ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) 32.45 ಲಕ್ಷ ಕೋಟಿ ರೂ.ಗಳ ಹೂಡಿಕೆ ಬದ್ಧತೆಗಳನ್ನು ಆಕರ್ಷಿಸಿದೆ: ಶ್ರೀ ಪ್ರಲ್ಹಾದ್ ಜೋಶಿ

Posted On: 17 SEP 2024 8:27PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಣ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ರೀಇನ್ವೆಸ್ಟ್ ನ 4 ನೇ ಆವೃತ್ತಿಯನ್ನು ಐತಿಹಾಸಿಕ ಘಟನೆಯಾಗಿ ಸ್ಮರಿಸಿಕೊಳ್ಳಲಾಗುವುದು, ಏಕೆಂದರೆ ಉಜ್ವಲ ನಾಳೆಗಾಗಿ ಇಂತಹ ಗಣನೀಯ ಹೂಡಿಕೆಗಳ ಬಗ್ಗೆ ಪ್ರತಿಜ್ಞೆ ಮಾಡಲು ಎಲ್ಲಾ ಭಾಗೀದಾರರು/ಪಾಲುದಾರರು ಇದೇ ಮೊದಲ ಬಾರಿಗೆ ಮುಂದೆ ಬಂದಿದ್ದಾರೆ ಎಂದು ಹೇಳಿದರು. 2030 ರ ವೇಳೆಗೆ ಶಪಥ್ ಪತ್ರದ ರೂಪದಲ್ಲಿ 32.45 ಲಕ್ಷ ಕೋಟಿ ರೂ.ಗಳ ದಾಖಲೆಯ ಹೂಡಿಕೆಗಳನ್ನು ಮಾಡುವ ನಿನ್ನೆಯ ಐತಿಹಾಸಿಕ ದಿನಕ್ಕೆ ಪ್ರಧಾನಿಯವರ ದೃಢ ಬದ್ಧತೆಯ ನಿಲುವುಗಳು  ಕಾರಣವಾಗಿವೆ.

