಿದೆ. ನಾನು ಸುತ್ತಲೂ ಹೋಗಿ ನೋಡುವ ಉತ್ತಮ ಸಂದರ್ಭ ಪಡೆದಿದ್ದೇನೆ. ನನ್ನಂತಹ ಮನುಷ್ಯನಿಗೆ ಇಲ್ಲಿ ಎಲ್ಲವೂ ಸರಿಯಾಗಿವೆ, ವಿಷಯಗಳು ಸರಿಯಾದ ಹಾದಿಯಲ್ಲಿವೆ ಎಂಬ ಹೆಚ್ಚಿನ ಭರವಸೆ ಇರಲಾರದು. ಆದರೆ, ನಾನು ಕಂಡದ್ದು ನನ್ನ ಪರಿಕಲ್ಪನೆ, ಸಿದ್ಧಾಂತ ಮತ್ತು ಕನಸಿಗೆ ಮೀರಿದ್ದು. ನಾನು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿದ್ದೇನೆ ಎಂದು ನಾನು ಭಾವಿಸಿದ್ದೇನೆ.

ಇದು ನಿಜವಾಗಿಯೂ ಉತ್ತಮ ಚಿಂತನೆಯ ವೇದಿಕೆಯಾಗಿದೆ. ಭಾರತದಲ್ಲಿ, ಉತ್ತರ ಪ್ರದೇಶದಲ್ಲಿ ಏನಿದೆ ಎಂಬುದನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಜನರು ಆ ಅವಕಾಶಗಳನ್ನು ಕಸಿದುಕೊಳ್ಳಲು, ಉತ್ತಮ ಮನಸ್ಸುಗಳು, ಕುಶಲಕರ್ಮಿಗಳು, ನುರಿತರೊಂದಿಗೆ ಸಂಪರ್ಕದಲ್ಲಿರಲು ಇದು ಅವಕಾಶ ನೀಡುತ್ತದೆ. ಕಾರ್ಮಿಕರು, ಉತ್ಪನ್ನಗಳು ಮತ್ತು ವೈಯಕ್ತಿಕ ಏಳಿಗೆಗೆ ಉತ್ತಮ ಅವಕಾಶವಾಗಿದೆ. ಗೌರವಾನ್ವಿತ ಮುಖ್ಯಮಂತ್ರಿ ಚಿಂತನಶೀಲ, ದೂರದೃಷ್ಟಿ ಮತ್ತು ಪ್ರಾಯೋಗಿಕ ಮನಸ್ಥಿತಿ ಹೊಂದಿರುವುದಕ್ಕಾಗಿ ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರು ಮೊದಲ ಆವೃತ್ತಿ ಪ್ರಾರಂಭ ಮಾಡಿದರು. ಈ ಸಂದರ್ಭದಲ್ಲಿ, 2ನೇ ಆವೃತ್ತಿಯ ಭಾಗವಾಗಿರುವುದು ನನ್ನ ವಿಶೇಷತೆಯಾಗಿದೆ. ವ್ಯಾಪಾರ ಪ್ರದರ್ಶನ(ಸಮ್ಮೇಳನ)ವು ವಿಯೆಟ್ನಾಂ ಅನ್ನು ಪಾಲುದಾರ ರಾಷ್ಟ್ರವಾಗಿ ಗಮನಾರ್ಹವಾಗಿ ಪ್ರದರ್ಶಿಸುತ್ತದೆ ಎಂಬುದನ್ನು ತಿಳಿದು ನಾವು ನಿಜವಾಗಿಯೂ ಸಂತೋಷಪಡುತ್ತೇವೆ. ಆಗ್ನೇಯ ಏಷ್ಯಾದ ದೃಢವಾದ ಆರ್ಥಿಕತೆಗಳಲ್ಲಿ ಒಂದಾಗಿರುವ ವಿಯೆಟ್ನಾಂ, 435 ಶತಕೋಟಿ ಡಾಲರ್ ಮೊತ್ತದ ಬಲಿಷ್ಠ ಜಿಡಿಪಿ ಹೊಂದಿದೆ. ಅಲ್ಲಿನ ಅಸಾಧಾರಣ ಉತ್ಪನ್ನಗಳು ಮತ್ತು ನವೀನ ಉತ್ಪಾದನಾ ಅಭ್ಯಾಸಗಳನ್ನು ವೀಕ್ಷಿಸಲು ನಾವು ಎದುರು ನೋಡುತ್ತೇವೆ. ಆದರೆ ನಾನು ಅವರಿಗೆ ಭರವಸೆ ನೀಡಬಲ್ಲೆ, ಅವರು ಸರಿಯಾದ ಸ್ಥಳದಲ್ಲಿದ್ದಾರೆ, ಅವರ ಭಾಗವಹಿಸುವಿಕೆ ಅಗಾಧ ಪ್ರಯೋಜನಗಳನ್ನು ನೀಡುತ್ತದೆ. ವಿಯೆಟ್ನಾಂ ಜನರು ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಅತ್ಯುತ್ತಮ ಕುಶಲಕರ್ಮಿಗಳು ಮತ್ತು ಆರ್ಥಿಕ ಸಾಮರ್ಥ್ಯದೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ವೇದಿಕೆಯಾಗಿದೆ.

ಸ್ನೇಹಿತರೆ, ವಿಯೆಟ್ನಾಂನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅನುಭವ ಪಡೆಯಲು ಇದು ಸುಸಂದರ್ಭವಾಗಿದೆ. ಅವರು ಖಂಡಿತವಾಗಿಯೂ ಉತ್ತರ ಪ್ರದೇಶ ಮತ್ತು ಭಾರತದ ಶ್ರೀಮಂತ ಪರಂಪರೆಯನ್ನು ಅನುಭವಿಸುತ್ತಾರೆ, ಆದರೆ ನಾವು ವಿಯೆಟ್ನಾಂನ ಶ್ರೀಮಂತ ಪರಂಪರೆಯ ಅನುಭವವನ್ನು ಸಹ ಪಡೆಯುತ್ತೇವೆ. ನಾನು ಅದನ್ನು ನೋಡುವ ಸಂದರ್ಭ ಹೊಂದಿದ್ದೇನೆ. ಆಕರ್ಷಕವಾದ ಸಾಂಪ್ರದಾಯಿಕ ಸಂಗೀತದ ಪೂರ್ಣ ಪ್ರದರ್ಶನ ಮತ್ತು ಭಾರತೀಯ ವಾದ್ಯಗಳೊಂದಿಗೆ ಎಂತಹ ಹೋಲಿಕೆಯಿದೆ. ಅವರು ಮನೆಗೆ ಸಾಗಿಸಲು ಸಾಕಷ್ಟು ಇರುತ್ತದೆ ಎಂಬುದು ನನಗೆ ಖಾತ್ರಿಯಿದೆ. ಇಲ್ಲಿನ ನೃತ್ಯ ಪ್ರದರ್ಶನಗಳು ಶ್ರೀಮಂತವಾಗಿದ್ದವು.

