ಸಂಪುಟ
azadi ka amrit mahotsav

ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು 'ಬಯೋ-ರೈಡ್' ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ

Posted On: 18 SEP 2024 3:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ಎರಡು ಪ್ರಮುಖ ಯೋಜನೆಗಳ ಮುಂದುವರಿಕೆಗೆ ಅನುಮೋದನೆ ನೀಡಿದೆ ಹಾಗೂ 'ಜೈವಿಕ ತಂತ್ರಜ್ಞಾನ ಸಂಶೋಧನೆ ಆವಿಷ್ಕಾರ ಮತ್ತು ಉದ್ಯಮಶೀಲತೆ ಅಭಿವೃದ್ಧಿ (ಬಯೋ-ರೈಡ್)'  ಘಟಕ ಅಂದರೆ ಜೈವಿಕ ಉತ್ಪಾದನೆ ಮತ್ತು ಜೈವಿಕ ಫೌಂಡ್ರಿ - ಒಂದು ಯೋಜನೆಯಾಗಿ ವಿಲೀನಗೊಂಡಿವೆ.

 ಯೋಜನೆಯು ಈ ಕೆಳಗಿನ ಮೂರು ವಿಸ್ತ್ರತ ಅಂಶಗಳನ್ನು ಹೊಂದಿದೆ:

 ಎ) ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ);

 ಬಿ) ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ (ಐ&ಇಡಿ)

 ಸಿ) ಜೈವಿಕ ಉತ್ಪಾದನೆ ಮತ್ತು ಜೈವಿಕ ಫೌಂಡ್ರಿ

2021-22 ರಿಂದ 2025-26 ರವರೆಗಿನ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಏಕೀಕೃತ ಯೋಜನೆ 'ಬಯೋ-ರೈಡ್' ಅನುಷ್ಠಾನಕ್ಕೆ ಪ್ರಸ್ತಾವಿತ ವೆಚ್ಚವಾಗಿ ರೂ.9197 ಕೋಟಿಯನ್ನು ನಿಗದಿ ಪಡಿಸಲಾಗಿದೆ.

ಬಯೋ-ರೈಡ್ ಯೋಜನೆಯನ್ನು ನಾವೀನ್ಯತೆಯನ್ನು ಉತ್ತೇಜಿಸಲು, ಜೈವಿಕ-ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಜೈವಿಕ ಉತ್ಪಾದನೆ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ದೇಶವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.  

ಇದು ಸಂಶೋಧನೆಯನ್ನು ವೇಗಗೊಳಿಸಲು, ಉತ್ಪನ್ನ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಶೈಕ್ಷಣಿಕ ಸಂಶೋಧನೆ ಮತ್ತು ಕೈಗಾರಿಕಾ ಅನ್ವಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.  ಬಯೋ-ರೈಡ್ ಯೋಜನೆಯ ಅನುಷ್ಠಾನವು - ಈ ಯೋಜನೆಯು ಆರೋಗ್ಯ ರಕ್ಷಣೆ, ಕೃಷಿ, ಪರಿಸರ ಸುಸ್ಥಿರತೆ ಮತ್ತು ಶುದ್ಧ ಶಕ್ತಿಯಂತಹ ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳನ್ನು ನಿಭಾಯಿಸಲು ಜೈವಿಕ ನಾವೀನ್ಯತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಭಾರತ ಸರ್ಕಾರದ ಮಿಷನ್‌ ನ ಭಾಗವಾಗಿದೆ.  

ಜೈವಿಕ-ಉದ್ಯಮಶೀಲತೆಯನ್ನು ಉತ್ತೇಜಿಸಿ: ಜೈವಿಕ-ಉದ್ಯಮಿಗಳಿಗೆ ಬೀಜ ನಿಧಿ, ಶಾಖ-ಕಾವು ಬೆಂಬಲ ಮತ್ತು ಮಾರ್ಗದರ್ಶನವನ್ನು ಒದಗಿಸುವ ಮೂಲಕ ಸ್ಟಾರ್ಟ್‌ಅಪ್‌ ಗಳಿಗೆ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಬಯೋ-ರೈಡ್ ಪೋಷಿಸುತ್ತದೆ.

