ಉಕ್ಕು ಸಚಿವಾಲಯ
ಉಕ್ಕು ಸಚಿವಾಲಯವು ರಾಷ್ಟ್ರವ್ಯಾಪಿ ಕಾರ್ಯಕ್ರಮಗಳೊಂದಿಗೆ "ಸ್ವಚ್ಛತಾ ಹೀ ಸೇವಾ 2024" ಅಭಿಯಾನವನ್ನು ಪ್ರಾರಂಭಿಸಲಿದೆ
Posted On:
16 SEP 2024 5:57PM by PIB Bengaluru
ಕೇಂದ್ರ ಉಕ್ಕು ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಮತ್ತು ಸಹಾಯಕ ಸಚಿವ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರ ನೇತೃತ್ವದಲ್ಲಿ ಉಕ್ಕು ಸಚಿವಾಲಯವು "ಸ್ವಚ್ಛತಾ ಹೀ ಸೇವಾ 2024" ಅಭಿಯಾನದ ಭಾಗವಾಗಿ ಸರಣಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಚಟುವಟಿಕೆಗಳು ಅನೇಕ ಸ್ಥಳಗಳಲ್ಲಿ ನಡೆಯಲಿದ್ದು, ಸ್ವಚ್ಛತೆ, ಸುಸ್ಥಿರತೆ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತವೆ. ಉಕ್ಕು ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್, ಐಎಎಸ್, ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಚ್ಛತಾ ಪ್ರಯತ್ನಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಉಪಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಉದ್ಯೋಗ ಭವನದಲ್ಲಿ ಸ್ವಚ್ಛತಾ ಪ್ರತಿಜ್ಞೆ: 2024 ರ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 11:00 ಗಂಟೆಗೆ, ಹೊಸದಿಲ್ಲಿಯ ಉದ್ಯೋಗ ಭವನದ ಸ್ಟೀಲ್ ರೂಮ್ ನಲ್ಲಿ ಸ್ವಚ್ಛತಾ ಪ್ರತಿಜ್ಞೆಯನ್ನು ಕೈಗೊಳ್ಳಲಾಗುವುದು. ಅಭಿಯಾನದ ಆರಂಭವನ್ನು ಸೂಚಿಸುವ ಸಮಾರಂಭದಲ್ಲಿ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್-ಸೈಲ್) ಮತ್ತು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಸಹಯೋಗದೊಂದಿಗೆ, ದಿಲ್ಲಿಯಾದ್ಯಂತ ಪ್ರಮುಖ ಪ್ರವಾಸಿ ತಾಣಗಳಿಗೆ ಸ್ವಚ್ಛತೆಯನ್ನು ಸುಧಾರಿಸಲು 100 ದೊಡ್ಡ ಕಸದ ಬುಟ್ಟಿಗಳನ್ನು ವಿತರಿಸಲಾಗುವುದು.
ಭಿಲಾಯ್ ಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ - ಉಕ್ಕು ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು 2024 ರ ಸೆಪ್ಟೆಂಬರ್ 17 ರಂದು ಭಿಲಾಯ್ ಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಿಡ ನೆಡುವಿಕೆ, ಸ್ವಚ್ಛತಾ ಅಭಿಯಾನ, ಸಮುದಾಯ ತಲುಪುವಿಕೆ, ಶಾಲಾ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳು ಮತ್ತು ಸ್ವಚ್ಛತೆಗಾಗಿ ಸಾರ್ವಜನಿಕ ಪ್ರತಿಜ್ಞೆ ಒಳಗೊಂಡಿರುತ್ತದೆ.
ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ (ಕೆಐಒಸಿಎಲ್ ಸ್ಥಾವರ) – 2024ರ ಸೆಪ್ಟೆಂಬರ್ 28 ರಂದು ಉಕ್ಕು ಸಚಿವರು ಕೆಐಒಸಿಎಲ್ ನ ಮಂಗಳೂರು ಘಟಕದಲ್ಲಿ ಗಿಡ ನೆಡುವಿಕೆ, ಸ್ವಚ್ಚತಾ ಅಭಿಯಾನ, ಸಮುದಾಯ ಸಂವಾದ, ಶಾಲಾ ಉಪಕ್ರಮಗಳು ಮತ್ತು ಸ್ವಚ್ಛತಾ ಪ್ರತಿಜ್ಞೆ ಸಮಾರಂಭ ಸೇರಿದಂತೆ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಆಂಧ್ರಪ್ರದೇಶದ ನರಸಪುರಂನಲ್ಲಿ ಗಿಡ ನೆಡುವಿಕೆ ಮತ್ತು ಸ್ವಚ್ಚತಾ ಅಭಿಯಾನ - ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಹಾಯಕ ಸಚಿವ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು 2024 ರ ಸೆಪ್ಟೆಂಬರ್ 20 ಮತ್ತು 2024 ರ ಅಕ್ಟೋಬರ್ 2 ರಂದು ನರಸಪುರಂನಲ್ಲಿ ಗಿಡ ನೆಡುವಿಕೆ ಮತ್ತು ಸ್ವಚ್ಚತಾ ಅಭಿಯಾನದ ನೇತೃತ್ವ ವಹಿಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಪ್ರತಿಜ್ಞೆ ಸಮಾರಂಭದ ಮೂಲಕ ಸ್ವಚ್ಚತೆಯ ಬದ್ಧತೆಯ ಜೊತೆಗೆ ಸಮುದಾಯ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳು ಮತ್ತು ಶಾಲಾ ಕಾರ್ಯಕ್ರಮಗಳು ಸೇರಿವೆ.
ಸ್ವಚ್ಛತಾ ಓಟ ಮತ್ತು ಉಕ್ಕು ಕಾರ್ಯದರ್ಶಿ ಅವರಿಂದ ಸನ್ಮಾನ ಸಮಾರಂಭ - 2024 ರ ಸೆಪ್ಟೆಂಬರ್ 21 ರಂದು ಹೊಸದಿಲ್ಲಿಯ ಚಾಣಕ್ಯಪುರಿಯ ನೆಹರೂ ಪಾರ್ಕ್ ನಲ್ಲಿ ಉಕ್ಕು ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಅವರು ಸ್ವಚ್ಛತಾ ಓಟದ ನೇತೃತ್ವ ವಹಿಸಲಿದ್ದಾರೆ. ಇದರ ನಂತರ 2024 ರ ಅಕ್ಟೋಬರ್ 2 ರಂದು ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸ್ವಚ್ಛತೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಸಫಾಯಿ ಮಿತ್ರರು ಮತ್ತು ಸುರಕ್ಷಾ ಮಿತ್ರರನ್ನು ಗುರುತಿಸಿ ಗೌರವಿಸಲಾಗುವುದು.
ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ಭಾರತದ ಕಡೆಗೆ ರಾಷ್ಟ್ರವ್ಯಾಪಿ ಪ್ರಯತ್ನದ ಭಾಗವಾಗಲು ಉಕ್ಕು ಸಚಿವಾಲಯ ಹೆಮ್ಮೆಪಡುತ್ತದೆ. ಈ ಉಪಕ್ರಮಗಳನ್ನು ಸಾಮೂಹಿಕ ಕ್ರಿಯೆಯನ್ನು ಪ್ರೇರೇಪಿಸಲು ಮತ್ತು ಸಾರ್ವಜನಿಕ ಸ್ಥಳಗಳನ್ನು ನಿರ್ವಹಿಸುವಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
*****
(Release ID: 2055490)
Visitor Counter : 58