ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ 100 ದಿನಗಳ ಕ್ರಿಯಾ ಯೋಜನೆಗಾಗಿ ನಾಲ್ಕು ಸ್ತಂಭಗಳ ಆಧಾರದ ಮೇಲೆ ಕಾರ್ಯಾಚರಿಸಿದೆ
Posted On:
18 SEP 2024 2:41PM by PIB Bengaluru
ಈ ಸರ್ಕಾರದ ಮೊದಲ 100 ದಿನಗಳಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್ ಪಿಡಿ) ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಕಾರ್ಯಾಚರಿಸಿದೆ. ನಾಲ್ಕು ಸ್ತಂಭಗಳು ಈ ಕೆಳಗಿನಂತಿವೆ: i) ಡಿಎಫ್ ಪಿಡಿ ಕಾರ್ಯಾಚರಣೆಗಳ ಡಿಜಿಟಲೀಕರಣ, ii) ಪಿಡಿಎಸ್ ನಲ್ಲಿ ಸಂಗ್ರಹಣೆ ಮತ್ತು ಲಾಜಿಸ್ಟಿಕ್ಸ್ ಸುವ್ಯವಸ್ಥಿತಗೊಳಿಸುವುದು, iii) ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ್ ಕೇಂದ್ರಗಳಾಗಿ ಪರಿವರ್ತಿಸುವುದು ಮತ್ತು iv) ಡಿಎಫ್ ಪಿಡಿ ಅಡಿಯಲ್ಲಿ ಸಂಸ್ಥೆಗಳನ್ನು ಸಾಂಸ್ಥಿಕವಾಗಿ ಬಲಪಡಿಸುವುದು.
ಕಳೆದ 100 ದಿನಗಳಲ್ಲಿ, ಮೇಲಿನ ಎಲ್ಲಾ ಸ್ತಂಭಗಳ ಮೇಲಿನ ಗುರಿಗಳನ್ನು ಸಾಧಿಸುವಲ್ಲಿ ಡಿಎಫ್ ಪಿಡಿ ಈಗಾಗಲೇ ಪ್ರಮುಖ ದಾಪುಗಾಲು ಹಾಕಿದೆ. ಕೆಲವು ಪ್ರಮುಖ ಸಾಧನೆಗಳು ಮತ್ತು ಮುಂದಿನ ಹೆಜ್ಜೆಗಳನ್ನು ಕೆಳಗೆ ವಿವರಿಸಲಾಗಿದೆ:
- ಜನ ಪೋಷಣ್ ಕೇಂದ್ರಗಳ ಪ್ರಾರಂಭ: 2024 ರ ಆಗಸ್ಟ್ 20 ರಂದು 60 ನ್ಯಾಯಬೆಲೆ ಅಂಗಡಿಗಳನ್ನು (ಎಫ್ಪಿಎಸ್) ಜನ ಪೋಷಣ್ ಕೇಂದ್ರವಾಗಿ (ಜೆಪಿಕೆ) ಪರಿವರ್ತಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ಡಿಎಫ್ಪಿಡಿ ಪ್ರಾರಂಭಿಸಿತು. ಈ ಜೆಪಿಕೆಗಳು ಪಿಡಿಎಸ್ ಅಲ್ಲದ ಸರಕುಗಳನ್ನು ಹಾಗು ಪೌಷ್ಟಿಕಾಂಶ-ಹೆಚ್ಚಿನ ಪ್ರಮಾಣದಲ್ಲಿರುವ ಸರಕುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಇರುವ ದರಗಳಿಗೆ ಹೋಲಿಸಿದಾಗ ಸ್ಪರ್ಧಾತ್ಮಕ ಬೆಲೆಗಳಲ್ಲಿ ಒದಗಿಸಲು ಗಮನ ಕೇಂದ್ರೀಕರಿಸುತ್ತವೆ. ಎಫ್ಪಿಎಸ್ ವಿತರಕರಿಗೆ ಹೆಚ್ಚುವರಿ ಆದಾಯದ ಹರಿವನ್ನು ಒದಗಿಸುವಾಗ ಫಲಾನುಭವಿಗಳ ನಡುವಿನ ಪೌಷ್ಠಿಕಾಂಶದ ಅಂತರವನ್ನು ಕಡಿಮೆ ಮಾಡಲು ಕ್ರಮಗಳನ್ನು ರೂಪಿಸಲಾಗಿದೆ. ಫಲಾನುಭವಿಗಳಿಗೆ ಪೌಷ್ಠಿಕಾಂಶದ ಸಾಕ್ಷರತೆಯ ಬಗ್ಗೆ ಮಾರ್ಗದರ್ಶನ ನೀಡಲು ಎಫ್ಪಿಎಸ್ ವಿತರಕರಿಗೆ ಈಗಾಗಲೇ ಪೋಷಣ್ ಮಿತ್ರರಾಗಿ ತರಬೇತಿ ನೀಡಲಾಗಿದೆ. ಗಾಜಿಯಾಬಾದ್ (ಯುಪಿ), ಜೈಪುರ (ಆರ್ಜೆ), ಅಹಮದಾಬಾದ್ (ಜಿಜೆ) ಮತ್ತು ಹೈದರಾಬಾದ್ (ತೆಲಂಗಾಣ) ನಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಮುಂದಿನ ಐದು ವರ್ಷಗಳಲ್ಲಿ, ದೇಶಾದ್ಯಂತ 50,000 ಎಫ್ಪಿಎಸ್ ಗಳನ್ನು ಜೆಪಿಕೆಗಳಾಗಿ ಪರಿವರ್ತಿಸಲು ಯೋಜಿಸಲಾಗಿದೆ.
- ಮೇರಾ ರೇಷನ್ 2.0 ಅಪ್ಲಿಕೇಶನ್: ಪಿಎಂಜಿಕೆಎವೈ ಫಲಾನುಭವಿಗಳಿಗೆ ಅವರ ಅರ್ಹತೆಗಳು, ಹಿಂಪಡೆಯುವಿಕೆ, ಹತ್ತಿರದ ಎಫ್ಪಿಎಸ್ ಮತ್ತು ತಡೆರಹಿತ ಹಾಗು ಬಳಕೆದಾರ ಕೇಂದ್ರಿತ ಅನುಭವಕ್ಕಾಗಿ ಹೊಸ ಮೌಲ್ಯವರ್ಧಿತ ವೈಶಿಷ್ಟ್ಯಗಳ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಒದಗಿಸಲು, ಡಿಎಫ್ಪಿಡಿ 2024ರ ಆಗಸ್ಟ್ 20ರಂದು ಮೇರಾ ರೇಷನ್ 2.0 ಅಪ್ಲಿಕೇಶನ್ ಪ್ರಾರಂಭಿಸಿತು. ಡಿಎಫ್ ಪಿಡಿ ಅಧಿಕಾರಿಗಳು ತಮ್ಮ ಕಡೆಯಿಂದ ಪಡಿತರ ಚೀಟಿಗಳು ಮತ್ತು ಪಿಡಿಎಸ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳಿಗೆ ಇದಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ. 1 ಕೋಟಿಗೂ ಹೆಚ್ಚು ಡೌನ್ಲೋಡ್ಗಳನ್ನು ಈಗಾಗಲೇ ದಾಖಲಿಸಲಾಗಿದೆ.