ಕಳೆದ ಕೆಲವು ವರ್ಷಗಳಲ್ಲಿ, ಸಂತೋಷದ ವಿಚಾರಗಳು ಹೆಚ್ಚುತ್ತಿರುವುದನ್ನು ನೋಡುತ್ತಿರುವ ರಾಜ್ಯ ಇಗಾಗಿದೆ. ಸಂತೋಷದ ವಿಚಾರ ಹೆಚ್ಚಾದಾಗ, ನಿಮ್ಮ ಹಸಿವು ಸಹ ಕ್ರಿಯಾಶೀಲವಾಗಿರುತ್ತದೆ.

ಉತ್ತರ ಪ್ರದೇಶದಿಂದ ಮತ್ತು ದೇಶಾದ್ಯಂತ ಬಂದಿರುವ ನನ್ನ ಸ್ನೇಹಿತರು ಅಧಿಕೃತ ವಿಯೆಟ್ನಾಂ ಜನರ ಪಾಕಪದ್ಧತಿಯಲ್ಲಿ ಪಾಲ್ಗೊಳ್ಳುವ ಸಂದರ್ಭ ಹೊಂದಿದ್ದಾರೆ. ವಿಯೆಟ್ನಾಂ ಪಾಕ ಪದ್ಧತಿ ವಿಶಿಷ್ಟವಾದ ಸುವಾಸನೆಗಳಿಗೆ ಹೆಸರುವಾಸಿಯಾಗಿದೆ, ನಾವು ವಿಯೆಟ್ನಾಂ ನೋಡಿದಾಗ, ಅಲ್ಲಿನ ರುಚಿಕರವಾದ ಫೋ ತಿನಿಸು ಮತ್ತು ಸ್ಪ್ರಿಂಗ್ ರೋಲ್ಸ್, ಬಾಯಲ್ಲಿ ನೀರೂರಿಸುವ ಬಾನ್ ಮಿಗೆ ನೆನಪಾಗುತ್ತದೆ. ಅವು ನಮ್ಮ ರುಚಿಯನ್ನು ಪಾಕಶಾಲೆಯ ಕಡೆಗೆ ಸೆಳೆಯುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ರುಚಿ ನೋಡುವ ಸಂದರ್ಭ ನನಗೆ ಈಗ ಸಿಕ್ಕಿದೆ.

ಇದು ಒಂದು ಅರ್ಥದಲ್ಲಿ, ನಾವು ಐತಿಹಾಸಿಕ ದೃಷ್ಟಿಕೋನಕ್ಕೆ ಹೋದರೆ ಇದು ವಿಯೆಟ್ನಾಂ ಜತೆಗಿನ ನೈಸರ್ಗಿಕ ಪಾಲುದಾರಿಕೆಯಾಗಿದೆ. ಖಂಡಿತವಾಗಿ ಸಾಂಸ್ಕೃತಿಕ ಮತ್ತು ಆರ್ಥಿಕ ಸವಾಲುಗಳನ್ನು ಸಾಮೂಹಿಕವಾಗಿ ಬೆಳೆಸುತ್ತದೆ. ವಿನಿಮಯವು ಪ್ರತಿಫಲದಾಯಕವಾಗಿರುತ್ತದೆ, ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಜಾಗತಿಕ ದಕ್ಷಿಣದ ಅಭಿವೃದ್ಧಿಗಾಗಿ ಹೆಚ್ಚಿನ ಪಾತ್ರ ವಹಿಸಲು ಸಂಕಲ್ಪವನ್ನು ಬಲಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಜಿ-20 ವೇದಿಕೆಯಲ್ಲಿ ಅವರು ಅಂತಾರಾಷ್ಟ್ರೀಯ ರಾಡಾರ್, ಗ್ಲೋಬಲ್ ಸೌತ್‌ನ ಧ್ವನಿ ಎತ್ತಿದರು. ಇದು ಒಂದು ಪ್ರಮುಖ ಘಟನೆಯಾಗಿದೆ, ಅವರ ಭಾಗವಹಿಸುವಿಕೆ ಸ್ಮರಣೀಯವಾಗಿದೆ. ಈ ಘಟನೆಯ ಸಂತಸದ ನೆನಪುಗಳನ್ನು ಅವರು ಒಯ್ಯುತ್ತಾರೆ ಎಂಬುದು ನನಗೆ ಖಾತ್ರಿಯಿದೆ.

ವಸ್ತುಪ್ರದರ್ಶನ - ಪ್ರಮಾಣ, ಪ್ರದರ್ಶನ, ತಾಂತ್ರಿಕ ತೀಕ್ಷ್ಣ ದೃಷ್ಟಿ, ಸಾಂಸ್ಕೃತಿಕ ಸಂಪತ್ತು, ಪ್ರತಿ ಜಿಲ್ಲೆಯ ಉತ್ಪನ್ನಗಳು... ಹೀಗೆ ಅವರು ಸೂಕ್ಷ್ಮ ಅಥವಾ ಸಣ್ಣ ಮಟ್ಟದಲ್ಲೂ ಪ್ರತಿ ಅಂಗಡಿ, ಪ್ರತಿ ಉತ್ಪನ್ನವನ್ನು ನಿರ್ವಹಿಸುತ್ತಾರೆ ಎಂದು ನಾನು ನನ್ನ ತಂಡಕ್ಕೆ ಸೂಚನೆ ನೀಡಿದ್ದೇನೆ, ಇದರಿಂದ ರಾಷ್ಟ್ರವೇ ಸಂಸದ್ ಟಿವಿ ವಾಹಿನಿ ಮೂಲಕ ತಿಳಿಯುತ್ತದೆ. ಮುಖ್ಯಮಂತ್ರಿಗಳೇ ನಿಮ್ಮ ಸಹಕಾರ ಕೋರುತ್ತೇನೆ, ಇಂದು ಸಂಜೆ ನನ್ನ ತಂಡ ಇಲ್ಲಿಗೆ ಬರಲಿದೆ.

