ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಬಿಹಾರದ ಬಿಹ್ತಾದಲ್ಲಿ ರೂ.1413 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ಸಿವಿಲ್ ಎನ್ಕ್ಲೇವ್ ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

प्रविष्टि तिथि: 16 AUG 2024 8:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬಿಹ್ತಾ, ಪಾಟ್ನಾ, ಬಿಹಾರ್ನಲ್ಲಿ ರೂ.1413 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ಸಿವಿಲ್ ಎನ್ಕ್ಲೇವ್ ನ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ ಪ್ರಸ್ತಾವನೆಯನ್ನು ಅನುಮೋದಿಸಿದೆ.

ಈ ಮೂಲಸೌಕರ್ಯ ಯೋಜನೆಯು ಪಾಟ್ನಾ ವಿಮಾನ ನಿಲ್ದಾಣದಲ್ಲಿ ನಿರೀಕ್ಷಿತ ಸಾಮರ್ಥ್ಯದ ಮಿತಿ ಮೀರುವ ಸಮಸ್ಯೆಯನ್ನು   ಪರಿಹರಿಸಲು ಕಾರ್ಯತಂತ್ರದ ಕ್ರಮವಾಗಿದೆ. ಎಎಐ ಈಗಾಗಲೇ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ, ಸೀಮಿತ ಸ್ಥಳದಿಂದಾಗಿ ಮತ್ತಷ್ಟು ವಿಸ್ತರಣೆಯನ್ನು ಸಾಧ್ಯವಿಲ್ಲದಾಗಿದೆ.

ಬಿಹ್ತಾ ವಿಮಾನ ನಿಲ್ದಾಣದಲ್ಲಿ ಪ್ರಸ್ತಾವಿತ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು 66,000 ಚದರ ಮೀಟರ್ ವ್ಯಾಪಿಸಿದೆ ಮತ್ತು 3000 ಪೀಕ್ ಅವರ್ ಪ್ರಯಾಣಿಕರನ್ನು (ಪಿಎಚ್‌ ಪಿ) ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಾರ್ಷಿಕವಾಗಿ 50 ಲಕ್ಷ ಪ್ರಯಾಣಿಕರನ್ನು ಪೂರೈಸುತ್ತದೆ. ಅಗತ್ಯವಿರುವಾಗ ಇದನ್ನು ಇನ್ನೂ 50 ಲಕ್ಷಕ್ಕೆ ವಿಸ್ತರಿಸಲಾಗುವುದು ಮತ್ತು ಅಂತಿಮ ಸಾಮರ್ಥ್ಯದಲ್ಲಿ ಪ್ರಯಾಣಿಕರ ಸಂಖ್ಯೆಯು ವರ್ಷಕ್ಕೆ ಒಂದು ಕೋಟಿಯಾಗಿರುತ್ತದೆ. ಯೋಜನೆಯ ಪ್ರಮುಖ ಅಂಶಗಳಲ್ಲಿ A-321/B-737-800/A-320 ಮಾದರಿಯ ವಿಮಾನಗಳಿಗೆ ಸೂಕ್ತವಾದ 10 ಪಾರ್ಕಿಂಗ್ ಬೇಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಏಪ್ರನ್ ನಿರ್ಮಾಣ, ಹಾಗೆಯೇ ಎರಡು ಲಿಂಕ್ ಟ್ಯಾಕ್ಸಿವೇಗಳು ಸೇರಿವೆ.

 

*****


(रिलीज़ आईडी: 2046179) आगंतुक पटल : 85
इस विज्ञप्ति को इन भाषाओं में पढ़ें: Odia , English , Urdu , Hindi_MP , हिन्दी , Marathi , Assamese , Bengali , Manipuri , Punjabi , Gujarati , Tamil , Telugu , Malayalam