ಭಾರೀ ಕೈಗಾರಿಕೆಗಳ ಸಚಿವಾಲಯ
ನವದೆಹಲಿಯ ಭಾರತ್ ಮಂಟಪದಲ್ಲಿ "ಭಾರತದ ಎಲೆಕ್ಟ್ರಿಕ್ ವಾಹನಗಳ ವಲಯ ಪರಿವರ್ತಿಸುವಲ್ಲಿ ಫೇಮ್‌ನ ಯಶಸ್ಸು: ನೋಟದಿಂದ ವಾಸ್ತವತೆಯ ಕಡೆಗೆ" ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿದ ಬೃಹತ್ ಕೈಗಾರಿಕೆಗಳ ಸಚಿವಾಲಯ
ಫೇಮ್(ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ತಯಾರಿಕೆ-ಎಫ್ಎಎಂಇ) ಯೋಜನೆಯು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ, ಸುಸ್ಥಿರ ಸಾರಿಗೆ ವ್ಯವಸ್ಥೆ ಹೆಚ್ಚಿಸುವ ಸರ್ಕಾರದ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ: ಕೇಂದ್ರ ಸಚಿವರು
ನಮ್ಮ ರಾಷ್ಟ್ರವನ್ನು ಹಸಿರಾಗಿಸಲು, ತಾಂತ್ರಿಕವಾಗಿ ಹೆಚ್ಚು ಮುಂದುವರಿಸಲು ಮತ್ತು ಸಮೃದ್ಧ ಆರ್ಥಿಕ ಭವಿಷ್ಯದತ್ತ ಮುನ್ನಡೆಸಲು ಫೇಮ್ ಉಪಕ್ರಮ ಪ್ರಮುಖವಾಗಿದೆ
Posted On:
18 SEP 2024 6:11PM by PIB Bengaluru
ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ನವದೆಹಲಿಯ ಭಾರತ್ ಮಂಟಪದಲ್ಲಿ "ಭಾರತದ ವಿದ್ಯುಚ್ಛಾಲಿತ ವಾಹನಗಳ ವಲಯವನ್ನು ಪರಿವರ್ತಿಸುವಲ್ಲಿ ಫೇಮ್(Faster Adoption & Manufacturing of Electric Vehicles-FAME)ನ ಯಶಸ್ಸು: ನೋಟದಿಂದ ವಾಸ್ತವತೆಯ ಕಡೆಗೆ" ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿತ್ತು. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ, ಹಿರಿಯ ಸರ್ಕಾರಿ ಅಧಿಕಾರಿಗಳು, ವಾಹನ ಉದ್ಯಮದ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ ಅವರು ಫೇಮ್-2ರ ಯಶಸ್ಸಿಗೆ ಗಣನೀಯ ಕೊಡುಗೆ ನೀಡಿದ ಮೂಲ ವಾಹನ ತಯಾರಕರು ಮತ್ತು ಪಾಲುದಾರರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ, 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧಿಸಲು ನಮಗೆ ನಿರ್ದೇಶನ ಮತ್ತು ಗುರಿ ಎರಡನ್ನೂ ನೀಡಿರುವ ನಮ್ಮ ಪ್ರಧಾನಿ ಮೋದಿ ಅವರ ದೂರದೃಷ್ಟಿ ಆದರ್ಶಪ್ರಾಯವಾಗಿದೆ. ಈ ಉಪಕ್ರಮವು ನಮ್ಮ ರಾಷ್ಟ್ರವನ್ನು ಹಸಿರಾಗಿಸಲು, ತಾಂತ್ರಿಕವಾಗಿ ಹೆಚ್ಚು ಮುಂದುವರೆಸಲು ಮತ್ತು ಆರ್ಥಿಕವಾಗಿ ಸಮೃದ್ಧಿಯತ್ತ ಮುನ್ನಡೆಸಲು ಪ್ರಮುಖವಾಗಿದೆ. ಭವಿಷ್ಯದಲ್ಲಿ ಫೇಮ್ ಯೋಜನೆಯು ಇಂಗಾಲದ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡಲು ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ ಹೆಚ್ಚಿಸುವ ಸರ್ಕಾರದ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
"ನಾವೆಲ್ಲಾ ಮುಂದೆ ನೋಡುತ್ತಿರುವಾಗ, ನಾವೀನ್ಯತೆ, ಹೂಡಿಕೆ ಮತ್ತು ಸ್ಫೂರ್ತಿಗೆ ಬದ್ಧರಾಗಿರುತ್ತೇವೆ. ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಫೇಮ್ ಯೋಜನೆಯಿಂದ ಹಾಕಿರುವ ಭದ್ರ ಬುನಾದಿದೊಂದಿಗೆ, ನಾವು ಜಾಗತಿಕ ವಿದ್ಯುತ್ ಚಲನಶೀಲತೆಯ ಪರಿವರ್ತನೆಯನ್ನು ಮುನ್ನಡೆಸುತ್ತೇವೆ ಎಂಬ ವಿಶ್ವಾಸ ನನಗಿದೆ" ಎಂದರು.
