ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಡಾ. ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗದಾತ ಸಂಸ್ಥೆಗಳೊಂದಿಗೆ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ ಕುರಿತ ಪರಿಚಯಾತ್ಮಕ ಸಭೆ
ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ: ಡಾ. ಮಾಂಡವಿಯಾ
Posted On:
03 SEP 2024 5:03PM by PIB Bengaluru
ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಇಎಲ್ ಐಎಸ್) ಕುರಿತು ಮಧ್ಯಸ್ಥಗಾರರ ಸಮಾಲೋಚನೆಗಳ ಸರಣಿಯ ಭಾಗವಾಗಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ಉದ್ಯೋಗದಾತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಪರಿಚಯಾತ್ಮಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ, ಕಾರ್ಯದರ್ಶಿ (ಎಲ್ & ಇ) ಶ್ರೀಮತಿ ಸುಮಿತಾ ದಾವ್ರಾ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಯೋಗದಾತರನ್ನು ಉದ್ದೇಶಿಸಿ ಮಾತನಾಡಿದ ಡಾ. ಮಾಂಡವಿಯಾ ಅವರು, ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಇಎಲ್ ಐಎಸ್) ಯು ಹೆಚ್ಚು ಸಮೃದ್ಧ ಮತ್ತು ಎಲ್ಲರನ್ನೊಳಗೊಂಡ ಭಾರತವನ್ನು ರಚಿಸುವ ನಮ್ಮ ಸಮಾನ ಗುರಿಯತ್ತ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಇದು ವಾಸ್ತವವಾಗಿ ಯಶಸ್ವಿಯಾಗಲು, ಸಂಬಂಧಪಟ್ಟ ಎಲ್ಲರ ಅಂದರೆ ಸರ್ಕಾರ, ವ್ಯವಹಾರಗಳು ಮತ್ತು ನಮ್ಮ ಕೆಲಸಗಾರರ ಸಾಮೂಹಿಕ ಪ್ರಯತ್ನ ಮತ್ತು ಜ್ಞಾನದ ಅಗತ್ಯವಿರುತ್ತದೆ-.
"ಉದ್ಯೋಗ ಸೃಷ್ಟಿಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ, ಮತ್ತು ಇಎಲ್ಐ ಯೋಜನೆಯು ಈ ಗುರಿಯನ್ನು ಸಾಧಿಸಲು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ದೃಢವಾದ, ಒಳಗೊಳ್ಳುವ ಮತ್ತು ಆರ್ಥಿಕತೆಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಯನ್ನು ವಿನ್ಯಾಸಗೊಳಿಸಲು ಮಧ್ಯಸ್ಥಗಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ" ಡಾ. ಮಾಂಡವಿಯಾ ಹೇಳಿದರು.
ಕೇಂದ್ರ ಸಚಿವರು ಇಎಲ್ಐ ಯೋಜನೆಯನ್ನು ರೂಪಿಸುವ ಕುರಿತು ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಿದರು. ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಉದ್ಯಮಗಳನ್ನು ಉತ್ತೇಜಿಸಲು ಮತ್ತು ನಮ್ಮ ದೇಶದ ಯುವಕರಿಗೆ ಅರ್ಥಪೂರ್ಣ ಮತ್ತು ಸುಸ್ಥಿರ ಉದ್ಯೋಗಗಳನ್ನು ಒದಗಿಸಲು ಇಎಲ್ಐ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.
ಕಾರ್ಯದರ್ಶಿ (ಎಲ್ & ಇ) ಅವರು ಇಎಲ್ಐ ಯೋಜನೆಯ ಎಲ್ಲಾ ಅಂಶಗಳ ಸಾರಂಶವನ್ನು ನೀಡಿದರು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಲ್ಲದೆ, ಸಂಬಂಧಿತ ಪ್ರೋತ್ಸಾಹಕ ಯೋಜನೆ (ಇಎಲ್ಐ) ಯೋಜನೆ, ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಇತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಪ್ರಸ್ತಾವಿತ ಇಎಲ್ಐ ಯೋಜನೆಯ ಪ್ರಸ್ತುತಿಯನ್ನು ಸಹ ಮಾಡಲಾಯಿತು.
ವಿವಿಧ ಉದ್ಯೋಗದಾತ ಸಂಸ್ಥೆಗಳ ಪ್ರತಿನಿಧಿಗಳು ಯೋಜನೆ ಮತ್ತು ಸರ್ಕಾರವು ಕೈಗೊಳ್ಳುತ್ತಿರುವ ಇತರ ಕಾರ್ಮಿಕ ಕಲ್ಯಾಣ ಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇಂತಹ ಸಭೆಗಳು ನಿರಂತರ ಪ್ರಕ್ರಿಯೆ ಎಂದು ಹೇಳಿದ ಸಚಿವರು ಉದ್ಯೋಗದಾತ ಸಂಸ್ಥೆಗಳಿಗೆ ಭರವಸೆ ನೀಡುತ್ತಾ ನೀತಿಗಳು ಮತ್ತು ಯೋಜನೆಗಳನ್ನು ನ್ಯಾಯಸಮ್ಮತತೆ, ಒಳಗೊಳ್ಳುವಿಕೆ ಮತ್ತು ಸಮಾನ ಬೆಳವಣಿಗೆಯನ್ನು ಉತ್ತೇಜಿಸುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಅವರ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಎದುರು ನೋಡುತ್ತಿದೆ ಎಂದು ಹೇಳಿದರು.
ಸಿಐಐ, ಎಫ್ಐಸಿಸಿಐ, ಆಸ್ಚೋಮ್, ಪಿ ಎಚ್ ಡಿ ಸಿ ಸಿ ಐ, ಅಖಿಲ ಭಾರತ ಉದ್ಯೋಗದಾತರ ಸಂಸ್ಥೆ (ಎಐಒಇ), ಲಘು ಉದ್ಯೋಗ ಭಾರತಿ, ಇಂಡಿಯನ್ ಕೌನ್ಸಿಲ್ ಆಫ್ ಸ್ಮಾಲ್ ಇಂಡಸ್ಟ್ರೀಸ್ (ಐಸಿಎಸ್ಐ), ಫೆಡರೇಶನ್ ಆಫ್ ಅಸೋಸಿಯೇಷನ್ ಆಫ್ ಸ್ಮಾಲ್ ಇಂಡಸ್ಟ್ರೀಸ್ ಆಫ್ ಇಂಡಿಯಾ (ಎಫ್ಎಎಸ್ಐಐ), ಆಲ್ ಇಂಡಿಯಾ ಅಸೋಸಿಯೇಷನ್ ಆಫ್ ಇಂಡಸ್ಟ್ರೀಸ್ (ಎಐಎಐ), ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಶನ್ (ಎಐಎಂಒ), ಸಾರ್ವಜನಿಕ ಉದ್ಯಮಗಳ ಸ್ಥಾಯಿ ಸಂಸ್ಥೆ (ಸ್ಕೋಪ್) ಮತ್ತು ಎಂಪ್ಲಾಯರ್ಸ್ ಫೆಡರೇಶನ್ ಆಫ್ ಇಂಡಿಯಾ (ಇಎಫ್ಐ) ದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
*****
(Release ID: 2051518)
Visitor Counter : 39