ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ರೈಲ್ವೆ ಸಚಿವಾಲಯದ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಪರಿಶೀಲನೆಯ ಎರಡನೇ ಸಭೆ ನಡೆಸಿದರು
ನಾಗರಿಕರ 'ಸುಲಭ ಜೀವನ'ದ ಮೇಲೆ ಗಮನ ಹರಿಸುವಂತೆ ಮತ್ತು ಸಾಮರ್ಥ್ಯ ವರ್ಧನೆ, ಸುರಕ್ಷತೆ ಮತ್ತು ಅಸ್ತಿತ್ವದಲ್ಲಿರುವ ರೈಲ್ವೆ ಹಳಿಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಹಾಗೂ ಬಜೆಟ್ ಕ್ಯಾಪೆಕ್ಸ್ ಪ್ರಕಾರ ಹೊಸ ರೈಲು ಮಾರ್ಗಗಳನ್ನು ಹಾಕುವುದು ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲಸಗಳನ್ನು ತ್ವರಿತಗೊಳಿಸುವಂತೆ ಶ್ರೀಮತಿ ಸೀತಾರಾಮನ್ ತಿಳಿಸಿದರು
2024-25 ರ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿದಂತೆ, 40,000 ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಗಳಿಗೆ ತ್ವರಿತವಾಗಿ ಪರಿವರ್ತಿಸುವ ಮೂಲಕ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯವನ್ನು ಹೆಚ್ಚಿಸಿ: ಕೇಂದ್ರ ಹಣಕಾಸು ಸಚಿವರು
Posted On:
17 SEP 2024 8:35PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ರೈಲ್ವೆ ಸಚಿವಾಲಯದ ಬಜೆಟ್ ಬಂಡವಾಳ ವೆಚ್ಚದ (ಕ್ಯಾಪೆಕ್ಸ್) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯು ಕೇಂದ್ರ ಬಜೆಟ್‌ನಲ್ಲಿ ಗಮನಾರ್ಹವಾದ ಕ್ಯಾಪೆಕ್ಸ್ ವೆಚ್ಚಗಳನ್ನು ಹೊಂದಿರುವ ಸಚಿವಾಲಯಗಳು/ಇಲಾಖೆಗಳೊಂದಿಗೆ ನಿಗದಿಪಡಿಸಲಾದ ಸರಣಿ ಪರಿಶೀಲನಾ ಸಭೆಗಳ ಭಾಗವಾಗಿದೆ.
ಪ್ರಸಕ್ತ 2024-25ರ ಹಣಕಾಸು ವರ್ಷದ ಬಂಡವಾಳ ವೆಚ್ಚದ ಯೋಜನೆಗಳು ಮತ್ತು ಪ್ರಗತಿಯ ಕುರಿತು ರೈಲ್ವೆ ಅಧಿಕಾರಿಗಳು ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದರು.
ನಾಗರಿಕರಿಗೆ 'ಸುಲಭ ಜೀವನ' ಒದಗಿಸುವ ಸರ್ಕಾರದ ಗಮನವನ್ನು ಒತ್ತಿಹೇಳುತ್ತಾ, ಕೇಂದ್ರ ಬಜೆಟ್‌ನಲ್ಲಿ ಒದಗಿಸಲಾದ ಬಂಡವಾಲ ವೆಚ್ಚದ ಪ್ರಕಾರ ಅಸ್ತಿತ್ವದಲ್ಲಿರುವ ರೈಲು ಹಳಿಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಮತ್ತು ದೇಶಾದ್ಯಂತ ಹೊಸ ರೈಲು ಮಾರ್ಗಗಳನ್ನು ಹಾಕುವುದು ಸೇರಿದಂತೆ ಸಾಮರ್ಥ್ಯ ವೃದ್ಧಿ, ಸುರಕ್ಷತೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಗಮನಹರಿಸುವಂತೆ ಶ್ರೀಮತಿ ಸೀತಾರಾಮನ್ ರೈಲ್ವೆ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದರು.
