ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ರತಿಯೊಬ್ಬ ಕ್ರೀಡಾಪಟು ಜೀವನವು ಪ್ರಸ್ತುತಪಡಿಸಿದ ಸವಾಲುಗಳನ್ನು ಜಯಿಸಿದ್ದೀರಿ ಮತ್ತು ವಿಜೇತರಾಗಿ ಹೊರಹೊಮ್ಮಿದ್ದೀರಿ: ಡಾ. ಮನ್ಸುಖ್ ಮಾಂಡವೀಯ


ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ಭಾರತೀಯ ಪ್ಯಾರಾ-ಅಥ್ಲೆಟಿಕ್ಸ್ ಕ್ರೀಡಾಪಟುಗಳನ್ನು ಅಭಿನಂದಿಸಿದ ಕೇಂದ್ರ ಸಚಿವರು

ಪ್ರಕಟಣಾ ದಿನಾಂಕ: 05 SEP 2024 6:53PM by PIB Bengaluru

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ  ನಂತರ ಭಾರತಕ್ಕೆ ವಿಜಯಶಾಲಿಯಾಗಿ ಹಿಂದಿರುಗಿದ ಭಾರತೀಯ ಪ್ಯಾರಾ-ಅಥ್ಲೆಟಿಕ್ಸ್ ತಂಡದ ಸದಸ್ಯರನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯಾ ಇಂದು ಅಭಿನಂದಿಸಿದರು. ಸಮಾರಂಭದಲ್ಲಿ ಹಾಜರಿದ್ದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಕೇಂದ್ರ ಸಚಿವರು  ಸನ್ಮಾನಿಸಿದರು.

ಸಮಾರಂಭದಲ್ಲಿ ಮಾತನಾಡಿದ ಡಾ. ಮಾಂಡವೀಯ ಅವರು, ಕ್ರೀಡಾಪಟುಗಳ  ಗಮನಾರ್ಹ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಇಂದು ಆರು ಪ್ಯಾರಾಲಿಂಪಿಕ್ಸ್ ಚೊಚ್ಚಲ ಕ್ರೀಡಾಪಟುಗಳನ್ನು ಭೇಟಿಯಾಗುತ್ತಿರುವುದು ನನಗೆ ನಿಜಕ್ಕೂ ಸಂತಸವಾಗಿದೆ. ಈ ಪ್ರತಿಷ್ಠಿತ ಸಮಾರಂಭದಲ್ಲಿ ಪದಕ ಗೆದ್ದಿದ್ದ ದೀಪ್ತಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಇತರರಿಗೆ, ಭವಿಷ್ಯದ ಪ್ಯಾರಾಲಿಂಪಿಕ್ಸ್‌ಗಾಗಿ ನನ್ನ ಶುಭಾಶಯಗಳನ್ನು ಕೋರುತ್ತೇನೆ, ನೀವು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಚ್ಚಿನ ಕೀರ್ತಿ ತರುತ್ತಿರಿ ಎಂಬ ವಿಶ್ವಾಸವಿದೆ. ಆಟವೆಂದರೆ ಕೇವಲ ಪದಕ ಗೆಲ್ಲುವುದು ಅಲ್ಲ, ನಿಮ್ಮಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಪ್ರಸ್ತುತಪಡಿಸಿದ ಸವಾಲುಗಳನ್ನು ಜಯಿಸಿದ್ದೀರಿ ಮತ್ತು ವಿಜೇತರಾಗಿ ಹೊರಹೊಮ್ಮಿದ್ದೀರಿ. ನೀವೆಲ್ಲರೂ ಭಾರತದಾದ್ಯಂತ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದ್ದೀರಿ ಎಂದು ತಿಳಿಸಿದರು.

ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳೆಯರ 400 ಮೀಟರ್‌ ಟಿ 20 ವಿಭಾಗದಲ್ಲಿ ಕಂಚು ಪದಕ ಗೆದ್ದ ಅಥ್ಲೀಟ್‌ ದೀಪ್ತಿ ಜೀವನ್‌ಜಿ ಮತ್ತು ಅಥ್ಲೀಟ್‌ಗಳಾದ ರವಿ ರೊಂಗಾಲಿ (ಪುರುಷರ ಶಾಟ್‌ಪುಟ್‌ ಎಫ್‌40), ರಕ್ಷಿತಾ ರಾಜು (ಮಹಿಳೆಯರ 1500 ಮೀಟರ್‌ ಟಿ11), ಕಾಂಚನ್‌ ಲಖಾನಿ (ಡಬ್ಲ್ಯು ಕಾಂಚನ್‌ ಲಸ್ಕಾನಿ) ಉಪಸ್ಥಿತರಿದ್ದರು. ಸಾಕ್ಷಿ ಕಸನಾ (ಮಹಿಳೆಯರ ಡಿಸ್ಕಸ್ ಥ್ರೋ F55), ಮತ್ತು ಮನು (ಪುರುಷರ ಶಾಟ್‌ಪುಟ್ F37), ಜೊತೆಗೆ ಅವರ ತರಬೇತುದಾರರಾದ ರಾಹುಲ್ ಬಾಲಕೃಷ್ಣ, ಸುರೇಶ್ ಕುಮಾರ್ ಕುರುಬ, ಸುನಿಲ್ ಲಖಾನಿ ಇತರರು ಇದ್ದರು.

ಹೈದರಾಬಾದ್‌ನಲ್ಲಿ SAI ತರಬೇತುದಾರ ಎನ್. ರಮೇಶ್ ಅವರು ದೀಪ್ತಿ ಅವರ ಪ್ರತಿಭೆಯನ್ನು ಗುರುತಿಸಿದರು. 2019ರಲ್ಲಿ ಪ್ಯಾರಾ-ಅಥ್ಲೆಟಿಕ್ಸ್ ಪ್ರಯಾಣವನ್ನು ಪ್ರಾರಂಭಿಸಿದರು. ಅವರು 2018 ರಿಂದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಈಗ ಟಾಪ್ ಅಥ್ಲೀಟ್ ಆಗಿದ್ದಾರೆ. ಕಡಿಮೆ ಅವಧಿಯಲ್ಲಿ, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮತ್ತು 2024ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕ ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ದೇಶೀಯ ಸರ್ಕ್ಯೂಟ್‌ನಲ್ಲಿ, 2020 ರಲ್ಲಿ ಖೇಲೋ ಇಂಡಿಯಾ, ಯೂತ್ ಗೇಮ್ಸ್‌ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ದೀಪ್ತಿ, ‘ದೇಶಕ್ಕಾಗಿ ಪದಕ ಗೆದ್ದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ, ಈಗ ಕಂಚಿನ ಪದಕ ಗೆದ್ದಿದ್ದೇನೆ, ಆದರೆ ಮುಂದಿನ ಬಾರಿ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದರು.

ಸೆಪ್ಟೆಂಬರ್ 4, 2024 ರ ಅಂತ್ಯದ ವೇಳೆಗೆ ಭಾರತದ ಕ್ರೀಡಾಪಟುಗಳು 5 ಚಿನ್ನ, 9 ಬೆಳ್ಳಿ ಮತ್ತು 10 ಕಂಚಿನ ಪದಕಗಳು ಸೇರಿದಂತೆ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿದೆ.

 

*****


(ಪ್ರಕಟಣೆ ಐ.ಡಿ.: 2052523) ವಿಸಿಟರ್ ಕೌಂಟರ್ : 68
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Telugu