ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ದೂರದರ್ಶನದ 65 ವರ್ಷಗಳ ಸಂಭ್ರಮ: ಭಾರತದ ಸಾರ್ವಜನಿಕ ಸೇವಾ ಪ್ರಸಾರಣ ಸಂಸ್ಥೆ


65ನೇ ವಾರ್ಷಿಕೋತ್ಸವ ಆಚರಣೆ ನಿಮಿತ್ತ “ದಿಲ್ ಸೆ ದೂರದರ್ಶನ್, ಡಿಡಿ@65” ಎಂಬ ವಿಶೇಷ ಕಾರ್ಯಕ್ರಮವು 15ನೇ ಸೆಪ್ಟೆಂಬರ್, 2024 ರಂದು ಬೆಳಗ್ಗೆ 10.00 ಗಂಟೆಗೆ ಪ್ರಸಾರವಾಗಲಿದೆ ಮತ್ತು ರಾತ್ರಿ 8.00 ಗಂಟೆಗೆ ಡಿಡಿ ನ್ಯಾಷನಲ್ ನಲ್ಲಿ ಮರು ಪ್ರಸಾರವಾಗಲಿದೆ

Posted On: 13 SEP 2024 6:10PM by PIB Bengaluru

ದೂರದರ್ಶನ, ಭಾರತದ ಸಾರ್ವಜನಿಕ ಸೇವಾ ಪ್ರಸಾರಕ ಸಂಸ್ಥೆಯು ಈ ವರ್ಷ ತನ್ನ ಸಂಸ್ಥಾಪನೆಯ 65 ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ದೂರದರ್ಶನವು, ಸೆಪ್ಟೆಂಬರ್ 15, 1959 ರಂದು ಪ್ರಾರಂಭವಾದಾಗಿನಿಂದ, ರಾಷ್ಟ್ರದ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದು, ಏಕತೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ಪೋಷಿಸುವ ಭಾರತೀಯ ಮಾಧ್ಯಮ ವ್ಯವಸ್ಥೆಯ ಮೂಲಾಧಾರವಾಗಿ ಬೆಳೆದಿದೆ.

ದೆಹಲಿಯಲ್ಲಿ ಪ್ರಾಯೋಗಿಕ ಪ್ರಸಾರದೊಂದಿಗೆ ಸರಳ ಆರಂಭದಿಂದ, ಇಂದು ವಿಶ್ವದ ಅತಿದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿ ದೂರದರ್ಶನ ಬೆಳೆದಿದೆ. ದಶಕಗಳಲ್ಲಿ, ಇದು ಸಾರ್ವಜನಿಕ ಸೇವೆಯ ಪ್ರಸಾರಕ್ಕೆ ತನ್ನ ಬದ್ಧತೆಯನ್ನು ಅಚಲವಾಗಿ ಉಳಿಸಿಕೊಂಡು, ಅಧುನಿಕತೆ, ತಂತ್ರಜ್ಞಾನ ಮತ್ತು ಪ್ರೇಕ್ಷಕರ ಪಾಲ್ಗೊಳ್ಳುವಿಕೆಯಲ್ಲಿ ಅನೇಕ ಮಹತ್ತರ ರೂಪಾಂತರಗಳಿಗೆ ಸಾಕ್ಷಿಯಾಗಿ ನಿಂತಿದೆ. ಕಪ್ಪು ಮತ್ತು ಬಿಳಿ ದೂರದರ್ಶನ ದೃಶ್ಯ-ಶ್ರಾವ್ಯ ಪ್ರಸಾರದ ದಿನಗಳಿಂದ ಡಿಜಿಟಲ್ ಮತ್ತು ಉಪಗ್ರಹ ಪ್ರಸಾರದ ಇಂದಿನ ಯುಗದವರೆಗೆ, ದೂರದರ್ಶನ ತನ್ನ ವೈವಿಧ್ಯಮಯ ಬೆಳವಣಿಗೆಯ ಹಾದಿಯಲ್ಲಿ, ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಗಳು ಮತ್ತು ಆದ್ಯತೆಗಳನ್ನು ಪೂರೈಸಲು ನಿರಂತರವಾಗಿ ಪ್ರವರ್ತಿಸಿಗೊಂಡಿದೆ. ಕಪ್ಪು ಮತ್ತು ಬಿಳಿ ದೃಶ್ಯ-ಶ್ರಾವ್ಯ ಪ್ರಸರಣದ ಯುಗದಿಂದ ದೂರದರ್ಶನ ಇಂದು 35 ಚಾನಲ್ ಗಳ ಬಳಗವಾಗಿ ಬೆಳೆದು - 6 ರಾಷ್ಟ್ರೀಯ ಚಾನೆಲ್ ಗಳು, 28 ಪ್ರಾದೇಶಿಕ ಚಾನಲ್ ಗಳು ಮತ್ತು 1 ಅಂತರರಾಷ್ಟ್ರೀಯ ಚಾನೆಲ್ ಮೂಲಕ ತನ್ನದೇ ಆದ ಭಾಷೆಯ ಛಾಪನ್ನು ತನ್ನ ಪ್ರೇಕ್ಷಕ ವೃಂದಕ್ಕೆ ನೀಡುತ್ತಿದೆ; ದೇಶದ ಪ್ರವರ್ತಕ ಸಾರ್ವಜನಿಕ ಸೇವಾ ಪ್ರಸಾರಣದ ಬದ್ಧತೆಯೊಂದಿಗೆ ದೂರದರ್ಶನ ತನ್ನ ಪ್ರಯಾಣವನ್ನು ಹೆಮ್ಮೆಯಿಂದ ಮುಂದುವರೆಸಿದೆ. 

