ಹಣಕಾಸು ಸಚಿವಾಲಯ
ಹಣಕಾಸು ಸೇವೆಗಳ ಇಲಾಖೆ(DFS) ಭಾರತ ಮತ್ತು ವಿದೇಶಗಳಲ್ಲಿ ಡಿಜಿಟಲ್ ಪಾವತಿಗಳ ವಿಸ್ತರಣೆಯನ್ನು ಉತ್ತೇಜಿಸುತ್ತದೆ
ಡಿಜಿಟಲ್ ಪಾವತಿಗಳ ಒಟ್ಟು ವ್ಯವಹಾರ ಪ್ರಮಾಣವು 2017-18ನೇ ಆರ್ಥಿಕ ವರ್ಷದಲ್ಲಿ 2,071 ಕೋಟಿಯಿಂದ 2023-24ನೇ ಆರ್ಥಿಕ ವರ್ಷದಲ್ಲಿ 18,737 ಕೋಟಿಗೆ, 44% ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (CAGR) ಬೆಳೆದಿದೆ; 11% CAGR ನೊಂದಿಗೆ ವಹಿವಾಟುಗಳ ಮೌಲ್ಯವು 017-18ರಲ್ಲಿ ₹1,962 ಲಕ್ಷ ಕೋಟಿಯಿಂದ 2023-24ರಲ್ಲಿ ₹3,659 ಲಕ್ಷ ಕೋಟಿಗೆ, ಏರಿತು.
UPI ವ್ಯವಹಾರಗಳ ಪ್ರಮಾಣವು 2017-18ನೇ ಆರ್ಥಿಕ ವರ್ಷದಲ್ಲಿ 92 ಕೋಟಿಯಿಂದ 2023-24ರಲ್ಲಿ 13,116 ಕೋಟಿಗೆ ಬೆಳೆಯಿತು, ಇದರ CAGR 129% ಇದೆ; UPI ವ್ಯವಹಾರಗಳ ಮೌಲ್ಯವು 2017-18ರಲ್ಲಿ ₹1 ಲಕ್ಷ ಕೋಟಿಯಿಂದ 2023-24ರಲ್ಲಿ ₹200 ಲಕ್ಷ ಕೋಟಿಗೆ ತಲುಪಿದ್ದು, 138%ರ CAGR ಇದೆ.
UPI ಈಗ ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಸೇರಿದಂತೆ 7 ದೇಶಗಳಲ್ಲಿ ನೇರ ವಹಿವಾಟುಗಳಿಗೆ ಲಭ್ಯವಿದೆ
Posted On:
20 SEP 2024 3:31PM by PIB Bengaluru
ಹಣಕಾಸು ಸೇವೆಗಳ ಇಲಾಖೆ (DFS), ಹಣಕಾಸು ಸಚಿವಾಲಯವು ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI ) ನಂತಹ ವೇಗದ ಪಾವತಿ ವ್ಯವಸ್ಥೆಯ ಅಳವಡಿಕೆಯನ್ನು ವೇಗಗೊಳಿಸುವ ಪ್ರಯತ್ನಗಳು ಹಣಕಾಸಿನ ವಹಿವಾಟುಗಳನ್ನು ನಡೆಸುವ ರೀತಿಯನ್ನು ಕ್ರಾಂತಿಗೊಳಿಸಿವೆ. ಲಕ್ಷಾಂತರ ಜನರಿಗೆ ತತ್ ಕ್ಷಣದ, ಸುರಕ್ಷಿತ ಮತ್ತು ನಿರಂತರ ಪಾವತಿಗಳನ್ನು ಸಾಧ್ಯವಾಗಿಸಿವೆ
ಈ ಪ್ರಯತ್ನವು ದೇಶದ ಪ್ರತಿಯೊಬ್ಬ ನಾಗರಿಕನನ್ನು ಆರ್ಥಿಕ ನಿರ್ಧಾರಗಳಲ್ಲಿ ಸಶಕ್ತಗೊಳಿಸುವ, ನಗದು ರಹಿತ ಹಾಗೂ ಆರ್ಥಿಕ ಒಕ್ಕೂಟದ ಆರ್ಥಿಕತೆಯತ್ತ ಸರ್ಕಾರದ ದೃಷ್ಟಿಕೋಣಕ್ಕೆ ಹೊಂದಿಕೆಯಾಗುತ್ತದೆ.
ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ , 2023-24ರ ಹಣಕಾಸು ವರ್ಷದಲ್ಲಿ ಡಿಜಿಟಲ್ ಪಾವತಿಗಳು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿವೆ. ಈ ನಿಟ್ಟಿನಲ್ಲಿ ಪ್ರಮುಖ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ:
ಡಿಜಿಟಲ್ ಪಾವತಿ ವಹಿವಾಟು ಹೆಚ್ಚಳ:
ಭಾರತದಲ್ಲಿ ಡಿಜಿಟಲ್ ಪಾವತಿಗಳು ಗಣನೀಯ ಬೆಳವಣಿಗೆಯನ್ನು ಕಂಡಿವೆ. ಒಟ್ಟು ಡಿಜಿಟಲ್ ಪಾವತಿ ವ್ಯವಹಾರಗಳ ಸಂಖ್ಯೆಯು ಆರ್ಥಿಕ ವರ್ಷ 2017-18 ರಲ್ಲಿ 2,071 ಕೋಟಿಯಿಂದ ಆರ್ಥಿಕ ವರ್ಷ 2023-24 ರಲ್ಲಿ 18,737 ಕೋಟಿಗೆ ಏರಿಕೆಯಾಗಿದೆ. ಇದು 44% ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ತೋರಿಸುತ್ತದೆ. ಇದಲ್ಲದೆ , ಪ್ರಸಕ್ತ ಹಣಕಾಸು ವರ್ಷದ 2024-25 ರ ಕೊನೆಯ 5 ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್) ವಹಿವಾಟಿನ ಪ್ರಮಾಣವು 8,659 ಕೋಟಿ ರೂಪಾಯಿಗಳನ್ನು ತಲುಪಿದೆ.
ಮೂಲ: RBI , NPCI ಮತ್ತು ಬ್ಯಾಂಕ್ ಗಳು
ವ್ಯವಹಾರಗಳ ಮೌಲ್ಯವು ₹1,962 ಲಕ್ಷ ಕೋಟಿಯಿಂದ ₹3,659 ಲಕ್ಷ ಕೋಟಿಗೆ 11% ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) ಏರಿಕೆಯಾಗಿದೆ. ಜೊತೆಗೆ, ಪ್ರಸಕ್ತ ಹಣಕಾಸು ವರ್ಷದ 2024-25 ರ ಕಳೆದ 5 ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್) ಒಟ್ಟು ವಹಿವಾಟಿನ ಮೌಲ್ಯವು 1,669 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಮೂಲ: RBI , NPCI ಮತ್ತು ಬ್ಯಾಂಕ್ ಗಳು
UPI ಯ ನಿರಂತರ ಯಶಸ್ಸು:
UPI ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಮೂಲಾಧಾರವಾಗಿ ಮುಂದುವರಿದಿದೆ. UPI ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಕ್ರಾಂತಿಗೊಳಿಸಿದೆ. ಯುಪಿಐ ವ್ಯವಹಾರಗಳು ಆರ್ಥಿಕ ವರ್ಷ 2017-18 ರಲ್ಲಿ 92 ಕೋಟಿಯಿಂದ ಆರ್ಥಿಕ ವರ್ಷ 2023-24 ರಲ್ಲಿ 129% ನ CAGR ನಲ್ಲಿ 13,116 ಕೋಟಿಗಳಿಗೆ ಬೆಳೆದಿದೆ. ಇದಲ್ಲದೆ, ಪ್ರಸಕ್ತ ಹಣಕಾಸು ವರ್ಷದ 2024-25 ರ ಕಳೆದ 5 ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್) ವಹಿವಾಟಿನ ಪ್ರಮಾಣವು 7,062 ಕೋಟಿಗೆ ತಲುಪಿದೆ.
ಭಾಗವಹಿಸುವ ಬ್ಯಾಂಕ್ ಗಳು ಮತ್ತು ಫಿನ್ ಟೆಕ್ ಪ್ಲಾಟ್ ಫಾರ್ಮ್ ಗಳ ಬೆಳೆಯುತ್ತಿರುವ ನೆಟ್ ವರ್ಕ್ ನೀಡುವ ಬಳಕೆಯ ಸುಲಭತೆಯು ದೇಶಾದ್ಯಂತ ಲಕ್ಷಾಂತರ ಬಳಕೆದಾರರಿಗೆ UPI ಯನ್ನು ತತ್ ಕ್ಷಣದ ಪಾವತಿಗಳಿಗೆ ಅತ್ಯಂತ ಆದ್ಯತೆಯ ವಿಧಾನವನ್ನಾಗಿ ಮಾಡಿದೆ.
ಮೂಲ: NPCI
ಯುಪಿಐ ವಹಿವಾಟುಗಳ ಮೌಲ್ಯವು 138 ಪ್ರತಿಶತದ ಸಿಎಜಿಆರ್ನಲ್ಲಿ ರೂ 1 ಲಕ್ಷ ಕೋಟಿಯಿಂದ ರೂ 200 ಲಕ್ಷ ಕೋಟಿಗೆ ಬೆಳೆದಿದೆ. ಹೆಚ್ಚುವರಿಯಾಗಿ , ಕಳೆದ 5 ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್ FY 2024-25) ಒಟ್ಟು ವಹಿವಾಟಿನ ಮೌಲ್ಯವು 101 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ.
