ಜಲ ಶಕ್ತಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್.ಎಂ.ಸಿ.ಜಿ.) ಯೋಜನೆಯ 56 ನೇ ಕಾರ್ಯಕಾರಿ ಸಮಿತಿ ಸಭೆಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಗಂಗಾ ನದಿಯ ಪರಿಸರ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಪ್ರಮುಖವಾಗಿ ಪಾತ್ರವಹಿಸಲಿರುವ ರೂ. 265 ಕೋಟಿ ಮೌಲ್ಯದ ನೂತನ 9 ಯೋಜನೆಗಳನ್ನು ಅನುಮೋದಿಸಿದೆ


Posted On: 30 AUG 2024 5:13PM by PIB Bengaluru

ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್.ಎಂ.ಸಿ.ಜಿ.) ರೂ. 265 ಕೋಟಿ ಮೌಲ್ಯದ ಒಂಬತ್ತು ಯೋಜನೆಗಳಿಗೆ ಅನುಮೋದನೆ ನೀಡಿದೆ. ನವದೆಹಲಿಯಲ್ಲಿ ನಡೆದ 56ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಅನುಮೋದಿತ ಯೋಜನೆಗಳು ನದಿಯ ಪರಿಸರ ವ್ಯವಸ್ಥೆಯ ಸುಧಾರಣೆಗೆ ಪ್ರಮುಖವಾಗಿ ಪೂರಕವಾಗಿವೆ. ಇವುಗಳು ಗಂಗಾ ನದಿಯಲ್ಲಿ ಕನಿಷ್ಠ ಮಟ್ಟದ ಮಾಲಿನ್ಯವನ್ನು ಖಚಿತಪಡಿಸುತ್ತವೆ, ಆ ಮೂಲಕ ಗಂಗಾ ನದಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತವೆ ಮತ್ತು ಅದರ ಸಂರಕ್ಷಣೆಯನ್ನು ಖಚಿತಪಡಿಸುತ್ತವೆ. ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್.ಎಂ.ಸಿ.ಜಿ.) ಇದರ ಡಿಜಿ ಶ್ರೀ ರಾಜೀವ್ ಕುಮಾರ್ ಮಿಟ್ಟಲ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಗಂಗಾ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಉತ್ತರ ಪ್ರದೇಶದ ದಲ್ಮೌ ರಾಯ್ಬರೇಲಿಯಲ್ಲಿ ಗಂಗಾ ನದಿಯ ಮಾಲಿನ್ಯವನ್ನು ತಗ್ಗಿಸಲು ಕೊಳಕು-ಮಲ-ಕೆಸರು ನಿರ್ವಹಣೆಯ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಯಿತು. ಈ ಯೋಜನೆಯಡಿಯಲ್ಲಿ, 15 ಕಿ.ಡಬ್ಲ್ಯೂ. ಸೌರ ವಿದ್ಯುತ್ ಸ್ಥಾವರ ಮತ್ತು ಒಂದು ಸೋಲಾರ್ ಇನ್ವರ್ಟರ್ ಜೊತೆಗೆ 8 ಕೆ.ಎಲ್.ಡಿ. ಫೀಕಲ್ ಕೆಸರು ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುತ್ತದೆ. ಡಿ.ಬಿ.ಒಟಿ. ಮಾದರಿಯನ್ನು ಆಧರಿಸಿ ಒಟ್ಟಾರೆ ರೂ. 4.40 ಕೋಟಿಗಳ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಐದು ವರ್ಷಗಳ ನಿಗದಿತ ಅವಧಿಗೆ ಯೋಜನೆಯ ಒ&ಎಂ ಅನ್ನು ಒಳಗೊಂಡಿದೆ. 

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಗುಲಾತಿ ಪಟ್ಟಣದಲ್ಲಿ ಒಳಚರಂಡಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯು ಉತ್ತರ ಪ್ರದೇಶದ ಎಂಟು ಜಿಲ್ಲೆಗಳ ಮೂಲಕ ಹರಿಯುವ ಗಂಗಾ ನದಿಯ ಉಪನದಿಯಾದ ಪೂರ್ವ ಕಾಳಿ ನದಿಯಲ್ಲಿ ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ರೂಪಾಯಿ 50.98 ಕೋಟಿಗಳ ಅಂದಾಜು ವೆಚ್ಚದಲ್ಲಿ ಯೋಜನೆ ಮಂಜೂರಾಗಿದೆ. ಯೋಜನೆಯಡಿ, ಚರಂಡಿಗಳು ಮತ್ತು ಒಳಚರಂಡಿ ಸಂಸ್ಕರಣಾ ಕಾರ್ಯಗಳನ್ನು ಐ.&ಡಿ.ಗೆ ಸಮರ್ಪಿಸಲಾಗಿದೆ. ಈ ಯೋಜನೆಯು 15 ವರ್ಷಗಳ ಅವಧಿಗೆ 10 ಎಂ.ಎಲ್.ಡಿ ಸಾಮರ್ಥ್ಯದ ಒ&ಎಂ ಅನ್ನು ಒಳಗೊಂಡಿದೆ.