ಸ್ನೇಹಿತರೆ, ಭಾರತದ ಪ್ರಧಾನ ಮಂತ್ರಿ, ಅವರ ದೂರದೃಷ್ಟಿ ಮತ್ತು ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಜೀ ಅವರ ಕಾರ್ಯದಕ್ಷತೆ, ತೀಕ್ಷ್ಣ ಕಾರ್ಯದಕ್ಷತೆ,  ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ಕಾರ್ಯದಕ್ಷತೆ, ಅದಕ್ಷತೆ ಸಹಿಸದ ಕಾರ್ಯದಕ್ಷತೆಯು ಒಟ್ಟುಗೂಡಿ ಮಾಡಿದ ಕೆಲಸದಿಂದಾಗಿ ಇಂದು  ಉತ್ತರ ಪ್ರದೇಶವು ‘ಉತ್ತಮ ಪ್ರದೇಶ’ವಾಗಿ ಪರಿವರ್ತನೆಯಾಗಿದೆ. ಯೋಗಿ ಜಿ ಅವರ ನಿರಂತರ ಪ್ರಯತ್ನಗಳು ಮತ್ತೊಂದು ಅಭಿವೃದ್ಧಿ ಮೈಲಿಗಲ್ಲು ಮತ್ತು ಸಾಧನೆಗೆ ಕಾರಣವಾಗುತ್ತಿವೆ. ಇಡೀ ರಾಷ್ಟ್ರಕ್ಕೆ ಹಿತವಾಗಿದೆ, ಉತ್ತರ ಪ್ರದೇಶವು ತ್ವರಿತವಾಗಿ ದೇಶದ ‘ಉದ್ಯಮ ಪ್ರದೇಶ’ವಾಗುತ್ತಿದೆ.

ಈ ಸ್ಥಳವು ಅಭಿವೃದ್ಧಿಗೆ ತುಂಬಾ ಹಿತವಾಗಿದೆ. ಈ ಸ್ಥಳವು ಇತ್ತೀಚೆಗೆ ಮುಕ್ತಾಯವಾದ ಸೆಮಿಕಾನ್ ಇಂಡಿಯಾ-2024 ಸಮ್ಮೇಳನಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಸೆಮಿಕಂಡಕ್ಟರ್ ಉದ್ಯಮದ ಮೇಲಿರುವ ಭಾರತದ ದೃಷ್ಟಿಕೋನವನ್ನು ವಿವರಿಸಿದರು, ಅದು ವಿಕಸಿತ ಭಾರತಕ್ಕೆ ಅಡಿಪಾಯವಾಗಲಿದೆ. ಸೆಮಿಕಂಡಕ್ಟರ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಬೇಕೆಂಬ ಭಾರತದ ಗುರಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನವು ನಿರ್ಣಾಯಕ ಹೆಜ್ಜೆಯಾಗಿದೆ.

ಸ್ನೇಹಿತರೆ, ನಾನು ರಾಷ್ಟ್ರದ ಸ್ಥಿತಿಗೆ, ಭಾರತದ ಪರಿಸ್ಥಿತಿಗೆ ಬರೋಣ. ಯುಗ ಯುಗಗಳಿಂದಲೂ, ಭಾರತವು ನಾಗರಿಕತೆಯ ತೊಟ್ಟಿಲು, ನಾವೀನ್ಯತೆಯ ತಾಣ ಮತ್ತು ಕಲಿಕೆಯ ಜಾಗತಿಕ ಕೇಂದ್ರವಾಗಿದೆ. ನಮ್ಮ ವೇದಗಳು ಜ್ಞಾನ ಮತ್ತು ಮಾಹಿತಿಯ ಚಿನ್ನದ ಗಣಿ. ಭಾರತವು 5,000 ವರ್ಷಗಳ ನಾಗರಿಕತೆಯ ನೈತಿಕತೆ ಹೊಂದಿರುವ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ ಎಂದು ಹೆಮ್ಮೆಪಡುತ್ತದೆ. ನಾವು ಎಲ್ಲೋ ನಡುವೆ ದಾರಿ ಕಳೆದುಕೊಂಡಿದ್ದೇವೆ, ಆದರೆ ಈಗ ನಾವು ಅದನ್ನು ಮರಳಿ ಪಡೆಯುವ ಹಾದಿಯಲ್ಲಿದ್ದೇವೆ ಈ ಶತಮಾನದಲ್ಲಿ ಹಲವಾರು ರೀತಿಯಲ್ಲಿ ಇಡೀ ಪೃಥ್ವಿಗೆ ದಾರಿದೀಪವಾಗಲು ಸಾಕಷ್ಟು ವೇಗವಾಗಿದ್ದೇವೆ.

ಈ ಮರುಪಡೆಯುವಿಕೆಯಲ್ಲಿ, ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ದೇಶದ ಅತಿದೊಡ್ಡ ರಾಜ್ಯವು ರಾಷ್ಟ್ರಕ್ಕೆ ತಲುಪಿಸಲು ಮುಂಭಾಗ ನಿಂತು ಕೆಲಸ ಮಾಡುತ್ತಿದೆ ಎನ್ನುವುದಕ್ಕಿಂತ ಹೆಚ್ಚಿನದನ್ನು ನಾನು ಗಮನಿಸಲು ಸಾಧ್ಯವಿಲ್ಲ. ಒಂದು ದಶಕದ ಹಿಂದೆ ನೋಡಿ; ಸನ್ನಿವೇಶವು ಆತಂಕಕಾರಿಯಾಗಿ ಚಿಂತಾಜನಕವಾಗಿತ್ತು. ಆರ್ಥಿಕತೆಯು ದಿಗ್ಭ್ರಮೆಗೊಂಡಿತ್ತು, ರಾಷ್ಟ್ರದ ಚಿತ್ತವು ಅಲುಗಾಡಿತು. ಪ್ರತಿಯೊಂದು ಅಂಶದಿಂದ, ಆಡಳಿತವು ನಾಗರಿಕರಿಗೆ ಸವಾಲಾಗಿತ್ತು, ಆದರೆ 360-ಡಿಗ್ರಿ ಬದಲಾವಣೆ, ಈಗ ಹಿತವಾಗಿದೆ.