ಮುಂಗಡ ನಾವೀನ್ಯತೆ: ಈ ಯೋಜನೆಯು ಸಂಶ್ಲೇಷಿತ ಜೀವಶಾಸ್ತ್ರ, ಬಯೋ- ಫಾರ್ಮಾಸ್ಯುಟಿಕಲ್ಸ್, ಬಯೋಎನರ್ಜಿ ಮತ್ತು ಬಯೋಪ್ಲಾಸ್ಟಿಕ್‌ಗಳಂತಹ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುದಾನ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ.

ಕೈಗಾರಿಕೆ-ಅಕಾಡೆಮಿಯಾ ಸಹಯೋಗಕ್ಕೆ ಅನುಕೂಲ: ಜೈವಿಕ-ರೈಡ್ ಜೈವಿಕ-ಆಧಾರಿತ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ವೇಗಗೊಳಿಸಲು ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಿನರ್ಜಿಯನ್ನು ರಚಿಸುತ್ತದೆ.

ಸುಸ್ಥಿರ ಜೈವಿಕ ಉತ್ಪಾದನೆಯನ್ನು ಪ್ರೋತ್ಸಾಹಿಸಿ: ಭಾರತದ ಹಸಿರು ವಾತಾವರಣದ ಗುರಿಗಳೊಂದಿಗೆ ಜೋಡಿಸಲಾದ ಜೈವಿಕ ಉತ್ಪಾದನೆಯಲ್ಲಿ ಪರಿಸರ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಗಮನಾರ್ಹವಾದ ಪ್ರಾಧಾನ್ಯತೆಯನ್ನು ಇರಿಸಲಾಗುತ್ತದೆ.

ಎಕ್ಸ್‌ಟ್ರಾಮುರಲ್ ಫಂಡಿಂಗ್ ಮೂಲಕ ಸಂಶೋಧಕರನ್ನು ಬೆಂಬಲಿಸಿ: ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕೃಷಿ, ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ವೈಯಕ್ತಿಕ ಸಂಶೋಧಕರಿಗೆ ಬಾಹ್ಯ ನಿಧಿಯನ್ನು ಬೆಂಬಲಿಸುವ ಮೂಲಕ ಜೈವಿಕ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಜೈವಿಕ ಶಕ್ತಿ, ಮತ್ತು ಪರಿಸರ ಸಮರ್ಥನೀಯತೆ, ವೈಜ್ಞಾನಿಕ ಸಂಶೋಧನೆ, ನಾವೀನ್ಯತೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಜೈವಿಕ ರೈಡ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  

ಜೈವಿಕ ತಂತ್ರಜ್ಞಾನ ವಲಯದಲ್ಲಿ ಮಾನವ ಸಂಪನ್ಮೂಲವನ್ನು ಪೋಷಿಸುವುದು: ಜೈವಿಕ ತಂತ್ರಜ್ಞಾನದ ಬಹು ವಿಭಾಗದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು, ಯುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಜೈವಿಕ ರೈಡ್ ಸಮಗ್ರ ಅಭಿವೃದ್ಧಿ ಮತ್ತು ಬೆಂಬಲವನ್ನು ಒದಗಿಸುತ್ತದೆ.  ಮಾನವ ಸಂಪನ್ಮೂಲ ಅಭಿವೃದ್ಧಿಯ ಸಮಗ್ರ ಕಾರ್ಯಕ್ರಮವು ಮಾನವಶಕ್ತಿಯ ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ತಾಂತ್ರಿಕ ಪ್ರಗತಿಗಳ ಹೊಸ ದಿಗಂತವನ್ನು ರೂಪಿಸಿ ಕ್ಷೇತ್ರದಲ್ಲಿ  ಸಮರ್ಥರನ್ನಾಗಿ ಮಾಡುತ್ತದೆ.


