ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
19 ರಿಂದ 22 ಸೆಪ್ಟೆಂಬರ್ 2024 ರವರೆಗೆ ನಡೆಯಲಿರುವ ವರ್ಲ್ಡ್ ಫುಡ್ ಇಂಡಿಯಾ - 2024 ರ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಶ್ರೀ ಚಿರಾಗ್ ಪಾಸ್ವಾನ್ ಅವರು ನವದೆಹಲಿಯ ಭಾರತ್ ಮಂಟಪಕ್ಕೆ ಭೇಟಿ ನೀಡಿದರು
Posted On:
03 SEP 2024 7:18PM by PIB Bengaluru
ಬೃಹತ್ ಆಹಾರ ಕಾರ್ಯಕ್ರಮ "ವರ್ಲ್ಡ್ ಫುಡ್ ಇಂಡಿಯಾ 2024"ರ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಚಿರಾಗ್ ಪಾಸ್ವಾನ್ ಅವರು ಇಂದು ನವದೆಹಲಿಯ ಭಾರತ ಮಂಟಪಂಗೆ ಭೇಟಿ ನೀಡಿದರು. ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 19 ರಿಂದ 22, 2024 ರವರೆಗೆ ಆಯೋಜಿಸಲಾಗಿದೆ. ಈ ಭೇಟಿಯ ಸಂದರ್ಭದಲ್ಲಿ, ಶ್ರೀ ಪಾಸ್ವಾನ್ ಅವರ ಜೊತೆಗೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿರುವ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (FICCI) ಮತ್ತು ಇನ್ವೆಸ್ಟ್ ಇಂಡಿಯಾದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಭೇಟಿಯಲ್ಲಿ ಕಾರ್ಯಕ್ರಮದ ಸಮಯದಲ್ಲಿ ಬಳಸಲಾಗುವ ಪ್ರದರ್ಶನ ಕೊಠಡಿಗಳು, ಸಮ್ಮೇಳನ ಪ್ರದೇಶಗಳು ಮತ್ತು ಇತರ ಸೌಲಭ್ಯಗಳ ವಿಸ್ತೃತ ತಪಾಸಣೆ ನಡೆಸಲಾಯಿತು.
ಇದಲ್ಲದೆ, ಶ್ರೀ ಪಾಸ್ವಾನ್ ಅವರು ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಅಧಿಕಾರಿಗಳು ಮತ್ತು ಸಂಘಟಕರೊಂದಿಗೆ ಸಭೆ ನಡೆಸಿದರು. ಇದರಲ್ಲಿ ಅವರು ಗುಣಮಟ್ಟ ಮತ್ತು ದಕ್ಷತೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಒತ್ತು ನೀಡಿದರು
ವರ್ಲ್ಡ್ ಫುಡ್ ಇಂಡಿಯಾ ಎನ್ನುವುದು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದಿಂದ ಆಯೋಜಿಸಲ್ಪಡುವ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಜಾಗತಿಕ ಮಟ್ಟದ ಪಾಲುದಾರರಿಗೆ ಆಹಾರ ಸಂಸ್ಕರಣಾ ಉದ್ಯಮದಲ್ಲಿನ ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳು ಮತ್ತು ಪ್ರವೃತ್ತಿಗಳನ್ನು ತಿಳಿದುಕೊಳ್ಳಲು ಅನನ್ಯ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಜ್ಞಾನ ಅಧಿವೇಶನಗಳು, ಚರ್ಚಾಗೋಷ್ಠಿಗಳು ಮತ್ತು ಸಹಯೋಗವನ್ನು ಬೆಳೆಸಲು ಹಾಗೂ ಆಹಾರ ಸಂಸ್ಕರಣೆಯ ಭವಿಷ್ಯವನ್ನು ಮುನ್ನಡೆಸಲು ವಿನ್ಯಾಸಗೊಳಿಸಲಾದ ನೆಟ್ವರ್ಕಿಂಗ್ ಅವಕಾಶಗಳ ಸರಣಿಯನ್ನು ಒಳಗೊಂಡಿರುತ್ತದೆ.
ಈ ಕಾರ್ಯಕ್ರಮವು ಅತ್ಯಾಧುನಿಕ ಪ್ರದರ್ಶನ ಸ್ಥಳಗಳನ್ನು, ಭಾರತದ ಸಮೃದ್ಧ ಪ್ರಾದೇಶಿಕ ಆಹಾರ ವೈವಿಧ್ಯತೆಯನ್ನು ಎತ್ತಿ ತೋರಿಸುವ ವಿಶೇಷ ಮಂqಪಗಳನ್ನು, ಮತ್ತು ಸ್ಟಾರ್ಟ್ಅಪ್ಗಳು ಮತ್ತು ನವೋದ್ಯಮಿಗಳಿಗಾಗಿ ಮೀಸಲಾದ ವಲಯಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳು ಭಾರತದ ಆಹಾರ ಸಂಸ್ಕರಣಾ ವಲಯ ಮತ್ತು ಜಾಗತಿಕ ವೇದಿಕೆಯಲ್ಲಿ ಅದು ಬೆಳೆಯುತ್ತಿರುವ ಪ್ರಭಾವವನ್ನು ತೋರಿಸುತ್ತವೆ.
ವಿಶ್ವ ಆಹಾರ ಭಾರತ 2024 ಯಶಸ್ವಿ ಮಾಡಲು ಆಹಾರ ಸಂಸ್ಕರಣ ಸಚಿವಾಲಯ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಜೊತೆ, ಇತರ ಸಚಿವಾಲಯ, ಇಲಾಖೆಗಳ ಜೊತೆ ಕೆಲಸ ಮಾಡ್ತಿದೆ. ವಿಶ್ವ ಆಹಾರ ಇಂಡಿಯಾ 2024 ಅನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ಮತ್ತು ಜಾಗತಿಕ ಆಹಾರ ಉದ್ಯಮದ ನಾಯಕನಾಗಿ ಭಾರತ ಹೊರಹೊಮ್ಮುತ್ತಿರುವುದನ್ನು ಪ್ರದರ್ಶಿಸಲು ಸಚಿವಾಲಯವು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
*****
(Release ID: 2051640)
Visitor Counter : 37