- ಪಿಎಂ ಗತಿ ಶಕ್ತಿಯನ್ನು ಬಳಸಿಕೊಂಡು ಮಾರ್ಗ ಆಪ್ಟಿಮೈಸೇಶನ್: ದೂರವನ್ನು ಕಡಿಮೆ ಮಾಡಲು ಪಿಡಿಎಸ್ ಪೂರೈಕೆ ಸರಪಳಿಯ ಮಾರ್ಗ ಆಪ್ಟಿಮೈಸೇಶನ್ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ. ಈ ಅಧ್ಯಯನವು ಗೋದಾಮುಗಳು ಮತ್ತು ಎಫ್ ಪಿಎಸ್ ಗಳ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸುತ್ತದೆ. ಈ ಕಾರ್ಯದಿಂದಾಗಿ, 13 ರಾಜ್ಯಗಳು ವಾರ್ಷಿಕ 112 ಕೋಟಿ ರೂ.ಗಳ ಏಕೀಕೃತ ವಾರ್ಷಿಕ ಉಳಿತಾಯವನ್ನು ವರದಿ ಮಾಡಿವೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂದೆ, ಎಫ್ ಸಿಐ ಗೋದಾಮಿನಿಂದ ರಾಜ್ಯ ಗೋದಾಮಿಗೆ ಮತ್ತು ರಾಜ್ಯಗಳ ಗೋದಾಮಿನಿಂದ ಎಫ್ ಪಿಎಸ್ ವರೆಗೆ ಕಡಿಮೆ ದೂರದ ಮೋಟಾರು ಮಾರ್ಗಗಳಿಗಾಗಿ ಅಂತರ ರಾಜ್ಯ ಮಾರ್ಗ ಆಪ್ಟಿಮೈಸೇಶನ್ ಸಾಧನವನ್ನು ಪಿಎಂ ಗತಿ ಶಕ್ತಿ ದೂರ ಎಪಿಐನೊಂದಿಗೆ ಸಂಯೋಜಿಸಲಾಗಿದೆ. ಗತಿ ಶಕ್ತಿ ಎಪಿಐ ಮೂಲಕ ಗೋದಾಮಿನಿಂದ ಗೋದಾಮಿಗೆ ಮತ್ತು ಎಫ್ ಪಿಎಸ್ ನಡುವೆ ಹೊಸ ಕಡಿಮೆ ದೂರದ ಮಾರ್ಗಗಳನ್ನು (ಅಂತರವನ್ನು) ಸೃಷ್ಟಿಸಲಾಗುತ್ತಿದೆ.
- ಗುಣಮಟ್ಟ ನಿರ್ವಹಣಾ ವ್ಯವಸ್ಥೆ (ಕ್ಯೂಎಂಎಸ್): ವಿವಿಧ ಪ್ರಯೋಗಾಲಯ (ಲ್ಯಾಬ್ ) ಚಟುವಟಿಕೆಗಳನ್ನು ನೈಜ ಸಮಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಡಿಎಫ್ಪಿಡಿ ಮತ್ತು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳನ್ನು ಸಂಯೋಜಿಸುವ ಮೂಲಕ ಕ್ಯೂಎಂಎಸ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಪ್ರಯೋಗಾಲಯ ಪರೀಕ್ಷಾ ಫಲಿತಾಂಶಗಳ ನೈಜ-ಸಮಯದ ಕಾಲಾನುವರ್ತಿ ನವೀಕರಣವು ಮಾದರಿ ಸಂಗ್ರಹದಿಂದ ಫಲಿತಾಂಶ ಘೋಷಣೆಯವರೆಗೆ ಇಡೀ ಪ್ರಕ್ರಿಯೆಯನ್ನು ಗಮನವಿಡುವುದಕ್ಕೆ ಅವಕಾಶ ಒದಗಿಸುತ್ತದೆ. ಕ್ಯೂಎಂಎಸ್ ಅನ್ನು ಡಿಎಫ್ಪಿಡಿ 2024ರ ಆಗಸ್ಟ್ 20ರಂದು ಪ್ರಾರಂಭಿಸಿತು.
- ಆಹಾರ ಧಾನ್ಯಗಳ ಬೃಹತ್ ಸಾಗಾಟ ಮತ್ತು ಸಿಲೋಗಳ ಅಭಿವೃದ್ಧಿ:
