ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ: ಉಪರಾಷ್ಟ್ರಪತಿ ಎಚ್ಚರಿಕೆ


ನಾವು ದೇಶದ ಹೊರಗೆ ಹೋದಾಗಲೆಲ್ಲಾ, ನಾವು ಅದರ ರಾಯಭಾರಿಗಳಾಗಿದ್ದೇವೆ ಎಂದು ಧನಕರ್ ಹೇಳುತ್ತಾರೆ

ರಾಷ್ಟ್ರ ವಿರೋಧಿ ಪ್ರವಾಸೋದ್ಯಮವು ನಮ್ಮ ಸಾಮೂಹಿಕ ಗುರುತನ್ನು ದುರ್ಬಲಗೊಳಿಸುತ್ತದೆ: ಉಪರಾಷ್ಟ್ರಪತಿ

ಭಾರತದ ಆರೋಗ್ಯವನ್ನು ನಾಶಪಡಿಸುವುದು ಭಾರತ ಮಾತೆಯ ಎದೆಗೆ ಚಾಕು ಇರಿದುದಕ್ಕಿಂತ ಕಡಿಮೆಯಿಲ್ಲ: ಉಪರಾಷ್ಟ್ರಪತಿ

ಅಟಲ್ ಜೀ ಅವರ ಕಾರ್ಯಗಳು ಒಂದೇ ಗುರಿಯಿಂದ ನಿರ್ದೇಶಿಸಲ್ಪಟ್ಟವು- 'ನನ್ನ ಭಾರತ ಶ್ರೇಷ್ಠ, ನನ್ನ ಭಾರತ, ನನ್ನ ರಾಷ್ಟ್ರೀಯತೆ': ಉಪರಾಷ್ಟ್ರಪತಿ

ಸಿಲ್ವಾಸ್ಸಾದ ಡೊಕ್ಮಾರ್ಡಿ ಸಭಾಂಗಣದಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

