ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೆಮಿಕಾನ್ ಇಂಡಿಯಾ ಒಂದು ಕಾರ್ಯತಂತ್ರವಾಗಿದ್ದು, ಎಲ್ಲಾ ಪ್ರಮುಖ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ವಲಯಕ್ಕೆ ವೇದಿಕೆ ಒದಗಿಸಲಿದೆ; ಶ್ರೀ ಆಕಾಶ್ ತ್ರಿಪಾಠಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭಾರತೀಯ ಸೆಮಿಕಂಡಕ್ಟರ್ ಮಿಷನ್
2024 ರ ಸೆಪ್ಟೆಂಬರ್ 11 ರಿಂದ 13 ರ ವರೆಗೆ ನಡೆಯಲಿರುವ ಸೆಮಿಕಾನ್ ಇಂಡಿಯಾದಲ್ಲಿ 2024 ನಲ್ಲಿ ವಿವಿಧ 24 ದೇಶಗಳ 250 ಕ್ಕೂ ಅಧಿಕ ಕಂಪೆನಿಗಳು ಭಾಗಿ
ಭಾರತೀಯ ಸೆಮಿ ಕಂಡಕ್ಟರ್ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಲಿರುವ ಸೆಮಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಜಿತ್ ಮನೋಚ
ಭಾರತ್ ಮಂಟಪಂ ನಲ್ಲಿ ಸೆಪ್ಟೆಂಬರ್ 10 ರಂದು ಸೆಮಿಕಂಡಕ್ಟರ್ ಕಾರ್ಯಕಾರಿಗಳ ಶೃಂಗಸಭೆ ಆಯೋಜನೆ: ಉತ್ತಮ ಅಭ್ಯಾಸಗಳ ಕುರಿತ ಚರ್ಚೆಯಲ್ಲಿ ತೊಡಗಲು ವೇದಿಕೆ
Posted On:
09 SEP 2024 9:00PM by PIB Bengaluru
ದೆಹಲಿ ಎನ್.ಸಿ.ಆರ್ ನ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸೋಪೊಸೀಷನ್ ಮಾರ್ಟ್ ಲಿಮಿಟೆಡ್ [ಐಇಎಂಎಲ್] ನಲ್ಲಿ 2024 ರ ಸೆಪ್ಟೆಂಬರ್ 11 ರಿಂದ 13 ರ ವರೆಗೆ ಸೆಮಿಕಾನ್ 2024 ಶೃಂಗಸಭೆ ನಡೆಯಲಿದ್ದು, ಭಾರತದ ಸೆಮಿಕಂಡಕ್ಟರ್ ಭೂಸದೃಶ್ಯದ ಪರಿವರ್ತನೆಗೆ ವೇದಿಕೆ ಸನ್ನದ್ಧವಾಗಿದೆ. ಜಾಗತಿಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಬಲಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಸೆಮಿಕಂಡಕ್ಟರ್ ನಾಯಕರು, ನೀತಿ ನಿರೂಪಕರು, ನಾವೀನ್ಯಕಾರರು ಮತ್ತು ಶಿಕ್ಷಣ ತಜ್ಞರನ್ನು ನಿರ್ಣಾಯಕ ಚೆರ್ಚೆ ನಡೆಸಲು ಒಗ್ಗೂಡಿಸುತ್ತಿದೆ. ಚತುರ ಉತ್ಪಾದನೆ, ಪೂರೈಕೆ ಸರಪಳಿಯ ನಿರ್ವಹಣೆ, ಸುಸ್ಥಿರತೆ ಮತ್ತು ಶ್ರಮಶಕ್ತಿಯ ಅಭಿವೃದ್ಧಿ ಕುರಿತಂತೆ ಇತ್ತೀಚಿನ ವಿಧಾನಗಳ ಕುರಿತು ನಾವೀನ್ಯಕಾರರು ಮೌಲ್ಯಯುತ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.