ಸಿಲೋಸ್ ರೈಲ್ವೆ ಸೈಡಿಂಗ್ ನ ದಕ್ಷತೆಯನ್ನು ಬಳಸಿಕೊಳ್ಳುತ್ತದೆ, ಬೃಹತ್ ಸಂಗ್ರಹಣೆ ಮತ್ತು ಸಾಗಾಟದ ಮೂಲಕ ವೆಚ್ಚದ ದಕ್ಷತೆಯನ್ನು ಉತ್ತೇಜಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ, ಒಟ್ಟು 21.75 ಎಲ್ಎಂಟಿ ಸಾಮರ್ಥ್ಯದ ದಾಸ್ತಾನುಗಾರಗಳು (ಸಿಲೋಗಳು) ಕಾರ್ಯನಿರ್ವಹಿಸುತ್ತಿವೆ ಮತ್ತು 7.5 ಎಲ್ಎಂಟಿ ನಿರ್ಮಾಣ ಹಂತದಲ್ಲಿವೆ. 100 ದಿನಗಳಲ್ಲಿ 6 ಸ್ಥಳಗಳಲ್ಲಿ 3 ಎಲ್ ಎಂಟಿ ಸಾಮರ್ಥ್ಯವನ್ನು ಪೂರ್ಣಗೊಳಿಸಲಾಗಿದೆ. ಡಿಎಫ್ ಪಿಡಿ ಹಬ್ ಮತ್ತು ಸ್ಪೋಕ್ ಮಾಡೆಲ್ ಅಡಿಯಲ್ಲಿ 111.125 ಎಲ್ ಎಂಟಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ, ಇದರಲ್ಲಿ ಮೊದಲ ಹಂತದಲ್ಲಿ 34.8 ಎಲ್ ಎಂಟಿ ಸಾಮರ್ಥ್ಯದ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಿಲೋಸ್ನ ಗರಿಷ್ಠ ಪ್ರಯೋಜನಗಳನ್ನು ಬಳಸಿಕೊಳ್ಳುವ ಟಾಪ್ ಲೋಡಿಂಗ್ ಮತ್ತು ಬಾಟಮ್ ಡಿಸ್ಚಾರ್ಜ್ನೊಂದಿಗೆ ವಿಶೇಷ ವ್ಯಾಗನ್ಗಳ ಮೂಲಕ ಆಹಾರ ಧಾನ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಸಾಗಿಸಲು ಇಲಾಖೆ ವ್ಯವಸ್ಥೆ ಮಾಡುವ ಪ್ರಕ್ರಿಯೆಯಲ್ಲಿದೆ.
- ಕ್ರೆಡಿಟ್ ಗ್ಯಾರಂಟಿ ಯೋಜನೆ: ಡಬ್ಲ್ಯುಡಿಆರ್ಎ ನೋಂದಾಯಿತ ಗೋದಾಮುಗಳಲ್ಲಿ ಸಂಗ್ರಹಿಸಿದ ಉತ್ಪನ್ನಗಳ ಮೇಲೆ ರೈತರು ಮತ್ತು ವ್ಯಾಪಾರಿಗಳಿಗೆ ಎಲೆಕ್ಟ್ರಾನಿಕ್ ನೆಗೋಷಿಯಬಲ್ ವೇರ್ ಹೌಸ್ ರಸೀದಿಗಳ (ಇ-ಎನ್ಡಬ್ಲ್ಯೂಆರ್) ಮೇಲೆ ಅಡಮಾನ ಹಣಕಾಸು ವಿಸ್ತರಿಸಲು ಸಾಲದಾತರಲ್ಲಿ ವಿಶ್ವಾಸ ಮೂಡಿಸಲು ಕ್ರೆಡಿಟ್ ಗ್ಯಾರಂಟಿ ಸ್ಕೀಮ್ (ಸಿಜಿಎಸ್-ಎನ್ಪಿಎಫ್) ಅನುಮೋದಿಸಲಾಗಿದೆ. ಈ ಯೋಜನೆಯು ಸಾಲದ ಅಪಾಯ ಮತ್ತು ವೇರ್ ಹೌಸ್ ನ ಸಂಭಾವ್ಯ ಅಪಾಯವನ್ನು ಒಳಗೊಳ್ಳುತ್ತದೆ ಮತ್ತು ಇ-ಎನ್ಡಬ್ಲ್ಯೂಆರ್ಗಳ ಮೂಲಕ ಕೊಯ್ಲಿನ ನಂತರದ ಹಣಕಾಸು ಹೆಚ್ಚಿಸಲು ಗೋದಾಮುದಾರರ ಮೇಲಿನ ವಿಶ್ವಾಸವನ್ನು ಸುಧಾರಿಸುವ ನಿರೀಕ್ಷೆಯಿದೆ. ಈ ಯೋಜನೆಯು ಮುಂದಿನ 10 ವರ್ಷಗಳಲ್ಲಿ ಅಡಮಾನ ಸಾಲವನ್ನು ಪ್ರಸ್ತುತ ಮಟ್ಟವಾದ 3,962 ಕೋಟಿ ರೂ.ಗಳಿಂದ 1,05,000 ಕೋಟಿ ರೂ.ಗಳಿಗೆ ಹೆಚ್ಚಿಸುವ ನಿರೀಕ್ಷೆಯಿದೆ.