"ಹೆಚ್ಚುವರಿಯಾಗಿ, ಹೊಸದಾಗಿ ಅನುಮೋದಿಸಿರುವ “ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೊವೇಟಿವ್ ವೆಹಿಕಲ್ ಎನ್|ಹ್ಯಾನ್ಸ್|ಮೆಂಟ್” ಅಥವಾ “ಪಿಎಂ ಇ-ಡ್ರೈವ್” ಯೋಜನೆಯಲ್ಲಿ ಗಣನೀಯ ಮುಂಗಡ ಪ್ರೋತ್ಸಾಹಕಗಳು ಮತ್ತು ನಿರ್ಣಾಯಕ ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿ ಮೂಲಕ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಒತ್ತು ನೀಡಲಾಗಿದೆ. ಪರಿಸರ ಮಾಲಿನ್ಯದ ಹೆಜ್ಜೆಗುರುತು ಕಡಿಮೆ ಮಾಡುವುದು, ಗಾಳಿಯ ಗುಣಮಟ್ಟ ಸುಧಾರಿಸುವುದು, ಸ್ಪರ್ಧಾತ್ಮಕತೆಯ ಮತ್ತು ಚೇತರಿಸಿಕೊಳ್ಳುವ ವಿದ್ಯುಚ್ಛಾಲಿತ ವಾಹನಗಳ ಉತ್ಪಾದನಾ ಉದ್ಯಮ ಸೃಜಿಸುವುದು ನಮ್ಮ ಗುರಿಯಾಗಿದೆ” ಎಂದರು.
ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ ಮಾತನಾಡಿ, ಫೇಮ್-2 ಯೋಜನೆ ಯಶಸ್ವಿಗೊಳಿಸಲು ಸಮರ್ಪಿತ ಪ್ರಯತ್ನಗಳನ್ನು ಮಾಡಿದ ಉದ್ಯಮದ ಪ್ರಮುಖರನ್ನು ಶ್ಲಾಘಿಸಿದರು. ಸಂಕೀರ್ಣ ಕಾರ್ಯಗಳನ್ನು ಎದುರಿಸಲು ಫೇಮ್-2 ನಮಗೆ ಸವಾಲು ಹಾಕುವ ಜತೆಗೆ, ವಿದ್ಯುಚ್ಛಾಲಿತ ವಾಹನಗಳ ವಲಯದಲ್ಲಿ ದೇಶೀಯ ಮೌಲ್ಯವರ್ಧನೆ ಸಾಧಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಕ್ರಿಯಗೊಳಿಸಿದೆ ಎಂದು ಅವರು ಒತ್ತಿ ಹೇಳಿದರು.
ಬದಲಾವಣೆ ಎಂಬುದು ನಿರಂತರ ಎಂದ ಶ್ರೀ ರಿಜ್ವಿ, ನಾವು ಈಗ ಹವಾಮಾನ ಬದಲಾವಣೆಯನ್ನು ಪರಿಹರಿಸುವ ಕಡೆಗೆ ನಮ್ಮ ಗಮನ ಹರಿಸಬೇಕು, 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಅಳವಡಿಕೆಗೆ ಪ್ರಮುಖ ಉತ್ತೇಜನ ನೀಡಲು ಫೇಮ್ ಯೋಜನೆ ಪ್ರಾರಂಭಿಸಲಾಗಿದೆ.
