ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಹೊಸ ಬಯೋಇ3 ನೀತಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರಿಂದ ಔಪಚಾರಿಕವಾಗಿ ಬಿಡುಗಡೆ, ಮುಂದಿನ ಕೈಗಾರಿಕಾ ಕ್ರಾಂತಿಯ ಜಾಗತಿಕ ಜ್ಯೋತಿ ಹೊತ್ತ ಭಾರತ ಎಂದು ಶ್ಲಾಘನೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು
ಬಯೋಇ3 ನೀತಿಯು ಜೈವಿಕ ಆರ್ಥಿಕತೆಗೆ ಮಾತ್ರವಲ್ಲ, ವಿಕಸಿತ ಭಾರತ @2047 ನ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದೆ (ಗೇಮ್ ಚೇಂಜರ್) ಎಂಬುದನ್ನು ಸಾಬೀತುಪಡಿಸಲಿದೆ
ಭಾರತವು ಜಾಗತಿಕ ಬಯೋಟೆಕ್ ಶಕ್ತಿಕೇಂದ್ರವಾಗಿ ಹೊರಹೊಮ್ಮುತ್ತಿದ್ದಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಸ ಬಯೋಟೆಕ್ ಬೂಮಿ ಚಾಂಪಿಯನ್ ಎಂದು ವಿಶ್ವದಾದ್ಯಂತ ಪ್ರಶಂಸೆ ಗಳಿಸಲಿದ್ದಾರೆ ಎಂದು ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್ ಹೇಳಿಕೆ
ಪಿಪಿಪಿ ಮಾದರಿಯು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಉದ್ಯಮವನ್ನು ಪ್ರೇರೇಪಿಸುವ ಜೈವಿಕ 3 ನೀತಿ ಅನುಷ್ಠಾನದ ಆಂತರಿಕ ಭಾಗವಾಗಿದೆ
ಭಾರತದ ಜೈವಿಕ ಆರ್ಥಿಕತೆಯು 2014 ರಲ್ಲಿ 10 ಬಿಲಿಯನ್ ಡಾಲರ್ ನಿಂದ 2024 ರಲ್ಲಿ 130 ಬಿಲಿಯನ್ ಡಾಲರ್ ಗೆ ಏರುತ್ತಿದೆ, 2030 ರ ವೇಳೆಗೆ 300 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ: ಡಾ.ಸಿಂಗ್
Posted On:
31 AUG 2024 6:22PM by PIB Bengaluru
ಇಲ್ಲಿನ ಎಲ್ ಮೀಡಿಯಾ ಸೆಂಟರ್ ನಲ್ಲಿ ಇಂದು ಹೊಸ ಜೈವಿಕ ಆರ್ಥಿಕ ನೀತಿಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್ ಅವರು, ಭಾರತವು ಮುಂದಿನ ಕೈಗಾರಿಕಾ ಕ್ರಾಂತಿಯ ಜಾಗತಿಕ ಜ್ಯೋತಿಯನ್ನು ಬೆಳಗಲಿದೆ ಎಂದು ಶ್ಲಾಘಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬೆಂಬಲಕ್ಕಾಗಿ ಅವರು ಧನ್ಯವಾದ ಅರ್ಪಿಸಿದರು.
9M2U.JPG)
"ಬಯೋಇ3 ನೀತಿಯು ಜೈವಿಕ ಆರ್ಥಿಕತೆಗೆ ಮಾತ್ರವಲ್ಲದೆ ವಿಕಸಿತ ಭಾರತ @ 2047 ಗೆ ಗೇಮ್ ಚೇಂಜರ್ ಎಂಬುದನ್ನೂ ಸಾಬೀತುಪಡಿಸುತ್ತದೆ" ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಯೋ ಇ3 ನೀತಿಗೆ ಅನುಮೋದನೆ ನೀಡಲಾಯಿತು. ಈ ನೀತಿಯು ಭಾರತ ಸರ್ಕಾರದ ರಾಷ್ಟ್ರೀಯ ಉಪಕ್ರಮಗಳಾದ 'ನಿವ್ವಳ ಶೂನ್ಯ' ಇಂಗಾಲದ ಆರ್ಥಿಕತೆ ಮತ್ತು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಗೆ ಅನುಗುಣವಾಗಿ 'ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಮಾಡುವ ' ಗುರಿಯನ್ನು ಹೊಂದಿದೆ.
ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ), ಭೂ ವಿಜ್ಞಾನಗಳ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ), ಪ್ರಧಾನ ಮಂತ್ರಿ ಕಾರ್ಯಾಲಯ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್, "ಭಾರತವು ಜಾಗತಿಕ ಜೈವಿಕ ತಂತ್ರಜ್ಞಾನ (ಬಯೋಟೆಕ್) ಶಕ್ತಿಕೇಂದ್ರವಾಗಿ ಹೊರಹೊಮ್ಮುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರು ಹೊಸ ಬಯೋಟೆಕ್ ಬೂಮ್ ನ ಚಾಂಪಿಯನ್ ಎಂದು ವಿಶ್ವದಾದ್ಯಂತ ಪ್ರಶಂಸೆ ಗಳಿಸಲಿದ್ದಾರೆ" ಎಂದು ಹೇಳಿದರು. ಭಾರತವು ನವೀನ, ಸ್ಪರ್ಧಾತ್ಮಕ ಮತ್ತು ವೇಗವಾಗಿ ಬೆಳೆಯುತ್ತಿರುವ ಬಯೋಟೆಕ್ ಉದ್ಯಮವನ್ನು ಹೊಂದಿದೆ ಎಂದವರು ನುಡಿದರು.
0ICH.JPG)
"ಬಯೋಇ 3 ನೀತಿಯು ಆಹಾರ, ಇಂಧನ ಮತ್ತು ಆರೋಗ್ಯದಂತಹ ವಿವಿಧ ಕ್ಷೇತ್ರಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದರು. ಅವರು ಆರು ಶೀರ್ಷಿಕೆಯ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಅವುಗಳೆಂದರೆ 1. ಜೈವಿಕ-ಆಧಾರಿತ ರಾಸಾಯನಿಕಗಳು ಮತ್ತು ಕಿಣ್ವಗಳು; 2. ಕ್ರಿಯಾತ್ಮಕ ಆಹಾರಗಳು ಮತ್ತು ಸ್ಮಾರ್ಟ್ ಪ್ರೋಟೀನ್ಗಳು; 3. ನಿಖರವಾದ ಜೈವಿಕ ಚಿಕಿತ್ಸೆ; 4. ಹವಾಮಾನ ಸ್ಥಿತಿಸ್ಥಾಪಕ ಕೃಷಿ; 5. ಇಂಗಾಲದ ಸೆರೆಹಿಡಿಯುವಿಕೆ ಮತ್ತು ಅದರ ಬಳಕೆ; 6. ಭವಿಷ್ಯದ ಸಾಗರ ಮತ್ತು ಬಾಹ್ಯಾಕಾಶ ಸಂಶೋಧನೆ.
ಬಾಹ್ಯಾಕಾಶ ಮತ್ತು ಜೈವಿಕ ಆರ್ಥಿಕ ಕ್ಷೇತ್ರಗಳಲ್ಲಿ ಸಾಧಿಸಿದ ಯಶಸ್ಸನ್ನು ಪುನರುಚ್ಚರಿಸಿದ ಸಚಿವರು, ಪಿಪಿಪಿ ಮಾದರಿಯು ಬಯೋಇ 3 ನೀತಿ ಅನುಷ್ಠಾನದ ಆಂತರಿಕ ಅವಿಭಾಜ್ಯ ಅಂಗವಾಗಿದ್ದು, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಉದ್ಯಮವನ್ನು ಪ್ರೇರೇಪಿಸುತ್ತದೆ ಎಂದು ಒತ್ತಿ ಹೇಳಿದರು.
ಜಿತೇಂದ್ರ ಸಿಂಗ್ ಅವರ ಪ್ರಕಾರ, "ಜೈವಿಕ ಉತ್ಪಾದನೆ ಮತ್ತು ಜೈವಿಕ ಫೌಂಡ್ರಿಗಳು ಭಾರತದ ಭವಿಷ್ಯದ ಜೈವಿಕ ಆರ್ಥಿಕತೆಯನ್ನು ಮುನ್ನಡೆಸುತ್ತವೆ ಮತ್ತು "ಹಸಿರು ಬೆಳವಣಿಗೆಯನ್ನು" ಉತ್ತೇಜಿಸುತ್ತವೆ. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನೀತಿ ಬದಲಾವಣೆಯ ನಂತರ, ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಜೈವಿಕ ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ಆದ್ಯತೆ ನೀಡಲಾಗಿದೆ ಮತ್ತು ಅವು ಕೇಂದ್ರ ಸ್ಥಾನವನ್ನು ಪಡೆದುಕೊಂಡಿವೆ" ಎಂದು ಅವರು ಸ್ಪಷ್ಟಪಡಿಸಿದರು.
