ನೌಕಾ ಸಚಿವಾಲಯ
azadi ka amrit mahotsav g20-india-2023

ಟುಟಿಕೋರಿನ್ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಟುಟಿಕೋರಿನ್ ಅಂತಾರಾಷ್ಟ್ರೀಯ ಟರ್ಮಿನಲ್ ಅನ್ನು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು

ಶ್ರೀ ಸರ್ಬಾನಂದ ಸೋನೋವಾಲ್ ಅವರು ಪ್ರಮುಖ ಮೂಲ ಯೋಜನೆಗಳನ್ನು ಪ್ರಾರಂಭಿಸಿದರು, ಸೌಲಭ್ಯಗಳನ್ನು ನವೀಕರಿಸಲು ಸರ್ಕಾರದಿಂದ ಬೃಹತ್ ಹೂಡಿಕೆ

ಹಸಿರು ಹೈಡ್ರೋಜನ್ ಯೋಜನೆಯನ್ನು ಶ್ರೀ ಸರ್ಬಾನಂದ ಸೋನೋವಾಲ್ ಅವರು ಉದ್ಘಾಟಿಸಿದರು; "ಪ್ರಧಾನಿ ನರೇಂದ್ರ ಮೋದಿ ಜಿಯವರ ದೃಷ್ಟಿಕೋನದಲ್ಲಿ ಭಾರತವನ್ನು ಹಸಿರು ಹೈಡ್ರೋಜನ್ ಜಾಗತಿಕ ಹಬ್" ಕಡೆಗೆ ಸಾಗಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ” ಎಂದು ಶ್ರೀ ಸರ್ಬಾನಂದ ಸೋನೋವಾಲ್ ಅವರು ಹೇಳಿದರು

ಹಣಕಾಸುವರ್ಷ 2024-25 ರಲ್ಲಿ 50 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಗುರಿ ಹೊಂದಿರುವ ಟುಟಿಕೋರಿನ್ ಬಂದರಿಗಾಗಿ ಮಹತ್ವಾಕಾಂಕ್ಷೆಯ "ಮಿಷನ್ 50" ಅಭಿಯಾನವನ್ನು ಚಾಲನೆ ಮಾಡಿದ ಶ್ರೀ ಸರ್ಬಾನಂದ ಸೋನೋವಾಲ್

ಈ ಕಾರ್ಯಯೋಜನೆಯು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಿದೆ, ಹೊಸ ಟರ್ಮಿನಲ್ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರದ ಮೊದಲ 100 ದಿನಗಳಲ್ಲಿ ಆಗಿರುವ ಒಂದು ಹೆಗ್ಗುರುತು ಸಾಧನೆಯಾಗಿದೆ": ಶ್ರೀ ಸರ್ಬಾನಂದ ಸೋನೋವಾಲ್

 'ಹಸಿರು ಸಾಗರ ಹಸಿರು ಬಂದರು ಉಪಕ್ರಮ (ಹರಿತ್ ಸಾಗರ್ ಗ್ರೀನ್ ಪೋರ್ಟ್ ಇನಿಶಿಯೇಟಿವ್)' ಭಾಗವಾಗಿ 400 ಕೆ.ಡಬ್ಲ್ಯೂ ಮೇಲ್ಛಾವಣಿ ಸೌರ

