ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು 100 ದಿನಗಳ ಕ್ರಿಯಾ ಯೋಜನೆಯಲ್ಲಿ 'ಗ್ರಾಹಕ ಕಾಳಜಿ' ಮತ್ತು 'ಗ್ರಾಹಕ ಹಕ್ಕುಗಳ' ಮೇಲೆ ಗಮನ ಕೇಂದ್ರೀಕರಿಸಿದೆ
Posted On:
23 SEP 2024 5:35PM by PIB Bengaluru
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಬರುವ ಗ್ರಾಹಕ ವ್ಯವಹಾರಗಳ ಇಲಾಖೆ (ಡಿಒಸಿಎ) ಭಾರತ ಸರ್ಕಾರದ ಮೊದಲ 100 ದಿನಗಳಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರ 'ಗ್ರಾಹಕ ಕಾಳಜಿ (ರಕ್ಷಣೆ) ' ಚಿಂತನೆಯ ಮೇಲೆ ಗಮನ ಕೇಂದ್ರೀಕರಿಸಿದೆ.
ಇಲಾಖೆಯ ಆದ್ಯತೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಒಸಿಎ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ, ಸಾಂಸ್ಥಿಕ ಪ್ರಕ್ರಿಯೆಗಳನ್ನು ಸುಧಾರಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ಬಲಪಡಿಸುವುದು, ಅಗತ್ಯ ಆಹಾರ ಪದಾರ್ಥಗಳ ಬೆಲೆ ಮೇಲ್ವಿಚಾರಣೆ ಮತ್ತು ದೇಶಾದ್ಯಂತ ಆಹಾರ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಅವರು ಈ ಕೆಳಗಿನ ಪ್ರಮುಖ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು:
- ಬೆಲೆ ಮೇಲ್ವಿಚಾರಣಾ ವ್ಯವಸ್ಥೆ (ಪಿಎಂಎಸ್) ಅಪ್ಲಿಕೇಶನ್ ವಿಸ್ತರಣೆ: ಗ್ರಾಹಕ ವ್ಯವಹಾರಗಳ ಇಲಾಖೆ (ಡಿಒಸಿಎ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ಬರುವ ಬೆಲೆ ವರದಿ ಕೇಂದ್ರಗಳು ವರದಿ ಮಾಡುವ ದೈನಂದಿನ ಚಿಲ್ಲರೆ ಮತ್ತು ಸಗಟು ಬೆಲೆಗಳ ಮೂಲಕ ಗುರುತಿಸಲಾದ ಅಗತ್ಯ ಆಹಾರ ಪದಾರ್ಥಗಳ ದೈನಂದಿನ ಚಿಲ್ಲರೆ ಮತ್ತು ಸಗಟು ಬೆಲೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
2024ರ ಆಗಸ್ಟ್ 1ರಂದು, ಕೇಂದ್ರ ಸಚಿವರು ಪರಿಷ್ಕೃತ ಬೆಲೆ ಮೇಲ್ವಿಚಾರಣಾ ಅಪ್ಲಿಕೇಶನ್ ಪಿಎಂಎಸ್ ಅಪ್ಲಿಕೇಶನ್ 4.0 ಪ್ರಾರಂಭಿಸಿದರು, ಇದು ಈಗ ಜೋಳ (ಇಡೀ), ಸಜ್ಜೆ (ಇಡೀ), ರಾಗಿ (ಇಡೀ), ಮೈದಾ (ಗೋಧಿ), ಸುಜಿ (ಇಡೀ), ಕರಿಮೆಣಸು (ಇಡೀ), ಕೊತ್ತಂಬರಿ (ಇಡೀ, ಒಣ), ಜೀರಿಗೆ ಬೀಜ (ಇಡೀ), ಕೆಂಪು ಮೆಣಸಿನಕಾಯಿ (ಒಣ, ಕಾಂಡದೊಂದಿಗೆ ಬಿಡಿ), ಅರಿಶಿನ ಪುಡಿ, ಬಾಳೆಹಣ್ಣು, ದೇಸಿ ತುಪ್ಪ, ಬೆಣ್ಣೆ (ಪಾಶ್ಚರೀಕರಿಸಿದ), ಮೊಟ್ಟೆಗಳು (ಫಾರ್ಮ್ ಮೊಟ್ಟೆಗಳು, ಮಧ್ಯಮ ಗಾತ್ರ), ಕಡಲೆಕಾಯಿ, ಬದನೆಕಾಯಿ ಸೇರಿದಂತೆ 16 ಹೆಚ್ಚುವರಿ ಆಹಾರ ಸಾಮಗ್ರಿಗಳನ್ನು ಒಳಗೊಂಡಿದೆ. ಬೆಲೆ ಮೇಲ್ವಿಚಾರಣಾ ವ್ಯವಸ್ಥೆಯಡಿ ಒಟ್ಟು ಆಹಾರ ಸರಕುಗಳ ಸಂಖ್ಯೆ 22 ರಿಂದ 38 ಕ್ಕೆ ಏರಿದೆ, ಇದು ಮಾರುಕಟ್ಟೆ ನೋಟವನ್ನು/ ಮೇಲ್ವಿಚಾರಣೆಯನ್ನು ಸುಧಾರಿಸುತ್ತದೆ.