987U.JPG)
"ಭಾರತದಲ್ಲಿ ಜೈವಿಕ ತಂತ್ರಜ್ಞಾನದ ಪ್ರಗತಿಯನ್ನು ಎತ್ತಿ ತೋರಿಸುವುದಕ್ಕೆ ಇದು ಸಕಾಲ", ಎಂದು ಹೇಳಿದ ಸಚಿವರು "ಭಾರತವು ಜೈವಿಕ ಸಂಪನ್ಮೂಲಗಳ ಬೃಹತ್ ಸಂಪತ್ತನ್ನು ಹೊಂದಿದೆ, ಬಳಸಿಕೊಳ್ಳಲು ಕಾಯುತ್ತಿರುವ ಅಪರ್ಯಾಪ್ತ ಸಂಪನ್ಮೂಲ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಅನುಕೂಲತೆಗಳನ್ನು ಹೊಂದಿದೆ, ವಿಶೇಷವಾಗಿ ಹಿಮಾಲಯದ ವಿಶಾಲ ಜೀವವೈವಿಧ್ಯತೆ ಮತ್ತು ಅನನ್ಯ ಜೈವಿಕ ಸಂಪನ್ಮೂಲಗಳಿಂದಾಗಿ ನಾವು ಮೇಲುಗೈ ಸಾಧಿಸಬಹುದು. ನಂತರ 7,500 ಕಿ.ಮೀ ಉದ್ದದ ಕರಾವಳಿ ಇದೆ ಮತ್ತು ಕಳೆದ ವರ್ಷ ನಾವು ಆಳ ಸಮುದ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ, ಇದು ಸಮುದ್ರದ ಕೆಳಗಿನ ಜೀವವೈವಿಧ್ಯತೆಯನ್ನು ಅಗೆಯಲಿದೆ" ಎಂದೂ ಹೇಳಿದರು.
ಕಳೆದ 10 ವರ್ಷಗಳ ಸಾಧನೆಗಳನ್ನು ನೆನಪಿಸಿಕೊಂಡ ಅವರು, ಭಾರತದ ಜೈವಿಕ ಆರ್ಥಿಕತೆಯು 2014 ರಲ್ಲಿ 10 ಬಿಲಿಯನ್ ಡಾಲರ್ ನಿಂದ 2024 ರಲ್ಲಿ 130 ಬಿಲಿಯನ್ ಡಾಲರ್ ಗೆ ಏರಿದೆ, 2030 ರ ವೇಳೆಗೆ 300 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದರು. ಜೈವಿಕ ತಂತ್ರಜ್ಞಾನ ಮತ್ತು 21 ನೇ ಶತಮಾನದ ಪೀಳಿಗೆಯು ಮುಂದಿನ ಕ್ರಾಂತಿಯನ್ನು ಮುನ್ನಡೆಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದೂ ಅವರು ಪುನರುಚ್ಚರಿಸಿದರು. "ಐಟಿ ಕ್ರಾಂತಿಯು ಪಾಶ್ಚಿಮಾತ್ಯ ಚಾಲಿತವಾಗಿತ್ತು, ಜೈವಿಕ ತಂತ್ರಜ್ಞಾನ ಕ್ರಾಂತಿಯು ಭಾರತ ಚಾಲಿತವಾಗಿರುತ್ತದೆ" ಎಂದು ಅವರು ಹೇಳಿದರು.
ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ ಮತ್ತು ನೀತಿ ಆಯೋಗದ ಸದಸ್ಯ (ಎಸ್ &ಟಿ) ಡಾ.ವಿ.ಕೆ.ಸಾರಸ್ವತ್ ಅವರು ಬಿಡುಗಡೆ ಮತ್ತು ಮಾಧ್ಯಮ ಸಂವಾದದಲ್ಲಿ ಉಪಸ್ಥಿತರಿದ್ದರು.
*****
(Release ID: 2050488)