Posted On: 16 SEP 2024 6:28PM by PIB Bengaluru

ಕೇಂದ್ರ ಬಂದರುಗಳು, ನೌಕಾಯಾನ (ಹಡಗು ಉದ್ಯಮ) ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಇಂದು ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರದಲ್ಲಿ ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಮತ್ತು ಪ್ರಮುಖ ಮೂಲಭೂತ ಯೋಜನೆಗಳನ್ನು ಉದ್ಘಾಟಿಸಿದರು, ಹಾಗೂ ಹಲವಾರು ಉಪಕ್ರಮಗಳಿಗೆ ಅಡಿಪಾಯ ಹಾಕಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಮಾವೇಶದ ಮೂಲಕ ಟುಟಿಕೋರಿನ್ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. “ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪಯಣದಲ್ಲಿ ಇಂದು ಮಹತ್ವದ ಮೈಲಿಗಲ್ಲಾಗಿದೆ,   ಮತ್ತು ಹೊಸ ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್ ಅನ್ನು 'ಭಾರತದ ಸಾಗರ ಮೂಲಸೌಕರ್ಯದ ಹೊಸ ನಕ್ಷತ್ರ' ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. “14 ಮೀಟರ್ಗಿಂತಲೂ ಹೆಚ್ಚು ಆಳವಾದ ತಲಮಟ್ಟ ಮತ್ತು 300 ಮೀಟರ್ಗಿಂತಲೂ ಹೆಚ್ಚು ಬೆರ್ತ್ನೊಂದಿಗೆ, ಈ ಟರ್ಮಿನಲ್ ವಿ.ಒ.ಸಿ. ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೊಸ ಟರ್ಮಿನಲ್ ಬಂದರಿನಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತಕ್ಕೆ ವಿದೇಶಿ ವಿನಿಮಯವನ್ನು ಉಳಿಸುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ತಮಿಳುನಾಡಿನ ಜನತೆಗೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು ಮತ್ತು ವಿ.ಒ.ಸಿ. ಬಂದರಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು. ಎರಡು ವರ್ಷಗಳ ಹಿಂದೆ ಅವರ ಭೇಟಿಯ ಸಮಯದಲ್ಲಿ ಪ್ರಾರಂಭವಾದ ಬಂದರನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. “ಟರ್ಮಿನಲ್ ನ ಪ್ರಮುಖ ಸಾಧನೆಗಳಲ್ಲಿ ಒಂದು ಲಿಂಗ ವೈವಿಧ್ಯತೆಗೆ ಅದರ ಬದ್ಧತೆಯಾಗಿದೆ. ಇದರ ಉದ್ಯೋಗಿಗಳಲ್ಲಿ 40% ಮಹಿಳೆಯರು, ಸಮುದ್ರ ವಲಯದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಸಂಕೇತಿಸುತ್ತದೆ.” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಹಸಿರು ನಿಶಾನೆ ತೋರಿಸಿ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೊಸ ಟಿಐಸಿಟಿ ಟರ್ಮಿನಲ್ನಿಂದ ಮೊದಲ ಕಂಟೇನರ್ ಹಡಗಿಗೆ ಚಾಲನೆ ನೀಡಿದರು. ಮೂಲಸೌಕರ್ಯ ಯೋಜನೆಗೆ ಅಗತ್ಯ ಕಾರ್ಯಾಚರಣೆ ಹೊಂದಿರುವ ಈ ಬಂದರು,  ದೇಶದಲ್ಲಿ ಮಹತ್ವದ ಬಂದರಾಗಿದೆ. ₹434 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ವಾರ್ಷಿಕವಾಗಿ 6 ಲಕ್ಷ ಟಿ.ಇ.ಯು.ಗಳನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ಬಂದರನ್ನು ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ. ಟರ್ಮಿನಲ್ 14.20 ಮೀಟರ್ಗಳ ತಳಮಟ್ಟವನ್ನು ಹೊಂದಿದೆ, ಇದು 10,000 ಟಿ.ಇ.ಯು.ಗಳವರೆಗಿನ ಕಂಟೇನರ್ ಹಡಗುಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು. 

