ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಸೂಕ್ಷ್ಮ ಲಿಂಗ ತಾರತಮ್ಯವು ಆತಂಕಕಾರಿ, ಲಿಂಗ ನ್ಯಾಯಕ್ಕಾಗಿ ಪುರುಷರ ಮನೋಭಾವ ಬದಲಾವಣೆ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಒತ್ತಾಯಿಸಿದರು


"ರೋಗಲಕ್ಷಣದ ಅಸ್ವಸ್ಥತೆ" ಎಂಬಂತಹ ಹೇಳಿಕೆಗಳು ಮಹಿಳೆಯರ ವಿರುದ್ಧದ ಹಿಂಸೆಯ ಬರ್ಬರತೆಯನ್ನು ಕಡಿಮೆ ಮಾಡುತ್ತವೆ; ಅತ್ಯಂತ ಅವಮಾನಕರ - ಉಪರಾಷ್ಟ್ರಪತಿ

ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒಂದು ಯುಗದ ಬೆಳವಣಿಗೆಯಾಗಿದೆ; ಗತ ವೈಭವವನ್ನು ಮರಳಿ ಪಡೆಯಲು ಶ್ರದ್ಧೆಯಿಂದ ಪ್ರಯತ್ನ- ಉಪರಾಷ್ಟ್ರಪತಿ

ಸ್ವಯಂ ಸೇವೆ ಮಾಡುವ ವ್ಯಕ್ತಿಗಳು ಈವೆಂಟ್ ಮ್ಯಾನೇಜ್ಮೆಂಟ್ ಮೂಲಕ ಐಕಾನಿಕ್ ಸ್ಥಾನಮಾನವನ್ನು ಪಡೆದುಕೊಳ್ಳುವುದರ ಬಗ್ಗೆ ಜಾಗರೂಕರಾಗಿರಿ ಎಂದು ಉಪರಾಷ್ಟ್ರಪತಿ ಎಚ್ಚರಿಸಿದ್ದಾರೆ

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಪ್ಯಾರಡೈಮ್ ಶಿಫ್ಟ್ ಆಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು 

ಸವಾಲುಗಳನ್ನು ಎದುರಿಸಿ, 'ಗಾಜಿನ ಛಾವಣಿಯನ್ನು' ಒಡೆಯಿರಿ ಎಂದು ಉಪರಾಷ್ಟ್ರಪತಿ ಮಹಿಳೆಯರಿಗೆ ಒತ್ತಾಯಿಸಿದರು

Posted On: 16 SEP 2024 9:08PM by PIB Bengaluru

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು ಪುರುಷರ ಮನೋಭಾವವನ್ನು ಬದಲಿಸಲು ಮತ್ತು ವ್ಯಾಪಕವಾದ ಲಿಂಗ ಸಂವೇದನೆಗಾಗಿ ಮನವಿ ಮಾಡಿದರು. ಇಂದು ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ನೆಟ್ವರ್ಕ್ 18 ಗ್ರೂಪ್ ಆಯೋಜಿಸಿದ್ದ "ಮಹಿಳಾ ಸಬಲೀಕರಣಕ್ಕೆ ಸಮಗ್ರ ದೃಷ್ಟಿಕೋನ" ಎಂಬ ವಿಷಯದ ಮೇಲೆ ನಡೆದ ಶೀಶಕ್ತಿ2024 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರು ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಸೂಕ್ಷ್ಮ ಲಿಂಗ ತಾರತಮ್ಯಗಳಿಗೆ ಗಮನ ಕೊಡುವಂತೆ ಒತ್ತಾಯಿಸಿದರು.