2024 ರ ಆಗಸ್ಟ್ ತಿಂಗಳ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ವಾರ್ಷಿಕ ಹಣದುಬ್ಬರ ದರ (3.65%) ಕಳೆದ ಐದು ವರ್ಷಗಳಲ್ಲಿ ಎರಡನೇ ಕನಿಷ್ಠವಾಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್ಪಿಐ) ಆಧಾರಿತ ಆಹಾರ ಹಣದುಬ್ಬರವು 2024 ರ ಆಗಸ್ಟ್ ನಲ್ಲಿ 2023 ರ ಜೂನ್ ನಂತರ ಎರಡನೇ ಕನಿಷ್ಠವಾಗಿದೆ.
- ಬಫರ್ ಸ್ಟಾಕಿಗಾಗಿ (ಕಾಪು ದಾಸ್ತಾನಿಗಾಗಿ) ಈರುಳ್ಳಿ ಸಂಗ್ರಹ: 5 ಎಲ್ಎಂಟಿ ಗುರಿ ಸಾಧನೆಯ ಹಿನ್ನೆಲೆಯಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಬಫರ್ಗಾಗಿ ಎನ್ಸಿಸಿಎಫ್ ಮತ್ತು ನಾಫೆಡ್ ರಬಿ -2024ಯಲ್ಲಿ 4.70 ಎಲ್ಎಂಟಿ ಈರುಳ್ಳಿಯನ್ನು ಖರೀದಿಸಿದೆ. ಈರುಳ್ಳಿ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು ಪೂರೈಕೆಯ ಮಾನ್ಯತೆ ಪಡೆದವರಿಂದ ಖರೀದಿ ಮತ್ತು ವಿಲೇವಾರಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈರುಳ್ಳಿ ಮಾರುಕಟ್ಟೆ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ಗ್ರಾಹಕರಿಗೆ ನಿರಾಳ ಪರಿಸ್ಥಿತಿಯನ್ನುಂಟು ಮಾಡಲು ಸರ್ಕಾರವು 2024 ರ ಸೆಪ್ಟೆಂಬರ್ 5 ರಿಂದ ಎನ್ಸಿಸಿಎಫ್, ನಾಫೆಡ್ ಮೂಲಕ ಪ್ರತಿ ಕೆ.ಜಿ.ಗೆ 35 ರೂ.ಗೆ ಈರುಳ್ಳಿ ಮಾರಾಟವನ್ನು ಪ್ರಾರಂಭಿಸಿದೆ. ದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು ಮುಂತಾದ ದೇಶದ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಚಿಲ್ಲರೆಯಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದಲ್ಲದೆ, ಬೃಹತ್ ವಿಲೇವಾರಿಯನ್ನು ಸಹ ಸರ್ಕಾರ ಪ್ರಾರಂಭಿಸಿದೆ.
