ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭಾಶಯಗಳನ್ನು ಕೋರಿದ ಉಪ ರಾಷ್ಟ್ರಪತಿ

Posted On: 23 AUG 2024 12:03PM by PIB Bengaluru

ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಎಲ್ಲಾ ಸಹ ನಾಗರಿಕರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ.

'ಎಕ್ಸ್' ನಲ್ಲಿ ನೀಡಿರುವ ಸಂದೇಶದಲ್ಲಿ ಉಪ ರಾಷ್ಟ್ರಪತಿಯವರು ಈ ರೀತಿ ಹೇಳಿದ್ದಾರೆ:

“ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಎಲ್ಲಾ ಸಹ ನಾಗರಿಕರಿಗೆ ಶುಭಾಶಯಗಳು!

ಈ ದಿನವು #ಆತ್ಮನಿರ್ಭಾರತ (#Atmanirbharata)https://x.com/hashtag/Atmanirbharata?src=hashtag_click ಸಂಕಲ್ಪದ ಚೈತನ್ಯದಿಂದ ಪ್ರೇರಿತವಾದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯು ಭಾರತದ ಗಮನಾರ್ಹ ಪ್ರಯಾಣವನ್ನು ನೆನಪಿಸುತ್ತದೆ.

ನಮ್ಮ ಅದ್ಭುತ ಸಾಧನೆಗಳು ಬದ್ಧ ವಿಜ್ಞಾನಿಗಳಿಂದ ನಡೆಸಲ್ಪಡುವ ದೃಢಸಂಕಲ್ಪದ ರಾಷ್ಟ್ರವು ಏನನ್ನು ಸಾಧಿಸಬಹುದು ಎಂಬುದರ ಪ್ರತಿಬಿಂಬವಾಗಿದೆ.

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಗೆ ಶುಭಾಶಯಗಳು, ಅವರ ನಾವೀನ್ಯತೆ ಮತ್ತು ದೃಷ್ಟಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಮತ್ತು ಮಾನವೀಯತೆಯನ್ನು ಪ್ರೇರೇಪಿಸಲಿ. 
 

#ರಾಷ್ಟ್ರೀಯಬಾಹ್ಯಾಕಾಶದಿನ #NationalSpaceDay https://x.com/hashtag/NationalSpaceDay?src=hashtag_click"
 

 

 

*****


(Release ID: 2048577) Visitor Counter : 28