ಮಹಾ ಕುಂಭಮೇಳ 2025 ರ ಸಮಯದಲ್ಲಿ ಗಂಗಾ ನದಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಮತ್ತು ನಂತರ ಪ್ರಯಾಗ್ ರಾಜ್ ನಲ್ಲಿ ಅರ್ಥ ಗಂಗಾ ಕೇಂದ್ರದ ನಿರ್ಮಾಣ ಮತ್ತು ರೈಲ್ವೆ ನಿಲ್ದಾಣ ಛೋಕಿಯ ಬ್ರ್ಯಾಂಡಿಂಗ್ ಗೆ ರೂ. 1.80 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಯಿತು. ಈ ಯೋಜನೆಯು ಜಾಗೃತಿ ಮೂಡಿಸುವುದರ ಜೊತೆಗೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಮತ್ತು ಗಂಗಾ ಜಲಾನಯನ ಪ್ರದೇಶದ ಮಹಿಳಾ ಸ್ವಸಹಾಯ ಗುಂಪುಗಳನ್ನು ವಿಶೇಷವಾಗಿ ಬೆಂಬಲಿಸುತ್ತದೆ.  

ಹೆಚ್ಚುವರಿಯಾಗಿ, ನಿಸರ್ಗ-ಆಧಾರಿತ ಪರಿಹಾರಗಳ (ಎನ್.ಬಿ.) ಮೂಲಕ ಮೇಲಿನ ಗೋಮ್ತಿ ನದಿಯ ಜಲಾನಯನ ಪ್ರದೇಶದಲ್ಲಿ ಕೆಳ ಕ್ರಮಾಂಕದ ಸ್ಟ್ರೀಮ್ ಗಳು ಮತ್ತು ಉಪನದಿಗಳ ಮರುಸ್ಥಾಪನೆ ಯೋಜನೆಯನ್ನು ಕೂಡಾ ಕಾರ್ಯಕಾರಿ ಸಮಿತಿಯು ಅನುಮೋದಿಸಿದೆ. ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಕೇಂದ್ರೀಯ ವಿಶ್ವವಿದ್ಯಾನಿಲಯವು ರೂ. 81.09 ಲಕ್ಷ ವೆಚ್ಚದಲ್ಲಿ ಪ್ರಸ್ತಾಪಿಸಿದ ಈ ಯೋಜನೆಯು ಗಂಗಾ ನದಿಯ ಆರೋಗ್ಯವನ್ನು ಸುಧಾರಿಸಲು ಉಪಯೋಗಕಾರಿ ಯೋಜನೆಯಾಗಿದೆ.
 
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬೆಲಿಯಾಘಾಟಾ ವೃತ್ತಾಕಾರದ ಕಾಲುವೆಯ ದಂಡೆಯ (ಪೂರ್ವ ಮತ್ತು ಪಶ್ಚಿಮ) ಉದ್ದಕ್ಕೂ ಹೊಸ ಪೆನ್ ಸ್ಟಾಕ್ ಗೇಟ್ಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಗೇಟ್ಗಳ ನವೀಕರಣದ ಮೇಲೆ ಕೇಂದ್ರೀಕರಿಸುವ ಯೋಜನೆಯ ಅನುಮೋದನೆಯು ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ರೂ. 7.11 ಕೋಟಿ ವೆಚ್ಚದಲ್ಲಿ ಡಿ.ಬಿ.ಒಟಿ. ಮಾದರಿಯಡಿಯಲ್ಲಿ ರೂಪಿತವಾಗಲಿದೆ. ಒ&ಎಂ ವೆಚ್ಚವನ್ನು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಭರಿಸಬೇಕಾಗುತ್ತದೆ.