- ಪಿಎಸ್ಎಸ್ ಮತ್ತು ಪಿಎಸ್ಎಫ್ ಅಡಿಯಲ್ಲಿ ದ್ವಿದಳ ಧಾನ್ಯಗಳ ಖರೀದಿ: ಪಿಎಸ್ಎಸ್ ಅಡಿಯಲ್ಲಿ 2.47 ಎಲ್ಎಂಟಿ ಮಾಸೂರ್ (ಆರ್ -24) ಮತ್ತು 43,125 ಮೆಟ್ರಿಕ್ ಟನ್ ಕಡಲೆ (ಆರ್ -24) ಯನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂಎಸ್ಪಿಯಲ್ಲಿ) ಮತ್ತು 11,000 ಮೆಟ್ರಿಕ್ ಟನ್ ಕಡಲೆ (ಆರ್ -24) ಯನ್ನು ಮಾರುಕಟ್ಟೆ ದರದಲ್ಲಿ ಪಿಎಸ್ಎಫ್ ಅಡಿಯಲ್ಲಿ ಖರೀದಿಸಲಾಗಿದೆ. ಇದಲ್ಲದೆ, ಪಿಎಸ್ಎಸ್ ಅಡಿಯಲ್ಲಿ 2.51 ಎಲ್ಎಂಟಿ ಬೇಸಿಗೆ ಕಾಲದ ಹೆಸರು (2024) ಅನ್ನು ಎಂಎಸ್ಪಿಯಲ್ಲಿ ಖರೀದಿಸಲಾಗಿದೆ. ನಾಫೆಡ್ ಮತ್ತು ಎನ್ಸಿಸಿಎಫ್ ಗಳು ತೊಗರಿ, ಉದ್ದು, ಕಡಲೆ ಮತ್ತು ಇತರ ಬೆಳೆಗಳ ಖರೀದಿಗಾಗಿ ರೈತರನ್ನು ತಮ್ಮ ಪೋರ್ಟಲ್ಗಳಲ್ಲಿ ನಿರಂತರವಾಗಿ ನೋಂದಾಯಿಸುತ್ತಿವೆ.
- ಪಿಎಂ-ಆಶಾ ಯೋಜನೆಗೆ ಅನುಮೋದನೆ: ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ 18.9.2024 ರಂದು ಅನುಮೋದನೆ ನೀಡಿದೆ. ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್), ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್), ಬೆಲೆ ಕೊರತೆ ಪಾವತಿ ಯೋಜನೆ (ಪಿಒಪಿಎಸ್) ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಗಳನ್ನು ಪಿಎಂ-ಆಶಾ ಅಡಿಯಲ್ಲಿ ಸಂಯೋಜಿಸುವುದು ಸುಧಾರಿತ ಅನುಷ್ಠಾನವನ್ನು ಖಚಿತಪಡಿಸುತ್ತದೆ. ಸಮಗ್ರ ಪಿಎಂ-ಆಶಾ ಯೋಜನೆಯು ಬೆಲೆ ಏರಿಳಿತವನ್ನು ನಿಯಂತ್ರಿಸುವ ಮತ್ತು ರೈತರಿಗೆ ನ್ಯಾಯಯುತ ಬೆಲೆಗಳನ್ನು ನೀಡುವಾಗ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಸರಕುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಬೇಳೆಕಾಳುಗಳು ಮತ್ತು ಈರುಳ್ಳಿ ಸೇರಿದಂತೆ ಅಗತ್ಯ ಕೃಷಿ-ತೋಟಗಾರಿಕೆ ಸರಕುಗಳ ಬೆಲೆ ಏರಿಳಿತದಿಂದ ಗ್ರಾಹಕರನ್ನು ರಕ್ಷಿಸಲು ಪಿಎಸ್ಎಫ್ ಯೋಜನೆಯನ್ನು ವಿಸ್ತರಿಸಲಾಗಿದೆ. ಕಾಳಸಂತೆ ದಾಸ್ತಾನು ಮತ್ತು ಊಹಾಪೋಹಗಳಿಂದಾಗುವ ಏರಿಳಿತವನ್ನು ತಡೆಗಟ್ಟಲು ಕಾರ್ಯತಂತ್ರದ ಬಫರ್ ಸ್ಟಾಕ್ ಗಳನ್ನು ನಿರ್ವಹಿಸಲಾಗಿದೆ. ಪಿಎಸ್ಎಫ್ ಮಧ್ಯಪ್ರವೇಶಗಳಲ್ಲಿ ಭಾರತ್ ಬೇಳೆ (ದಾಲ್) ಗಳು, ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಚಿಲ್ಲರೆ ಮಾರಾಟ ಮಾಡುವುದೂ ಸೇರಿದೆ.
