ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕ ಸುಧಾರಣೆಗಳ ಪ್ರಾದೇಶಿಕ ಸಭೆ


ಎಲ್ಲಾ ವರ್ಗದ ಕಾರ್ಮಿಕರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸರ್ಕಾರ ಬದ್ಧ

Posted On: 30 AUG 2024 7:21PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಆರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಚಿವರ ಸಭೆ ನಡೆಯಿತು. ಕರ್ನಾಟಕದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಇದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಯೋಜಿಸಿರುವ ಆರು ಪ್ರಾದೇಶಿಕ ಸಭೆ ಸರಣಿಯ ಮೊದಲನೆಯ ಸಭೆಯದ್ದಾಗಿದೆ. ಇದು ಒಕ್ಕೂಟ ಮನೋಭಾವವನ್ನು ಎತ್ತಿ ಹಿಡಿಯಲಿದೆ.

ಕಾರ್ಮಿಕ ಸುಧಾರಣೆಗಳು, ಇ-ಶ್ರಮ್ ಪೋರ್ಟಲ್, ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರು (BoCW), ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದು ಎಲ್ಲಾ ವರ್ಗಗಳ ಕಾರ್ಮಿಕರನ್ನು ಒಳಗೊಳ್ಳುವ ಅಭಿವೃದ್ಧಿ ಮತ್ತು ಕಲ್ಯಾಣದ ಕುರಿತು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸಭೆಯಲ್ಲಿ ಭಾಷಣ ಮಾಡಿದ ಸಚಿವರಾದ ಶೋಭಾ ಕರಂದ್ಲಾಜೆ, ಕಾರ್ಮಿಕ ಸುಧಾರಣೆಗಳ ಯಶಸ್ವಿ ಅನುಷ್ಠಾನದಲ್ಲಿ ರಾಜ್ಯಗಳು ವಹಿಸಬೇಕಾದ ನಿರ್ಣಾಯಕ ಪಾತ್ರದ ಕುರಿತು ವಿವರಿಸಿದರು. ರಾಜ್ಯಗಳೊಂದಿಗೆ ನಿಕಟವಾಗಿ ಸಂವಹನ ನಡೆಸುವುದು, ಅಂತರವನ್ನು ಗುರುತಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸಹಕಾರಿ ರೀತಿಯಲ್ಲಿ ಮುಂದಿನ ದಾರಿಯನ್ನು ರೂಪಿಸುವ ಉದ್ದೇಶದಿಂದ ಸಭೆ ನಡೆಸಲಾಗಿದೆ ಎಂದು  ಅವರು ಹೇಳಿದರು. 

ಎಲ್ಲಾ ರಾಜ್ಯಗಳು ಇತರ ರಾಜ್ಯಗಳೊಂದಿಗೆ ಮತ್ತು ಕೇಂದ್ರ ಸರ್ಕಾರವು ರೂಪಿಸಿದ ಒಟ್ಟಾರೆ ದೃಷ್ಟಿಗೆ ಪೂರಕವಾಗಿ ಪ್ರೋತ್ಸಾಹಿಸಲಾಗಿದೆ. ರಾಜ್ಯಗಳಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಎಂಬ ಅಂಶವನ್ನು ಒತ್ತಿಹೇಳಿದರು. ಅಸಂಘಟಿತ ಕಾರ್ಮಿಕರ ಕಲ್ಯಾಣವನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳ ಪಾತ್ರವನ್ನು ಹೇಳಿದರು ಮತ್ತು ಇ-ಶ್ರಮ್ ಸೇರಿದಂತೆ ಸಚಿವಾಲಯವು ರಚಿಸಿದ ವಿವಿಧ ಕಾರ್ಯವಿಧಾನಗಳನ್ನು ಬಳಸಿಕೊಳ್ಳಲು ರಾಜ್ಯ ಅಧಿಕಾರಿಗಳಿಗೆ ಪ್ರೇರೇಪಿಸಿದರು.

ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಕಾರ್ಮಿಕ ಕಲ್ಯಾಣಕ್ಕಾಗಿ ರಾಜ್ಯದ ಬದ್ಧತೆ ಬಗ್ಗೆ ವಿವರಿಸಿದರು. ರಾಜ್ಯ-ನಿರ್ದಿಷ್ಟ ನಿಯಮಗಳ ಅಭಿವೃದ್ಧಿಯನ್ನು ಸಮಯಕ್ಕೆ ಮತ್ತು ಸಮಗ್ರ ರೀತಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಸಭೆಯಲ್ಲಿ ಮಾತನಾಡಿ, ಕಾರ್ಮಿಕ ವಲಯವನ್ನು ಸುಧಾರಿಸುವಲ್ಲಿ ‘ಇಡೀ ಸರ್ಕಾರದ’ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯದ ಬಗ್ಗೆ ಪ್ರತಿಪಾದಿಸಿದರು. ದೇಶಾದ್ಯಂತ ಏಕರೂಪತೆ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಕೇಂದ್ರ ಕಾರ್ಮಿಕ ಸಂಹಿತೆಗಳೊಂದಿಗೆ ನಿರ್ದಿಷ್ಟ ನಿಯಮಗಳನ್ನು ಸಮನ್ವಯಗೊಳಿಸಬೇಕಾಗಿದೆ ಮತ್ತು ಇದನ್ನು ಉದ್ಯಮ, ಕಾರ್ಮಿಕ ಸಂಘಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಮಾಡಬೇಕಾಗಿದೆ ಎಂದು ತಿಳಿಸಿದರು. 

ಅಸಂಘಟಿತ ಕಾರ್ಮಿಕರಿಗಾಗಿ ಇ-ಶ್ರಮ್ ಪೋರ್ಟಲ್ ಅನ್ನು ಏಕ-ನಿಲುಗಡೆ-ಪರಿಹಾರವಾಗಿ ಸ್ಥಾಪಿಸುವ ಪ್ರಯೋಜನಗಳನ್ನು ವಿವರಿಸಿದರು. ಅಸಂಘಟಿತ ಕಾರ್ಮಿಕ ಕಲ್ಯಾಣದ ಉದ್ದೇಶವನ್ನು ಸುಲಭದ ಮೂಲಕ ಸಾಧಿಸಲು ಹೆಚ್ಚು ಅಗತ್ಯವಿರುವ ದ್ವಿಮುಖ ಏಕೀಕರಣ ಪ್ರಕ್ರಿಯೆಯಲ್ಲಿ ಪೂರ್ವಭಾವಿ ನಿಲುವು ತೆಗೆದುಕೊಳ್ಳುವ ಕುರಿತು ರಾಜ್ಯಗಳಿಗೆ ತಿಳಿಸಲಾಯಿತು. ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮಗಳಿಗೆ ಪ್ರವೇಶ, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಉದ್ಯೋಗದ ನಿಖರ ಮಾಪನದ ಪ್ರಾಮುಖ್ಯತೆ ಬಗ್ಗೆ ವಿವರಿಸಿ, ರಾಜ್ಯಮಟ್ಟದ ಉದ್ಯೋಗ ಸೃಷ್ಟಿಯ ಉಪಕ್ರಮಗಳು ಮತ್ತು ಫಲಿತಾಂಶಗಳನ್ನು ಸೆರೆಹಿಡಿಯಲು ಸಚಿವಾಲಯವು ವೈಜ್ಞಾನಿಕ ಚೌಕಟ್ಟನ್ನು ಹೊರತರಲಿದೆ ಎಂದು ಅವರು ಹೇಳಿದರು.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಿರೀಕ್ಷೆಗಳ ಬಗ್ಗೆ ತಿಳಿಸಲಾಯಿತು. ಅವುಗಳು ಈ ಕೆಳಗಿನಂತಿವೆ:

ಎನ್ ಸಿ ಎಸ್ (NCS) ಪೋರ್ಟಲ್‌ನಲ್ಲಿ ಮಾಡ್ಯೂಲ್‌ಗಳ ಮೂಲಕ ಡಿಜಿಇ (DGE) ಗೆ ಉದ್ಯೋಗದ ರಿಟರ್ನ್ಸ್ ಮತ್ತು ಉದ್ಯೋಗ-ಮೇಳದ ವಿವರಗಳನ್ನು ಸಮಯೋಚಿತ ಮತ್ತು ನಿಯಮಿತವಾಗಿ ಸಲ್ಲಿಸುವುದು.

