ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಡಾ. ಮನ್ಸುಖ್ ಮಾಂಡವಿಯಾ ಅವರು ಏಷ್ಯಾದ ಒಲಿಂಪಿಕ್ ಕೌನ್ಸಿಲ್ ನ 44 ನೇ ಸಾಮಾನ್ಯ ಮಹಾಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು



ಭಾರತದ ಪ್ರಮುಖ ಕ್ರೀಡಾ ಉಪಕ್ರಮಗಳಾದ ‘ಖೇಲೋ ಇಂಡಿಯಾ,’ ‘ಟಾಪ್ಸ್,’ ಮತ್ತು ‘ಅಸ್ಮಿತಾ’ಗಳು ಪ್ರಧಾನಮಂತ್ರಿಯವರ ನಾಯಕತ್ವದ ಅಡಿಯಲ್ಲಿ ಕ್ರೀಡಾ ಉತ್ತೇಜನ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ

ದೇಶದಾದ್ಯಂತ ತಳಮಟ್ಟದ ಹಂತದಲ್ಲಿ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಶ್ರೇಷ್ಠತೆಯನ್ನು ಬೆಳೆಸುವಲ್ಲಿ ಖೇಲೋ ಇಂಡಿಯಾ ನಿರ್ಣಾಯಕ ಪಾತ್ರ ವಹಿಸುತ್ತಿದೆ: ಕೇಂದ್ರ ಸಚಿವರು

Posted On: 08 SEP 2024 4:33PM by PIB Bengaluru

ನವದೆಹಲಿಯ ಭಾರತ ಮಂಟಪದಲ್ಲಿ ಇಂದು ನಡೆದ ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒ.ಸಿ.ಎ.) ಯ 44 ನೇ ಸಾಮಾನ್ಯ ಮಹಾ ಸಭೆಯನ್ನು ಉದ್ದೇಶಿಸಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ  ರಕ್ಷಾ ಖಡ್ಸೆ, ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒ.ಸಿ.ಎ.) ಅಧ್ಯಕ್ಷರಾದ ಶ್ರೀ ರಾಜಾ ರಣಧೀರ್ ಸಿಂಗ್ ಮತ್ತು , ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಮತಿ ಪಿ.ಟಿ.ಉಷಾ ಅವರು ಇತರ ಎಲ್ಲಾ 45 ಏಷ್ಯಾ ರಾಷ್ಟ್ರಗಳ ಕ್ರೀಡಾ ನಾಯಕರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಸಚಿವ ಡಾ. ಮಾಂಡವೀಯ ಅವರು ಕಳೆದ 10 ವರ್ಷಗಳಲ್ಲಿ ಭಾರತ ಸರ್ಕಾರವು ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸಲು ಮತ್ತು ದೇಶಾದ್ಯಂತ ಬಲವಾದ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಕೈಗೊಂಡ ವಿವಿಧ ಉಪಕ್ರಮಗಳ ಬಗ್ಗೆ ಪ್ರತಿನಿಧಿಗಳಿಗೆ ತಿಳಿಸಿದರು. ‘ಖೇಲೋ ಇಂಡಿಯಾ,’ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್),’ ಮತ್ತು ‘ಸ್ಪೋರ್ಟ್ಸ್ ಮೈಲಿಸ್ಟೋನ್' ಅನ್ನು ರೂಪಿಸಿ ಸಾಧಿಸುವ ಮೂಲಕ ಹಾಗೂ ಮಹಿಳೆಯರನ್ನು ಪ್ರೇರೇಪಿಸುವ ಮೂಲಕ (ಅಸ್ಮಿತಾ) ರಾಷ್ಟ್ರವ್ಯಾಪಿ ಕ್ರೀಡಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕೇಂದ್ರ ಸರ್ಕಾರದ ಕ್ರೀಡಾ ಕಾರ್ಯಕ್ರಮಗಳ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ರಿಯಾಶೀಲ ನಾಯಕತ್ವದಲ್ಲಿ, ಸರ್ಕಾರವು ಕ್ರೀಡಾ ಬಜೆಟ್ ಅನ್ನು 2014-15 ರಲ್ಲಿ ಸುಮಾರು 143 ಮಿಲಿಯನ್‌ ಡಾಲರ್ ನಿಂದ ಇಂದು ಸುಮಾರು 417 ಮಿಲಿಯನ್‌ ಡಾಲರ್ ಗೆ ಹೆಚ್ಚಿಸಿದೆ ಎಂದು ಡಾ. ಮಾಂಡವಿಯಾ ವಿವರಿಸಿದರು.  ಈ ಹೂಡಿಕೆಯು ಏಷ್ಯನ್ ಗೇಮ್ಸ್‌ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನಕ್ಕೆ ಕೊಡುಗೆ ನೀಡಿದೆ, 107 ಪದಕಗಳನ್ನು ಪಡೆದುಕೊಂಡಿದೆ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದಿದೆ - ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸುವ ಸಾಧನೆಯಾಗಿದೆ ಎಂದು ಸಚಿವರು ಹೇಳಿದರು.