ಇಂದು ಗುಜರಾತಿನ ಗಾಂಧೀನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಡೆವಲಪರ್ ಗಳು ಹೆಚ್ಚುವರಿ 570 ಗಿಗಾವ್ಯಾಟ್, ಉತ್ಪಾದಕರು ಸೌರ ಮಾಡ್ಯೂಲ್ಗಳಲ್ಲಿ 340 ಗಿಗಾವ್ಯಾಟ್, ಸೌರ ಕೋಶಗಳಲ್ಲಿ 240 ಗಿಗಾವ್ಯಾಟ್, ಪವನ ಟರ್ಬೈನ್ಗಳಲ್ಲಿ 22 ಗಿಗಾವ್ಯಾಟ್ ಮತ್ತು ಎಲೆಕ್ಟ್ರೋಲೈಸರ್ಗಳಲ್ಲಿ 10 ಗಿಗಾವ್ಯಾಟ್ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ನೀಡಲು ಬದ್ಧರಾಗಿದ್ದಾರೆ. ಅಂಕಿಅಂಶಗಳು ಮತ್ತು ಸಂಖ್ಯೆಗಳನ್ನು ಮೀರಿ, ಸ್ವಚ್ಛ ಮತ್ತು ಸುಸ್ಥಿರ ಭಾರತಕ್ಕಾಗಿ ಕೈಜೋಡಿಸಲು ಮತ್ತು ಒಟ್ಟಾಗಿ ಕೆಲಸ ಮಾಡಲು ರಾಜ್ಯಗಳು, ಡೆವಲಪರ್ ಗಳು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ದೊಡ್ಡ ಬದ್ಧತೆಯನ್ನು ಮೆರೆದಿವೆ  ಎಂದು ಶ್ರೀ ಜೋಶಿ ಹೇಳಿದರು. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಬೃಹತ್ ಹೂಡಿಕೆಯ ಪ್ರತಿಜ್ಞೆ ಮಾಡಲು ಮುಂದೆ ಬಂದಿರುವ ಡೆವಲಪರ್ ಗಳು, ಸೌರ ಮಾಡ್ಯೂಲ್ ಮತ್ತು ಸೌರ ಕೋಶ ತಯಾರಕರು, ಉಪಕರಣ ತಯಾರಕರು, ವಿದ್ಯುದ್ವಿಭಜಕ ತಯಾರಕರು, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಶ್ರೀ ಜೋಶಿ ಧನ್ಯವಾದ ಅರ್ಪಿಸಿದರು. ಇದು ಭಾರತೀಯ ಮತ್ತು ಜಾಗತಿಕ ಸಮುದಾಯವು ಡೆಸ್ಟಿನೇಷನ್ ಇಂಡಿಯಾದ ಮೇಲೆ, ವಿಶೇಷವಾಗಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊಂದಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ  ಸಾಕ್ಷಿಯಾಗಿದೆ ಎಂದವರು ನುಡಿದರು. ನಾವು  ಜನರು ಮತ್ತು ಭೂ ಗ್ರಹದ ಮೇಲೆ ಫಲಿತಾಂಶಗಳನ್ನು ಕಾಣಲು ಪ್ರಾರಂಭಿಸಿದಾಗ ಇದು ಶಾಶ್ವತ ಪರಿಣಾಮವನ್ನು ಬೀರುತ್ತದೆ. ನವೀಕರಿಸಬಹುದಾದ ಇಂಧನವು ಆರ್ಥಿಕತೆಯ ಪ್ರೇರಕ ಶಕ್ತಿಯಾಗಿದೆ. ಪ್ರಧಾನಮಂತ್ರಿಯವರು ಮುಂಚೂಣಿಯಲ್ಲಿ ನಿಂತು ಇದನ್ನು  ಮುನ್ನಡೆಸುತ್ತಿದ್ದಾರೆ ಮತ್ತು ಚರ್ಚೆಯನ್ನು  ನಡೆಸುತ್ತಿದ್ದಾರೆ. ಇಂಧನ ಕ್ಷೇತ್ರದಲ್ಲಿ ಮುಂದಿನ ಪರಿವರ್ತನೆಯ ಅಲೆಯನ್ನು ಮುನ್ನಡೆಸಲು ಜಗತ್ತು ಅವರತ್ತ ಮತ್ತು ಭಾರತದತ್ತ ನೋಡುತ್ತಿದೆ. ಅಲ್ಲಿ  ಸಾಕ್ಷಿಯಾಗುವಂತಹ ಫಲಿತಾಂಶಗಳು  ಇವೆ. ನಮ್ಮ ರಾಷ್ಟ್ರದ ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳನ್ನು ಪರಿಕಲ್ಪನೆ ಮಾಡುವಲ್ಲಿ ಮತ್ತು ಸಾಕಾರಗೊಳಿಸುವಲ್ಲಿ ಧೈರ್ಯ ಮತ್ತು ನಾವೀನ್ಯತೆ ಎರಡನ್ನೂ ತೋರಿಸುವ ಮೂಲಕ ಪ್ರಧಾನಮಂತ್ರಿಯವರು ಪರಿವರ್ತನೆಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಶ್ರೀ ಜೋಶಿ ಹೇಳಿದರು. ನವೀಕರಿಸಬಹುದಾದ ಇಂಧನವನ್ನು ಮುನ್ನಡೆಸಿದ್ದಕ್ಕಾಗಿ ಶ್ಲಾಘಿಸಲ್ಪಟ್ಟ ಎಲ್ಲಾ ರಾಜ್ಯಗಳು ಮತ್ತು ಕಂಪನಿಗಳನ್ನು ಅವರು ಅಭಿನಂದಿಸಿದರು.

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೊಸ ಸರ್ಕಾರದ ಮೊದಲ 100 ದಿನಗಳಲ್ಲಿ ನವೀಕರಿಸಬಹುದಾದ ಇಂಧನ ವಲಯವು ಗಮನಾರ್ಹ ಪ್ರಗತಿ ಸಾಧಿಸಿರುವುದರಿಂದ ಇದು ವಿಶೇಷ ದಿನವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದು ವಿಶೇಷವಾಗಿದೆ ಏಕೆಂದರೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಹಾತ್ಮ ಗಾಂಧಿ ಮಾಡಿದ ಹೋರಾಟಗಳ ನೆನಪುಗಳನ್ನು ಮರಳಿ ತಂದ ದಂಡಿ ಕುಟೀರಕ್ಕೆ ಭೇಟಿ ನೀಡುವ ಅವಕಾಶ ನನಗೆ ಇಂದು ಸಿಕ್ಕಿತು. ಈ ರಚನೆಯು ಸುಂದರವಾಗಿದೆ ಮತ್ತು ಸಾಂಕೇತಿಕವಾಗಿ ಉಪ್ಪಿನ ದಿಬ್ಬವನ್ನು ಪ್ರತಿನಿಧಿಸುತ್ತದೆ, ಇದು ದಂಡಿ ಯಾತ್ರೆ  ಮತ್ತು ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಚಳವಳಿಯ ಸಂಕೇತವಾಗಿದೆ. ಗುಜರಾತ್ ನಲ್ಲಿ 4ನೇ ಮರುಹೂಡಿಕೆ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಿಯವರಿಗೆ ನಾನು ಆಭಾರಿಯಾಗಿದ್ದೇನೆ, ಅಲ್ಲಿಂದ ಅವರು ಇಂಧನ ಕ್ರಾಂತಿಗೆ ನಾಂದಿ ಹಾಡಿದರು ಎಂದರು. ಈಗ, ಪ್ರಧಾನಿ ನಮ್ಮ ದೇಶವನ್ನು 500 ಗಿಗಾವ್ಯಾಟ್ ಗುರಿಯತ್ತ ಮುನ್ನಡೆಸುತ್ತಿರುವುದು  ಮಾತ್ರವಲ್ಲ, ಜಗತ್ತಿಗೆ ಭರವಸೆಯ ದೀಪವಾಗಿದ್ದಾರೆ ಎಂದೂ ಜೋಶಿ ಹೇಳಿದರು.

