ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ವಿದ್ಯಾರ್ಥಿಗಳಿಗಾಗಿ ಹ್ಯಾಕಥಾನ್ ಪ್ರಾರಂಭಿಸಿದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 


ಭಾರತೀಯ ಮಾನದಂಡಗಳನ್ನು ಉತ್ತೇಜಿಸಲು ಆನ್‌ಲೈನ್ ಚಟುವಟಿಕೆಗಳಿಗೆ ವೇದಿಕೆಯನ್ನು ವಿನ್ಯಾಸಗೊಳಿಸಲು ಹ್ಯಾಕಥಾನ್ ಚಟುವಟಿಕೆ

Posted On: 20 AUG 2024 5:27PM by PIB Bengaluru

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹ್ಯಾಕಥಾನ್ ಅನ್ನು ಪ್ರಾರಂಭಿಸಿದೆ. BIS ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಮಾಡಿದ ಸಂಸ್ಥೆಗಳಾದ್ಯಂತ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಆಹ್ವಾನ ನೀಡಲಾಗಿದೆ. BIS ಗುರುತಿಸಿರುವ ನೈಜ-ಪ್ರಪಂಚದ ಸವಾಲುಗಳನ್ನು ನಿಭಾಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆ-ಪರಿಹರಿಸುವ ಮತ್ತು ಸಹಯೋಗದ ಕೌಶಲ್ಯಗಳನ್ನು ಪ್ರೇರೇಪಿಸಲು ಈ ಹ್ಯಾಕ್‌ಥಾನ್‌ ಪ್ರಾರಂಭಿಸಲಾಗಿದೆ.

ಆನ್‌ಲೈನ್ ಚಟುವಟಿಕೆಗಳು ಮತ್ತು ಗೇಮ್‌ಗಳನ್ನು ಆಯೋಜಿಸುವ ಗುರಿಯನ್ನು ಹೊಂದಿರುವ ವೇದಿಕೆಯ ಅಭಿವೃದ್ಧಿಗೆ ಕೊಡುಗೆ ನೀಡಲು ವಿದ್ಯಾರ್ಥಿಗಳಿಗೆ ಈ ಹ್ಯಾಕಥಾನ್ ಅನನ್ಯ ಅವಕಾಶ ಕಲ್ಪಿಸುತ್ತಿದೆ. ಕುತೂಹ, ಆಸಕ್ತಿ ಬೆಳೆಸುವುದು, ಜ್ಞಾನವನ್ನು ಹೆಚ್ಚಿಸುವುದು ಮತ್ತು ಭಾರತೀಯ ಮಾನದಂಡಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಮತ್ತು ಇತರ BIS ಮಧ್ಯಸ್ಥಗಾರರಿಗೆ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದಕ್ಕೆ ಆದ್ಯತೆ ನೀಡಲಾಗಿದೆ. ದೇಶದ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಗುಣಮಟ್ಟ ಮತ್ತು ಮಾನದಂಡಗಳ ಅರಿವು ಬಹಳ ಮುಖ್ಯವಾಗಿದೆ. ಸ್ಟ್ಯಾಂಡರ್ಡ್ಸ್ ಪ್ರಚಾರಕ್ಕಾಗಿ, ಗುಣಮಟ್ಟದ ಸಂಪರ್ಕ, ಮನಕ್ ಮಹೋತ್ಸವ, ಮನಕ್ ಮಂಥನ್, ಕ್ಯಾಪ್ಸುಲ್ ಕೋರ್ಸ್, ಗ್ರಾಮ ಪಂಚಾಯತ್ ಸಂವೇದನೆ, ಸ್ಟ್ಯಾಂಡರ್ಡೈಸೇಶನ್, ಜಿಲ್ಲಾಮಟ್ಟದ, ರಾಜ್ಯ ಮಟ್ಟದ ಸಮಿತಿಯಂತಹ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಸರ್ಕಾರಿ ಪಾಲುದಾರರು, ಕೈಗಾರಿಕೆಗಳು, ಗ್ರಾಹಕರು ಮತ್ತು ಅಕಾಡೆಮಿಯಾ ಎಂದು ವರ್ಗೀಕರಿಸಲಾದ ಮಧ್ಯಸ್ಥಗಾರರೊಂದಿಗೆ BIS ತೊಡಗಿಸಿಕೊಂಡಿದೆ. ಅಧಿಕೃತ ಸಂವೇದನಾಶೀಲತೆ, ರಾಜ್ಯಮಟ್ಟದ ಅಧಿಕಾರಿಗಳ ಸಂವೇದನಾಶೀಲತೆ, ಗ್ರಾಹಕರ ಜಾಗೃತಿ ಕಾರ್ಯಕ್ರಮಗಳು, ನಿವಾಸಿ/ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಸಂವೇದನಾಶೀಲತೆ, ಪರವಾನಗಿದಾರರ ಸಭೆಗಳು, ಕೈಗಾರಿಕೆ ಮತ್ತು ಕೈಗಾರಿಕಾ ಸಂಘದ ಸಭೆಗಳು, ಗುಣಮಟ್ಟ ಕ್ಲಬ್‌ಗಳು ಮತ್ತು ಅದರ ಚಟುವಟಿಕೆಗಳು, ವಿಶೇಷ ಭೇಟಿಗಳು, ಮಾರ್ಗದರ್ಶಕರ ತರಬೇತಿ, ಸಂಪನ್ಮೂಲ ಸಿಬ್ಬಂದಿ ತರಬೇತಿ, ವಿಜ್ಞಾನ ಶಿಕ್ಷಕರ ತರಬೇತಿ ಇತ್ಯಾದಿ ಸೇರಿದೆ.