- ಯುಎಸ್ಎ ಡ್ರೋನ್ ಪ್ರಮಾಣೀಕರಣ, ಇವಿ ಬ್ಯಾಟರಿ ಪರೀಕ್ಷೆ ಮತ್ತು ನ್ಯಾಷನಲ್ ಟೆಸ್ಟ್ ಹೌಸ್ನಿಂದ ರಸಗೊಬ್ಬರಗಳ ಗುಣಮಟ್ಟ ಪರೀಕ್ಷೆ:
* ಡ್ರೋನ್ ಗಳಿಗಾಗಿ ಪ್ರತ್ಯೇಕ ಪ್ರಮಾಣೀಕರಣಕ್ಕಾಗಿ ಪ್ರಮಾಣೀಕರಣ ಸಂಸ್ಥೆಯಾಗಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ದಿಂದ ತಾತ್ಕಾಲಿಕ ಅನುಮೋದನೆ ಪಡೆಯುವ ಮೂಲಕ ಎನ್ ಟಿಎಚ್ ಗಾಜಿಯಾಬಾದ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಇದು ನಿರ್ದಿಷ್ಟವಾಗಿ ಡ್ರೋನ್ ಗಳ ವಿಧ/ಮಾದರಿ ಪ್ರಮಾಣೀಕರಣವನ್ನು ನೀಡುವ ಕೇಂದ್ರ ಸರ್ಕಾರದ ಮೊದಲ ಘಟಕವಾಗಿದೆ.
* ಈ ಸೇವೆಗಳನ್ನು ಸ್ಪರ್ಧಾತ್ಮಕ ಶುಲ್ಕದಲ್ಲಿ, ಉದ್ಯಮದಲ್ಲಿ ಅತ್ಯಂತ ಕಡಿಮೆ ಮತ್ತು ಅದರ ಪ್ರತಿಸ್ಪರ್ಧಿಗಳಿಗಿಂತ ತ್ವರಿತವಾಗಿ ತಲುಪಿಸಲು ಎನ್ ಟಿಎಚ್ ಬದ್ಧವಾಗಿದೆ. ಇತ್ತೀಚೆಗೆ, ಸ್ಟ್ಯಾಂಡರ್ಡ್ಸ್ ಮತ್ತು ಲೇಬಲಿಂಗ್ (ಎಸ್ & ಎಲ್) ಕಾರ್ಯಕ್ರಮವನ್ನು ಎತ್ತರಿಸಲು ಎನ್ಟಿಎಚ್ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ಯೊಂದಿಗೆ ತಿಳಿವಳಿಕಾ ಒಡಂಬಡಿಕೆ ಮಾಡಿಕೊಂಡಿದೆ. ಈ ಸಹಯೋಗವು ಎನ್ ಟಿಎಚ್ ಅನ್ನು ವಿವಾದಿತ ಮಾದರಿಗಳಿಗೆ ಸಂಬಂಧಿಸಿ ರೆಫರಲ್ (ಪರಾಮರ್ಶನ) ಪ್ರಯೋಗಾಲಯವಾಗಿ ಗೊತ್ತುಪಡಿಸುತ್ತದೆ, ಬಿಇಇ ಅಧಿಕಾರಿಗಳಿಗೆ ತರಬೇತಿಯನ್ನು ಒದಗಿಸುತ್ತದೆ ಮತ್ತು ತಾಂತ್ರಿಕ ಕಳವಳಗಳನ್ನು/ಸಮಸ್ಯೆಗಳನ್ನು ಇತ್ಯರ್ಥ ಮಾಡುವಾಗ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳನ್ನು ಪರಾಮರ್ಶಿಸುವುದನ್ನು ಒಳಗೊಂಡಿರುತ್ತದೆ.
• ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು, ಎನ್ ಟಿಎಚ್ ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾಗಳಲ್ಲಿ "ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಮತ್ತು ಚಾರ್ಜಿಂಗ್ ಕೇಂದ್ರಗಳಿಗೆ" ಸುಧಾರಿತ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸುತ್ತಿದೆ, ಬೆಂಗಳೂರು ಸೌಲಭ್ಯದ ಅಡಿಪಾಯವನ್ನು 2024 ರ ಆಗಸ್ಟ್ 22ರಂದು ಹಾಕಲಾಗಿದೆ. ಹೆಚ್ಚುವರಿಯಾಗಿ, ಭಾರತ ಸರ್ಕಾರದ ಕೃಷಿ ಸಚಿವಾಲಯದ ಸಹಭಾಗಿತ್ವದಲ್ಲಿ ಮೂರನೇ ರೆಫರಿ ವಿಶ್ಲೇಷಣೆಯಾಗಿ ಎನ್ಟಿಎಚ್ "ರಸಗೊಬ್ಬರಗಳ ಗುಣಮಟ್ಟದ ಪರೀಕ್ಷೆ" ಯಲ್ಲಿ ತೊಡಗಿಕೊಂಡಿದೆ ಮತ್ತು ಅದು ಪರಿಣಾಮಕಾರಿ ಮತ್ತು ನಿಖರವಾದ ಪರೀಕ್ಷಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ತನ್ನ ಪ್ರಯೋಗಾಲಯಗಳಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸುತ್ತಿದೆ.
6. ಬಿಐಎಸ್ನಿಂದ ಪ್ರಮಾಣೀಕರಣ, ಅನುಸರಣೆ ಮೌಲ್ಯಮಾಪನ, ಹಾಲ್ಮಾರ್ಕಿಂಗ್ ಪರೀಕ್ಷೆ ಮತ್ತು ಪ್ರಯೋಗಾಲಯ ಮೂಲಸೌಕರ್ಯದ ನಿರ್ವಹಣೆ:
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕೈಗಾರಿಕೋದ್ಯಮಗಳಲ್ಲಿ ದೃಢವಾದ ಮಾನದಂಡಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ಏಕರೂಪತೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಉತ್ತೇಜಿಸಲು ಬದ್ಧವಾಗಿದೆ. ಅನುಸರಣೆ ಮೌಲ್ಯಮಾಪನದ ಮೇಲಿನ ನಮ್ಮ ಗಮನವು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವಲ್ಲಿ, ಉತ್ಪನ್ನದ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಾರುಕಟ್ಟೆ ಕಣ್ಗಾವಲು ನಮ್ಮ ಕಾರ್ಯವಿಧಾನದ ಅವಿಭಾಜ್ಯ ಅಂಗವಾಗಿದೆ, ಪ್ರಮಾಣೀಕೃತ ಉತ್ಪನ್ನಗಳು ಗ್ರಾಹಕರನ್ನು ತಲುಪಿದ ನಂತರವೂ ಸ್ಥಾಪಿತ ಮಾನದಂಡಗಳನ್ನು ಪೂರೈಸುವುದನ್ನು ಮುಂದುವರಿಸುತ್ತವೆ ಎಂಬುದನ್ನು ಇದು ಖಾತರಿಪಡಿಸುತ್ತದೆ, ಆ ಮೂಲಕ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಸುರಕ್ಷತಾ ನಿಯಮಗಳೊಂದಿಗೆ ದೀರ್ಘಕಾಲೀನ ಅನುಸರಣೆಯನ್ನು ಖಚಿತಪಡಿಸುತ್ತದೆ. ನಮ್ಮ ಉಪಕ್ರಮದ ಅಂಗವಾಗಿ, ಬಿಐಎಸ್ 1,500 ಹೊಸ ಉತ್ಪನ್ನ ಪ್ರಮಾಣೀಕರಣಗಳನ್ನು ನೀಡುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದೆ, ಅದೇ ಸಮಯದಲ್ಲಿ 40,000 ಮಾರುಕಟ್ಟೆ ಕಣ್ಗಾವಲು ತಪಾಸಣೆ ಮತ್ತು 15,000 ಕಾರ್ಖಾನೆ ಲೆಕ್ಕಪರಿಶೋಧನೆಗಳನ್ನು ನಡೆಸುವ ಗುರಿಯನ್ನು ಹೊಂದಿದೆ. 3,516 ಹೊಸ ಉತ್ಪನ್ನ ಪ್ರಮಾಣೀಕರಣಗಳನ್ನು ಈಗಾಗಲೇ ನೀಡಲಾಗಿದೆ ಮತ್ತು ವ್ಯಾಪಕ ಕಣ್ಗಾವಲು ಪ್ರಯತ್ನಗಳ ಪರಿಣಾಮವಾಗಿ 27,314 ಮಾರುಕಟ್ಟೆ ತಪಾಸಣೆಗಳು ಮತ್ತು 20,242 ಕಾರ್ಖಾನೆ ತಪಾಸಣೆಗಳಾನ್ನು ನಡೆಸಿ ಗಮನಾರ್ಹ ಪ್ರಗತಿಯನ್ನು ವರದಿ ಮಾಡಲು ನಾವು ಸಂತೋಷಪಡುತ್ತೇವೆ.
