ಕೃಷಿ ಸಚಿವಾಲಯ
azadi ka amrit mahotsav

ರೈತರ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ಒಟ್ಟು ರೂ 13,966 ಕೋಟಿ ವೆಚ್ಚದಲ್ಲಿ ಏಳು ಪ್ರಮುಖ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ

Posted On: 02 SEP 2024 4:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೈತರ ಜೀವನವನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಒಟ್ಟು 13,966 ಕೋಟಿ ರೂಪಾಯಿಗಳ ಏಳು ಯೋಜನೆಗಳಿಗೆ ಇಂದು ಅನುಮೋದನೆ ನೀಡಿದೆ.

1. ಡಿಜಿಟಲ್ ಅಗ್ರಿಕಲ್ಚರ್ ಮಿಷನ್: ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ರಚನೆಯ ಆಧಾರದ ಮೇಲೆ, ರೈತರ ಜೀವನವನ್ನು ಸುಧಾರಿಸಲು ಡಿಜಿಟಲ್ ಕೃಷಿ ಮಿಷನ್ ಅಧುನಿಕ ತಂತ್ರಜ್ಞಾನವನ್ನು ಬಳಸುತ್ತದೆ. ಡಿಜಿಟಲ್ ಕೃಷಿ ಮಿಷನ್ ಗಾಗಿ ಒಟ್ಟು 2.817 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಇದು ಎರಡು ಮೂಲಸ್ತಂಭಗಳನ್ನು ಅಡಿಪಾಯವಾಗಿ ಒಳಗೊಂಡಿದೆ.

1. ಕೃಷಿ ಸಂಗ್ರಹಣೆ (ಅಗ್ರಿ ಸ್ಟಾಕ್)
ಎ. ರೈತರ ನೋಂದಣಿ
ಬಿ. ಗ್ರಾಮ ಭೂ ನಕ್ಷೆ/ನಕಾಶೆಗಳ ನೋಂದಣಿ
ಸಿ. ಕೃಷಿ ಬೆಳೆಯಲ್ಲಿ ಬೀಜ ನೆಡುವ ನೋಂದಣಿ ( ಕ್ರಾಪ್ ಸೋನ್ ರಿಜಿಸ್ಟ್ರಿ)

2. ಕೃಷಿ ನಿರ್ಧಾರಗಳಿಗೆ ಪೂರಕ ಬೆಂಬಲ ವ್ಯವಸ್ಥೆ
ಎ. ಜಿಯೋಸ್ಪೇಷಿಯಲ್ ಡೇಟಾ
ಬಿ. ಬರ/ಪ್ರವಾಹದ ಮೇಲ್ವಿಚಾರಣೆ
ಸಿ. ಹವಾಮಾನ/ಉಪಗ್ರಹ ಡೇಟಾ
ಡಿ. ಅಂತರ್ಜಲ/ನೀರಿನ ಲಭ್ಯತೆಯ ಡೇಟಾ
ಇ. ಬೆಳೆ ಇಳುವರಿ ಮತ್ತು ವಿಮೆಗೆ ಮಾದರಿ

 ಮಿಷನ್ ಈ ಕೆಳಗಿನ ನಿಬಂಧನೆಗಳನ್ನು ಹೊಂದಿದೆ
* ಮಣ್ಣಿನ ಅಂಶ-ಗುಣಗಳ ಮಹತ್ವ ಚಿತ್ರಣ (ಪ್ರೊಫೈಲ್)
* ಡಿಜಿಟಲ್ ಬೆಳೆ ಅಂದಾಜು
* ಡಿಜಿಟಲ್ ಇಳುವರಿ ಮಾಡೆಲಿಂಗ್ ಬಳಸಿಕೊಳ್ಳುವುದು
* ಬೆಳೆ ಸಾಲಕ್ಕಾಗಿ ಸಂಪರ್ಕ ಏರ್ಪಡಿಸುವುದು
* ಎಐ ಮತ್ತು ಬೃಹತ್ ಡೇಟಾದಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು
* ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಿವುದು
* ಕೃಷಿಗಾಗಿ ಮೊಬೈಲ್ ಫೋನ್ಗಳಲ್ಲಿ ಹೊಸ ಜ್ಞಾನವನ್ನು ಬಳಸಿಕೊಳ್ಳುವುದು

2. ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಬೆಳೆ ವಿಜ್ಞಾನ: ಒಟ್ಟು 3,979 ಕೋಟಿ ರೂ. ವೆಚ್ಚದ ಈ ಉಪಕ್ರಮವು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ರೈತರನ್ನು ಪೂರಕವಾಗಿ ಸಿದ್ಧಪಡಿಸುತ್ತದೆ ಮತ್ತು 2047 ರ ವೇಳೆಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ. ಇದು ಕೆಳಗಿನ ಮೂಲಸ್ತಂಭಗಳನ್ನು ಹೊಂದಿದೆ:
1. ಸಂಶೋಧನೆ ಮತ್ತು ಶಿಕ್ಷಣ
2. ಸಸ್ಯ ಆನುವಂಶಿಕ ಸಂಪನ್ಮೂಲ ನಿರ್ವಹಣೆ
3. ಆಹಾರ ಮತ್ತು ಮೇವಿನ ಬೆಳೆಗೆ ಅನುವಂಶಿಕ ಸುಧಾರಣೆ
4. ಬೇಳೆಕಾಳು ಮತ್ತು ಎಣ್ಣೆಕಾಳು ಬೆಳೆ ಸುಧಾರಣೆ
5. ವಾಣಿಜ್ಯ ಬೆಳೆಗಳ ಸುಧಾರಣೆ
6. ಕೀಟಗಳು, ಸೂಕ್ಷ್ಮಜೀವಿಗಳು, ಪರಾಗಸ್ಪರ್ಶಕಗಳು ಇತ್ಯಾದಿಗಳ ಮೇಲೆ ಸಂಶೋಧನೆ.

3. ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಸಮಾಜ ವಿಜ್ಞಾನಗಳನ್ನು ಬಲಪಡಿಸುವುದು: ಒಟ್ಟು ರೂ 2,291 ಕೋಟಿ ವೆಚ್ಚದೊಂದಿಗೆ ಈ ಉಪಕ್ರಮವು ಕೃಷಿ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಪ್ರಸ್ತುತ ಸವಾಲುಗಳಿಗೆ ಸಿದ್ಧಪಡಿಸುತ್ತದೆ ಮತ್ತು ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ
1. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿ ರಿಸರ್ಚ್ ಅಡಿಯಲ್ಲಿ ಉಪಕ್ರಮಗಳು
2. ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಆಧುನೀಕರಿಸುವುದು
3. ಹೊಸ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಕೃಷಿ ಶಿಕ್ಷಣ
4. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುವಿಕೆ ... ಡಿಜಿಟಲ್ ಡಿಪಿಐ, ಎಐ, ಬೃಹತ್ ಡೇಟಾ, ರಿಮೋಟ್, ಇತ್ಯಾದಿ
5. ನೈಸರ್ಗಿಕ ಕೃಷಿ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಸೇರಿಸಿಕೊಳ್ಳುವಿಕೆ

4. ಸುಸ್ಥಿರ ಜಾನುವಾರು ಆರೋಗ್ಯ ಮತ್ತು ಉತ್ಪಾದನೆ: ಒಟ್ಟು ರೂ 1,702 ಕೋಟಿ ವೆಚ್ಚದಲ್ಲಿ, ಜಾನುವಾರು ಮತ್ತು ಡೈರಿಯಿಂದ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ
1. ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಪಶುವೈದ್ಯಕೀಯ ಶಿಕ್ಷಣ ಸುಧಾರಣೆ
2. ಡೈರಿ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳುವಿಕೆ
3. ಪ್ರಾಣಿ ಆನುವಂಶಿಕ ಸಂಪನ್ಮೂಲ ನಿರ್ವಹಣೆ, ಉತ್ಪಾದನೆ ಮತ್ತು ಸುಧಾರಣೆ
4. ಪ್ರಾಣಿಗಳ ಪೋಷಣೆ ಮತ್ತು ಸಣ್ಣ ಮೆಲುಕು ಹಾಕುವ ಪ್ರಾಣಿಗಳ ಪೋಷಣೆ, ಉತ್ಪಾದನೆ ಮತ್ತು ಅಭಿವೃದ್ಧಿ

5. ತೋಟಗಾರಿಕೆಯ ಸುಸ್ಥಿರ ಅಭಿವೃದ್ಧಿ: ಒಟ್ಟು ರೂ 860 ಕೋಟಿ ವೆಚ್ಚದಲ್ಲಿ ಈ ಕ್ರಮವು ತೋಟಗಾರಿಕೆ ಸಸ್ಯಗಳಿಂದ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ
1. ಉಷ್ಣವಲಯದ, ಉಪ-ಉಷ್ಣವಲಯದ ಮತ್ತು ಸಮಶೀತೋಷ್ಣ ತೋಟಗಾರಿಕೆ ಬೆಳೆಗಳು
2. ಬೇರು, ಟ್ಯೂಬರ್, ಬಲ್ಬಸ್ ಮತ್ತು ಶುಷ್ಕ ಬೆಳೆಗಳು
3. ತರಕಾರಿ, ಹೂವುಗಾರಿಕೆ, ಮತ್ತು ಅಣಬೆ ಬೆಳೆಗಳು
4. ಸಸಿ ನೆಡುವಿಕೆ, ಮಸಾಲೆಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳು
6. ರೂ 1,202 ಕೋಟಿ ವೆಚ್ಚದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಬಲಪಡಿಸುವುದು
7. ರೂ 1,115 ಕೋಟಿ ವೆಚ್ಚದಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

6. ರೂ 1,202 ಕೋಟಿ ವೆಚ್ಚದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಬಲಪಡಿಸುವುದು

7. ರೂ 1,115 ಕೋಟಿ ವೆಚ್ಚದಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

 

*****


(Release ID: 2050959) Visitor Counter : 74