"ನಮ್ಮ ಮಹಿಳೆಯರು ಆಡಳಿತದ ಪ್ರತಿಯೊಂದು ಅಂಶದಲ್ಲೂ ಭಾಗವಹಿಸುತ್ತಿದ್ದಾರೆ. ಅವರು ನಿಷ್ಠೆ, ಬದ್ಧತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಲಿಂಗ ಸಮಾನತೆ ಇನ್ನೂ ಅವರಿಗೆ ಸಿಕ್ಕಿಲ್ಲ. ಯಾವುದೇ ವ್ಯವಸ್ಥೆಯಲ್ಲಿ, ನನ್ನ ಮುಂದೆ ಇರುವ ವ್ಯವಸ್ಥೆಯನ್ನು ಒಳಗೊಂಡು, ಯಾವುದೋ ರೀತಿಯಲ್ಲಿ ಈ ಲಿಂಗ ಸಮಾನತೆ ನಮ್ಮಿಂದ ದೂರವಾಗುತ್ತಿದೆ. ಲಿಂಗ ತಾರತಮ್ಯ ಮೇಲ್ನೋಟಕ್ಕೆ ಮಾಯವಾಗಿದೆ. ಆದರೆ ಅದು ಸೂಕ್ಷ್ಮ ರೂಪಗಳನ್ನು ಪಡೆದುಕೊಂಡಿದೆ. ನೀವು ಹೋರಾಡಲು ಸಾಧ್ಯವಾಗದ ಸೂಕ್ಷ್ಮ ರೂಪಗಳು. ನೀವು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ. ಮತ್ತು ಅದು ನಾವು ಹೆಚ್ಚು ಕಷ್ಟಪಡಬೇಕಾದ ಕ್ಷೇತ್ರವಾಗಿದೆ. ಸೂಕ್ಷ್ಮ ತಾರತಮ್ಯವು ಬಹಿರಂಗ ತಾರತಮ್ಯಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಬಹಿರಂಗ ತಾರತಮ್ಯವನ್ನು ನೀವು ವಿರೋಧಿಸಬಹುದು. ಆದರೆ ಸೂಕ್ಷ್ಮ ತಾರತಮ್ಯವನ್ನು ವಿರೋಧಿಸಲು ನಿಮಗೆ ಕಷ್ಟವಾಗುತ್ತದೆ. ಪುರುಷ ಮನಸ್ಥಿತಿಯ ವ್ಯಾಪಕ ಬದಲಾವಣೆಯ ಅಗತ್ಯವಿದೆ. ಮಾನವ ಚಟುವಟಿಕೆಯ ಪ್ರತಿಯೊಂದು ಅಂಶದಲ್ಲೂ ತಾರತಮ್ಯರಹಿತ ಸಮಾನ ಅವಕಾಶದ ಕ್ಷೇತ್ರವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅತ್ಯಗತ್ಯವಾಗಿದೆ" ಎಂದು ಅವರು ಹೇಳಿದರು.

"ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ಬಗ್ಗೆ "ರೋಗಲಕ್ಷಣದ ಅಸ್ವಸ್ಥತೆ" ಎಂಬಂತಹ ಹೇಳಿಕೆಗಳನ್ನು  ಅತ್ಯಂತ ನಾಚಿಕೆಗೇಡಿನ ಮತ್ತು ಅಂತಹ ಘೋರ ಅಪರಾಧಗಳ ಅನಾಗರಿಕತೆಯನ್ನು ಕಡಿಮೆ ಮಾಡುವಂತಿದೆ ಎಂದು  ಶ್ರೀ ಧನಕರ್ ಹೇಳಿದರು. ಅಲ್ಲದೆ, 'ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಂದ ಕ್ರೌರ್ಯವನ್ನು ಚಿಕ್ಕದಾಗಿಸುವ ರೀತಿಯ ಹುಚ್ಚು ಚಿಂತನೆಗಳನ್ನು ನಾವು ದೃಢವಾಗಿ ತಿರಸ್ಕರಿಸಬೇಕು ಮತ್ತು ತಿರಸ್ಕಾರದಿಂದ ನೋಡಬೇಕು. ಅದನ್ನು ಕೆಲವರು 'ರೋಗಲಕ್ಷಣದ ಅಸ್ವಸ್ಥತೆ' ಎಂದು ಕರೆಯುತ್ತಾರೆ. ಅದು ನಾಚಿಕೆಗೇಡಿನ ಸಂಗತಿ. ನಾವು ನಮ್ಮ ಅಂತಃಕರಣಕ್ಕೆ ಜವಾಬ್ದಾರರಾಗಿದ್ದೇವೆ, ನಮ್ಮ ಹೃದಯ ರಕ್ತಸಿಕ್ತವಾಗಬೇಕು. ಇದು ಪಶ್ಚಾತ್ತಾಪದ  ವಿಷಯ, ತಿದ್ದಿಕೊಳ್ಳುವ ಹಂತಕ್ಕೆ ಹೋಗಬೇಕಾದ ವಿಷಯ,” ಎಂದು ಅವರು ಹೇಳಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ನೀಡುವ ನಿಬಂಧನೆಯನ್ನು ಶ್ಲಾಘಿಸಿದ ಶ್ರೀ ಧನಕರ್ ಅವರು, ಇದು ಒಂದು ಯುಗಪ್ರವರ್ತಕ ಬೆಳವಣಿಗೆಯಾಗಿದೆ ಎಂದು ಹೇಳಿದರು. ಇದುವರೆಗಿನ ಸಮಗ್ರ ಮಹಿಳಾ ಸಬಲೀಕರಣದ ದಿಶೆಯಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆ ಇದಾಗಿದೆ. ಇದು ನೀತಿಗಳ ರೂಪಣೆಯಲ್ಲಿ ಅಮೂಲ್ಯವಾದ ಅಭಿಪ್ರಾಯ ಮತ್ತು ಶಾಸನ ಸಭೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟವಾದ ಪಾಲ್ಗೊಳ್ಳುವಿಕೆಯನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು.