ಕಳೆದ ದಶಕವು ಅಭೂತಪೂರ್ವ ಪರಿವರ್ತನೆಯಿಂದ ಗುರುತಿಸಲ್ಪಟ್ಟಿದೆ - ಉತ್ತಮವಾದ ರೂಪಾಂತರ. ಭಾರತವು ವಿಶ್ವದ ಅತ್ಯಂತ ಸದೃಢ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದು ಈಗ ಹೂಡಿಕೆ ಮತ್ತು ಅವಕಾಶಕ್ಕಾಗಿ ನೆಚ್ಚಿನ ಜಾಗತಿಕ ತಾಣವಾಗಿದೆ, ಭಾರತದಲ್ಲಿ ಭರವಸೆ ಮತ್ತು ಸಾಧ್ಯತೆಯ ಪರಿಸರ ವ್ಯವಸ್ಥೆಯು ಸರ್ವವ್ಯಾಪಿಯಾಗಿದೆ. ನಿಸ್ಸಂದೇಹವಾಗಿ, ನಾವು ನಮ್ಮ ಪ್ರಾಚೀನ ವೈಭವವನ್ನು ಮರಳಿ ಪಡೆಯಲು ಮುಂದಾಗಿದ್ದೇವೆ. ಭಾರತವು ಈಗ ಜಾಗತಿಕವಾಗಿ ನಡೆಯುತ್ತಿರುವ ಸ್ಥಳವಾಗಿದೆ ಮತ್ತು ಉತ್ತರ ಪ್ರದೇಶವು ಚಟುವಟಿಕೆಯಿಂದ ತುಂಬಿಕೊಳ್ಳುತ್ತಿದೆ. ಪ್ರತಿಯೊಂದು ವಲಯದಲ್ಲಿ ಚಟುವಟಿಕೆ: ಮೂಲಸೌಕರ್ಯ, ಬೆಳವಣಿಗೆ, ಉದ್ಯಮ ಮತ್ತು ನಾವೀನ್ಯತೆ.

ಇಂದು ಭಾರತವು ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದು, ಮುಂಬರುವ ದಶಕಗಳಲ್ಲಿ 8% ಬೆಳವಣಿಗೆಯ ನಿರೀಕ್ಷೆ ಹೊಂದಿದೆ ಎಂದು ಜಾಗತಿಕ ಸಂಸ್ಥೆಗಳು ವಿಶ್ಲೇಷಿಸಿವೆ. 2 ವರ್ಷಗಳಲ್ಲಿ, ನಮ್ಮ ಆರ್ಥಿಕತೆಯು ಜಪಾನ್ ಮತ್ತು ಜರ್ಮನಿಗಿಂತ ಮುಂದೆ ಸಾಗಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಹೆಚ್ಚುತ್ತಿರುವ ಮೂಲಸೌಕರ್ಯ ಬೆಳವಣಿಗೆಯು ವಾರ್ಷಿಕವಾಗಿ 8 ಹೊಸ ವಿಮಾನ ನಿಲ್ದಾಣಗಳಲ್ಲಿ ಪ್ರತಿಫಲಿಸುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಇಲ್ಲಿನ ಸನ್ನಿವೇಶವನ್ನು ಸೂಚಿಸಿದ್ದಾರೆ. ನಂಬಲಾಗದ ಸಾಧನೆ! ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನೋಡಿ, ವಾಸ್ತವಿಕವಾಗಿ ದ್ವಿಗುಣಗೊಳ್ಳುತ್ತಿದೆ ಮತ್ತು ಜೆವಾರ್‌ನಲ್ಲಿರುವ ವಿಶ್ವದರ್ಜೆಯ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಬಂದಾಗ ರಾಜ್ಯವು ಜಾಗತಿಕ ನಕ್ಷೆಯಲ್ಲಿರುತ್ತದೆ.

ಕನಸುಗಳು ಈ ನೆಲದ ವಾಸ್ತವಗಳಾಗಿ ಫಲಿಸುವ ಸ್ಥಿತಿ ಇದು. ನಾನು ನೋಡಿದ್ದು ಅದನ್ನೇ. ಪ್ರತಿ 2 ವರ್ಷಗಳಿಗೊಮ್ಮೆ, 3 ಅಥವಾ 4 ಮೆಟ್ರೊ ವ್ಯವಸ್ಥೆಗಳು ಸೇರ್ಪಡೆಯಾಗುತ್ತಿವೆ. ಸ್ನೇಹಿತರೆ, ಪ್ರತಿದಿನ 28 ಕಿಮೀ ಹೆದ್ದಾರಿಗಳು ಮತ್ತು 12 ಕಿಮೀ ರೈಲು ಹಳಿಗಳನ್ನು ಹಾಕಲಾಗುತ್ತಿದೆ. ಪ್ರಧಾನಿ ಮೋದಿ ಅವರ 3ನೇ ಅವಧಿಯಲ್ಲಿ, ಐತಿಹಾಸಿಕ ಅವಧಿಯಲ್ಲಿ, ಉತ್ಪಾದನೆ ಉತ್ತೇಜಿಸಲು 12 ಹೊಸ ಕೈಗಾರಿಕಾ ವಲಯಗಳು ರೂಪುಗೊಳ್ಳುತ್ತಿವೆ. ಕೃತಕ ಬುದ್ಧಿಮತ್ತೆ, ವಿದ್ಯುತ್ ಚಲನಶೀಲತೆ, ಹಸಿರು ಜಲಜನಕ, ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಪ್ರಯೋಜನಗಳನ್ನು ಪಡೆಯಲು ರಾಷ್ಟ್ರವು ಸಂಪೂರ್ಣ ಸಜ್ಜಾಗಿದೆ. ಸಮಯದ ಕೊರತೆಯಿಂದಾಗಿ, ನಾನು ಅದರ ಮೇಲೆ ಗಮನ ಕೇಂದ್ರೀಕರಿಸುತ್ತಿಲ್ಲ, ಆದರೆ ಹಸಿರು ಹೈಡ್ರೋಜನ್ ಮಿಷನ್, ಕ್ವಾಂಟಮ್ ಕಂಪ್ಯೂಟಿಂಗ್ ಮೇಲೆ ಗಮನ ಕೇಂದ್ರೀಕರಿಸುವ ಕೆಲವು ದೇಶಗಳಲ್ಲಿ ನಾವು ಸೇರಿದ್ದೇವೆ. ವಾಣಿಜ್ಯಿಕವಾಗಿ 6-ಜಿ ತಂತ್ರಜ್ಞಾನದ ಅನ್ವೇಷಣೆಗೆ ಬಂದಾಗ ನಾವು ಒಂದೇ ಅಂಕೆಯಲ್ಲಿದ್ದೇವೆ.

ವಿಕಸಿತ ಭಾರತದ ಕಡೆಗೆ ನಮ್ಮ ಪ್ರಯಾಣವು ಉತ್ತಮ ಹಾದಿಯಲ್ಲಿದೆ. ಇದು 2047 ರಲ್ಲಿ ಫಲಪ್ರದವಾಗುತ್ತದೆ, ಅದಕ್ಕಿಂತ ಮುಂಚೆ ಅಲ್ಲ. ರಾಷ್ಟ್ರದ ಚಿತ್ತ ಈಗ ಭರವಸೆ ಮತ್ತು ಸಾಧ್ಯತೆಯದ್ದಾಗಿದೆ. ಜಾಗತಿಕ ಸಂಸ್ಥೆಗಳಿಂದ ಪ್ರಶಂಸೆಗಳು ಹರಿದುಬರುತ್ತಿವೆ.