ಇಲ್ಲಿಯವರೆಗೆ, ಬಿಐಎಸ್ ಒಟ್ಟು 22,268 ಮಾನದಂಡಗಳನ್ನು ಪ್ರಕಟಿಸಿದೆ, ಜೊತೆಗೆ 6,549 ಐಎಸ್ಒ ಮಾನದಂಡಗಳು ಮತ್ತು 2,566 ಐಇಸಿ ಮಾನದಂಡಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಸಮನ್ವಯಗೊಳಿಸಿದೆ. ಹೆಚ್ಚುವರಿಯಾಗಿ, 2024 ರ ಸೆಪ್ಟೆಂಬರ್ 1ರ ವೇಳೆಗೆ ಎಕ್ಸ್ಆರ್ಎಫ್ (ಎಕ್ಸ್-ರೇ ಫ್ಲೋರೆಸೆನ್ಸ್) ಯಂತ್ರಗಳ ಸ್ವಯಂಕಾರ್ಯಾಚರಣೆಯ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಈ ಪ್ರಗತಿಯು ವಸ್ತು ಸಂಯೋಜನೆಯ ಕುರಿತು ವೇಗವಾದ ಮತ್ತು ಹೆಚ್ಚು ನಿಖರವಾದ ವಿಶ್ಲೇಷಣೆಗೆ ಅನುವು ಮಾಡಿಕೊಡುತ್ತದೆ, ಲೋಹಶಾಸ್ತ್ರದಲ್ಲಿ ಗುಣಮಟ್ಟದ ನಿಯಂತ್ರಣವನ್ನು ಹೆಚ್ಚಿಸುತ್ತದೆ ಮತ್ತು ಉದ್ಯಮದ ಮಾನದಂಡಗಳಿಗೆ ಅನುಸರಣೆಯನ್ನು ಖಚಿತಪಡಿಸುತ್ತದೆ.
ಉತ್ಪನ್ನ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಕಣ್ಗಾವಲಿನಲ್ಲಿ ಬಿಐಎಸ್ ನ ನಿರಂತರ ಪ್ರಯತ್ನಗಳು ಸುರಕ್ಷತೆ ಮತ್ತು ಗುಣಮಟ್ಟವನ್ನು ಉತ್ತೇಜಿಸುವುದಲ್ಲದೆ ಗ್ರಾಹಕರ ನಂಬಿಕೆಯನ್ನು ಬಲಪಡಿಸುತ್ತವೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಬೆಳೆಸುತ್ತವೆ. ಅನುಸರಣೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಭಾಗೀದಾರರು/ಮಧ್ಯಸ್ಥಗಾರರೊಂದಿಗೆ ನಿರಂತರ ಸುಧಾರಣೆ ಮತ್ತು ಸಹಯೋಗಕ್ಕೆ ನಾವು ಬದ್ಧರಾಗಿದ್ದೇವೆ.
