ರೈಲ್ವೇ ಸಚಿವಾಲಯ

ತುಮಕೂರು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ನಿಲುಗಡೆಯನ್ನು ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಉದ್ಘಾಟಿಸಿದರು

Posted On: 23 AUG 2024 7:00PM by PIB Bengaluru

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಇಂದು ತುಮಕೂರು ರೈಲು ನಿಲ್ದಾಣದಲ್ಲಿ ಹೊಸ ನಿಲುಗಡೆಯ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿಸಿದರು.

ಹೊಸದಾಗಿ ಸೇರಿಸಲಾದ ನಿಲುಗಡೆಯು ರೈಲು ಸಂಖ್ಯೆ 20662 ಧಾರವಾಡ – ಕೆ ಎಸ್ ಆರ್ ಬೆಂಗಳೂರು ಮತ್ತು ಅದರ ರಿಟರ್ನ್ ಸೇವೆ ರೈಲು ಸಂಖ್ಯೆ 20661 ಕೆ ಎಸ್ ಆರ್ ಬೆಂಗಳೂರು – ಧಾರವಾಡ ಇದರ ಭಾಗವಾಗಿದೆ. ಈ ಮೂಲಕ ತುಮಕೂರಿನ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. 24.8.24 ರಿಂದ ಕೆಳಗೆ ನೀಡಲಾದ ಸಮಯದ ಪ್ರಕಾರ ರೈಲು ಸಂಖ್ಯೆ 20661 ತುಮಕೂರು ನಿಲ್ದಾಣದಲ್ಲಿ ಬೆಳಿಗ್ಗೆ ನಿಲ್ಲುತ್ತದೆ.

 

ರೈಲು ಸಂಖ್ಯೆ

ರೈಲು ಮಾರ್ಗ

ಆಗಮನದ ಸಮಯ

ನಿರ್ಗಮನದ ಸಮಯ

20662

ಧಾರವಾಡ-ಕೆ ಎಸ್‌ ಆರ್ ಬೆಂಗಳೂರು

18:18 ಗಂ

 18:20 ಗಂ

20661

ಕೆ ಎಸ್ ಆರ್ ಬೆಂಗಳೂರು-ಧಾರವಾಡ

06:32 ಗಂ

 06:34 ಗಂ

 

WhatsApp Image 2024-08-23 at 6.48.52 PM.jpeg

ಶ್ರೀ ವಿ.ಸೋಮಣ್ಣ ಮಾತನಾಡಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ರೈಲ್ವೇಯಲ್ಲಿ ಭಾರಿ ಪರಿವರ್ತನೆಯಾಗಿದೆ. ಪ್ರಧಾನ ಮಂತ್ರಿಯವರು ರೈಲ್ವೆಯನ್ನು ‘ರಾಷ್ಟ್ರದ ಅಭಿವೃದ್ಧಿಯ ಎಂಜಿನ್’ಎಂದು ಕರೆದಿದ್ದಾರೆ ಎಂದು ಹೇಳಿದರು. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳ ಸರಾಸರಿ ವೆಚ್ಚ ಸುಮಾರು 9 ಪಟ್ಟು (2009-14ರಲ್ಲಿದ್ದ 800 ಕೋಟಿ ರೂ.ಗಳಿಂದ ಪ್ರಸ್ತುತ 7500 ಕೋಟಿ ರೂ.ಗೆ) ಹೆಚ್ಚಾಗಿದೆ ಎಂದು ಅವರು ಹೇಳಿದರು.