ನಾನು ಸುದೀರ್ಘ ರಾಜಕೀಯ ವೃತ್ತಿಜೀವನ ಹೊಂದಿದ್ದೇನೆ, 1989ರಲ್ಲಿ ಸಂಸತ್ತಿಗೆ ಚುನಾಯಿತನಾಗಿದ್ದೇನೆ, 1990ರಲ್ಲಿ ಸಚಿವನಾಗಿದ್ದೆ. ವಿಶ್ವ ಬ್ಯಾಂಕ್ ಮತ್ತು ಐಎಂಎಫ್  ನಮ್ಮನ್ನು ಎತ್ತರಕ್ಕೆ ಹೊಗಳುತ್ತಿವೆ ಮತ್ತು ಅದು ಸರಿಯಾಗಿದೆ.

ವಾಸ್ತವಿಕ ಪ್ರಮೇಯ ಆಧರಿಸಿ, ನಮ್ಮ ಡಿಜಿಟಲೀಕರಣ ಮತ್ತು ತಂತ್ರಜ್ಞಾ ಸಾಧನೆಯು ಅನುಕರಣೆಗಾಗಿ ಜಾಗತಿಕ ಮಾದರಿಯಾಗಿ ಹೊರಹೊಮ್ಮುತ್ತಿದೆ. ಒಂದು ದಶಕದ ಮೇಕ್ ಇನ್ ಇಂಡಿಯಾ ಉಪಕ್ರಮವು ಗಮನಾರ್ಹ ಫಲಿತಾಂಶಗಳನ್ನು ನೀಡಿದೆ. ಕೃಷಿ ಮತ್ತು ಸೇವೆಗಳಲ್ಲಿನ ಯಶಸ್ಸಿನ ನಂತರ, ಭಾರತವು ಈಗ ಉತ್ಪಾದನಾ ಬೆಳವಣಿಗೆಗೆ ಸಿದ್ಧವಾಗಿದೆ. ರಾಜ್ಯ ಸರ್ಕಾರಗಳು, ಉತ್ತರ ಪ್ರದೇಶ ಮುಂಚೂಣಿಯಲ್ಲಿದ್ದು, ವ್ಯಾಪಾರ ಪರಿಸ್ಥಿತಿಗಳನ್ನು ಸುಧಾರಿಸುವ ಮೂಲಕ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿವೆ.

ಸಾರ್, ಹೂಡಿಕೆಗೆ ಕಾನೂನು ಸುವ್ಯವಸ್ಥೆಗಿಂತ ಬೇರೇನೂ ಮುಖ್ಯವಲ್ಲ. ಕಾನೂನು ಮತ್ತು ಸುವ್ಯವಸ್ಥೆ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾನೂನು ಮತ್ತು ಸುವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತಾರೆ. ಈ ಹಿತವಾದ ಪರಿಸರ ವ್ಯವಸ್ಥೆಯಲ್ಲಿಯೇ ಉತ್ತರ ಪ್ರದೇಶ ಒಂದು ಸದೃಢವಾದ ಪೂರೈಕೆ ಸರಪಳಿ ರೂಪಿಸಲು ವಲಯದ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಎಂಎಸ್ಎಂಇ ಕೇಂದ್ರವಾಗಿ ಹೊರಹೊಮ್ಮಿದೆ.

ತಂತ್ರಜ್ಞಾನವು 2ನೇ ಹಂತದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನುರಿತ ಯುವಕರಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಿದೆ.

ಕೋವಿಡ್-19ರ ಸವಾಲಿನ, ಬೆದರಿಸುವ ದಿನಗಳಲ್ಲಿ ಕೌಶಲ್ಯ ಮ್ಯಾಪಿಂಗ್ ಅನ್ನು ಕಲ್ಪಿಸಿಕೊಳ್ಳಿ. ನೀವು ಅದನ್ನು ಮಾಡಿದ್ದೀರಿ.

ಭಾರತ ಈಗ ಮೇಕ್ ಇನ್ ಇಂಡಿಯಾದ ಪರಿಕಲ್ಪನೆ, ವಿನ್ಯಾಸ ಮತ್ತು ಮೇಕ್ ಇನ್ ಇಂಡಿಯಾದಿಂದ ಜಿಗಿಯುತ್ತಿದೆ. ನಾವು ನಮ್ಮದೇ ಆದ ವಿಕಾಸದ ಪರಿಕಲ್ಪನೆ ಹೊಂದಿದ್ದೇವೆ. ನಾವು ವಿನ್ಯಾಸ ಮತ್ತು ಮೇಕ್ ಇನ್ ಇಂಡಿಯಾದಲ್ಲಿ ತೊಡಗಿಸಿಕೊಂಡಿದ್ದೇವೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಭಾರತೀಯ ಕಂಪನಿಗಳು ಒಟ್ಟುಗೂಡಿ ಕೆಲಸ ಮಾಡುವ ನಿಲುವು ಪಡೆಯುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ. ಅವರು ದೇಶಾದ್ಯಂತ ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದಾರೆ. ಉತ್ತರ ಪ್ರದೇಶವು ಅದಕ್ಕೆ ಜ್ವಲಂತ ಉದಾಹರಣೆಯಾಗಿದೆ, ರಕ್ಷಣಾ ಕಾರಿಡಾರ್ ಅದರಲ್ಲಿ ಒಂದಾಗಿದೆ.

ನಾನು ಮೊದಲೇ ಹೇಳಿದಂತೆ ಸಣ್ಣ ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು(ಎಂಎಸ್ಎಂಇ) ಅವುಗಳ ನಾಮ ದಾಟಿ ಸಾಧನೆ ಮಾಡುತ್ತಿವೆ. ಈ ವಿಭಾಗವು ಆರ್ಥಿಕತೆಯ ಬೆನ್ನೆಲುಬು ಮತ್ತು ಮಾನವ ಸಂಪನ್ಮೂಲ ಉದ್ಯೋಗದ ಪ್ರಮುಖ ಕೊಡುಗೆಯಾಗಿದೆ.