ರೈಲು ಸಂಚಾರಕ್ಕೆ ಸಂಬಂಧಿಸಿದ ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಕಡಿತವನ್ನು ತರುವ ಪ್ರಮುಖ ಕ್ರಮವಾಗಿ, 2024-25 ರ ಮಧ್ಯಂತರ ಬಜೆಟ್ ನಲ್ಲಿ ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸಲು ಪ್ರಧಾನಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಗುರುತಿಸಲಾದ ಮೂರು ಆರ್ಥಿಕ ರೈಲ್ವೆ ಕಾರಿಡಾರ್ ಕಾರ್ಯಕ್ರಮಗಳನ್ನು ಒದಗಿಸಲಾಗಿದೆ, ಅವುಗಳೆಂದರೆ:
i. ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್
ii ಬಂದರು ಸಂಪರ್ಕ ಕಾರಿಡಾರ್
iii ಹೆಚ್ಚಿನ ಸಂಚಾರ ದಟ್ಟಣೆಯ ಕಾರಿಡಾರ್
ಮೂರು ಆರ್ಥಿಕ ಕಾರಿಡಾರ್ ಗಳ ಅಡಿಯಲ್ಲಿ 434 ರೈಲ್ವೆ ಯೋಜನೆಗಳನ್ನು ಗುರುತಿಸಲಾಗಿದೆ, ಒಟ್ಟು 40,900 ಕಿಲೋಮೀಟರ್ ಉದ್ದ ಮತ್ತು ಒಟ್ಟು 11.16 ಲಕ್ಷ ಕೋಟಿ ರೂ.ಹೂಡಿಕೆ ಯೋಜನೆ ಇದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಶ್ರೀಮತಿ ಸೀತಾರಾಮನ್ ಅವರಿಗೆ ತಿಳಿಸಿದರು.
i. ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್ (192 ಯೋಜನೆಗಳು)
ii ಹೆಚ್ಚಿನ ದಟ್ಟಣೆಯ ನೆಟ್‌ವರ್ಕ್ ಕಾರಿಡಾರ್ (200 ಯೋಜನೆಗಳು)
iii ರೈಲು ಸಾಗರ್ ಯೋಜನೆಗಳು (42 ಯೋಜನೆಗಳು)
ಈ ಕಾರಿಡಾರ್‌ಗಳ ಅಡಿಯಲ್ಲಿ ಇದುವರೆಗೆ ಒಟ್ಟು 5,723 ಕಿಲೋಮೀಟರ್ ಉದ್ದ ಮತ್ತು 1.03 ಲಕ್ಷ ಕೋಟಿ ರೂ. ಹೂಡಿಕೆ ಯೋಜನೆಯೊಂದಿಗೆ 55 ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಕಾರಿಡಾರ್ ಕಾರ್ಯಕ್ರಮದ ಅಡಿಯಲ್ಲಿ 101 ಯೋಜನೆಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ.
ಕವಚ್ ವ್ಯವಸ್ಥೆ (ಭಾರತದ ದೇಶೀಯ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆ) ಅನುಷ್ಠಾನವನ್ನು ಹಂತ ಹಂತವಾಗಿ ವೇಗಗೊಳಿಸಲು ಮತ್ತು ನಿಗದಿತ ಸಮಯದ ಚೌಕಟ್ಟಿನಲ್ಲಿ ನಿಗದಿಪಡಿಸಿದ ಬಂಡವಾಳ ವೆಚ್ಚದ ಗುರಿಯನ್ನು ಪೂರೈಸುವಂತೆ ಕೇಂದ್ರ ಹಣಕಾಸು ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ದೆಹಲಿ-ಹೌರಾ ಮತ್ತು ದೆಹಲಿ-ಮುಂಬೈ ವಿಭಾಗಗಳಲ್ಲಿ 3000 RKM (ಮಾರ್ಗ ಕಿಲೋಮೀಟರ್) ಗಿಂತ ಹೆಚ್ಚು ಕವಚ್ ಸಂಬಂಧಿತ ಕೆಲಸಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಶ್ರೀಮತಿ ಸೀತಾರಾಮನ್ ಅವರಿಗೆ ತಿಳಿಸಿದರು.