ಜಾರ್ಖಂಡ್ ನ ಸಾಹಿಬ್ ಗಂಜ್ನಲ್ಲಿರುವ ಉಧ್ವಾ ಸರೋವರದ ಪಕ್ಷಿಧಾಮದ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಗಾಗಿ 25.89 ಕೋಟಿ ರೂ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಸಮಗ್ರ ನಿರ್ವಹಣಾ ಯೋಜನೆ (ಐಎಂಪಿ) ಗೆ ಅನುಮೋದನೆಯಾಗಿದೆ.

ಪಶ್ಚಿಮ ಬಂಗಾಳದ ಶಾಂತಿಪುರ, ಗರುಲಿಯಾ ಮತ್ತು ಚಕ್ಧಾ ಪುರಸಭೆಗಳಲ್ಲಿ ವಿಶ್ವಬ್ಯಾಂಕ್ ನ ಪಿಬಿಐಜಿ ಘಟಕದ ಅಡಿಯಲ್ಲಿ ವಿದ್ಯುತ್ ಸ್ಮಶಾನಗಳ ನವೀಕರಣದ ಪ್ರಸ್ತಾವನೆಯನ್ನು ಕಾರ್ಯಕಾರಿ ಸಮಿತಿಯು ಅನುಮೋದಿಸಿತು. ಇದರ ಅಂದಾಜು ವೆಚ್ಚ ರೂ. 2.89 ಕೋಟಿ ಅನುಮೋದನೆಯಾಗಿದೆ. ಈ ಯೋಜನೆಯು 5 ವರ್ಷಗಳ ಕಾಲ ಒ&ಎಂ  ಸೇರಿದಂತೆ ಡಿ.ಬಿ.ಒಟಿ. ಮಾದರಿಯಡಿಯಲ್ಲಿ  ಅನುಮೋದನೆಯಾಗಿದೆ.

ರೂ. 522.85 ಕೋಟಿ ವೆಚ್ಚದ 30 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಮತ್ತು 175 ಕಿಮೀ ಉದ್ದದ ಒಳಚರಂಡಿ ಜಾಲದ ಸಾಮರ್ಥ್ಯದ ಮುಂಗೇರ್ ಒಳಚರಂಡಿ ನೆಟ್ವರ್ಕ್ ಮತ್ತು ಎಸ್ಟಿಪಿ ಯೋಜನೆಯ ಪರಿಷ್ಕೃತ ಯೋಜನೆಯು ಡಿ.ಬಿ.ಒಟಿ. ಮಾದರಿಯನ್ನು ಆಧರಿಸಿ ಅನುಮೋದನೆಯಾಗಿದೆ. ಇದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 15 ವರ್ಷಗಳ ಕಾರ್ಯಾಚರಣೆಯ ನಂತರ ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ.

ಐಐಟಿ (ಬಿ.ಎಚ್.ಯು) ಕಾರ್ಯಗತಗೊಳಿಸಲು ವಾರಣಾಸಿಯಲ್ಲಿ ಸ್ವಚ್ಛ ನದಿಗಳ (ಎಸ್.ಎಲ್.ಸಿ.ಆರ್.) ಸ್ಮಾರ್ಟ್ ಲ್ಯಾಬೊರೇಟರಿಗಾಗಿ ನೂತನ ಕಾರ್ಯದರ್ಶಿ ಕಚೇರಿ ( ಸೆಕ್ರೆಟರಿಯೇಟ್ ) ಸ್ಥಾಪನೆಗೆ ಸಮಿತಿಯು ಅನುಮೋದನೆ ನೀಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಜಾಗತಿಕ ಪರಿಣತಿಯನ್ನು ನಿಯೋಜಿಸಲು ಮತ್ತು ದೇಶದಾದ್ಯಂತ ಹರಡಿರುವ ಎಲ್ಲಾ ಸಣ್ಣ ನದಿಗಳಿಗೆ ಪುನಶ್ಚೇತನಗೊಳಿಸುವಿಕೆ ಮತ್ತು ಮರುವಿನ್ಯಾಸ ನೀಡಲು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಉದ್ದೇಶಿಸಿದೆ. ಇದು ಪರಿಸರ, ಆರ್ಥಿಕತೆ ಮತ್ತು ಒಟ್ಟಾರೆಯಾಗಿ ಸಮಾಜದ ನಡುವೆ ಸರಿಯಾದ ಸಮತೋಲನವನ್ನು ರಚಿಸುವ ಮೂಲಕ ಮಾಡಲಾಗುವ ಯೋಜನೆಯಾಗಿದೆ.

 

*****


(Release ID: 2050417) Visitor Counter : 74