ಉತ್ತರ ಪ್ರದೇಶದ ವಿಚಾರಕ್ಕೆ ಬಂದರೆ, ಆ ರೀತಿಯ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆಯು ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳು ಮತ್ತು ಭಯದ ವಾತಾವರಣದಿಂದ ಪೀಡಿತವಾಗಿದ್ದವು..

ಬಹಳ ಹಿಂದೆಯೇ, ಬೆಳವಣಿಗೆಯ ನಿರೀಕ್ಷೆಗಳು ಸಾರ್ವಕಾಲಿಕ ಕಡಿಮೆಯಾಗಿತ್ತು. ಈ ರಾಜ್ಯವು ಈಗ ಪ್ರಗತಿ ಮತ್ತು ಅಭಿವೃದ್ಧಿಯ ದಾರಿದೀಪವಾಗಿದೆ. ಉದ್ದದ ಡಾರ್ಕ್ ಸುರಂಗವನ್ನು ಮಾನ್ಯ ಮುಖ್ಯಮಂತ್ರಿ ಬಹಳ ವೇಗದಲ್ಲಿ ಮಾತುಕತೆ ನಡೆಸಿದರು. ಸುರಂಗವು ತುಂಬಾ ಹಿಂದೆ ಇತ್ತು, ಆದರೆ ಈಗ ಡಾರ್ಕ್ ಸುರಂಗದಿಂದ, ರಾಜ್ಯವು ಎಕ್ಸ್‌ಪ್ರೆಸ್‌ವೇಯಲ್ಲಿದೆ.

ಜೆವಾರ್‌ನಲ್ಲಿ ಬರುತ್ತಿರುವ ಅತಿದೊಡ್ಡ ವಿಮಾನ ನಿಲ್ದಾಣದಲ್ಲಿ ಉನ್ನತ ಆರ್ಥಿಕತೆಗಾಗಿ ವಿಮಾನವನ್ನು ತೆಗೆದುಕೊಳ್ಳುವ ಹಾದಿಯಲ್ಲಿ ರಾಜ್ಯವು ಭರವಸೆ ಮತ್ತು ಸಾಧ್ಯತೆಗಳಿಂದ ತುಂಬಿದೆ. ಇಲ್ಲಿನ ಪರಿವರ್ತನೆ ನಂಬಲಾಗದು.

ಒಂದರ್ಥದಲ್ಲಿ ಉತ್ತರ ಪ್ರದೇಶದಲ್ಲಿ ಸಂಪೂರ್ಣ ಮೇಕ್ ಓವರ್ ಇದೆ. ನೀವು ಪ್ರತಿ ಅರ್ಥದಲ್ಲಿಯೂ ಅದರ ಪ್ರಾಚೀನ ವೈಭವವನ್ನು ಮರಳಿ ಪಡೆಯುತ್ತಿದ್ದೀರಿ. ಏಕೆಂದರೆ ಆಡಳಿತವು ಪಾರದರ್ಶಕತೆ, ಹೊಣೆಗಾರಿಕೆ, ಮೌಲ್ಯಯುತವಾದ ಅನುಕರಣೆ, ಉದ್ಯಮಿಗಳ ಹಿಡಿತದ ರೀತಿಯನ್ನು ನಿರೂಪಿಸುತ್ತದೆ.

ಭ್ರಷ್ಟಾಚಾರ ಎಂಬುದು ಉತ್ತರ ಪ್ರದೇಶದಲ್ಲಿ ಕೇಳಿರದ ಮಾತು. ನಿರ್ಧಾರಗಳನ್ನು ವೇಗವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಸರಿಯಾಗಿ ಟ್ರ್ಯಾಕ್ ಮಾಡಲಾಗುತ್ತಿದೆ.

ರಾಜ್ಯ ಈಗ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಅಸಾಧಾರಣ ಆರ್ಥಿಕ ಏರಿಕೆ ಮತ್ತು ರಾಷ್ಟ್ರದಲ್ಲಿ ಅಭೂತಪೂರ್ವ ಮೂಲಸೌಕರ್ಯ ಬೆಳವಣಿಗೆಯಲ್ಲಿ, ಉತ್ತರ ಪ್ರದೇಶದ ಅತಿದೊಡ್ಡ ರಾಜ್ಯವು ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸನ್ನಿವೇಶಕ್ಕಿಂತ ಭಿನ್ನವಾಗಿ ಈಗ ಒಂದು ಸ್ವತ್ತು ಮತ್ತು ಪ್ರಮುಖ ಕೊಡುಗೆಯಾಗಿದೆ.

ಉತ್ತರ ಪ್ರದೇಶದ ಆಕಾಂಕ್ಷೆ ಸರಿಯಾಗಿದೆ. 2027ರ ವೇಳೆಗೆ 1 ಟ್ರಿಲಿಯನ್ ಡಾಲರ್ ರ್ಥಿಕತೆಯ ಗುರಿ ತಲುಪಲು ಮತ್ತು 2027ರ ವೇಳೆಗೆ ಅವರ  5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಪ್ರಧಾನಿ ಮೋದಿ ಅವರ ಕನಸು ನನಸಾಗಲಿದೆ. ಮಾನ್ಯ ಮುಖ್ಯಮಂತ್ರಿಗಳು ಸರಿಯಾಗಿ ಗಮನ ಕೇಂದ್ರೀಕರಿಸಿದಂತೆ, ಉತ್ತರ ಪ್ರದೇಶದ ಪ್ರಯೋಜನಗಳು ಫಲವತ್ತಾದ ಭೂಮಿ, ಯುವ ಜನಸಂಖ್ಯೆ, ಧಾರ್ಮಿಕತೆಯನ್ನು ಒಳಗೊಂಡಿವೆ. ಪ್ರವಾಸೋದ್ಯಮ, ಮತ್ತು ಎಂಎಸ್ಎಂಇ, ಅದರ ಗಾತ್ರವನ್ನು ನೋಡಿ.

ಜಗತ್ತಿನ ಕೆಲವು ದೇಶಗಳಲ್ಲಿ ಇಲ್ಲಿರುವಷ್ಟು ಜನಸಂಖ್ಯೆ ಇಲ್ಲದಿರಬಹುದು. ನೀವು ಹಲವಾರು ಘಟಕಗಳನ್ನು ಹೊಂದಿರುವುದರಿಂದ, ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೀರಿ, ಅದನ್ನು ನಂಬಲು ಒಬ್ಬರು ನೋಡಬೇಕು. ಹೌದು, 6 ಹೊಸ ಎಕ್ಸ್‌ಪ್ರೆಸ್‌ವೇಗಳನ್ನು ಸೇರಿಸಲಾಗುತ್ತಿದೆ ಎಂದು ಹೇಳುವುದು ಸುಲಭ.