ಸೆಮಿಕಾನ್ ಇಂಡಿಯಾ” ಭಾರತದ ಸೆಮಿಕಂಡಕ್ಟರ್ ಭವಿಷ್ಯ ರೂಪಿಸಲಿದೆ
ಸೆಮಿ ಮತ್ತು ಭಾರತೀಯ ಸೆಲ್ಯುಲರ್ ಹಾಗೂ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ [ಐಸಿಇಎ] ಜಂಟಿಯಾಗಿ ಈ ಶೃಂಗ ಸಭೆ ಆಯೋಜಿಸಿದ್ದು, ಈ ಕುರಿತು ಮಾಹಿತಿ ನೀಡಿದ ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ [ಐಎಸ್ಎಂ] ಸಿಇಒ ಶ್ರೀ ಆಕಾಶ್ ತ್ರಿಪಾಠಿ, ಇದು ಕಾರ್ಯತಂತ್ರದ ಕಾರ್ಯಕ್ರಮವಾಗಿದ್ದು, ಎಲ್ಲಾ ಪ್ರಮುಖ ಸೆಮಿಕಂಡಕ್ಟರ್ ಪೂರೈಕೆದಾರರಿಗೆ ವೇದಿಕೆ ಒದಗಿಸಲಿದೆ. 24 ದೇಶಗಳ 250 ಕ್ಕೂ ಅಧಿಕ ಕಂಪೆನಿಗಳು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದು, ಈ ನಿರ್ಣಾಯಕ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಈ ಶೃಂಗಸಭೆ ಅನಾವರಣಗೊಳಿಸಲಿದೆ. ಈ ಕಂಪನಿಗಳು ಸಂಪೂರ್ಣ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ವ್ಯಾಪಿಸಿದೆ, ಉಪಕರಣ ತಯಾರಕರಿಂದ ಫ್ಯಾಬ್‌ಗಳವರೆಗೆ, ವ್ಯಾಪಾರದಿಂದ ವ್ಯಾಪಾರದ ಪರಸ್ಪರ ಕ್ರಿಯೆಗೆ ಮತ್ತು ಹೊಸ ಪಾಲುದಾರಿಕೆಗಳನ್ನು ರೂಪಿಸಲು ಮಹತ್ವದ ಅವಕಾಶವನ್ನು ಪ್ರಸ್ತುತಪಡಿಸುತ್ತದೆ. “ಭಾರತದಲ್ಲಿ ಐದು ಸೆಮಿಕಂಡಕ್ಟರ್ ಯೋಜನೆಗಳು ನಿರ್ಮಾಣವಾಗುತ್ತಿದ್ದು, ಇವುಗಳಿಗೆ ಎಲ್ಲಾ ರೀತಿಯ ಪರಿಸರ ಪರಿಕರಗಳು ಪರಮೋಚ್ಛ ಅಗತ್ಯವಾಗಿವೆ. ಸೆಮಿಕಾನ್ ಇಂಡಿಯಾ ಖಚಿತವಾಗಿ ವ್ಯಾಪಾರದಿಂದ ವ್ಯಾಪರಸ್ಥರಿಗೆ ಸಂವಾದ ನಡೆಸಲು ಸೂಕ್ತ ಪರಿಸರ ಮತ್ತು ಸಹಭಾಗಿತ್ವ ಪಡೆಯಲು ವೇದಿಕೆ ಒದಗಿಸಲಿದೆ” ಎಂದು ಶ್ರೀ ತ್ರಿಪಾಠಿ ಒತ್ತಿ ಹೇಳಿದರು.
ಸೆಮಿಕಾನ್ ಇಂಡಿಯಾ 2024 ಕೇವಲ ಒಂದು ಕಾರ್ಯಕ್ರಮವಲ್ಲ. ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಜಾಗತಿಕ ಉತ್ಪಾದನಾ ತಾಣವಾಗಲಿದೆ. ಸರ್ಕಾರದ ಉಜ್ವಲ ನೀತಿಗಳು, ವೃದ್ಧಿಸುತ್ತಿರುವ ಹೂಡಿಕೆಗಳು ಮತ್ತು ಕಾರ್ಯತಂತ್ರ ಸಹಭಾಗಿತ್ವದಿಂದ ಭಾರತ ಜಾಗತಿಕ ಉತ್ಪಾದನಾ ವಲಯದಲ್ಲಿ ತನ್ನ ಒಳಮಾರ್ಗಗಳನ್ನು ರೂಪಿಸಿಕೊಳ್ಳಲಿದೆ.
ಪೂರಕ ಘಟನೆಗಳು: ವಿದ್ಯುನ್ಮಾನ ಮತ್ತು ಉತ್ಪಾದಕತೆಯ ಪ್ರದರ್ಶನ
ಸೆಮಿಕಾನ್ ಇಂಡಿಯಾವು ವಿದ್ಯುನ್ಮಾನ ಮತ್ತು ಉತ್ಪಾದಕತೆಯ ಕಾರ್ಯತಂತ್ರದ ಪ್ರದರ್ಶನವಾಗಿದ್ದು, ವಿದ್ಯುನ್ಮಾನ ಉತ್ಪಾದನೆ ಮತ್ತು ಸೆಮಿಕಂಡಕ್ಟರ್ ಗಳು ಪೂರಕ ಘಟಕಗಳಾಗಿವೆ. “ಸೆಮಿಕಂಡಕ್ಟರ್ ಗಳು ವಿದ್ಯುನ್ಮಾನ ಪರಿಸರ ವ್ಯವಸ್ಥೆಗೆ ಮತ್ತು ಕೈಗಾರಿಕೆ ಮತ್ತು ಬೆಳವಣಿಗೆಗಳೆರಡಕ್ಕೂ ಸಂಯೋಜನೆಯಾಗಿದೆ” ಎಂದು ಹೇಳಿದರು.
ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಒಂದು ಸಮಗ್ರ ವಿಧಾನ
ಜಾಗತಿಕ ಪೂರೈಕೆ ಸರಪಳಿಯ ವೈವಿಧ್ಯಮಯ ನಿರ್ಣಾಯಕ ಮಹತ್ವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಎದುರಾದ ಅಡೆತಡೆಗಳಿಂದ ಪಾಠ ಕಲಿತಿದ್ದೇವೆ. ಈ ನಿಟ್ಟಿನಲ್ಲಿ ಉಜ್ವಲ ಮತ್ತು ಸಮಗ್ರ ನೀತಿ ನಿರೂಪಣೆಯ ಚೌಕಟ್ಟು ಅಗತ್ಯವಾಗಿದೆ. ಭಾರತ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪ್ರತಿಯೊಂದು ವಿಭಾಗವನ್ನು ಬೆಂಬಲಿಸಲು ನೀತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೇವಲ ಫ್ಯಾಬ್‌ಗಳ ಮೇಲೆ ಕೇಂದ್ರೀಕರಿಸದೇ ಪ್ಯಾಕೇಜಿಂಗ್, ಡಿಸ್ಪ್ಲೇ ವೈರ್‌ಗಳು, ಒಎಸ್ಎಟಿಗಳು, ಸಂವೇದಕಗಳು ಮತ್ತು ಹೆಚ್ಚಿನವುಗಳನ್ನು ಇವು ಒಳಗೊಂಡಿವೆ ಎಂದರು.
ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಡಿ ಮೈಲುಗಲ್ಲು ನಿರ್ಮಿಸುವ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಈ ವಲಯ ನಿರ್ಣಾಯಕ ವೇಗ ಪಡೆದುಕೊಂಡಿದೆ. “ನಮ್ಮ ಮೊದಲ ಯೋಜನೆ ಮಿಕ್ರಾನ್, 22,000 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಅಂಗೀಕಾರ ನೀಡಲಾಗಿದೆ ಮತ್ತು ತೈವಾನ್ ನ ಧೋಲೆರಾದಲ್ಲಿರುವ ಪವರ್ ಚಿಪ್ ನೊಂದಿಗೆ ಟಾಟಾ ಜಂಟಿ ಪಾಲುದಾರಿಕೆ ಹೊಂದಿರುವುದು ಇದರ ಮತ್ತೊಂದು ಉದಾಹರಣೆಯಾಗಿದೆ” ಎಂದು ಶ್ರೀ ತ್ರಿಪಾಠಿ ಉಲ್ಲೇಖಿಸಿದರು. ಪ್ರಸ್ತುತ ಒಟ್ಟು 1.52 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಇಂತಹ ಐದು ಪ್ರಸ್ತಾವನೆಗಳಿವೆ.
ಭಾರತವು ಜಾಗತಿಕ ಸೆಮಿಕಂಡಕ್ಟರ್ ಶಕ್ತಿ ಕೇಂದ್ರವಾಗಲು ಸಿದ್ಧವಾಗಿದೆ
ಸೆಮಿ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷ ಶ್ರೀ ಅಜಿತ್ ಮನೋಚಾ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತವು ಜಾಗತಿಕ ಸೆಮಿಕಂಡಕ್ಟರ್ ಶಕ್ತಿ ಕೇಂದ್ರವಾಗಲು ಸಿದ್ಧವಾಗಿದೆ ಎಂದರು. ವಿನ್ಯಾಸ ಸಾಮರ್ಥ್ಯ, ದೊಡ್ಡ ಮಟ್ಟದ ಪ್ರತಿಭಾ ಶಕ್ತಿ ಮತ್ತು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿರುವುದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ತನ್ನ ಸ್ಥಾನವನ್ನು ವೃದ್ಧಿಸಿಕೊಳ್ಳಲು ಪ್ರಮುಖ ಅಂಶಗಳಾಗಿವೆ ಎಂದರು. ಇದಲ್ಲದೇ ಭಾರತ ಅತಿದೊಡ್ಡ ಪ್ರಜಾತಂತ್ರ ದೇಶವಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಮತ್ತು ಬೌದ್ಧಿಕ ಆಸ್ತಿ ರಕ್ಷಣೆಯಂತಹ ವ್ಯವಸ್ಥೆಗಳ ಮೂಲಕ ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ಉದ್ಯಮ ಸ್ನೇಹಿ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಹೇಳಿದರು.