ಸಿಇಒ ದುಂಡುಮೇಜಿನ ಸಭೆ-

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಸಿಇಒ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು 500 ಗಿಗಾವ್ಯಾಟ್ ಕೇವಲ ಸಂಖ್ಯೆಯಲ್ಲ ಮತ್ತು ನಾವು ಅದರ ಬಗ್ಗೆ ಗಂಭೀರವಾಗಿದ್ದೇವೆ. ಆದ್ದರಿಂದ ಸಿಇಒಗಳು ಸರ್ಕಾರದಿಂದ ಅಗತ್ಯವಿರುವ ಸೌಲಭ್ಯಗಳನ್ನು ಹಂಚಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಉತ್ಪಾದನೆಯನ್ನು ಹೆಚ್ಚಿಸಲು, ಆರ್ಪಿಒ ಪರಿಣಾಮಕಾರಿ ಜಾರಿಯೊಂದಿಗೆ ಬೇಡಿಕೆಯನ್ನು ಸೃಷ್ಟಿಸಲು, ವೃತ್ತಾಕಾರದ ತತ್ವಗಳನ್ನು ಅಳವಡಿಸಲು  ಮತ್ತು ಯೋಜನೆಗಳಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಿಇಒಗಳು ಮಾಹಿತಿಗಳನ್ನು (ಒಳಹರಿವುಗಳನ್ನು)  ಒದಗಿಸಿದರು.

ನವೀಕರಿಸಬಹುದಾದ ಇಂಧನದ ತ್ವರಿತ ವಿಸ್ತರಣೆಗೆ ದೃಢವಾದ ಮತ್ತು ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿಶ್ವಾದ್ಯಂತ ನವೀಕರಿಸಬಹುದಾದ ಇಂಧನಗಳಲ್ಲಿ ಹೂಡಿಕೆಗಾಗಿ ಭಾರತ-ಜರ್ಮನಿ ವೇದಿಕೆಯನ್ನು 2024 ರ ಸೆಪ್ಟೆಂಬರ್ 16 ರಂದು 4 ನೇ ಮರು-ಹೂಡಿಕೆಯಲ್ಲಿ ಪ್ರಾರಂಭಿಸಲಾಯಿತು. ಈ ವೇದಿಕೆಯು ಖಾಸಗಿ ವಲಯ (ಹಣಕಾಸು ವಲಯ ಮತ್ತು ಉದ್ಯಮ), ಅಂತರರಾಷ್ಟ್ರೀಯ ಸಂಸ್ಥೆಗಳು, ಅಭಿವೃದ್ಧಿ ಬ್ಯಾಂಕುಗಳು ಮತ್ತು ದ್ವಿಪಕ್ಷೀಯ ಪಾಲುದಾರರು ಸೇರಿದಂತೆ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ, ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಲು, ಬಂಡವಾಳ, ತಂತ್ರಜ್ಞಾನ ವರ್ಗಾವಣೆ ಮತ್ತು ನವೀನ ತಾಂತ್ರಿಕ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ.

ಸ್ಥಾಪಿತ ಸೋಲಾರ್ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ:

2014 ರಲ್ಲಿ ಭಾರತದಲ್ಲಿ ಸ್ಥಾಪಿತ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 2.3 ಗಿಗಾವ್ಯಾಟ್ ಆಗಿತ್ತು ಮತ್ತು 2014 ರಲ್ಲಿ ಭಾರತದಲ್ಲಿ ಸ್ಥಾಪಿತ ಸೌರ ಪಿವಿ ಕೋಶ (ಸೆಲ್)  ಉತ್ಪಾದನಾ ಸಾಮರ್ಥ್ಯವು ಸುಮಾರು 1.2 ಗಿಗಾವ್ಯಾಟ್ ಆಗಿತ್ತು. ಈಗ ಭಾರತದಲ್ಲಿ ಸ್ಥಾಪಿತ ಸೋಲಾರ್ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 67 ಗಿಗಾವ್ಯಾಟ್ (ಎಎಲ್ಎಂಎಂನಲ್ಲಿ ಪಟ್ಟಿ ಮಾಡಲಾದ ಸಾಮರ್ಥ್ಯ ಮತ್ತು ಎಎಲ್ಎಂಎಂನಲ್ಲಿ ಸೇರ್ಪಡೆಗೊಳ್ಳಲು ಸ್ವೀಕರಿಸಿದ ಹೆಚ್ಚುವರಿ ಅರ್ಜಿಗಳ ಪ್ರಕಾರ) ಮತ್ತು ಸ್ಥಾಪಿತ ಸೌರ ಪಿವಿ ಕೋಶ (ಸೆಲ್)  ಉತ್ಪಾದನಾ ಸಾಮರ್ಥ್ಯವು ಪ್ರಸ್ತುತ ಸುಮಾರು 8 ಗಿಗಾವ್ಯಾಟ್ ಆಗಿದೆ.