ಇದು ಸಮಯ, ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಹಣ ಬೇಕಾಗುತ್ತದೆ. ಆಜರೂ ಇವೆಲ್ಲಾ ಇಲ್ಲಿ ನಡೆಯುತ್ತಿದೆ. ಇದೆಲ್ಲವೂ ಯೋಗಿ ಗುಣಕ, ಯೋಗಿ ಪರಿಣಾಮ, ಯೋಗಿ ಪ್ರಭಾವ ಹೊಂದಿದೆ.

ನೋಯ್ಡಾ ಉತ್ತರ ಪ್ರದೇಶಕ್ಕೆ 10% ಜಿಡಿಪಿ ಕೊಡುಗೆ ನೀಡುತ್ತಿದ್ದು, ಕೈಗಾರಿಕಾ ಮೂಲ, ಐಟಿ ವಲಯ ಮತ್ತು ಜೇವರ್ ಏರ್‌ಪೋರ್ಟ್ ಮತ್ತು ಫಿಲ್ಮ್ ಸಿಟಿಯಂತಹ ಮುಂಬರುವ ಯೋಜನೆಗಳಲ್ಲಿ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ ಎಂದು ನಾನು ಹೇಳುತ್ತೇನೆ. ಆದರೆ ಈ ನಗರವು ಜಾಗತಿಕ ಮಟ್ಟದಲ್ಲಿ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನೋಯ್ಡಾದಲ್ಲಿ ಇರುವಂತಹ ಪ್ರತಿಭೆ, ನನಗೆ ಖಚಿತವಾಗಿ ತಿಳಿದಿದೆ, ನಾನು ವಕೀಲ ವೃತ್ತಿಯಿಂದ ಬಂದಿದ್ದೇನೆ.

ಇದು ನೆಚ್ಚಿನ ತಾಣವಾಗುತ್ತಿದೆ. ಇನ್ನು ನಿದ್ದೆಗೆಡಿಸುವ ದೈತ್ಯ ಉತ್ತರ ಪ್ರದೇಶ, ಇದು ಕೇವಲ ಭರವಸೆಯ ರಾಜ್ಯವಾಗಿ ಉಳಿಯದೆ, ತನ್ನ ವಿಶಾಲವಾದ ಸಂಪನ್ಮೂಲಗಳು, ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಕಾರ್ಯತಂತ್ರದ ಸ್ಥಳದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ರಾಜ್ಯವಾಗಿದೆ. ಇದು ಸ್ವತಃ ಬೆಳವಣಿಗೆಯ ಎಂಜಿನ್, ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಲು ರಾಷ್ಟ್ರದ ದೊಡ್ಡ ಬೆಳವಣಿಗೆಯ ಎಂಜಿನ್‌ನೊಂದಿಗೆ ಸಂಬಂಧ ಹೊಂದಿದೆ.

ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಅಡಿ, ದೇಶದಲ್ಲಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೇನೆ. ಅವರು ಪ್ರಸ್ಥಭೂಮಿಯ ರೀತಿಯ ಬೆಳವಣಿಗೆಯನ್ನು ನಂಬುತ್ತಾರೆ. ಪ್ರತಿಯೊಬ್ಬರೂ ಪ್ರತಿಯೊಂದು ವಲಯದಲ್ಲಿ, ಪ್ರತಿಯೊಂದು ಸಾಮಾಜಿಕ ಅಂಶಗಳಲ್ಲಿ ಮೇಲೇರಬೇಕು. ಉತ್ತರ ಪ್ರದೇಶ ಅದಕ್ಕೆ ಅನುಗುಣವಾಗಿದೆ.

ವ್ಯಾಪಾರ ಪ್ರದರ್ಶನವು ಎಂಎಸ್ಎಂಇಗಳನ್ನು ಉತ್ತೇಜಿಸಲು, ಭೌಗೋಳಿಕ ಸೂಚನೆಗಳನ್ನು ಮತ್ತು ಜಿಐ ಉತ್ಪನ್ನಗಳನ್ನು ಉತ್ತೇಜಿಸಲು ಎಲ್ಲರಿಗೂ ಉತ್ತಮ ಅವಕಾಶವನ್ನು ಕೇಂದ್ರೀಕರಿಸುತ್ತದೆ. ಅದು ಅಗಾಧವಾದ ಅವಕಾಶಗಳನ್ನು ಹೊಂದಿದೆ. ಇಂದು ನಾನು ಕಂಡದ್ದು ಪ್ರದರ್ಶನವಲ್ಲ. ನಾನು ಎಲ್ಲರಲ್ಲೂ ಅವಕಾಶಗಳ ಬುಟ್ಟಿಯನ್ನು ನೋಡಿದೆ.

ಸ್ನೇಹಿತರೆ, ಈ ಕಾರ್ಯಕ್ರಮವು ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಗೆ ಹೊಂದಿಕೆಯಾಗುತ್ತದೆ, ಸ್ಥಳೀಯ ಮತ್ತು ಜಾಗತಿಕ ಧ್ಯೇಯವಾಕ್ಯ ಅಳವಡಿಸಿಕೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಸ್ಪಷ್ಟವಾಗಿದೆ. ಆದರೆ ಇದನ್ನು ಮುಂದಿನ ಹಂತಕ್ಕೆ, ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಸರಿಯಾದ ಕೇಂದ್ರಬಿಂದುವಾಗಿದೆ. ಮೊದಲಿಗೆ ಇದು ಸ್ಥಳೀಯರಿಗೆ ಧ್ವನಿಯಾಗಿತ್ತು, ಈಗ ಸ್ಥಳೀಯದಿಂದ ಜಾಗತಿಕವಾಗಿದೆ.

ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಆದರೆ ಭಾರತವು ಹಿಂದೆಂದಿಗಿಂತಲೂ ಮೇಲೇರುತ್ತಿದೆ. ಈ ಏರಿಕೆ ತಡೆಯಲಾಗದು. ಮೆಟ್ರೋ ಸೇವೆಗಳು 5 ನಗರಗಳಿಂದ 23ಕ್ಕೆ ವಿಸ್ತರಿಸಿದೆ.