ಕಾರ್ಯಕ್ರಮ ನಿರ್ವಹಣೆಯ ಮೂಲಕ ಸ್ವಾರ್ಥಪರ ವ್ಯಕ್ತಿಗಳು ಪ್ರಸಿದ್ಧಿ ಪಡೆಯುವುದರ ಬಗ್ಗೆ ಶ್ರೀ ಧನಕರ್ ಎಚ್ಚರಿಕೆ ನೀಡಿದರು.  "ನಮ್ಮ ದೇಶದಲ್ಲಿ ನಾವು ಜನರಿಗೆ ಪ್ರಸಿದ್ಧ ಸ್ಥಾನಮಾನ ನೀಡಿದ್ದೇವೆ, ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ, ಪತ್ರಿಕೋದ್ಯಮ ಸೇರಿದಂತೆ, ಉನ್ನತ ಸ್ಥಾನಕ್ಕೆ ಏರಿಸಿದ್ದೇವೆ, ಯಾಕೆ? ಅವರು ಈವೆಂಟ್ ಮ್ಯಾನೇಜ್ಮೆಂಟ್ನಲ್ಲಿ ನಿಪುಣರೇ? ಅವರು ತಮ್ಮ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆಯೇ? ನಾವು ಜಾಗರೂಕರಾಗಿಲ್ಲದ ಕಾರಣ ಅವರು ದೊಡ್ಡವರಾಗುತ್ತಾರೆ, ನಂತರ ಅವರು ನಮ್ಮ ಮಾರ್ಗದರ್ಶಕರಾಗುತ್ತಾರೆ.  ನಂತರ ಅವರು 'ಓಹ್... ಬಾಂಗ್ಲಾದೇಶದಲ್ಲಿ ನಡೆದಿದ್ದು ಇಲ್ಲಿಯೂ ನಡೆಯಬಹುದು' ಎಂದು ಹೇಳುವ ಮಟ್ಟಕ್ಕೆ ಹೋಗುತ್ತಾರೆ. ಲಿಂಗ ನ್ಯಾಯಕ್ಕಾಗಿ ಮಾತ್ರವಲ್ಲದೆ, ರಾಷ್ಟ್ರೀಯತೆಯ ಬಗ್ಗೆ ನಮ್ಮ ಬದ್ಧತೆಗೂ ಮನಸ್ಥಿತಿ ಬದಲಾವಣೆ ಅಗತ್ಯವಿದೆ ಎಂದು ನಾನು ನಿಮಗೆ ಹೇಳುತ್ತೇನೆ.  ನಾವು ರಾಷ್ಟ್ರದ ಹಿತಕ್ಕೆ ಬೆಲೆ ಕೊಡದೆ, ಸ್ವಂತ ಸುಖಕ್ಕಾಗಿ ಜನರು ಏನು ಬೇಕಾದರೂ ಮಾಡುವುದನ್ನು ನೋಡುತ್ತಾ ಕೂರೋದು ಸಾಧ್ಯವಿಲ್ಲ! ಈ ದೇಶದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ ನಾವು 5000 ವರ್ಷಗಳಿಗಿಂತಲೂ ಹಳೆಯದಾದ ನಾಗರಿಕತೆಯ ಭಾಗವಾಗಿದ್ದೇವೆ, ಸದ್ಗುಣ ಮತ್ತು ಉದಾತ್ತತೆಯಲ್ಲಿ ಆಳವಾಗಿ ಬೇರೂರಿದ್ದೇವೆ..." ಎಂದು ಅವರು ಹೇಳಿದರು. 

ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಕಾರಾತ್ಮಕ ಕ್ರಮಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ಮತ್ತು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯ ಕಡೆಗೆ ಮಾದರಿ ಬದಲಾವಣೆ ಆಗಿರುವುದನ್ನು ಒತ್ತಿ ಹೇಳಿದರು. ಬೇಟಿ ಪಢಾವೋ, ಮುದ್ರಾ ಯೋಜನೆ ಮತ್ತು ರಕ್ಷಣಾ ಪಡೆಗಳಲ್ಲಿ ಮಹಿಳೆಯರ ಪ್ರವೇಶ, ಬಾಹ್ಯಾಕಾಶ, ಸಮುದ್ರ ಅಥವಾ ಭೂಮಿ ಎಂಬುದನ್ನು ಲೆಕ್ಕಿಸದೆ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಭೂದೃಶ್ಯವನ್ನು ಹೆಚ್ಚಿನ ಮಟ್ಟಿಗೆ ಬದಲಿಸಿದೆ ಎಂದು ಹೇಳಿದರು.

"ಹಿಂದಿನ ದಶಕದಲ್ಲಿ ಮಾತ್ರವಲ್ಲ, ಮಹಿಳಾ ಅಭಿವೃದ್ಧಿಯಿಂದ ಮಹಿಳೆಯರ ನೇತೃತ್ವದ ಅಭಿವೃದ್ಧಿಯತ್ತ ಪರಿಕಲ್ಪನೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಇದು ರಾಜಕೀಯ ಬೆಳವಣಿಗೆಯಾಗಿದೆ ಎಂದು ಕರೆಯಬಹುದು, ಆದರೆ ಇದು ಸತ್ಯವಾಗಿದೆ -ಬೇಟಿ ಪಢಾವೋ, ಮುದ್ರಾ - ಮುದ್ರಾ ಮಹಿಳೆಯರಿಗೆ ಆ ರೀತಿಯ ಸ್ವಾತಂತ್ರ್ಯವನ್ನು ನೀಡಿದೆ. ಅವರು ಉದ್ಯೋಗದಾತರಾಗಿದ್ದಾರೆ. ಅವರು ತಮ್ಮನ್ನು ತಾವೇ ಉದ್ಯೋಗಿಗಳನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಇತರರಿಗೂ ಉದ್ಯೋಗ ನೀಡುತ್ತಿದ್ದಾರೆ - ಇದೊಂದು ದೊಡ್ಡ ಬದಲಾವಣೆ ಮತ್ತು ಆದ್ದರಿಂದ ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮಾದರಿ ಬದಲಾವಣೆ ನಡೆದಿದೆ. ಇಲ್ಲಿರುವ ಕೆಲವು ಪುರುಷರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೊದಲ ಪೂರ್ಣ ಮಹಿಳಾ ಹಣಕಾಸು ಸಚಿವೆಯಾಗಿ ಅವರು ಇತಿಹಾಸ ಸೃಷ್ಟಿಸಿದರು, ಮತ್ತು ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನೂ ಮೀರಿಸಿದರು" ಎಂದು ಅವರು ಹೇಳಿದರು. 

ನಿಮ್ಮ ಏಳಿಗೆಗೆ ಅಡ್ಡಿಯಾಗುವ ಸವಾಲುಗಳನ್ನು ಎದುರಿಸಿ, ಗಾಜಿನ ಗೋಡೆಯನ್ನು ಒಡೆಯಿರಿ. ಆ ಗಾಜು ದುರ್ಬಲವಾಗಿದೆ, ನೀವು ಮಾತ್ರ ಮುಂದೆ ಹೋಗಬೇಕು. ಬದಲಾವಣೆ ತರಲು ಸಮಯ ಬಂದಿದೆ, ಬದಲಾವಣೆಯನ್ನು ಹುಡುಕುವ ಬದಲು ಬದಲಾವಣೆಯನ್ನು ಆಶಿಸಬೇಕು. ನೀವು ವಾಹನದಲ್ಲಿ ಪ್ರಯಾಣಿಕರಲ್ಲ, ನೀವು ಡ್ರೈವರ್ ಸೀಟಿನಲ್ಲಿರುವಿರಿ ಆದ್ದರಿಂದ ಅದನ್ನು ಚಲಾಯಿಸಿ ಎಂದು ಮಹಿಳೆಯರಿಗೆ ಶ್ರೀ ಧನಕರ್ ಮನವಿ ಮಾಡಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಡೆಗೆ ಗಮನಸೆಳೆಯುತ್ತಾ, ಉಪರಾಷ್ಟ್ರಪತಿ ಅವರು ಭಾರತದ ಪ್ರಜಾಪ್ರಭುತ್ವವು ಗ್ರಾಮ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡಿದೆ ಎಂದು ಒತ್ತಿ ಹೇಳಿದರು. ಪಂಚಾಯತಿ ರಾಜ್ ಸಂಸ್ಥೆಗಳಲ್ಲಿ ಸುಮಾರು 14 ಲಕ್ಷ ಮಹಿಳೆಯರು ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