Posted On: 21 SEP 2024 6:57PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ದಿನದ 24 ಗಂಟೆಯೂ ರಾಜಕೀಯಕ್ಕೆ ಬಲಿಯಾಗದಂತೆ ಮನವಿ ಮಾಡಿದ್ದಾರೆ. ರಾಜಕೀಯವು ರಾಷ್ಟ್ರಕ್ಕಿಂತ ಮೇಲಿರಲು ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇರಬಾರದು. ರಾಷ್ಟ್ರೀಯತೆ, ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಬಲಿಕೊಟ್ಟು ನಾವು ಅತಿಯಾದ ರಾಜಕೀಯಕ್ಕೆ ಬಲಿಯಾಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುವಿನ ಡೋಕ್ಮಾರ್ಡಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಧನ್ ಕರ್ ಅವರು, ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವಾಗ ರಾಷ್ಟ್ರದ ಘನತೆ ಮತ್ತು ಹೆಮ್ಮೆಯನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿ ಹೇಳಿದರು. "ಭಾರತದ ಹೊರಗೆ ಹೋಗಿ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವ, ಭಾರತದ ಶತ್ರುಗಳೊಂದಿಗೆ ಕುಳಿತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನಾವು ದೇಶದ ಹೊರಗೆ ಹೋದಾಗಲೆಲ್ಲಾ, ನಾವು ದೇಶದ ರಾಯಭಾರಿಗಳಾಗಿದ್ದೇವೆ, ನಾವು ರಾಷ್ಟ್ರೀಯತೆಯನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ವಿದೇಶದಲ್ಲಿದ್ದಾಗ ವ್ಯಕ್ತಿಗಳು ಭಾರತದ ಚಿತ್ರಣವನ್ನು ಹಾಳುಮಾಡುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಇಂದು, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಸಫಾರಿ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನುನಾವು ನೋಡುತ್ತಿದ್ದೇವೆ, ಆದರೆ ರಾಷ್ಟ್ರ ವಿರೋಧಿ ಪ್ರವಾಸೋದ್ಯಮ ಏಕೆ ನಡೆಯುತ್ತಿದೆ? ನಾವು ವಿದೇಶಕ್ಕೆ ಹೋಗಿ ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಇದು ಸ್ವೀಕಾರಾರ್ಹವಲ್ಲ. ಇಂತಹ ನಡವಳಿಕೆಯು ರಾಷ್ಟ್ರಕ್ಕೆ ಹಾನಿ ಮಾಡುವುದಲ್ಲದೆ ನಮ್ಮ ಸಾಮೂಹಿಕ ಗುರುತನ್ನು ದುರ್ಬಲಗೊಳಿಸುತ್ತದೆ," ಎಂದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅನುಕರಣೀಯ ನಡವಳಿಕೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ ಅವರು, ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತದ ನಿಯೋಗವನ್ನು ವಿದೇಶಕ್ಕೆ ಮುನ್ನಡೆಸಿದ ಸಮಯವನ್ನು ಉಲ್ಲೇಖಿಸಿದರು. "ಅಟಲ್ ಜೀ ಅವರ ಕ್ರಮಗಳು ಒಂದೇ ಗುರಿಯಿಂದ ನಿರ್ದೇಶಿಸಲ್ಪಟ್ಟವು - 'ನನ್ನ ಭಾರತ ಶ್ರೇಷ್ಠ, ನನ್ನ ಭಾರತ, ನನ್ನ ರಾಷ್ಟ್ರೀಯತೆ' ಎಂದು ಉಪರಾಷ್ಟ್ರಪತಿ ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲಿ ನಿರಂತರ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಧನಕರ್ ಅವರು, "ಎಲ್ಲದರಲ್ಲೂ ಬೆಳವಣಿಗೆಗೆ ಅವಕಾಶವಿದೆ. ಪ್ರತಿದಿನ, ನಾವು ಇಂದು ಏನೇ ಮಾಡಿದರೂ, ನಾಳೆ ನಾವು ಉತ್ತಮವಾಗಿ ಮಾಡಬಹುದು ಎಂದು ನಾವು ನೋಡುತ್ತೇವೆ. ರಾಷ್ಟ್ರದ ಪ್ರಗತಿಯನ್ನು ಮುನ್ನಡೆಸುವಲ್ಲಿ ತಂತ್ರಜ್ಞಾನವು ವಹಿಸುವ ಪ್ರಮುಖ ಪಾತ್ರವನ್ನು ಅವರು ಒಪ್ಪಿಕೊಂಡರು. ಆದರೆ ದೇಶ ಮತ್ತು ಅದರ ಜನರ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಕ್ರಮಗಳ ವಿರುದ್ಧ ಎಚ್ಚರಿಕೆ ನೀಡಿದರು. "ಭಾರತದ ಆರೋಗ್ಯವನ್ನು ನಾಶಪಡಿಸುವುದು ಭಾರತ ಮಾತೆಯ ಎದೆಗೆ ಚಾಕು ಇರಿದುದಕ್ಕಿಂತ ಕಡಿಮೆಯಿಲ್ಲ ಮತ್ತು ಇದನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ" ಎಂದು ಅವರು ಹೇಳಿದರು.

ಸ್ಥಳೀಯವಾಗಿ ಉತ್ಪಾದಿಸಬಹುದಾದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಪ್ರಶ್ನಿಸಿದ ಅವರು, "ನಾವು ವಿದೇಶಿ ಸರಕುಗಳನ್ನು ವಿತ್ತೀಯ ಲಾಭಕ್ಕಾಗಿ ಏಕೆ ಬಳಸುತ್ತೇವೆ? ನಮ್ಮ ದೇಶದಲ್ಲಿ ಪೀಠೋಪಕರಣಗಳು ವಿದೇಶದಿಂದ ಬರುತ್ತವೆಯೇ? ಬಾಟಲಿಗಳು ವಿದೇಶದಿಂದ ಬರುತ್ತವೆಯೇ? ಗಾಳಿಪಟಗಳು, ದೀಪಗಳು, ಮೇಣದಬತ್ತಿಗಳು ಮತ್ತು ಹತ್ತಿ ಕೂಡ ಈಗ ವಿದೇಶದಿಂದ ಬರುತ್ತಿವೆ.