ಹೊಸದಾಗಿ ನಿರ್ಮಿಸಲಾದ ಹಸಿರು ಹೈಡ್ರೋಜನ್ ಯೋಜನೆಯನ್ನು ಕೇಂದ್ರ ಸಚಿವರು ಉದ್ಘಾಟಿಸಿದರು, ಇದನ್ನು ಅವರು 'ಭಾರತವನ್ನು ಹಸಿರು ಹೈಡ್ರೋಜನ್ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ' ಎಂದು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು. 'ಹಸಿರು ಸಾಗರ ಹಸಿರು ಬಂದರು ಉಪಕ್ರಮ (ಹರಿತ್ ಸಾಗರ್ ಗ್ರೀನ್ ಪೋರ್ಟ್ ಇನಿಶಿಯೇಟಿವ್)' ಭಾಗವಾಗಿ 400 ಕೆ.ಡಬ್ಲ್ಯೂ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರವನ್ನು  ಸಹ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಉದ್ಘಾಟಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ, ಭಾರತದ ವಿಶಾಲವಾದ ಸಾಗರ ಕಾರ್ಯಾಚರಣೆಯ ಬಗ್ಗೆ ಮಾತನಾಡಿದರು. ಇದು ಮೂಲಸೌಕರ್ಯ ಅಭಿವೃದ್ಧಿಯನ್ನು ಮೀರಿ ವಿಸ್ತರಿಸಿದೆ ಎಂದು ಹೇಳಿದರು. "ಭಾರತವು ಸುಸ್ಥಿರ ಮತ್ತು ಮುಂದಾಲೋಚನೆಯ ಅಭಿವೃದ್ಧಿಯ ಹಾದಿಯನ್ನು ಜಗತ್ತಿಗೆ ತೋರಿಸುತ್ತಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ವಿ.ಒ.ಸಿ. ಬಂದರನ್ನು ಗ್ರೀನ್ ಹೈಡ್ರೋಜನ್ ಹಬ್ ಮತ್ತು ಕಡಲಾಚೆಯ ಗಾಳಿ ಶಕ್ತಿಯ ನೋಡಲ್ ಪೋರ್ಟ್ ಎಂದು ಗುರುತಿಸಲಾಗುತ್ತಿದೆ. ಹವಾಮಾನ ಬದಲಾವಣೆಯ ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಈ ಉಪಕ್ರಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನಮ್ಮ ದೇಶದ ಸಂಪತ್ತನ್ನು ಆಧುನೀಕರಿಸಲು, ಯಾಂತ್ರೀಕರಿಸಲು ಮತ್ತು ಡಿಜಿಟಲೀಕರಣಗೊಳಿಸಲು ಸಾಗರ ವಲಯವು ಮಹತ್ತರವಾದ ಉತ್ತೇಜನವನ್ನು ಪಡೆದುಕೊಂಡಿದೆ. ಇಂದು, ವ್ಯಾಪಾರ ಸಮುದಾಯಕ್ಕೆ ಸುಗಮ ಮತ್ತು ತ್ವರಿತ ಸೇವೆಯನ್ನು ಒದಗಿಸುವ ನಮ್ಮ ಪ್ರಯತ್ನವು ರಫ್ತು-ಆಮದು ( ಎಕ್ಸಿಮ್ ) ವ್ಯಾಪಾರದ ಬೆಳವಣಿಗೆಗೆ ಕಾರಣವಾಯಿತು. ಅಂತಿಮವಾಗಿ ಭಾರತದ ಸಂಪತ್ತಿನ ಬೆಳವಣಿಗೆಗೆ ಕೊಡುಗೆ ನೀಡುವುದರಿಂದ ಈ ಉಪಕ್ರಮವು ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ. ಈ ಹೊಸ ಟರ್ಮಿನಲ್ ಸೇವೆಗಳ ವಿಳಂಬವನ್ನು ಕಡಿಮೆ ಮಾಡುತ್ತದೆ, ಟ್ರಾನ್ಸ್ ಶಿಪ್ಮೆಂಟ್ ಅನ್ನು ಬೈಪಾಸ್ ಮಾಡುತ್ತದೆ ಮತ್ತು ಪ್ರತಿ ಕಂಟೇನರ್ ಗೆ 200 ಯು.ಎಸ್.‌ ಡಾಲರ್ ವರೆಗೆ ಉಳಿಸುವ ಮೂಲಕ ಕಾರ್ಯಾಚರಣೆಗಳನ್ನು ಆರ್ಥಿಕಗೊಳಿಸುತ್ತದೆ. ಇದು ನಮ್ಮ ಕಾರ್ಯಾಚರಣೆಯ ವೆಚ್ಚವನ್ನು ವಾರ್ಷಿಕವಾಗಿ 4 ದಶಲಕ್ಷ ಯು.ಎಸ್.‌ ಡಾಲರ್ ವರೆಗೆ ಕಡಿಮೆಗೊಳಿಸುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಿರುವ ಈ ಟರ್ಮಿನಲ್ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ 100 ದಿನಗಳಲ್ಲಿ ಒಂದು ಹೆಗ್ಗುರುತು ಸಾಧನೆಯಾಗಿದೆ. ನಮ್ಮ ಬಂದರುಗಳ ಬೆನ್ನೆಲುಬಾಗಿರುವ ನಮ್ಮ ಕಾರ್ಯಪಡೆಯು ತುಂಬಾ ಶ್ರಮಿಸುತ್ತಿದೆ ಮತ್ತು ಅವರ ಕೆಲಸಕ್ಕಾಗಿ ನಾನು ಅವರನ್ನು ಶ್ಲಾಘಿಸಲು ಬಯಸುತ್ತೇನೆ. ಉದ್ಯೋಗ ಸೃಷ್ಟಿಗೆ ಈ ಬಂದರು ಸಹಕಾರಿಯಾಗಿದೆ ಎಂದು ತಿಳಿದು ಸಂತಸವಾಗುತ್ತಿದೆ. ನಾರಿ ಶಕ್ತಿಯ ಪೂರ್ಣರೂಪದ ಶಕ್ತಿಯನ್ನು ಗುರುತಿಸಲು, ಕನಿಷ್ಠ 40% ಉದ್ಯೋಗಿಗಳು ಮಹಿಳೆಯರಾಗಿರಬೇಕು, ಇದು ಅಂತರ್ಗತ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡುತ್ತದೆ.ಎಂದು ಕೇಂದ್ರ ಸಚಿವ ಎಂದು ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು

ರೆಡ್ ಗೇಟ್ ಮತ್ತು ಆಯಿಲ್ ಜೆಟ್ಟಿ ಕಂಟ್ರೋಲ್ ರೂಂಗಳಲ್ಲಿ 22 ಕೆವಿ ಸರ್ಕ್ಯೂಟ್ ಬ್ರೇಕರ್ ಪ್ಯಾನಲ್ಗಳ ಉನ್ನತೀಕರಣ, 24 ಹೈಮಾಸ್ಟ್ ಲೈಟ್ಗಳ ಕಾರ್ಯಾರಂಭ ಮತ್ತು ಬಂದರು ಸುರಕ್ಷತೆಯನ್ನು ಹೆಚ್ಚಿಸಲು ಡ್ರೋನ್ ಕಣ್ಗಾವಲು ವ್ಯವಸ್ಥೆ ಸೇರಿದಂತೆ ವಿವಿಧ ಯೋಜನೆಗಳನ್ನು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಉದ್ಘಾಟಿಸಿದರು. ಗ್ರೀನ್ ಹೈಡ್ರೋಜನ್ ಪ್ರಾಜೆಕ್ಟ್, 400 kW ರೂಫ್ಟಾಪ್ ಸೌರ ವಿದ್ಯುತ್ ಸ್ಥಾವರ ಮತ್ತು ಕಲ್ಲಿದ್ದಲು ಜೆಟ್ಟಿ-I ನಿಂದ ಕಲ್ಲಿದ್ದಲು ಸ್ಟಾಕ್ಯಾರ್ಡ್ಗೆ ಲಿಂಕ್ ಕನ್ವೇಯರ್ ಸಿಸ್ಟಮ್ಗೆ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಅಡಿಪಾಯ ಹಾಕಿದರು. ಹೆಚ್ಚುವರಿಯಾಗಿ, ಬಂದರಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳ ಅಡಿಯಲ್ಲಿ ಡಿ-ಅಡಿಕ್ಷನ್ ಸೆಂಟರ್ ಮತ್ತು ಮುಥಿಯಾಪುರಂ ಸೇತುವೆಯಲ್ಲಿ ಜಾಗೃತಿ ಕಲಾಕೃತಿಗಳಂತಹ ಯೋಜನೆಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು.