65 ವರ್ಷಗಳ ಸೇವೆಯನ್ನು ಪ್ರತಿಬಿಂಬಿಸುತ್ತದೆ

ಕಳೆದ 65 ವರ್ಷಗಳಲ್ಲಿ, ದೂರದರ್ಶನವು ಭಾರತದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಪೌರಾಣಿಕ ಮಹಾಕಾವ್ಯಗಳಾದ "ರಾಮಾಯಣ" ಮತ್ತು "ಮಹಾಭಾರತ" ದಿಂದ ಜನಪ್ರಿಯ ದಾರವಾಹಿಗಳಾದ "ಚಿತ್ರಹಾರ್," "ಸುರಭಿ," ಮತ್ತು "ಹಮ್ ಲೋಗ್" ವರೆಗೆ ಹಲವು ತಲೆಮಾರುಗಳನ್ನು ವ್ಯಾಖ್ಯಾನಿಸಬಹುದಾದ ಹಲವಾರು ಅಪ್ರತಿಮ ಹಾಗೂ ಅನನ್ಯ ಕಾರ್ಯಕ್ರಮಗಳಿಗೆ ದೂರದರ್ಶನ ವೇದಿಕೆಯಾಗಿದೆ. ದೂರದರ್ಶನವು ಸಾಂಸ್ಕೃತಿಕ ವಿನಿಮಯಕ್ಕೆ ಜಾಗವನ್ನು ಒದಗಿಸಿದೆ. ಗ್ರಾಮೀಣ ಭಾರತವನ್ನು ಮತ್ತು ನಗರ ಭಾರತವನ್ನು ಪರಸ್ಪರ ಹತ್ತಿರಕ್ಕೆ ತಂದಿದೆ. ವಿವಿಧ ಶೈಕ್ಷಣಿಕ ಮತ್ತು ತಿಳಿವಳಿಕೆ –ಅರಿವು ಮೂಡಿಸುವ ಜ್ಞಾನಾರ್ಜನೆಯ ಕಾರ್ಯಕ್ರಮಗಳ ಮೂಲಕ ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ದೂರದರ್ಶನ ಸಾಮಾಜಿಕ ಜಾಗೃತಿ ಮೂಡಿಸಿದೆ.