ಪಶ್ಚಿಮ ಕೇಂದ್ರ ರೈಲ್ವೇಯ ಕೋಟಾ ವಿಭಾಗದಿಂದ ಕೋಟಾ-ಸವಾಯಿ ಮಾಧೋಪುರ್ ವಿಭಾಗದಲ್ಲಿ ಕವಚ್ ಆವೃತ್ತಿ 4.0 ರ ಕಾರ್ಯಾಚರಣೆಯ ಕುರಿತು ರೈಲ್ವೆ ಅಧಿಕಾರಿಗಳು ಕೇಂದ್ರ ಹಣಕಾಸು ಸಚಿವರಿಗೆ ತಿಳಿಸಿದರು.
16ನೇ ಸೆಪ್ಟೆಂಬರ್ 2024 ರಂತೆ, ಕೋಟಾದಿಂದ ಸವಾಯಿ ಮಾಧೋಪುರದವರೆಗಿನ 108 ಕಿಮೀ ವ್ಯಾಪ್ತಿಯನ್ನು ಕವಚ್ ಆವೃತ್ತಿ 4.0 ನೊಂದಿಗೆ ತಿಂಗಳಿಗೆ 54 ಕಿಮೀ ದಾಖಲೆಯ ವೇಗದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದು MoR ಅಧಿಕಾರಿಗಳು ಉಲ್ಲೇಖಿಸಿದ್ದಾರೆ, ಇದನ್ನು RDSO 16 ಜುಲೈ 2024 ರಂದು ಅಂತಿಮಗೊಳಿಸಿತು ರೈಲು ಸಂಖ್ಯೆ 05913 ಕೋಟಾ-ಜಮುನಾ ಸೇತುವೆ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 05914 ಆಗ್ರಾ-ಕೋಟಾ ಪ್ಯಾಸೆಂಜರ್.
ಕೋಟಾದಿಂದ ಸವಾಯಿ ಮಾಧೋಪುರದವರೆಗಿನ 108 ಕಿಮೀ ಉದ್ದದ ಮಾರ್ಗವನ್ನು 16 ಸೆಪ್ಟೆಂಬರ್ 2024 ರವರೆಗೆ ತಿಂಗಳಿಗೆ 54 ಕಿಮೀ ದಾಖಲೆಯ ವೇಗದಲ್ಲಿ ಕವಚ್ ಆವೃತ್ತಿ 4.0 ನೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ, ಇದನ್ನು 16 ಜುಲೈ 2024 ರಂದು ಆರ್ ಡಿ ಎಸ್ ಒ ಅಂತಿಮಗೊಳಿಸಿದ ನಂತರ, ರೈಲು ಸಂಖ್ಯೆ 05913 ಕೋಟಾ-ಜಮುನಾ ಬ್ರಿಡ್ಜ್ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 05914 ಆಗ್ರಾ-ಕೋಟಾ ಪ್ಯಾಸೆಂಜರ್ ರೈಲನ್ನು ಕಾರ್ಯಾಚರಿಸಲಾಯಿತು.
2024-25ರ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿದಂತೆ - 40,000 ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸುವ ಕೆಲಸವನ್ನು ರೈಲ್ವೆ ಸಚಿವಾಲಯವು ತ್ವರಿತಗೊಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
2024-25 ರ ಬಂಡವಾಳ ವೆಚ್ಚದ ಗುರಿಯನ್ನು ಕಾಲಮಿತಿಗೆ ಅನುಗುಣವಾಗಿ ಸಾಧಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಮತ್ತು ಈ ಸರ್ಕಾರದ ಮೊದಲ 100 ದಿನಗಳಲ್ಲಿ ಸಾಧಿಸಿದ ಆವೇಗವನ್ನು ಮುಂದುವರಿಸುವಂತೆ ರೈಲ್ವೆ ಸಚಿವಾಲಯದ ಅಧಿಕಾರಿಗಳಿಗೆ ಶ್ರೀಮತಿ ಸೀತಾರಾಮನ್ ಸೂಚಿಸಿದರು.
*****
(Release ID: 2055845)
Visitor Counter : 54