- ಎನ್ಎಫ್ಎಸ್ಎ (ಸ್ಕ್ಯಾನ್ 2.0) ಪೋರ್ಟಲ್ಗಾಗಿ ಸಬ್ಸಿಡಿ ಕ್ಲೈಮ್ ಅಪ್ಲಿಕೇಶನ್ ಅಭಿವೃದ್ಧಿ: ರಾಜ್ಯಗಳು ಸಬ್ಸಿಡಿ ಕ್ಲೈಮ್ಗಳನ್ನು ಸಲ್ಲಿಸಲು, ಡಿಎಫ್ಪಿಡಿಯಿಂದ ಕ್ಲೈಮ್ ಪರಿಶೀಲನೆ ಮತ್ತು ಅನುಮೋದನೆಗೆ ಏಕ ಗವಾಕ್ಷಿಯನ್ನು ಒದಗಿಸಲು ಮತ್ತು ಇತ್ಯರ್ಥ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಡಿಎಫ್ಪಿಡಿ ಸ್ಕ್ಯಾನ್ 2.0 ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ನಿಯಮ ಆಧಾರಿತ ಸಂಸ್ಕರಣೆಯನ್ನು ಬಳಸಿಕೊಂಡು ಆಹಾರ ಸಬ್ಸಿಡಿಯ ಬಿಡುಗಡೆ ಮತ್ತು ಇತ್ಯರ್ಥಕ್ಕಾಗಿ ಎಲ್ಲಾ ಪ್ರಕ್ರಿಯೆಗಳ ಎಂಡ್-ಟು-ಎಂಡ್ ವರ್ಕ್ ಫ್ಲೋ ಯಾಂತ್ರೀಕೃತಗೊಳಿಸುವುದನ್ನು ಖಚಿತಪಡಿಸುತ್ತದೆ.
- ಶ್ರೀ ಅನ್ನದ ದಾಖಲೆಯ ಖರೀದಿ: ಉದ್ದೇಶಿತ ಗುರಿ ಕೇಂದ್ರಿತ ಸಾರ್ವಜನಿಕ ವಿತರಣಾ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿತರಿಸುವ ಮೂಲಕ ಫಲಾನುಭವಿಗಳಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಸುಧಾರಿಸಲು ಭಾರತ ಸರ್ಕಾರವು ಒರಟು ಧಾನ್ಯಗಳು / ಸಿರಿಧಾನ್ಯಗಳ (ಶ್ರೀ ಅನ್ನ) ಖರೀದಿ/ಸಂಗ್ರಹವನ್ನು ಉತ್ತೇಜಿಸುತ್ತದೆ. ಕೆಎಂಎಸ್ 2023-24 ರಲ್ಲಿ ನಡೆಸಿದ ಒಟ್ಟು ಒರಟು ಧಾನ್ಯ ಖರೀದಿ/ಸಂಗ್ರಹಣೆ 12.49 ಎಲ್ಎಂಟಿ, ಇದು ಕೆಎಂಎಸ್ 2022-23 ಕ್ಕೆ ಹೋಲಿಸಿದರೆ 170% ಹೆಚ್ಚಾಗಿದೆ. ಇದು ಕಳೆದ 10 ವರ್ಷಗಳಲ್ಲಿಯೇ ಅತಿ ಹೆಚ್ಚು ಒರಟು/ಸಿರಿ ಧಾನ್ಯಗಳ ಖರೀದಿಯಾಗಿದೆ.
ಕೆಎಂಎಸ್ 2024-25 (ಖಾರಿಫ್ ಬೆಳೆ) ಅವಧಿಯಲ್ಲಿ ರಾಜ್ಯಗಳು 19.03 ಎಲ್ಎಂಟಿ ಒರಟು ಧಾನ್ಯಗಳು /ಸಿರಿ ಧಾನ್ಯಗಳನ್ನು (ಶ್ರೀ ಅನ್ನ) ಸಂಗ್ರಹಿಸಲು/ಖರೀದಿಸಲು ಅಂದಾಜು ಮಾಡಿವೆ.