ವಾರ್ಷಿಕೋತ್ಸವವನ್ನು ಆಚರಿಸಲು “ದಿಲ್ ಸೆ ದೂರದರ್ಶನ, ಡಿಡಿ @65” - ವಿಶೇಷ ಕಾರ್ಯಕ್ರಮ

ಅಭಿವೃದ್ಧಿಯ ಹಾದಿಯಲ್ಲಿ, ಈ ಐತಿಹಾಸಿಕ ಮೈಲಿಗಲ್ಲಾದ ನೆನಪಿಗಾಗಿ, ಡಿಡಿ ನ್ಯಾಷನಲ್ ವಿಶೇಷ ಕಾರ್ಯಕ್ರಮ “ದಿಲ್ ಸೇ ದೂರದರ್ಶನ, ಡಿಡಿ@65” ಅನ್ನು ಪ್ರಸಾರ ಮಾಡಲಿದೆ.  ಹೆಸರಾಂತ ಮಾಸ್ಟರ್ ಶ್ರೀ ಜೈವೀರ್ ಬನ್ಸಾಲ್ ಮತ್ತು ಶ್ರೀ ಅನಿಲ್ ಸಿಂಗ್ ಆಯೋಜಿಸುವ ಭವ್ಯವಾದ ಕಾರ್ಯಕ್ರಮ ನಡೆಯಲಿದೆ. ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಅಂತಾರಾಷ್ಟ್ರೀಯ ಜಾದೂಗಾರ ಮತ್ತು ಪ್ರಖ್ಯಾತ ಮೆಂಟಲಿಸ್ಟ್ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಹೊಂದಿರುವ ಕಲಾವಿದ ಶ್ರೀ ಪ್ರಮೋದ್ ಕುಮಾರ್ ಅವರಂತಹವರ ಪ್ರದರ್ಶನಗಳನ್ನು ಕಾರ್ಯಕ್ರಮ ಒಳಗೊಂಡಿದೆ. ಇದರ ಜೊತೆಗೆ ಬಾಂಬೆಯ ಐಡಿಸಿ ಐಐಟಿಯ ಹಳೆಯ ವಿದ್ಯಾರ್ಥಿ, ದೇಶದ ಅತ್ಯಂತ ನಿಪುಣ ಮರಳು ಕಲಾವಿದರಲ್ಲಿ ಒಬ್ಬರಾದ, 13 ವರ್ಷಗಳಿಂದ ಮರಳು ಕಲೆಯನ್ನು ಪ್ರದರ್ಶಿಸುತ್ತಿರುವ ಮತ್ತು ಭಾರತದ ಮೊದಲ ಮಹಿಳಾ ಮರಳು ಕಲಾವಿದರಾಗಿರುವ ಕುಮಾರಿ ಮನಿಶಾ ಸ್ವರ್ಣಕರ್ (ಮರಳು ಕಲಾವಿದೆ) ಅವರ ಕೌಶಲ್ಯ ಪ್ರದರ್ಶನ  ನಡೆಯಲಿದೆ.

ತನ್ನ ಅಭಿನಯ-ಹಾಡು – ಸಂಗೀತ ಮೂಲಕ ದಶಕಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಬಾಲಿವುಡ್ ಹಾಡುಗಾರ , ಅತ್ಯಂತ ಜನಪ್ರಿಯ ಕಲಾವಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಕೈಲಾಶ್ ಖೇರ್ ಅವರು "ದಿಲ್ ಸೆ ದೂರದರ್ಶನ, ಡಿಡಿ@65" ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ. ಅವರ ಸಂಗೀತ ಶೈಲಿಯು ಭಾರತೀಯ ಜಾನಪದ ಸಂಗೀತ ಮತ್ತು ಸೂಫಿ ಸಂಗೀತದಿಂದ ಹೆಚ್ಚು ಪ್ರಭಾವಿತವಾಗಿದೆ. ದೂರದರ್ಶನ ಕಾರ್ಯಕ್ರಮದ ರೀಲ್ ಗಳಿಗೆ ಧ್ವನಿನೀಡುವ ಕಾರ್ಯವನ್ನು ಮನೋಜ್ಞ ನಟ ಶ್ರೀ ಮನೋಜ್ ಬಾಜ್ಪೇಯಿ ಅವರು ಮಾಡಿದ್ದಾರೆ.