ಗ್ರೀನ್ ಇನ್ಫ್ರಾ-ರಿನ್ಯೂವಬಲ್ ಎನರ್ಜಿ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್, ರಿನ್ಯೂ ಇ-ಫ್ಯುಯೆಲ್ಸ್ ಪ್ರೈವೇಟ್ ಲಿಮಿಟೆಡ್, ಮತ್ತು ಆಮ್ಪ್ಲಸ್ ಗಂಗಾ ಸೋಲಾರ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಭೂ ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಕೇಂದ್ರ ಸಚಿವ ಶ್ರೀ ಸೋನೊವಾಲ್ ಅವರು ವೀಕ್ಷಿಸಿದರು. ಈ ಪ್ರದೇಶದಲ್ಲಿ ಸುಸ್ಥಿರ ಶಕ್ತಿಯನ್ನು ಅಭಿವೃದ್ಧಿಪಡಿಸುವ ಕಡೆಗೆ ಈ ಉಪಕ್ರಮ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಶ್ರೀ ಸೋನೊವಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ , ಅಂದರೆ, ಹಣಕಾಸು 2024-25 ರಲ್ಲಿ 50 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಗುರಿಯೊಂದಿಗೆ, ಮಹತ್ವಾಕಾಂಕ್ಷೆಯ ಅಭಿಯಾನ'ಮಿಷನ್ 50' ರನ್ನು ಪ್ರಾರಂಭಿಸಿದರು, ಈ ಗುರಿಯನ್ನು ಸಾಧಿಸಲು ಎಲ್ಲಾ ಕಾರ್ಮಿಕರು ಮತ್ತು ಮಧ್ಯಸ್ಥಗಾರರಿಗೆ ತಮ್ಮ ಅತ್ಯುತ್ತಮ ರೀತಿಯಲ್ಲಿ ಕೊಡುಗೆ ನೀಡಲು ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಕರೆ ನೀಡಿದರು. ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಅಭಿಯಾನದ “ತಾಯಿಯ ಹೆಸರಲ್ಲಿ ಒಂದು ಮರ (ಏಕ್ ಪೆಡ್ ಮಾ ಕೆ ನಾಮ್)” ಭಾಗವಾಗಿ ವಿಒಸಿ ಬಂದರಿನ ಪರಿಸರದಲ್ಲಿ ನೆಡುತೋಪುಗಾಗಿ ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಚಾಲನೆ ನಡೆಸಿದರು.

ಹೊಸ ಹಸಿರು ಹೈಡ್ರೋಜನ್ ಪ್ರದರ್ಶನ ಯೋಜನೆ ಮತ್ತು 400 ಕೆಡಬ್ಲ್ಯೂ ಛಾವಣಿಯ ಸೌರ ವಿದ್ಯುತ್ ಸ್ಥಾವರದ ಮೂಲಕ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ವಿಒಸಿ ಬಂದರಿನ ಪ್ರಾಧಿಕಾರ ಮಾಡಿದ ಪ್ರಯತ್ನವನ್ನು ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಶ್ಲಾಘಿಸಿದರು. “ಭಾರತವನ್ನು ಹಸಿರು ಹೈಡ್ರೋಜನ್ ನ ಜಾಗತಿಕ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಕ್ರಿಯಾತ್ಮಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀಯವರ ದೃಷ್ಟಿಕೋನಕ್ಕೆ ಈ ಉಪಕ್ರಮಗಳು ಅನುಗುಣವಾಗಿವೆ. ಈ ಯೋಜನೆಗಳು ಹೊಸ ಹೂಡಿಕೆಗಳನ್ನು ಆಕರ್ಷಿಸುತ್ತವೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಉದ್ದೇಶಗಳನ್ನು ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಎಂದು ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು.

ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಿ.ಎಸ್.ಆರ್. ಉಪಕ್ರಮಗಳ ಮೂಲಕ, ವಿವಿಧ ವಿಧಾನಗಳ ಮೂಲಕ ಮರಳಿ ಸಮಾಜಕ್ಕೆ ನೀಡಲು ಮಾಡಿರುವ ಪ್ರಯತ್ನ, ಬಂದರಿನ ಬದ್ಧತೆಯನ್ನು ಸಚಿವರು ವಿವರಿಸಿದರು. ಡಿ-ಅಡಿಕ್ಷನ್ ಸೆಂಟರ್ ಮತ್ತು ಮುಥಿಯಾಪುರಂ ಸೇತುವೆಯ ಕಲಾಕೃತಿಯಂತಹ ಉಪಕ್ರಮಗಳ ಪ್ರಾರಂಭವು ಸ್ಥಳೀಯ ಕಲ್ಯಾಣಕ್ಕೆ ಬಂದರಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. "ಸಮುದಾಯಗಳ ಯೋಗಕ್ಷೇಮವು ರಾಷ್ಟ್ರೀಯ ಅಭಿವೃದ್ಧಿಗೆ ಅವಿಭಾಜ್ಯವಾಗಿದೆ, ಮತ್ತು ವಿ.ಒ.ಸಿ. ಬಂದರು ಪ್ರಾಧಿಕಾರವು ಈ ಪ್ರದೇಶದ ಜನರ ಜೀವನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನೋಡಲು ನನಗೆ ಸಂತೋಷವಾಗಿದೆ" ಎಂದು ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು. 