ಸೆಮಿಕಾನ್ ಇಂಡಿಯಾ 2024 ಮತ್ತು ಸೆಮಿಕಂಡಕ್ಟರ್ ಕಾರ್ಯಕಾರಿ ಶೃಂಗಸಭೆ ಭಾರತದ ಮುಂದಿನ ಸಾಮರ್ಥ್ಯಕ್ಕೆ ಅಡಿಗಲ್ಲಾಗಿದ್ದು, ಸೆಮಿಕಂಡಕ್ಟರ್ ಜಾಗತಿಕ ಭೂ ಸದೃಶ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ಕಾರ್ಯಕಾರಿಗಳ ಶೃಂಗಸಭೆ
ಭಾರತ ಮಂಟಪಂನಲ್ಲಿ ಸೆಪ್ಟೆಂಬರ್ 10 ರಂದು ನಾಳೆ, ಸೆಮಿಕಂಡಕ್ಟರ್ ಕಾರ್ಯಕಾರಿಗಳ ಶೃಂಗಸಭೆಯನ್ನು ಸಹ ಆಯೋಜಿಸಲಾಗಿದೆ. ಶೃಂಗಸಭೆಯ ಮುಂದೆ, ಸೆಮಿಕಂಡಕ್ಟರ್ ಎಕ್ಸಿಕ್ಯೂಟಿವ್ ಗಳ ಶೃಂಗಸಭೆ (10 ನೇ ಸೆಪ್ಟೆಂಬರ್) ಮತ್ತು ಸೆಮಿಕಾನ್ ಇಂಡಿಯಾ 2024 ಕಾರ್ಯಕ್ರಮಗಳ (ಸೆಪ್ಟೆಂಬರ್ 11 ರಿಂದ) ಕುರಿತ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಶ್ರೀ ಆಕಾಶ್ ತ್ರಿಪಾಠಿ, ಸಿಇಒ ಐಎಸ್‌ಎಂ ಹೀಗೆ ಹೇಳಿದರು. "ನಾವು ನಮ್ಮ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಆರಂಭಿಕ ಹಂತದಲ್ಲಿದ್ದೇವೆ ಮತ್ತು ಇತರ ದೇಶಗಳ ಅನುಭವಗಳಿಂದ ನಾವು ಕಲಿಯುವುದು ಬಹಳ ಮುಖ್ಯವಾಗಿದೆ. ಸೆಮಿಕಂಡಕ್ಟರ್ ಎಕ್ಸಿಕ್ಯೂಟಿವ್ ಗಳ ಶೃಂಗಸಭೆಯು ಉತ್ತಮ ಅಭ್ಯಾಸಗಳ ಕುರಿತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಮಾಡಬೇಕಾದುದನ್ನು ಗುರುತಿಸಲು ನಮಗೆ ವೇದಿಕೆಯನ್ನು ಒದಗಿಸುತ್ತದೆ ಮತ್ತು ದೇಶದಲ್ಲಿ ದೃಢವಾದ ಸೆಮಿಕಂಡಕ್ಟರ್ ಉದ್ಯಮವನ್ನು ಬೆಳೆಸಲು ಶೃಂಗಸಭೆಯು ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಭಾರತವನ್ನು ವಿಶ್ವಾಸಾರ್ಹ ಮತ್ತು ಗಮನಾರ್ಹ ಪಾಲುದಾರನನ್ನಾಗಿ ಕೇಂದ್ರೀಕರಿಸುತ್ತದೆ.
ಸೆಮಿಕಾನ್ ಇಂಡಿಯಾ 2024 ಈ ಚರ್ಚೆಗಳನ್ನು ಸಮಗ್ರ ಕಾರ್ಯಸೂಚಿಯೊಂದಿಗೆ ಮತ್ತಷ್ಟು ನಿರ್ಮಿಸುತ್ತದೆ, ಇದರಲ್ಲಿ ಪಾಲುದಾರಿಕೆಗಳು, ಹೂಡಿಕೆ ಮತ್ತು ಸೆಮಿಕಂಡಕ್ಟರ್ ಜಾಗದಲ್ಲಿ ನಾವೀನ್ಯತೆಗಳ ಅವಕಾಶಗಳು ಸೇರಿವೆ” ಎಂದರು.
*****
(Release ID: 2053365)
Visitor Counter : 30