ದೂರದರ್ಶನದ 65ನೇ ವಾರ್ಷಿಕೋತ್ಸವದಂದು ಅತ್ಯುತ್ತಮ ಪ್ರದರ್ಶನಗಳ ಪೂರ್ವ ತಯಾರಿಯೊಂದಿಗೆ ಡಿಡಿ ನ್ಯಾಷನಲ್ ತನ್ನ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ಸಿದ್ಧವಾಗಿದೆ. ಈ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಬೆಳಗ್ಗೆ 10.00 ಗಂಟೆಗೆ ಪ್ರಸಾರವಾಗಲಿದೆ ಮತ್ತು ರಾತ್ರಿ 8.00 ಕ್ಕೆ ಮರು ಪ್ರಸಾರವಾಗಲಿದೆ. ದೂರದರ್ಶನದ ಶ್ರೀಮಂತ ಪರಂಪರೆಯ 65ನೇ ವಾರ್ಷಿಕೋತ್ಸವ ಆಚರಣೆಯನ್ನು ಡಿಡಿ ನ್ಯಾಷನಲ್ ಮೂಲಕ ವೀಕ್ಷಿಸಬಹುದು.

ರಾಷ್ಟ್ರಕ್ಕೆ ಬದ್ಧತೆಯ ವಾಗ್ದಾನ

66ನೇ ವಾರ್ಷಿಕೋತ್ಸವದ ಮಹತ್ವದ ಸಂದರ್ಭದಲ್ಲಿ, ಭಾರತದ ಪ್ರತಿಯೊಬ್ಬ ನಾಗರಿಕರಿಗೂ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸುದ್ದಿಯನ್ನು ಒದಗಿಸುವ ತನ್ನ ಧ್ಯೇಯಕ್ಕೆ ಅಚಲವಾದ ತನ್ನ ಬದ್ಧತೆಯನ್ನು ಈ ಮೂಲಕ ದೂರದರ್ಶನ ನೀಡುತ್ತದೆ. ಟೆಲಿವಿಷನ್ ನಿಂದ ಮೊಬೈಲ್ ಫೋನ್ಗಳವರೆಗೆ – ಎಲ್ಲಾ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ತಲುಪಲು ಪ್ರಸಾರಕ(ಬ್ರಾಡ್ಕಾಸ್ಟರ್) ಸಂಸ್ಥೆಯಾಗಿ,  ತಾಂತ್ರಿಕ ಪ್ರಗತಿಯನ್ನು ಕಾಲಾಕಾಲಕ್ಕೆ ತಕ್ಕಂತೆ ಸ್ವೀಕರಿಸುವುದನ್ನು ದೂರದರ್ಶನ ಮುಂದುವರಿಸುತ್ತದೆ. ಸುದ್ದಿ, ಮನರಂಜನೆ ಮತ್ತು ಮಾಹಿತಿಯ ಸಂಬಂಧಿತ ಮತ್ತು ವಿಶ್ವಾಸಾರ್ಹ ಮೂಲವಾಗಿ ಸದಾ ಉಳಿದಿದೆ, ಮುಂದೆಯೂ ಉಳಿಯಲಿದೆ, ಉಳಿಸಿ - ಬೆಳೆಸಲಿದೆ ಎಂದು ದೂರದರ್ಶನ ಖಚಿತಪಡಿಸುತ್ತದೆ.

ಮುಂದಿನ ಹೆಜ್ಜೆ

ದೂರದರ್ಶನ ತನ್ನ 66 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಹೊಸತನ, ಸೇರ್ಪಡೆ ಮತ್ತು ಸ್ಫೂರ್ತಿಯ ಪ್ರಯಾಣವನ್ನು ಹೊಸ ಹುರುಪಿನೊಂದಿಗೆ ಮುಂದುವರಿಸಲು ಸಿದ್ಧವಾಗಿದೆ. ದೂರದರ್ಶನದ ಶ್ರೀಮಂತ ಇತಿಹಾಸ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣೆಯ ಬದ್ಧತೆಯೊಂದಿಗೆ, ದೂರದರ್ಶನವು ಭಾರತದ ವೈವಿಧ್ಯತೆ, ಪರಂಪರೆ ಮತ್ತು ಪ್ರಗತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ.

 

*****



(Release ID: 2054821) Visitor Counter : 21