- ಇಬಿಪಿ ಗುರಿಗಳನ್ನು ಸಾಧಿಸಲು ಎಥೆನಾಲ್ ಉತ್ಪಾದನಾ ಸಾಮರ್ಥ್ಯದಲ್ಲಿ ಹೆಚ್ಚಳ: ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ಗಮನಾರ್ಹವಾಗಿ ವಿಸ್ತರಿಸಿದ್ದು, 1,623 ಕೋಟಿ ಲೀಟರ್ ತಲುಪಿದೆ. ಹೀಗಾಗಿ, ಒಟ್ಟು ಸಾಮರ್ಥ್ಯವನ್ನು 1,600 ಕೋಟಿ ಲೀಟರ್ ಗೆ ಹೆಚ್ಚಿಸುವ 100 ದಿನಗಳ ಗುರಿಯನ್ನು ಸಾಧಿಸಲಾಗಿದೆ.
ಪ್ರಸಕ್ತ ಎಥೆನಾಲ್ ಪೂರೈಕೆ ವರ್ಷ (ಇಎಸ್ವೈ) 2023-24 (ನವೆಂಬರ್-ಅಕ್ಟೋಬರ್) ನಲ್ಲಿ, 13.59% ಎಥೆನಾಲ್ ಮಿಶ್ರಣವನ್ನು ಸಾಧಿಸಲಾಗಿದೆ, 2024ರ ಆಗಸ್ಟ್ 31ರವರೆಗೆ ಸುಮಾರು 545.05 ಕೋಟಿ ಲೀಟರ್ ಎಥೆನಾಲ್ ಮಿಶ್ರಣ ಮಾಡಲಾಗಿದೆ.
- ಆಧುನಿಕ ವೀಡಿಯೊ ಕಣ್ಗಾವಲು ವ್ಯವಸ್ಥೆ: ಹೆಚ್ಚಿನ ಪಾರದರ್ಶಕತೆಯನ್ನು ತರುವ ಸಲುವಾಗಿ ಎಫ್ ಸಿಐ ಡಿಪೋಗಳಲ್ಲಿ ಆಧುನಿಕ ವೀಡಿಯೊ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಲು ಡಿಎಫ್ ಪಿಡಿ ಕ್ರಮ ಕೈಗೊಂಡಿದೆ. ಹೆಚ್ಚಿದ ಕಣ್ಗಾವಲು, ವೇರ್ಹೌಸ್ ನಿರ್ವಹಣಾ ಅಭ್ಯಾಸಗಳಲ್ಲಿ ಮೇಲ್ವಿಚಾರಣೆ/ನಿರ್ಲಕ್ಷ ಪತ್ತೆ ಹಚ್ಚುವಿಕೆ, ಹೆಚ್ಚಿನ ಮಟ್ಟದ ಸಹಯೋಗ (ವಿಶೇಷವಾಗಿ ವಿವಿಧ ಲೈನ್ ಇಲಾಖೆಗಳ ನಡುವೆ), ಮೇಲ್ವಿಚಾರಣಾ ಮಾದರಿಗಳಲ್ಲಿ ನಾವೀನ್ಯತೆ, ಸ್ಕೇಲೆಬಲ್ ಪರಿಹಾರಗಳು ಮತ್ತು ಎಫ್ಸಿಐಗೆ ಅವರ ಪೂರೈಕೆ ಸರಪಳಿಯನ್ನು ನಿರ್ವಹಿಸಲು ಹೆಚ್ಚು ಸುರಕ್ಷಿತ ವ್ಯವಸ್ಥೆಗೆ ಕಾರಣವಾಗುವ ಸಮಗ್ರ ವ್ಯವಸ್ಥೆಯನ್ನು ಹೊಂದುವುದು ಇದರ ಉದ್ದೇಶವಾಗಿದೆ.
ಒಟ್ಟಾರೆಯಾಗಿ, ಡಿಎಫ್ ಪಿಡಿ ಮೊದಲ 100 ದಿನಗಳಲ್ಲಿ ತನ್ನ ಗುರಿಗಳನ್ನು ಸಾಧಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ಉಪಕ್ರಮಗಳು ಆಹಾರ ಭದ್ರತೆಯನ್ನು ಸುಧಾರಿಸುತ್ತವೆ, ಪಿಡಿಎಸ್ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಫಲಾನುಭವಿಗಳನ್ನು ಸಬಲೀಕರಣಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
*****
(Release ID: 2056658)
Visitor Counter : 39