ರಸ್ತೆ ಮತ್ತು ರೈಲು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ತುಮಕೂರು ನಗರದಲ್ಲಿ ಜುಲೈ 2024 ರಲ್ಲಿ ಅಂದಾಜು 350 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ರೈಲು ಮೇಲ್ಸೇತುವೆಗಳನ್ನು ಅನುಮೋದಿಸಲಾಗಿದೆ ಎಂದು ಸಚಿವರು ಹೇಳಿದರು. ದಕ್ಷಿಣ ಭಾರತದ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮುತ್ತಿರುವ ತುಮಕೂರಿಗೆ ಸಂಪರ್ಕವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು: ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರು ರೈಲು ನಿಲ್ದಾಣವನ್ನು ವಿಶ್ವದರ್ಜೆಯ ಟರ್ಮಿನಲ್ ಆಗಿ ಮೇಲ್ದರ್ಜೆಗೇರಿಸಲು ನೀಲನಕ್ಷೆ ಅಂತಿಮಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಶ್ರೀ ವಿ ಸೋಮಣ್ಣ ಅವರು ತುಮಕೂರಿನಿಂದ ಯಶವಂತಪುರಕ್ಕೆ ಇತರ ಗಣ್ಯರು ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಅದೇ ರೈಲಿನಲ್ಲಿ ಪ್ರಯಾಣಿಸಿದರು.

ಎರಡು ಹೊಸ ರೈಲು ಮಾರ್ಗ ಯೋಜನೆಗಳು ಅಂದರೆ ತುಮಕೂರು-ದಾವಣಗೆರೆ (ಚಿತ್ರದುರ್ಗ ಮೂಲಕ) ಮತ್ತು ತುಮಕೂರು-ರಾಯದುರ್ಗ ಯೋಜನೆಗಳು ಕ್ರಮವಾಗಿ 2140 ಕೋಟಿ ರೂ. ಮತ್ತು 2500 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿವೆ. ಕರ್ನಾಟಕದ ಇತರ ಪ್ರದೇಶಗಳಿಗೆ ತುಮಕೂರಿನ ಸಂಪರ್ಕವನ್ನು ಸುಧಾರಿಸಲು ಈ ಎರಡು ಯೋಜನೆಗಳು ಪ್ರಮುಖವಾಗಿವೆ ಮತ್ತು ಶೀಘ್ರವಾಗಿ ಪೂರ್ಣಗೊಳಿಸಲು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಶ್ರೀ ಸೋಮಣ್ಣ ವಿವರಿಸಿದರು. ತುಮಕೂರು-ದಾವಣಗೆರೆ ಹೊಸ ಮಾರ್ಗವು ಎರಡು ನಗರಗಳ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ರೈಲು ಪ್ರಯಾಣದ ದೂರವನ್ನು 65 ಕಿಮೀಗಳಷ್ಟು ಕಡಿಮೆ ಮಾಡುತ್ತದೆ; ತುಮಕೂರು-ರಾಯದುರ್ಗ ಹೊಸ ಮಾರ್ಗವು ಪೂರ್ಣಗೊಂಡ ನಂತರ ತುಮಕೂರು-ಬಳ್ಳಾರಿ ನಡುವಿನ ಅಂತರವು ಸುಮಾರು 130 ಕಿ.ಮೀಗಳಷ್ಟು ಕಡಿಮೆಯಾಗುತ್ತದೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಎರಡು ಯೋಜನೆಗಳಿಗೆ ಕರ್ನಾಟಕ ಸರ್ಕಾರ ಶೀಘ್ರ ಭೂಸ್ವಾಧೀನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವರು ಒತ್ತಾಯಿಸಿದರು.

ತುಮಕೂರು-ಬೆಂಗಳೂರು ನಡುವೆ ಶೀಘ್ರದಲ್ಲೇ ದೈನಂದಿನ ಮೆಮು ರೈಲು ಸೇವೆಯನ್ನು ಪರಿಚಯಿಸಲಾಗುವುದು ಎಂದು ಸಚಿವರು ಘೋಷಿಸಿದರು. ಇದು ಸಾವಿರಾರು ವಿದ್ಯಾರ್ಥಿಗಳು, ದೈನಂದಿನ ಕಚೇರಿಗೆ ಹೋಗುವವರು, ಕಾರ್ಖಾನೆಗಳ ನೌಕರರು ಮುಂತಾದವರಿಗೆ ಸಹಾಯ ಮಾಡುತ್ತದೆ. ಇದು ತುಮಕೂರು ಮತ್ತು ಬೆಂಗಳೂರು ನಗರದ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿದೆ.

 

*****



(Release ID: 2048353) Visitor Counter : 51


Read this release in: English , Urdu , Hindi , Tamil