ವಿಒಸಿ ಬಂದರು ಪಾಧಿಕಾರದ ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್ ಅನ್ನುಜೆ.ಎಂ. ಬಕ್ಷಿ ಸಂಸ್ಥೆ ನಿರ್ವಹಿಸುತ್ತದೆ. ಇದು 14.20 ಮೀಟರ್ಗಳ ತಳಮಟ್ಟವನ್ನು ಹೊಂದಿದೆ, ಒಟ್ಟಾರೆ ಉದ್ದ 370 ಮೀಟರ್, ಮತ್ತು ಬರ್ತ್ ಮತ್ತು ಬ್ಯಾಕಪ್ ಪ್ರದೇಶವನ್ನು ಒಳಗೊಂಡಂತೆ 10 ಹೆಕ್ಟೇರ್ಗಳನ್ನು ವ್ಯಾಪಿಸಿದೆ. ಟರ್ಮಿನಲ್ 6 ಟಿ.ಇ.ಯು. (ಇಪ್ಪತ್ತು ಅಡಿ ಸಮಾನ ಘಟಕಗಳು) ಕಂಟೈನರ್ಗಳನ್ನು ನಿರ್ವಹಿಸಲು ಸಜ್ಜುಗೊಂಡಿದೆ, ಇದು ಬಂದರಿನ ಸರಕು ನಿರ್ವಹಣೆ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

“ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್ ನ ಸಮರ್ಪಣೆಯು ಭಾರತದ ಕಡಲ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ, ಆಧುನಿಕ, ಸುಸ್ಥಿರ ಮೂಲಸೌಕರ್ಯದ ನಮ್ಮ ದೃಷ್ಟಿಕೋನಕ್ಕೆ ಅನುಯೋಜ್ಯವಾಗಿ ಹೊಂದಿಕೆಯಾಗುತ್ತದೆ. ಇಂದು ಪ್ರಾರಂಭಿಸಲಾದ ಹಸಿರು ಶಕ್ತಿ ಉಪಕ್ರಮಗಳು ಮತ್ತು ಸಮುದಾಯ-ಕೇಂದ್ರಿತ ಯೋಜನೆಗಳೊಂದಿಗೆ, ನಮ್ಮ ಬಂದರುಗಳ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರದೇಶ ಮತ್ತು ರಾಷ್ಟ್ರಕ್ಕೆ ಆರ್ಥಿಕ ಪ್ರಗತಿಗೆ ಚಾಲನೆ ನೀಡುತ್ತದೆ ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ  ರಾಜ್ಯ ಸಚಿವರಾದ ಶ್ರೀ ಶಾಂತನು ಠಾಕೂರ್ ಅವರು ಹೇಳಿದರು.  
 
ವಿ.ಒ.ಸಿ. ಬಂದರು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸುಸಂತ ಕುಮಾರ್ ಪುರೋಹಿತ್ ಅವರು ಸಮಾರಂಭದಲ್ಲಿ ಭಾಗವಹಿಸಿದವರನ್ನು ಸ್ವಾಗತಿಸಿದರು ಮತ್ತು ಬಂದರಿನ ಪ್ರಸ್ತುತ ಸಾಮರ್ಥ್ಯ ವರ್ಧನೆಯ ಯೋಜನೆಗಳನ್ನು ವಿವರಿಸಿದರು, ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು. ತೂತುಕುಡಿ ಕ್ಷೇತ್ರದ ಸಂಸದರಾದ ಶ್ರೀಮತಿ ಕನಿಮೋಳಿ ಕರುಣಾನಿಧಿ, ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

 

*****
 



(Release ID: 2055589) Visitor Counter : 14


Read this release in: English , Urdu , Hindi , Tamil , Telugu