 ದೇಶದಾದ್ಯಂತ ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸಲು ಸಾಮೂಹಿಕ ಆಂದೋಲನವನ್ನು ರೂಪಿಸುವ ಗುರಿಯನ್ನು ಹೊಂದಿರುವ ‘ಖೇಲೋ ಇಂಡಿಯಾ’ ಯೋಜನೆಯನ್ನು ಸಚಿವರು ವಿವರಿಸಿದರು. 119 ಮಿಲಿಯನ್ ಡಾಲರ್ ವಾರ್ಷಿಕ ಬಜೆಟ್‌ ನೊಂದಿಗೆ, ಈ ಯೋಜನೆಯು ತಳಮಟ್ಟದ ಹಂತದಲ್ಲಿ ಪ್ರತಿಭೆ ಗುರುತಿಸುವಿಕೆ ಮತ್ತು ಅಭಿವೃದ್ಧಿಗೊಳಿಸುವಿಕೆಯನ್ನು ಒಳಗೊಳ್ಳುತ್ತದೆ ಮತ್ತು ಪ್ರತಿ ವರ್ಷ 2,700 ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ವಾರ್ಷಿಕವಾಗಿ ನಾಲ್ಕು ಖೇಲೋ ಇಂಡಿಯಾ ಕ್ರೀಡಾಕೂಟಗಳನ್ನು ನಡೆಸುಲಾಗುತ್ತದೆ.  ಸುಸ್ಥಿರ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಯುವ ಕ್ರೀಡಾಪಟುಗಳಿಗೆ ತರಬೇತಿ, ವಸತಿ, ಆಹಾರ, ಶಿಕ್ಷಣ ಮತ್ತು ಭತ್ಯೆಗಳನ್ನು ಒದಗಿಸಲು 1,050 ಜಿಲ್ಲಾ ಮಟ್ಟದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವರು ವಿವರಿಸಿದರು.

ಹೆಚ್ಚುವರಿಯಾಗಿ, 'ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ (ಟೋಪ್ಸ್)' ಒಲಿಂಪಿಕ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿಯಲ್ಲಿ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ ಎಂದು ಸಚಿವರು ವಿವರಿಸಿದರು. ಗಮನಾರ್ಹವಾಗಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 117 ಅಥ್ಲೀಟ್‌ ಗಳಲ್ಲಿ 28 ಖೇಲೋ ಇಂಡಿಯಾ ಅಥ್ಲೀಟ್‌ ಗಳು.  ಅಂತೆಯೇ, 18 ಖೇಲೋ ಇಂಡಿಯಾ ಅಥ್ಲೀಟ್‌ ಗಳನ್ನು ಒಳಗೊಂಡ ಭಾರತದ ಪ್ಯಾರಾಲಿಂಪಿಕ್ ತಂಡವು ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಈಗಾಗಲೇ 29 ಪದಕಗಳನ್ನು ಪಡೆದುಕೊಂಡಿದೆ - ಇದು  ಇದುವರೆಗೆ ಅತ್ಯಧಿಕ ಪದಕವಾಗಿದೆ.

ಲಿಂಗ ಸಮಾನತೆಯನ್ನು ಮುನ್ನಡೆಸುವ ಮತ್ತು 18 ವಿಭಾಗಗಳಾದ್ಯಂತ ಕ್ರೀಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ರೀಡಾ ಪರಿವರ್ತನೆಯ ಉಪಕ್ರಮವಾದ ‘ಅಸ್ಮಿತಾ’ ಕಾರ್ಯಕ್ರಮದ ಕುರಿತು ಕೇಂದ್ರ ಸಚಿವರು ವಿವರಿಸಿದರು.  ಈ ಸಹಯೋಗದ ಪ್ರಯತ್ನಗಳು ಒಲಂಪಿಕ್ ಕ್ರೀಡಾ ಆದರ್ಶಗಳೊಂದಿಗೆ ಹೊಂದಿಕೆಯಾಗುತ್ತವೆ, ಏಷ್ಯಾದ ಕ್ರೀಡಾ ಪರಂಪರೆಯನ್ನು ಬಲಪಡಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಕೇಂದ್ರ ಸಚಿವರಾದ ಡಾ. ಮಾಂಡವೀಯ ಅವರು ಒಲಿಂಪಿಕ್ ಕ್ರೀಡಾ ಆಂದೋಲನದ ಮೌಲ್ಯಗಳನ್ನು ಉತ್ತೇಜಿಸಲು, ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸಲು ಮತ್ತು ಪ್ರಗತಿಪರ ಕ್ರೀಡಾ ವಾತಾವರಣವನ್ನು ಪೋಷಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.  ಏಷ್ಯಾದ ಒಲಿಂಪಿಕ್ ಕೌನ್ಸಿಲ್‌ ನ 44 ನೇ ಸಾಮಾನ್ಯ ಮಹಾ ಸಭೆಯ ಆತಿಥ್ಯದಲ್ಲಿ ರಾಷ್ಟ್ರದ ಗೌರವವನ್ನು ಅವರು ವ್ಯಕ್ತಪಡಿಸಿದರು ಮತ್ತು ಪ್ರತಿನಿಧಿಗಳು ತಮ್ಮ ಚರ್ಚೆಯಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ನಡ್ಡಾ ಅವರು, 2014 ರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ಯುವಜನ ಕ್ರೀಡೆಯ ಅಭಿವೃದ್ಧಿಗೆ ಪ್ರಬಲ ಪ್ರತಿಪಾದಕರಾಗಿದ್ದಾರೆ.  ಅವರ ನಾಯಕತ್ವದಲ್ಲಿ, ದೇಶಾದ್ಯಂತ ಕ್ರೀಡೆಗಳನ್ನು ಉತ್ತೇಜಿಸುವ ಮತ್ತು ಪ್ರತಿಭೆಯನ್ನು ಪೋಷಿಸುವ ಉದ್ದೇಶದಿಂದ ಖೇಲೋ ಇಂಡಿಯಾ ಅಭಿಯಾನ ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಸ್ಥಾಪನೆಯಂತಹ ಹಲವಾರು ನೂತನ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು  ಹೇಳಿದರು.

ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ಮತ್ತು ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಕೊಡುಗೆಗಳನ್ನು ಸಚಿವರು ಈ ಸಂದರ್ಭದಲ್ಲಿ ವಿವರಿಸಿದರು.

 

*****


(Release ID: 2052989) Visitor Counter : 57