7. ಆರ್.ಆರ್. ಎಸ್. ಎಲ್. ಗಳಲ್ಲಿ ಸಮಯ ತೋರಿಸುವ /ಪ್ರಸರಣ ಸಾಧನಗಳ ಸ್ಥಾಪನೆ:
ದೇಶದ ಕಾರ್ಯತಂತ್ರದ ಮತ್ತು ಕಾರ್ಯತಂತ್ರೇತರ ಕ್ಷೇತ್ರಗಳಿಗೆ ನಿಖರವಾದ ಸಮಯ ಅತ್ಯಗತ್ಯ. ಭಾರತೀಯ ಸ್ಟ್ಯಾಂಡರ್ಡ್ ಟೈಮ್ (ಐಎಸ್ಟಿ) ತೋರಿಸುವ /ಪ್ರಸಾರದ ಮಹತ್ವವನ್ನು ಪರಿಗಣಿಸಿ, ಈ ಯೋಜನೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಇಸ್ರೋ ಸಹಯೋಗದೊಂದಿಗೆ ಕೈಗೆತ್ತಿಕೊಂಡಿದೆ. ಈ ಯೋಜನೆಯು ಭಾರತದಾದ್ಯಂತ ಐದು ತಾಣಗಳಿಂದ ಐಎಸ್ ಟಿಯನ್ನು ಪ್ರಸಾರ ಮಾಡಲು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ರಚಿಸುವ ಗುರಿಯನ್ನು ಹೊಂದಿದೆ. 100 ದಿನಗಳ ಸಾಧನೆಯ ಅಡಿಯಲ್ಲಿ, ಅಹಮದಾಬಾದ್ ಮತ್ತು ಬೆಂಗಳೂರಿನ ಪ್ರಾದೇಶಿಕ ರೆಫರೆನ್ಸ್ ಪ್ರಮಾಣಿತ ಪ್ರಯೋಗಾಲಯದಲ್ಲಿ ಸಮಯದ (ಟೈಮಿಂಗ್) ಉಪಕರಣಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು.ಮತ್ತು ಅದನ್ನು ಸ್ಥಾಪಿಸಲಾಗಿದೆ ಇತರ ಮೂರು ಆರ್ ಆರ್ ಎಸ್ ಎಲ್ ಗಳಲ್ಲಿ ಈ ಉಪಕರಣಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಯು 5 ಆರ್ ಆರ್ ಎಸ್ ಎಲ್ (ಪ್ರಾದೇಶಿಕ ರೆಫರೆಲ್ ಪ್ರಯೋಗಾಲಯಗಳು) ಮೂಲಕ ಭಾರತೀಯ ಪ್ರಮಾಣಿತ ಸಮಯವನ್ನು (ಐಎಸ್ಟಿ) ಪ್ರಸಾರ ಮಾಡುವುದು ಮತ್ತು ಬಿಐಪಿಎಂ (ತೂಕ ಮತ್ತು ಅಳತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಬ್ಯೂರೋ- ಇಂಟರ್ನ್ಯಾಷನಲ್ ಬ್ಯೂರೋ ಆಫ್ ವೇಯ್ಟ್ಸ್ ಅಂಡ್ ಮೆಷರ್ಸ್) ನೊಂದಿಗೆ ಸಂಪರ್ಕ ಹೊಂದಿದ ಬೆಂಗಳೂರಿನ ಆರ್ ಆರ್ ಎಸ್ ಎಲ್ ನಲ್ಲಿ ಒಂದು ಡಿ.ಆರ್.ಸಿ. (ವಿಪತ್ತು ಚೇತರಿಕೆ ಕೇಂದ್ರ) ಸ್ಥಾಪನೆಯನ್ನು ಒಳಗೊಂಡಿದೆ.
ಕಾರ್ಯತಂತ್ರದ ವಲಯಗಳು, ನ್ಯಾವಿಗೇಷನ್, ಡಿಜಿಟಲ್ ಆರ್ಕೈವಿಂಗ್, ಸಾರಿಗೆ, ಅಂತರರಾಷ್ಟ್ರೀಯ ವ್ಯಾಪಾರ, ರಾಷ್ಟ್ರೀಯ ಭದ್ರತೆ, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ, ವಿದ್ಯುತ್ ಗ್ರಿಡ್ ಗಳು, ಭೂಮಿಯಡಿ ಇರುವ ಸಂಪನ್ಮೂಲಗಳ ಅನ್ವೇಷಣೆ, ಎಲೆಕ್ಟ್ರಾನಿಕ್ ವಹಿವಾಟುಗಳು ಮತ್ತು ಸೈಬರ್ ಅಪರಾಧಗಳಿಗೆ ಇದು ಅತ್ಯಂತ ನಿರ್ಣಾಯಕವಾಗಿದೆ.