"ಪ್ರಜಾಪ್ರಭುತ್ವವನ್ನು ಅದರ ವ್ಯವಸ್ಥೆಯ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಅದು ಶ್ರೀಮಂತರಿಗಾಗಿ ಅಲ್ಲ, ಸವಲತ್ತು ಪಡೆದವರಿಗಾಗಿ ಅಲ್ಲ, ಸವಲತ್ತು ಪಡೆದ ವಂಶಾವಳಿಗಾಗಿ ಅಲ್ಲ, ಪ್ರಜಾಪ್ರಭುತ್ವವನ್ನು ಮುಖ್ಯವಾಗಿ ಯಾರ ಸಲುವಾಗಿ ಮಾಡಲಾಗಿದೆ? ಅದು ದುರ್ಬಲರ ಸಲುವಾಗಿ, ಸವಾಲನ್ನು ಎದುರಿಸುತ್ತಿರುವವರ ಸಲುವಾಗಿ, ಸಹಾಯದ ಅಗತ್ಯವಿರುವವರ ಸಲುವಾಗಿ ಮಾಡಲಾಗಿದೆ. ಈ ಮೂಲಕ ನಿಜವಾದ ಪ್ರತಿಭೆ, ಅವುಗಳನ್ನು ಅಡ್ಡಗಟ್ಟುವ ಸವಾಲುಗಳನ್ನು ಜಯಿಸಬಹುದು" ಎಂದು ಅವರು ಹೇಳಿದರು.

"ನಾನು ಶಿಕ್ಷಣದ ಫಲ! ಶಿಕ್ಷಣ ಲಭ್ಯವಾದರೆ ಅಸಮಾನತೆಯ ಸರಪಳಿಗಳು ಒಡೆದು ಹೋಗುತ್ತವೆ. ಅನೇಕರು ಸರಿಯಾಗಿ ಹೇಳಿದ್ದಾರೆ, ನೀವು ಒಬ್ಬ ಹುಡುಗನಿಗೆ ಶಿಕ್ಷಣ ನೀಡಿದರೆ - ನೀವು ಒಬ್ಬನಿಗೆ ಶಿಕ್ಷಣ ನೀಡಿದಂತೆ. ನೀವು ಒಬ್ಬ ಹುಡುಗಿಗೆ ಶಿಕ್ಷಣ ನೀಡಿದರೆ - ನೀವು ಒಂದು ಕುಟುಂಬಕ್ಕೆ ಶಿಕ್ಷಣ ನೀಡಿದಂತೆ, ಇದು ವಾಸ್ತವ. ನಾನು ಯಾವಾಗಲೂ ನಂಬಿದ್ದೇನೆ ಮತ್ತು ಒಪ್ಪಿಕೊಂಡಿದ್ದೇನೆ, ಮತ್ತು ಯಾರೂ ವಿಭಿನ್ನಾಭಿಪ್ರಾಯ ಹೊಂದಿರಲಾರರು ಎಂದು ನನಗೆ ಖಾತ್ರಿಯಿದೆ. ಸಮಾನತೆಯನ್ನು ತರಲು, ಅಸಮಾನತೆಗಳನ್ನು ಕಡಿತಗೊಳಿಸಲು, ಸಮಾನ ಅವಕಾಶದ ಕ್ಷೇತ್ರವನ್ನು ಸೃಷ್ಟಿಸಲು ಶಿಕ್ಷಣವೇ ಅತ್ಯಂತ ಪರಿಣಾಮಕಾರಿ ಪರಿವರ್ತನಾ ಯಂತ್ರ. ಇದನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ ಮತ್ತು ಫಲಿತಾಂಶಗಳು ಉತ್ತೇಜನಕಾರಿಯಾಗಿವೆ" ಎಂದು ಲಿಂಗ ಸಮಾನತೆಗಾಗಿ ಶಿಕ್ಷಣದ ಪ್ರಾಮುಖ್ಯತೆಯನ್ನು ಪ್ರತಪಾದಿಸುತ್ತಾ ಶ್ರೀ ಧನಕರ್ ಹೇಳಿದರು.

 

*****



(Release ID: 2055613) Visitor Counter : 15


Read this release in: English , Urdu , Hindi , Malayalam