ಇದಲ್ಲದೆ, ದೇಶದಲ್ಲಿ -ಜೈವಿಕ ಆರ್ಥಿಕತೆಯನ್ನು ಸಕ್ರಿಯಗೊಳಿಸಲು ಜೈವಿಕ ಉತ್ಪಾದನೆ ಮತ್ತು ಜೈವಿಕ ಫೌಂಡ್ರಿ ಮೇಲೆ ಒಂದು ಘಟಕವನ್ನು ಪ್ರಾರಂಭಿಸಲಾಗುತ್ತಿದೆ. 'ಪರಿಸರಕ್ಕಾಗಿ ಜೀವನಶೈಲಿ (ಲೈಫ್)' ಅನ್ನು ಹೊಂದಿಕೆಯಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ಜಾಗತಿಕ ಹವಾಮಾನ ಬದಲಾವಣೆಯನ್ನು ಪರಿಣಾಮ ತಗ್ಗಿಸಲು ಹಸಿರು ಮತ್ತು ಸ್ನೇಹಪರತೆಯನ್ನು ಸಂಯೋಜಿಸುವ ಮೂಲಕ  ಜೀವನದ ಪ್ರತಿಯೊಂದು ಅಂಶದಲ್ಲೂ ಪರಿಸರ ಪರಿಹಾರಗಳನ್ನು ರೂಪಿಸುವುದು ಉದ್ದೇಶವಾಗಿದೆ.  ಬಯೋ-ರೈಡ್‌ನ ಈ ಹೊಸ ಘಟಕವು ಆರೋಗ್ಯ ರಕ್ಷಣೆಯ ಫಲಿತಾಂಶಗಳನ್ನು ಸುಧಾರಿಸಲು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು, ಜೈವಿಕ ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು, ಜೈವಿಕ-ಆಧಾರಿತ ಉತ್ಪನ್ನಗಳ ಸ್ಕೇಲ್-ಅಪ್ ಮತ್ತು ವಾಣಿಜ್ಯೀಕರಣವನ್ನು ಹೆಚ್ಚಿಸಲು ಸ್ಥಳೀಯ ನವೀನ ಪರಿಹಾರಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ 'ಬಯೋ-ಮ್ಯಾನುಫ್ಯಾಕ್ಚರಿಂಗ್' ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಉತ್ತೇಜಿಸಿ ಪೋಷಿಸಲು ಬಯಸುತ್ತದೆ.  ಹೆಚ್ಚು ನುರಿತ ಕಾರ್ಯಪಡೆಯ ಮೂಲಕ ಭಾರತದಲ್ಲಿ ಈ ಕ್ಷೇತ್ರದಲ್ಲಿ ವಿವಿಧ ಸಮೂಹವನ್ನು ವಿಸ್ತರಿಸುವುದು ಮತ್ತು ಉದ್ಯಮಶೀಲತೆಯ ವೇಗಗತಿಯನ್ನು ತೀವ್ರಗೊಳಿಸುವುದು ಮುಖ್ಯ ಉದ್ದೇಶವಾಗಿದೆ.

ಡಿಬಿಟಿಯ ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳು ಜೈವಿಕ ತಂತ್ರಜ್ಞಾನ ಸಂಶೋಧನೆ, ನಾವೀನ್ಯತೆ, ಅನುವಾದ, ಉದ್ಯಮಶೀಲತೆ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಪೂರೈಸಲು ರಾಷ್ಟ್ರೀಯ ಅಭಿವೃದ್ಧಿ ಸ್ಥಾಪನೆ ಮತ್ತು ಸಮಾಜದ ಯೋಗಕ್ಷೇಮಕ್ಕಾಗಿ ಜೈವಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ಒಂದು ನಿಖರವಾದ ಸಾಧನವಾಗಿ ಬಳಸಿಕೊಳ್ಳುವ ಅದರ ದೃಷ್ಟಿಕೋನದೊಂದಿಗೆ ಇದು ಹೊಂದಾಣಿಕೆಯಾಗುತ್ತದೆ. ಹಾಗೂ ಇದು 2030 ರ ವೇಳೆಗೆ 300 ಶತಕೋಟಿ ಯುಎಸ್ ಡಾಲರ್ ಜೈವಿಕ ಆರ್ಥಿಕತೆಯಾಗಲಿದೆ. ಬಯೋ-ರೈಡ್ ಯೋಜನೆಯು 'ವಿಕಸಿತ ಭಾರತ 2047' ರ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತದೆ.

 

ಹಿನ್ನೆಲೆ:

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ), ಜೈವಿಕ ತಂತ್ರಜ್ಞಾನ ಮತ್ತು ಆಧುನಿಕ ಜೀವಶಾಸ್ತ್ರದಲ್ಲಿ ಉತ್ಕೃಷ್ಟತೆ ಮತ್ತು ನಾವೀನ್ಯತೆ-ಚಾಲಿತ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.

 

*****



(Release ID: 2056349) Visitor Counter : 44