ಫೇಮ್-2ರ ಯಶಸ್ಸಿನ ಮೂಲಕ, ನಾವು ಭಾರತದಾದ್ಯಂತ ಪರಿಸರ ಸ್ನೇಹಿ, ಸ್ವಚ್ಛ ಮತ್ತು ಹಸಿರು ಚಲನಶೀಲತೆಯ ಆಯ್ಕೆಗಳನ್ನು ಸ್ವೀಕರಿಸಿದ್ದೇವೆ.
ಫೇಮ್-2 ಯೋಜನೆ ಅಡಿ 2019 ಏಪ್ರಿಲ್ 1ರಿಂದ 2024 ಆಗಸ್ಟ್ 31ರ ವರೆಗೆ ಆಗಿರುವ ಪ್ರಮುಖ ಸಾಧನೆಗಳು:
* 4,924 ಕೋಟಿ ರೂ. ಬಜೆಟ್‌ನೊಂದಿಗೆ 14,32,450 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ(ಇ-2ಡಬ್ಲ್ಯು)
* 1,116 ಕೋಟಿ ರೂ.ಬಜೆಟ್‌ನೊಂದಿಗೆ 1,65,806 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಉತ್ಪಾದನೆ(ಇ-3ಡಬ್ಲ್ಯು)
* 537 ಕೋಟಿ ರೂ. ಬಜೆಟ್‌ನೊಂದಿಗೆ 22,637 ಎಲೆಕ್ಟ್ರಿಕ್ 4 ಚಕ್ರ ವಾಹನಗಳ ಉತ್ಪಾದನೆ(ಇ-4ಡಬ್ಲ್ಯು)
* 3,009 ಕೋಟಿ ರೂ. ಬಜೆಟ್‌ನಲ್ಲಿ 6,862 ಇ-ಬಸ್‌ಗಳ ಉತ್ಪಾದನೆ
* 10,763 ಎಲೆಕ್ಟ್ರಿಕ್ ವೆಹಿಕಲ್ ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ (ಇವಿಪಿಸಿಎಸ್) ಸ್ಥಾಪನೆಗೆ 913 ಕೋಟಿ ರೂ. ಹಂಚಿಕೆ.
* ಒಟ್ಟು ಇಂಧನ ಉಳಿತಾಯ: 4.29 ಕೋಟಿ ಲೀಟರ್(2024 ಆಗಸ್ಟ್ 31ರಂತೆ)
* ಒಟ್ಟು ಇಂಗಾಲ ಹೊರಸೂಸುವಿಕೆ ಕಡಿತ: 1.2 ಲಕ್ಷ ಟನ್(2024 ಆಗಸ್ಟ್ 31ಕ್ಕೆ ಅನ್ವಯವಾಗುವಂತೆ)
ಪಿಎಂ ಇ-ಡ್ರೈವ್ ಯೋಜನೆಯ ಪ್ರಾರಂಭದೊಂದಿಗೆ, ಬೃಹತ್ ಕೈಗಾರಿಕೆಗಳ ಸಚಿವಾಲಯವು ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಚಲನಶೀಲತೆ ಉತ್ತೇಜಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ಉಪಕ್ರಮವು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸುತ್ತದೆ, ಅಲ್ಲದೆ 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯ ನಿವ್ವಳ ಶೂನ್ಯ ಗುರಿ ಸಾಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಸ್ಥಳೀಯ ನಾವೀನ್ಯತೆ ಮತ್ತು ಉತ್ಪಾದನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಸಾರ್ವಜನಿಕ ವಲಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್ಇಎಲ್) ಕಂಪನಿಯು 2023-24ನೇ ಹಣಕಾಸು ವರ್ಷದಲ್ಲಿ 54,99,12,601 ರೂ. ಲಾಭಾಂಶ ಘೋಷಿಸಿದೆ.
*****
(Release ID: 2056671)
Visitor Counter : 38