ಸರ್ಕಾರದ 100 ದಿನಗಳ ಸಾಧನೆಗಳಲ್ಲಿ ಎಂಎನ್ಆರ್ ಇ ಸಾಧನೆಗಳು

1. 4.5 ಗಿಗಾವ್ಯಾಟ್ ಗುರಿ ಸಾಧನೆಗೆ ಬದಲಾಗಿ 2024 ರ ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ  6.0 ಗಿಗಾವ್ಯಾಟ್  ಆರ್.ಇ.  ಸಾಮರ್ಥ್ಯವನ್ನು ಕಾರ್ಯಾರಂಭ ಮಾಡಲಾಗಿದೆ.

2. ಪಳೆಯುಳಿಕೆಯೇತರ ಸ್ಥಾಪಿತ ಸಾಮರ್ಥ್ಯವು 207.76 ಗಿಗಾವ್ಯಾಟ್ ತಲುಪಿದೆ.

3. 2024ರ  ಜೂನ್ ನಿಂದ  2024ರ ಆಗಸ್ಟ್ ವರೆಗೆ, ಆರ್ಇಐಎಗಳು 10 ಗಿಗಾವ್ಯಾಟ್ ಗುರಿಗೆ ಬದಲಾಗಿ  14 ಗಿಗಾ ವ್ಯಾಟ್  ಆರ್ಇ ವಿದ್ಯುತ್ ಖರೀದಿಗೆ  ಬಿಡ್ ಗಳನ್ನು ನೀಡಲಾಗಿದೆ.

4. ಎರಡು ಸೋಲಾರ್ ಪಾರ್ಕ್ ಗಳು ಪೂರ್ಣಗೊಂಡಿವೆ.

5. ಪಿಎಂ ಕುಸುಮ್ ಅಡಿಯಲ್ಲಿ 1 ಲಕ್ಷ ಸೌರ ಪಂಪ್ ಗಳನ್ನು ಸ್ಥಾಪಿಸಲಾಗಿದೆ.

6. ಪಿಎಂ ಸೂರ್ಯ ಘರ್ ಯೋಜನೆಯಡಿ 3.56 ಲಕ್ಷ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.

7. ಸೋಲಾರ್ ಪಿಎಲ್ಐ ಯೋಜನೆಯಲ್ಲಿ ಸಂಚಿತ 13.8 ಗಿಗಾವ್ಯಾಟ್ ಸೌರ ಮಾಡ್ಯೂಲ್ ಉತ್ಪಾದನೆ ಪ್ರಾರಂಭವಾಗಿದೆ.

8. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ, ವರ್ಷಕ್ಕೆ ಒಟ್ಟು 1500 ಮೆಗಾವ್ಯಾಟ್ ಸಾಮರ್ಥ್ಯದ ಎಲೆಕ್ಟ್ರೋಲೈಜರ್ ಉತ್ಪಾದನೆಗಾಗಿ ಎರಡನೇ ಕಂತಿನ ಅಡಿಯಲ್ಲಿ 11 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.

9. ಕಡಲಾಚೆಯ ಪವನ ಯೋಜನೆಯನ್ನು 19.06.2024 ರಂದು ಸಂಪುಟ (ಕ್ಯಾಬಿನೆಟ್) ಅನುಮೋದಿಸಿದೆ, ಆರ್.ಎಫ್.ಎಸ್. ಗಳನ್ನು ಎಸ್ಇಸಿಐ ಹೊರಡಿಸಿದೆ.

10. ಐ.ಆರ್.ಇ.ಡಿ.ಎ. ಗಿಫ್ಟ್ ಸಿಟಿಯಲ್ಲಿ " ಐ.ಆರ್.ಇ.ಡಿ.ಎ.  ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ ಐಎಫ್ಎಸ್ಸಿ ಲಿಮಿಟೆಡ್" ಎಂಬ ಅಂಗಸಂಸ್ಥೆಯನ್ನು ಸಂಯೋಜಿಸಿದೆ.

 

Kindly the find pdf file-1

Kindly find the pdf file-2

 

*****


(Release ID: 2055993) Visitor Counter : 31