ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ
azadi ka amrit mahotsav

ಬೆಂಗಳೂರಿನ ಈಶಾನ್ಯ ವ್ಯಾಪಾರ ಮತ್ತು ಹೂಡಿಕೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ

Posted On: 25 SEP 2024 7:17PM by PIB Bengaluru

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ (ಎಂಡಿಒಎನ್ಇಆರ್) 2024ರ ಸೆಪ್ಟೆಂಬರ್ 26 ರಂದು ಬೆಂಗಳೂರಿನಲ್ಲಿ ಈಶಾನ್ಯ ವ್ಯಾಪಾರ ಮತ್ತು ಹೂಡಿಕೆ ರೋಡ್ ಶೋ ಆಯೋಜಿಸಿದೆ, ಇದು ಫೋರ್ ಸೀಸನ್ಸ್ ಹೋಟೆಲಿನಲ್ಲಿ  ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಈಶಾನ್ಯ ಪ್ರದೇಶದ ಇಲಾಖೆಯ ಹಾಗು ಕೇಂದ್ರ ಸಂವಹನ ಮತ್ತು ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಉಪಸ್ಥಿತರಿರಲಿದ್ದಾರೆ.

ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಮತ್ತು ಜಂಟಿ ಕಾರ್ಯದರ್ಶಿ ಸುಶ್ರಿ ಮೊನಾಲಿಸಾ ಡ್ಯಾಶ್ ಸೇರಿದಂತೆ ಎಂಡಿಒಎನ್ಇಆರ್ ನ ಹಿರಿಯ ಅಧಿಕಾರಿಗಳು ವಿವಿಧ ಈಶಾನ್ಯ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಈಶಾನ್ಯ ರಾಜ್ಯ ಸರ್ಕಾರಗಳು, ಎಫ್ಐಸಿಸಿಐ (ಕೈಗಾರಿಕಾ ಪಾಲುದಾರ) ಮತ್ತು ಇನ್ವೆಸ್ಟ್ ಇಂಡಿಯಾ (ಹೂಡಿಕೆ ಸೌಲಭ್ಯ ಪಾಲುದಾರ) ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಂ, ಮಣಿಪುರ, ಮೇಘಾಲಯ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಎಂಬ ಎಂಟು ಈಶಾನ್ಯ ರಾಜ್ಯಗಳ ಪ್ರತಿನಿಧಿಗಳ ಪ್ರಸ್ತುತಿಗಳನ್ನು ಒಳಗೊಂಡ ನಾಲ್ಕನೇ ಪ್ರಮುಖ ರೋಡ್ ಶೋ ಇದಾಗಿದೆ. ಅವರು ತಮ್ಮ ತಮ್ಮ ರಾಜ್ಯಗಳಲ್ಲಿನ ವಿವಿಧ ಹೂಡಿಕೆ ಅವಕಾಶಗಳನ್ನು ಪ್ರಮುಖವಾಗಿ  ತೋರಿಸಲಿದ್ದಾರೆ.

ಹೂಡಿಕೆ ಮಾಡಬಹುದಾದ ಪ್ರಮುಖ ಕ್ಷೇತ್ರಗಳಲ್ಲಿ ಐಟಿ ಮತ್ತು ಐಟಿಇಎಸ್, ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಮನರಂಜನೆ, ಪ್ರವಾಸೋದ್ಯಮ ಮತ್ತು ಆತಿಥ್ಯ ಹಾಗು ಇಂಧನ ಸೇರಿವೆ.

ಎಂಡಿಒಎನ್ಇಆರ್ ಆಯೋಜಿಸಿರುವ ಈಶಾನ್ಯ ಹೂಡಿಕೆದಾರರ ಶೃಂಗಸಭೆಯು ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆದ ಹಿಂದಿನ ರೋಡ್ ಶೋಗಳು ಬಲವಾದ ಭಾಗವಹಿಸುವಿಕೆಯನ್ನು ಪಡೆದರೆ, ವೈಬ್ರೆಂಟ್ ಗುಜರಾತ್ ನಲ್ಲಿ ನಡೆದ ವಿಚಾರ ಸಂಕಿರಣವು ಸಂಭಾವ್ಯ ಹೂಡಿಕೆದಾರರಿಂದ ಗಮನಾರ್ಹ ಆಸಕ್ತಿಯನ್ನು ಆಕರ್ಷಿಸಿತು.

ಪ್ರಯತ್ನಗಳನ್ನು ಮಾಡಲು, ಎಂಡಿಒಎನ್ಇಆರ್ 2024ರ ಮಾರ್ಚ್ 6, ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಈಶಾನ್ಯ ಹೂಡಿಕೆದಾರರ ಶೃಂಗಸಭೆಗಾಗಿ ತಿಳಿವಳಿಕಾ ಒಡಂಬಡಿಕೆಗಳಿಗಾಗಿ ಸಹಿ ಮತ್ತು ವಿನಿಮಯ ಕಾರ್ಯಕ್ರಮವನ್ನು ನಡೆಸಿತು, ಇದು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳೊಂದಿಗೆ ಉದ್ಯಮ-ವ್ಯವಹಾರದಿಂದ ಸರ್ಕಾರಕ್ಕೆ (ಬಿ 2 ಜಿ) ಸಭೆಗಳಿಗೆ ಅನುಕೂಲ ಮಾಡಿಕೊಟ್ಟಿತು.

ಬೆಂಗಳೂರಿನಲ್ಲಿ ನಡೆಯುವ ರೋಡ್ ಶೋ ಈಶಾನ್ಯ ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಉತ್ಸುಕರಾಗಿರುವ ಅನೇಕ ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ.

 

*****


(Release ID: 2058903) Visitor Counter : 34