ರಕ್ಷಣಾ ಸಚಿವಾಲಯ
azadi ka amrit mahotsav

ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ: ರಕ್ಷಣಾ ಖಾತೆ ಸಹಾಯಕ ಸಚಿವರ ಪರಿಶೀಲನೆ


ಸಮಾರಂಭದ ಸಿದ್ಧತೆಯಲ್ಲಿ ತೊಡಗಿರುವ ಎನ್ ಸಿ ಸಿ ಕೆಡೆಟ್ ಗಳು ಮತ್ತು ಎನ್ ಎಸ್ ಎಸ್ ಸ್ವಯಂಸೇವಕರಿಗೆ ಸ್ಮರಣಿಕೆಗಳನ್ನು ನೀಡಿ ಗೌರವ

Posted On: 13 AUG 2024 5:39PM by PIB Bengaluru

ರಕ್ಷಣಾ ಖಾತೆ ಸಹಾಯಕ  ಸಚಿವ ಶ್ರೀ ಸಂಜಯ್ ಸೇಠ್ ಅವರು 2024ರ ಆಗಸ್ಟ್ 13 ರಂದು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಎನ್.ಸಿ.ಸಿ. ಕೆಡೆಟ್ ಗಳು, ಎನ್ಎಸ್ಎಸ್ ಸ್ವಯಂಸೇವಕರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಯ ಪ್ರಯತ್ನಗಳನ್ನು ಶ್ಲಾಘಿಸಿದರು.

ನಂತರ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವ ಎನ್.ಸಿ.ಸಿ. ಕೆಡೆಟ್ ಗಳು, ಮತ್ತು ಎನ್ಎಸ್ಎಸ್ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯೋಧರು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯ ಮೂಲವಾಗಿರುತ್ತಾರೆ ಎಂದು ಹೇಳಿದರು. ಎನ್ ಸಿಸಿ ಕೆಡೆಟ್ ಗಳು ಭವಿಷ್ಯದ ಸೈನಿಕರು, ಅವರು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬಲವಾದ ಆಧಾರಸ್ತಂಭವಾಗಲಿದ್ದಾರೆ ಎಂದು ಅವರು ಬಣ್ಣಿಸಿದರು. "ನೀವು ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿಯ ಅನೇಕ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಬದಲಾವಣೆಯ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತೀರಿ. ನೀವು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್, ಸ್ವಚ್ಛ ಭಾರತ ಅಭಿಯಾನ, ಅಂತಾರಾಷ್ಟ್ರೀಯ ಯೋಗ ದಿನದಂತಹ ಅನೇಕ ರಾಷ್ಟ್ರೀಯ ಅಭಿಯಾನಗಳಿಗಾಗಿ ಕೆಲಸ ಮಾಡಿದ್ದೀರಿ, ಅವುಗಳನ್ನು ಸಂಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ವಿಗೊಳಿಸಿದ್ದೀರಿ.  ಈಗಲೂ ನೀವು ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೀರಿ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ಮೋದಿ ಜೀ ಅವರ "ಆತ್ಮನಿರ್ಭರ ಭಾರತ" ಮತ್ತು "ವಿಕಸಿತ ಭಾರತ" ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಎನ್.ಸಿ.ಸಿ. ಕೆಡೆಟ್ ಗಳ ಪಾತ್ರ ಮಹತ್ವದ್ದಾಗಿದೆ ಎಂದೂ  ರಕ್ಷಣಾ ಸಹಾಯಕ  ಸಚಿವರು ಹೇಳಿದರು

 ಶ್ರೀ ಸಂಜಯ್ ಸೇಠ್ ಅವರು ಎನ್ ಸಿಸಿ ಕೆಡೆಟ್ ಗಳ ಉತ್ಸಾಹ ಹಾಗು ನೈತಿಕ ಸ್ಥೈರ್ಯವನ್ನು ಶ್ಲಾಘಿಸಿದರು ಮತ್ತು ಅವರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

 

 

*****


(Release ID: 2045107) Visitor Counter : 54