ನಾವು ವಿಶ್ವದ 2ನೇ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ್ದೇವೆ. ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳ ಸಂಖ್ಯೆ 70ರಿಂದ 140ಕ್ಕೆ ದ್ವಿಗುಣಗೊಂಡಿದೆ. ಭಾರತವು ಈಗ ಜಾಗತಿಕವಾಗಿ 800 ದಶಲಕ್ಷ ಬ್ರಾಡ್‌ಬ್ಯಾಂಡ್ ಬಳಕೆದಾರರೊಂದಿಗೆ ಅತಿದೊಡ್ಡ ಸಂಪರ್ಕಿತ ರಾಷ್ಟ್ರವಾಗಿದೆ. ಡಿಜಿಟಲ್ ತಂತ್ರಜ್ಞಾನಗಳು 170 ದಶಲಕ್ಷ ಜನರಿಗೆ ವಸತಿ, 60 ದಶಲಕ್ಷ ಜನರಿಗೆ ಆರೋಗ್ಯ ರಕ್ಷಣೆ ಮತ್ತು ವಾರ್ಷಿಕವಾಗಿ 58 ದಶಲಕ್ಷ ಜನರ ಸಣ್ಣ ವ್ಯವಹಾರಗಳಿಗೆ ಸಾಲದಂತಹ ಉಪಕ್ರಮಗಳನ್ನು ಸಕ್ರಿಯಗೊಳಿಸಿವೆ. ಭಾರತವು ತಿಂಗಳಿಗೆ 13 ಶತಕೋಟಿ ವಹಿವಾಟುಗಳೊಂದಿಗೆ ಜಾಗತಿಕವಾಗಿ ಅತಿ ಹೆಚ್ಚು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ದಾಖಲಿಸಿದೆ. ದೇಶವು 107 ಯುನಿಕಾರ್ನ್‌ಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ಆರಂಭಿಕ ಪರಿಸರ ವ್ಯವಸ್ಥೆ ಹೊಂದಿದೆ, ವಿಶ್ವದ 3ನೇ ಅತಿದೊಡ್ಡ ಖರೀದಿ ಸಾಮರ್ಥ್ಯ ಹೊಂದಿದೆ.

ಸೆಮಿಕಂಡಕ್ಟರ್ ಉದ್ಯಮ, ಇದು ಬಹಳ ನಿರ್ಣಾಯಕವಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಂದ ಇಲ್ಲಿ ಪ್ರಾರಂಭವಾಯಿತು. ಇದು 2026ರ ವೇಳೆಗೆ 55 ಶತಕೋಟಿ ಡಾಲರ್ ದಾಟಲು ಸಜ್ಜಾಗಿದೆ. ಈ ಶತಮಾನ ಭಾರತದ್ದು ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಈ ಶತಮಾನವು ಭಾರತಕ್ಕೆ ಸರಿಯಾಗಿ ಸೇರಿದೆ. ಪರಿಸ್ಥಿತಿ ಹೀಗಿರುವಾಗ, ಮಹಿಳೆಯರೆ, ಸಜ್ಜನರೆ, ನಾವೆಲ್ಲರೂ ಒಂದಾಗೋಣ. ಏಕೆಂದರೆ ಭಾರತದೊಂದಿಗೆ, ನಾವು ಉತ್ತರ ಪ್ರದೇಶದ ಹೊಸ ಉದಯವನ್ನು ನೋಡುತ್ತಿದ್ದೇವೆ, ಭವಿಷ್ಯದಲ್ಲಿ ರಾಷ್ಟ್ರವು ವ್ಯಾಪಾರ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಜಾಗತಿಕ ನಾಯಕನಾಗಿ ನಿಲ್ಲುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರಮ ವಹಿಸಿ 360 ಡಿಗ್ರಿ(ಸಮಗ್ರ) ಸುಧಾರಣೆ ತಂದಿದ್ದಾರೆ. ಅದು ಸುಲಭವಲ್ಲ. ಅವರು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ, ಅಭಿವೃದ್ಧಿಯಲ್ಲಿ, ಸಾಂಸ್ಕೃತಿಕ ಕ್ರಾಂತಿಯಲ್ಲಿ, ಜನರಿಗೆ ಕೌಶಲ್ಯವನ್ನು ನೀಡುವಲ್ಲಿ ಮತ್ತು ಜನರಿಗೆ ಸಂತೋಷ ತರುವಲ್ಲಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉತ್ಸಾಹವು ಒಟ್ಟಿಗೆ ಕೆಲಸ ಮಾಡುತ್ತಿದೆ. 2047ರ ವೇಳೆಗೆ ವಿಕಸಿತ ಭಾರತದ ಭವ್ಯ ಮಿಷನ್‌ನತ್ತ ಈ ಪರಿವರ್ತನೆಯನ್ನು ಸಿದ್ಧಪಡಿಸುತ್ತಿದೆ. ಈ ವ್ಯಾಪಾರ ಪ್ರದರ್ಶನವು ನಮ್ಮ ಮುಂದಿನ ಪ್ರಯಾಣದಲ್ಲಿ ಅವಕಾಶ, ಸಹಯೋಗ ಮತ್ತು ಯಶಸ್ಸಿನ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಮತ್ತು ಸ್ನೇಹಿತರೆ, ನಾನು ಈ ಮನವಿಯ ಮೂಲಕ ನನ್ನ ಭಾಷಣ ಮುಕ್ತಾಯಗೊಳಿಸುತ್ತೇನೆ. ಭಾರತದಲ್ಲಿ ಬಹುದೊಡ್ಡ ಮಹಾಯಜ್ಞ ನಡೆಯುತ್ತಿದೆ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಈ ಮಹಾಯಜ್ಞ ನಡೆಯುತ್ತಿದೆ. ಈ ಮಹಾಯಜ್ಞದ ಪೂರ್ಣ ಅರ್ಪಣೆ ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯುತ್ತದೆ. ಇದರಲ್ಲಿ ಪ್ರತಿಯೊಬ್ಬರೂ ತ್ಯಾಗ ಮಾಡಬೇಕು. ತ್ಯಾಗ ಮಾಡಲು ನಾವು ಭಾರತೀಯರು, ಭಾರತೀಯತೆ ನಮ್ಮ ಗುರುತು, ರಾಷ್ಟ್ರೀಯತೆ ನಮ್ಮ ಧರ್ಮ ಎಂಬ ಸಂಕಲ್ಪ ಅಗತ್ಯ. ಹೌದು. ನಾವು ಎಂದಿಗೂ ರಾಷ್ಟ್ರೀಯತೆಯ ಮೇಲೆ ಸ್ವಯಂ ಅಥವಾ ರಾಜಕೀಯ ಹಿತಾಸಕ್ತಿ ಹಾಕಲು ಸಾಧ್ಯವಿಲ್ಲ.

 

ತುಂಬು ಧನ್ಯವಾದಗಳು.

 

*****



(Release ID: 2058908) Visitor Counter : 5


Read this release in: English , Urdu , Hindi