ಮೂಲ: NPCI
UPI : ಆಗಸ್ಟ್ 2024 ಕ್ಕೆ ವ್ಯಕ್ತಿಯಿಂದ ವ್ಯಾಪಾರಿ (P2M) ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ (P2P) ವಹಿವಾಟುಗಳು (ಕೋಟಿಗಳಲ್ಲಿ ವಾಲ್ಯೂಮ್ ಪ್ರಕಾರ)
ಆಗಸ್ಟ್ 2024 ರಲ್ಲಿ P2M ವ್ಯವಹಾರಗಳ ಕೊಡುಗೆ 62.40% ತಲುಪಿದೆ, ಇಲ್ಲಿ ಈ ವ್ಯವಹಾರಗಳ 85% ₹500 ವರೆಗಿನ ಮೌಲ್ಯದ್ದಾಗಿವೆ. ಇದು ಕಡಿಮೆ ಮೌಲ್ಯದ ಪಾವತಿಗಳನ್ನು ಮಾಡಲು ನಾಗರಿಕರು ಯುಪಿಐ ಮೇಲೆ ಹೊಂದಿರುವ ವಿಶ್ವಾಸವನ್ನು ಸೂಚಿಸುತ್ತದೆ.
UPI ಮತ್ತು RuPay ಯ ಜಾಗತಿಕ ವಿಸ್ತರಣೆ:
ಭಾರತದ ಡಿಜಿಟಲ್ ಪಾವತಿ ಕ್ರಾಂತಿಯು ತನ್ನ ಗಡಿಯನ್ನು ಮೀರಿ ವಿಸ್ತರಿಸುತ್ತಿದೆ. UPI ಮತ್ತು RuPay ಎರಡೂ ಜಾಗತಿಕವಾಗಿ ವೇಗವಾಗಿ ವಿಸ್ತರಿಸುತ್ತಿವೆ. ಭಾರತೀಯರು ವಾಸಿಸುವ ಮತ್ತು ವಿದೇಶದಲ್ಲಿ ಪ್ರಯಾಣಿಸುವವರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. UPI ಸೌಲಭ್ಯವು ಪ್ರಸ್ತುತ UAE, ಸಿಂಗಾಪುರ , ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಮುಂತಾದ ಪ್ರಮುಖ ಮಾರುಕಟ್ಟೆಗಳನ್ನು ಒಳಗೊಂಡಂತೆ 7 ದೇಶಗಳಲ್ಲಿ ಸಕ್ರಿಯವಾಗಿದೆ. ಭಾರತೀಯ ಗ್ರಾಹಕರು ಮತ್ತು ವ್ಯಾಪಾರಿಗಳು ಪಾವತಿಗಳನ್ನು ಮಾಡಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣವನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಈ ವಿಸ್ತರಣೆಯು ಹಣ ವರ್ಗಾವಣೆ ಹರಿವುಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಹಣಕಾಸು ಸೇರ್ಪಡೆಯನ್ನು ಸುಧಾರಿಸುತ್ತದೆ, ಮತ್ತು ಜಾಗತಿಕ ಹಣಕಾಸು ಪರಿಸರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ACI ವರ್ಲ್ಡ್ವೈಡ್ ವರದಿ 2024 ರ ಪ್ರಕಾರ, 2023 ರಲ್ಲಿ ಜಾಗತಿಕ ತತ್ ಕ್ಷಣದ ಪಾವತಿ ವ್ಯವಹಾರಗಳಲ್ಲಿ ಸುಮಾರು 49% ಭಾರತದಲ್ಲಿ ನಡೆಯುತ್ತಿದೆ.
ಭಾರತವು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. UPIಯ ಜಾಗತಿಕ ವಿಸ್ತರಣೆ ಮತ್ತು ಡಿಜಿಟಲ್ ವ್ಯವಹಾರಗಳ ನಿರಂತರ ಏರಿಕೆಯೊಂದಿಗೆ, ಭಾರತವು ಹಣಕಾಸು ಸೇರ್ಪಡೆ ಮತ್ತು ಸಾಮಾನ್ಯ ನಾಗರಿಕರ ಆರ್ಥಿಕ ಸಬಲೀಕರಣಕ್ಕೆ ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದೆ.
ಹಣಕಾಸು ಸೇವೆಗಳ ಇಲಾಖೆಯು ಸುರಕ್ಷಿತ, ಸ್ಕೇಲಬಲ್ ಮತ್ತು ಸೇರ್ಪಡೆಯಾಗುವ ಡಿಜಿಟಲ್ ಪಾವತಿ ಪರಿಹಾರಗಳನ್ನು ಮುಂದುವರಿಸಲು ಬದ್ಧವಾಗಿದೆ, ಜೊತೆಗೆ ಜಾಗತಿಕ ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದೆ.
*****
(Release ID: 2057776)
Visitor Counter : 41