ಆನ್‌ಲೈನ್ ಚಟುವಟಿಕೆಗಳು ತಮ್ಮ ಸ್ಥಳದ ಸೌಕರ್ಯದೊಂದಿಗೆ BIS ನ ಚಟುವಟಿಕೆಗಳೊಂದಿಗೆ ಹೆಚ್ಚಿನ ಸಂಖ್ಯೆಯ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ, ಜೊತೆಗೆ ಗುಣಮಟ್ಟ ಮತ್ತು ಮಾನದಂಡಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿದೆ. BIS ಗುಣಮಟ್ಟ ಮತ್ತು ಮಾನದಂಡಗಳ ವಿಷಯದ ಮೇಲೆ ಕೆಲವು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚು ಆಕರ್ಷಕ ಮತ್ತು ಉತ್ತೇಜಿಸುವ ಆನ್‌ಲೈನ್ ಚಟುವಟಿಕೆಗಳು ಗುಣಮಟ್ಟ ಮತ್ತು ಭಾರತೀಯ ಮಾನದಂಡಗಳ ಅರಿವು ಮತ್ತು ತಿಳಿವಳಿಕೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ.

ಆನ್‌ಲೈನ್ ಚಟುವಟಿಕೆಯ ಅರಿವು ಮತ್ತು ಗುಣಮಟ್ಟದ ಪ್ರಜ್ಞೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ BIS ಚಟುವಟಿಕೆಗಳ ವಿವಿಧ ಅಂಶಗಳನ್ನು ಒಳಗೊಂಡಿರಬಹುದು. ಚಟುವಟಿಕೆಗಳು, ಗೇಮ್‌ಗಳು ಸಮಯಕ್ಕೆ ಸೀಮಿತವಾಗಿರಬಹುದು ಅಥವಾ ಶಾಶ್ವತವಾಗಿರಬಹುದು. ವಿಶ್ವ ಮಾನದಂಡಗಳ ದಿನ, ವಿಶ್ವ ಗ್ರಾಹಕ ಹಕ್ಕುಗಳ ದಿನ, ಸಂಸ್ಥಾಪನಾ ದಿನ ಮುಂತಾದ ವಿವಿಧ ವಿಶೇಷ ಸಂದರ್ಭಗಳಲ್ಲಿ BIS ಈ ಚಟುವಟಿಕೆಯನ್ನು ನಡೆಸಬಹುದು. ಈ ಚಟುವಟಿಕೆಗಳಲ್ಲಿ ಭಾಗವಹಿಸುವವರ 5 ಲಕ್ಷಕ್ಕಿಂತ ಹೆಚ್ಚಿರಬಹುದು.

ಹ್ಯಾಕಥಾನ್‌ನ ಪ್ರಮುಖ ವಿವರಗಳು:

* ಹ್ಯಾಕಥಾನ್ ಪೋರ್ಟಲ್: ವಿದ್ಯಾರ್ಥಿಗಳು https://www.services.bis.gov.in/php/BIS_2.0/bis-hackathon/ ಮೂಲಕ ಹ್ಯಾಕಥಾನ್ ಪೋರ್ಟಲ್‌ಗೆ ಭೇಟಿ ನೀಡಬಹುದು.

* ಮಾರ್ಗಸೂಚಿಗಳು: ಭಾಗವಹಿಸುವವರು ಮಾರ್ಗಸೂಚಿಗಳನ್ನು ಇಲ್ಲಿ ನೋಡಬಹುದು https://www.services.bis.gov.in/php/BIS_2.0/bis-hackathon/assets/images/guidelines.pdf

* ಪ್ರಾಬ್ಲಮ್‌ ಸ್ಟೇಟ್‌ಮೆಂಟ್‌: ಭಾಗವಹಿಸುವವರು ಭಾರತೀಯ ಮಾನದಂಡಗಳ ಮೇಲೆ ಕೇಂದ್ರೀಕರಿಸಿದ ಆನ್‌ಲೈನ್ ಚಟುವಟಿಕೆಗಳು ಮತ್ತು ಗೇಮ್‌ಗಳಿಗೆ ವೇದಿಕೆಯನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರಾಬ್ಲಮ್‌ ಸ್ಟೇಟ್‌ಮೆಂಟ್‌ https://www.services.bis.gov.in/php/BIS_2.0/bis-hackathon/PSInfo/detail/1 ನಲ್ಲಿ ಲಭ್ಯವಿದೆ.

* ಕೊನೆಯ ದಿನಾಂಕ: ಎಲ್ಲಾ ನಮೂದುಗಳನ್ನು 23ನೇ ಆಗಸ್ಟ್ 2024 ರೊಳಗೆ ಸಲ್ಲಿಸಬೇಕು.

ಬಿಐಎಸ್ ಹ್ಯಾಕಥಾನ್ ನೈಜ-ಪ್ರಪಂಚದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಶೇಷ ಅನುಭವವನ್ನು ಪಡೆಯುವಾಗ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲು ಒಂದು ವೇದಿಕೆ ಒದಗಿಸಿದೆ. ಎಲ್ಲಾ ಅರ್ಹ ವಿದ್ಯಾರ್ಥಿ ತಂಡಗಳು ಭಾಗವಹಿಸಲು ಮತ್ತು ಗುಣಮಟ್ಟ ಹಾಗೂ ಸುರಕ್ಷತೆಯ ಪ್ರಗತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸಲಾಗುವುದು.

 

*****


(Release ID: 2047091) Visitor Counter : 39