ಇ-ಶ್ರಮ್ ಪೋರ್ಟಲ್‌ನೊಂದಿಗೆ ಕಾಲಮಿತಿ ದ್ವಿಮುಖ ಏಕೀಕರಣ;

ಉದ್ಯೋಗ ದತ್ತಾಂಶ ರಚನೆ ಮತ್ತು ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಕೇಂದ್ರೀಕೃತ ವಿಧಾನವನ್ನು ಅಳವಡಿಸಿಕೊಳ್ಳುವುದು;

ರಾಜ್ಯ ನಿಯಮಗಳನ್ನು ರೂಪಿಸಲು ಸಲಹಾ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ.

ಬಿಒಸಿಡಬ್ಯೂ (BoCW) ಗಾಗಿ ಪ್ರಮುಖ ಅಂಶಗಳ ಕಲ್ಯಾಣ ವ್ಯಾಪ್ತಿಯನ್ನು ವಿಸ್ತರಿಸುವುದು, ಲೆಕ್ಕಪರಿಶೋಧನೆಗಳನ್ನು ಖಾತ್ರಿಪಡಿಸುವುದು ಮತ್ತು ನೋಂದಣಿಯನ್ನು ಹೆಚ್ಚಿಸಲು ಇ-ಶ್ರಮ್‌ನೊಂದಿಗೆ ಡೇಟಾವನ್ನು ಸಂಯೋಜಿಸುವುದು ಮತ್ತು PMJJBY/PMSBY/PMJAY/PMSYM ನಂತಹ ಕೇಂದ್ರೀಯ ಕಲ್ಯಾಣ ಯೋಜನೆಗಳ ವ್ಯಾಪ್ತಿಯನ್ನು BOC ಕಾರ್ಮಿಕರಿಗೆ ವಿಸ್ತರಿಸುವುದು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೆಸ್ ಸಂಗ್ರಹವನ್ನು ಹೆಚ್ಚಿಸಲು ಮತ್ತು ಮಾದರಿ ಕಲ್ಯಾಣ ಯೋಜನೆಗಳ ಅನುಸರಣೆಗೆ ಪ್ರೋತ್ಸಾಹಿಸಲಾಗಿದೆ.

ಉದ್ಯೋಗ ಸೃಷ್ಟಿ, ಉದ್ಯೋಗ ವಿನಿಮಯ ಕೇಂದ್ರಗಳ ಆಧುನೀಕರಣ, ಶಿಕ್ಷಣ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ನಿರ್ಮಿಸುವುದು ಮತ್ತು ಉದ್ಯಮದ ಸಹಯೋಗದ ಕುರಿತು ಚರ್ಚಿಸಲಾಯಿತು. ಅತ್ಯುತ್ತಮ ಮೂಲಸೌಕರ್ಯ ಬಳಕೆಯ ಮೂಲಕ ಇ ಎಸ್ ಐಸಿ(ESIC) ಸೇವೆಗಳನ್ನು ಸುಧಾರಿಸುವುದು, ರಾಜ್ಯ ಇ ಎಸ್ ಐ ಸಿ ಸೊಸೈಟಿಗಳನ್ನು ರಚಿಸುವುದು ಮತ್ತು ನಿಧಿಯನ್ನು ಸುಗಮಗೊಳಿಸುವುದಕ್ಕೆ ಒತ್ತು ನೀಡಲಾಯಿತು.

ಪ್ರತಿಯೊಂದು ವಿಷಯದ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ನಡುವೆ ವ್ಯಾಪಕವಾದ ಸಂವಾದಾತ್ಮಕ ಅಧಿವೇಶನಗಳನ್ನು ನಡೆಸಲಾಯಿತು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕಾಳಜಿಗಳನ್ನು ಚರ್ಚಿಸಲಾಯಿತು. ಭವಿಷ್ಯದ ಕ್ರಮಗಳಿಗೆ ಸಲಹೆಗಳನ್ನು ನೀಡಲಾಗಿದೆ. ವಿವಿಧ ರಾಜ್ಯಗಳ ಉತ್ತಮ ಅಭ್ಯಾಸಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಕಮಲ್ ಕಿಶೋರ್ ಸೋನ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ಕಾರ್ಮಿಕ ಸುಧಾರಣಾ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಂತರ ಸಹಕಾರ ನೀಡಬೇಕೆಂದು ಕೋರಿದರು. ಈ ಪ್ರಯತ್ನಗಳಿಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

 

*****


(Release ID: 2050325) Visitor Counter : 60


Read this release in: English , Urdu , Hindi , Tamil