ಈ ಅಭ್ಯಾಸದ ಮೂರು ಪ್ರಮುಖ ಅನಾನುಕೂಲಗಳನ್ನು ಅವರು ಬಿಂಬಿಸಿದರು: ವಿದೇಶಿ ವಿನಿಮಯದ ಸವಕಳಿ, ದೇಶೀಯ ತೆರಿಗೆ ಆದಾಯದ ನಷ್ಟ ಮತ್ತು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶದಿಂದ ವಂಚಿತರಾಗುತ್ತಿರುವ ಭಾರತೀಯ ಉದ್ಯಮಿಗಳಿಗೆ ಅವಕಾಶಗಳನ್ನು ಕಳೆದುಕೊಳ್ಳುವುದು ಮತ್ತು ಅಲ್ಪಾವಧಿಯ ಆರ್ಥಿಕ ಲಾಭಗಳಿಂದ ಪ್ರೇರಿತವಾದ ಆಮದು ಸರಕುಗಳ ಮೇಲಿನ ಅವಲಂಬನೆ ಅಂತಿಮವಾಗಿ ರಾಷ್ಟ್ರದ ದೀರ್ಘಕಾಲೀನ ಸಮೃದ್ಧಿಗೆ ಹಾನಿ ಮಾಡುತ್ತದೆ ಎಂಬ ಅಂಶವನ್ನು ವಿಷಾದಿಸಿದರು.

ಸಮಾನತೆ ಮತ್ತು ಸಾಮಾಜಿಕ ಚಲನಶೀಲತೆಯತ್ತ ಭಾರತದ ನಂಬಲಾಗದ ಪ್ರಯಾಣವನ್ನು ಪ್ರತಿಬಿಂಬಿಸಿದ ಶ್ರೀ ಧನಕರ್ , ವೈವಿಧ್ಯಮಯ ಹಿನ್ನೆಲೆಯ ವ್ಯಕ್ತಿಗಳನ್ನು ನಾಯಕತ್ವದ ಅತ್ಯುನ್ನತ ಸ್ಥಾನಗಳಿಗೆ ಏರಲು ಸಬಲೀಕರಣಗೊಳಿಸುವಲ್ಲಿ ದೇಶದ ಯಶಸ್ಸನ್ನು ಸಂಭ್ರಮಿಸಿದರು. ಅಂತೆಯೇ "ಬಡತನದ ನಡುವೆಯೂ ಚಹಾ ಮಾರುವವನು ಭಾರತದ ಪ್ರಧಾನಿಯಾಗಿದ್ದು ಹೇಗೆ? ರೈತನ ಮಗ ಹೇಗೆ ಉಪರಾಷ್ಟ್ರಪತಿಯಾದ? ಬುಡಕಟ್ಟು ಹಿನ್ನೆಲೆಯ ಮಹಿಳೆ ದೇಶದ ರಾಷ್ಟ್ರಪತಿಯಾಗಲು ಹೇಗೆ ಸಾಧ್ಯವಾಯಿತು? ಎಂದು ಉಲ್ಲೇಖಿಸಿದರು.

1990 ರಲ್ಲಿ ಸಚಿವರಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅವರು, ಅಂದಿನ ಮತ್ತು ಇಂದಿನ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಉಲ್ಲೇಖಿಸಿದರು. "ಆ ಸಮಯದಲ್ಲಿ, ನನ್ನ ಭೇಟಿಯ ಸಮಯದಲ್ಲಿ ನಾನು 30 ಜನರನ್ನು ನೋಡಲಿಲ್ಲ, ಮತ್ತು ಈ ವರ್ಷ, 2 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ," ಎಂದು ಅವರು ಹೇಳಿದರು.

ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಉಪಕ್ರಮಗಳನ್ನು ಉಲ್ಲೇಖಿಸಿ ಶ್ರೀ ಧನಕರ್ ಅವರು ಭಾರತದ ಕೃಷಿ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಶ್ಲಾಘಿಸಿದರು. "ಇಂದು, 10 ಕೋಟಿ ರೈತರು ನೇರವಾಗಿ, ವರ್ಷಕ್ಕೆ ಮೂರು ಬಾರಿ ಪಾವತಿಗಳನ್ನು ಪಡೆಯುತ್ತಾರೆ," ಎಂದರು.

ಡಿಎನ್ ಎಚ್ ಮತ್ತು ಡಿಡಿ ಕೇಂದ್ರಾಡಳಿತ ಪ್ರದೇಶದ ಗೌರವಾನ್ವಿತ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್ ಮತ್ತು ಲಕ್ಷದೀಪ್, ಡಿಎನ್ ಎಚ್ ನ ಗೌರವಾನ್ವಿತ ಸಂಸದೆ ಶ್ರೀಮತಿ ಡೆಲ್ಕರ್ ಕಲಾಬೆನ್ ಮೋಹನ್ ಭಾಯ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****



(Release ID: 2057615) Visitor Counter : 10