8. ಗ್ರಾಹಕರನ್ನು ಕುರಿತ ಕಾಳಜಿಯನ್ನು ಖಚಿತಪಡಿಸಿಕೊಳ್ಳಲು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ಸುರಕ್ಷತಾ ಪ್ರತಿಜ್ಞೆಗೆ ಸಹಿ ಹಾಕುವುದು:
2023 ರಲ್ಲಿ ಬಿ 20 ಭಾರತ ಶೃಂಗಸಭೆಯಲ್ಲಿ ಗೌರವಾನ್ವಿತ ಪ್ರಧಾನಿಯವರು ಪ್ರತಿಪಾದಿಸಿದ ಕಲ್ಪನೆಯಾದ ವ್ಯವಹಾರಗಳು "ಗ್ರಾಹಕ ಹಕ್ಕುಗಳಿಂದ" "ಗ್ರಾಹಕ ಕಾಳಜಿ" ಗೆ ಮಾದರಿ ಬದಲಾವಣೆಯಾಗುವುದನ್ನು ಪರಿಗಣಿಸಬೇಕು ಎಂಬುದಕ್ಕೆ ಅನುಗುಣವಾಗಿ , ಡಿಒಸಿಎ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಎಲ್ಲಾ ಭಾಗೀದಾರರೊಂದಿಗೆ/ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ "ಸುರಕ್ಷತಾ ಪ್ರತಿಜ್ಞೆ" ಯನ್ನು ಅಂತಿಮಗೊಳಿಸಿದೆ. ಸುರಕ್ಷತಾ ಪ್ರತಿಜ್ಞೆ ಗ್ರಾಹಕರಿಗೆ ಮಾರಾಟ ಮಾಡುವ ಸರಕುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಆನ್ ಲೈನ್ ಪ್ಲಾಟ್ ಫಾರ್ಮ್ ಗಳ ಸ್ವಯಂಪ್ರೇರಿತ ಬದ್ಧತೆಯಾಗಿದೆ. ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲು, ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸಲು, ಗ್ರಾಹಕರ ಸುರಕ್ಷತೆಯನ್ನು ಸುಧಾರಿಸಲು ತಮ್ಮ ಕಾನೂನು ಬಾಧ್ಯತೆಗಳನ್ನು ಮೀರಿ ಹೋಗಲು ವೇದಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಸುರಕ್ಷತಾ ಅನುಸರಣೆಗಳನ್ನು ಉತ್ತೇಜಿಸಲು ನಾವೀನ್ಯತೆ ಮತ್ತು ಹೊಸ ವಿಧಾನಗಳನ್ನು ಹೆಚ್ಚಿಸಲು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳ ಸಾರ್ವಜನಿಕ ಬದ್ಧತೆಯಾಗಿ ಕಾರ್ಯನಿರ್ವಹಿಸುವುದು ಈ ಪ್ರತಿಜ್ಞೆಯ ಉದ್ದೇಶವಾಗಿದೆ. ಸುರಕ್ಷತಾ ಪ್ರತಿಜ್ಞೆಯ ತತ್ವಗಳು ಅಸುರಕ್ಷಿತ ಉತ್ಪನ್ನಗಳ ಮಾರಾಟವನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು, ಉತ್ಪನ್ನ ಸುರಕ್ಷತೆಗೆ ಜವಾಬ್ದಾರರಾಗಿರುವ ಶಾಸನಬದ್ಧ ಪ್ರಾಧಿಕಾರಗಳೊಂದಿಗೆ ಸಹಕರಿಸುವುದು, ಮೂರನೇ ಪಕ್ಷದ ಮಾರಾಟಗಾರರಲ್ಲಿ ಗ್ರಾಹಕ ಉತ್ಪನ್ನ ಸುರಕ್ಷತಾ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಉತ್ಪನ್ನ ಸುರಕ್ಷತಾ ವಿಷಯಗಳ ಬಗ್ಗೆ ಗ್ರಾಹಕರನ್ನು ಸಬಲೀಕರಣಗೊಳಿಸುವುದು ಸೇರಿದೆ.
*****
(Release ID: 2058160)
Visitor Counter : 46