ರೈಲ್ವೇ ಸಚಿವಾಲಯ
azadi ka amrit mahotsav

ರೈಲು ಯೋಜನೆಗಳು ಮತ್ತು ಬೆಂಗಳೂರು ಉಪನಗರ ರೈಲು ಯೋಜನೆಯನ್ನು ನಾಳೆ ಬೆಂಗಳೂರಿನಲ್ಲಿ ಪರಿಶೀಲನೆ ಮತ್ತು ಪರಾಮರ್ಶನ ಮಾಡಲಿರುವ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ

Posted On: 08 SEP 2024 3:15PM by PIB Bengaluru

ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಬೆಂಗಳೂರಿನಲ್ಲಿ ಪ್ರಮುಖ ರೈಲು ಉಪಕ್ರಮಗಳು ಮತ್ತು ಬೆಂಗಳೂರು ಉಪನಗರ ರೈಲು ( ಬಿ.ಎಸ್‌.ಆರ್‌.ಪಿ ) ಯೋಜನೆಗಳ ಸಮಗ್ರ ಪರಿಶೀಲನೆ ಮತ್ತು ಪರಾಮರ್ಶನ ನಡೆಸಲಿದ್ದಾರೆ.

 1. ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ ವೀಲ್ ಫ್ಯಾಕ್ಟರಿ (ಆರ್‌.ಡಬ್ಲ್ಯೂ.ಎಫ್.) ಪರಿಶೀಲನೆ ಮತ್ತು ಪರಾಮರ್ಶನ ಕಾರ್ಯವನ್ನು  ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ.  ಭೇಟಿಯ ಸಮಯದಲ್ಲಿ,  ಕಾರ್ಖಾನೆಯ ಕಾರ್ಯಾಚರಣೆಗಳು ಮತ್ತು ಅಗತ್ಯ ರೈಲು ಘಟಕಗಳ ಉತ್ಪಾದನೆಯಲ್ಲಿನ ಪ್ರಗತಿಯನ್ನು ಮೌಲ್ಯಮಾಪನ ಮಾಡಲಿದ್ದಾರೆ.

 2. ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರು ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿ ಸಂಖ್ಯೆ 313 ರಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಕುರಿತು ನಿರ್ಣಾಯಕ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ಇವರ ಜೊತೆಗೆ, ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರು ಹಾಗೂ ರೈಲ್ವೆ ಯೋಜನೆಗಳ ಹಿರಿಯ ಅಧಿಕಾರಿಗಳು ಜಂಟಿಯಾಗಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿ.ಎಸ್‌.ಆರ್‌.ಪಿ) ಮತ್ತು ಬೆಂಗಳೂರಿನಲ್ಲಿರುವ ಇತರ ರೈಲು ಯೋಜನೆಗಳನ್ನು ಪರಿಶೀಲನೆ ಮಾಡಲಿದ್ದಾರೆ.
 
ಯೋಜನೆಯ ಹಂತಗಳು ಪೂರ್ಣಗೊಳ್ಳುವ ಅವಧಿಗಳು, ಅಭಿವೃದ್ಧಿ ಮೈಲಿಗಲ್ಲುಗಳು ಮತ್ತು ಉಪನಗರ ರೈಲು ಜಾಲದ ದಕ್ಷತೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸುವ ಗುರಿಯನ್ನು ಈ ಸಭೆ ಹೊಂದಿದೆ.
 

*****



(Release ID: 2052982) Visitor Counter : 38