ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತೀಯ ಪುರುಷರ ಹಾಕಿ ತಂಡವನ್ನು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅಭಿನಂದಿಸಿದ್ದಾರೆ; ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ


"ನೀವು ಭಾರತಕ್ಕೆ ಅಪಾರ ಕೀರ್ತಿ ತಂದಿದ್ದೀರಿ ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಅವರ ಕನಸುಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿದ್ದೀರಿ" - ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ

Posted On: 10 AUG 2024 1:36PM by PIB Bengaluru

ಪ್ಯಾರಿಸ್ 2024 ರ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕವನ್ನು ಪಡೆಯುವಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಹಾಕಿ ತಂಡವನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿದರು.

ಕೇಂದ್ರ ಕ್ರೀಡಾ ಸಚಿವ ಡಾ. ಮಾಂಡವೀಯ ಅವರು ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು, ಜಾಗತಿಕ ಕ್ರೀಡಾ ವೇದಿಕೆಯಲ್ಲಿ ತಂಡವು ನೀಡಿದ ಅತ್ಯುತ್ತಮ ಪ್ರದರ್ಶನವು ಇಡೀ ರಾಷ್ಟ್ರಕ್ಕೆ ಹೆಮ್ಮೆಯನ್ನು ತುಂಬಿದೆ.

"ನಿಮ್ಮ ಸಾಧನೆಯ ಬಗ್ಗೆ ಇಡೀ ರಾಷ್ಟ್ರ ಹೆಮ್ಮೆಪಡುತ್ತಿದೆ" ಎಂದು ಕೇಂದ್ರ ಕ್ರೀಡಾ ಸಚಿವ ಡಾ. ಮಾಂಡವೀಯ ಅವರು ಹೇಳಿದ್ದಾರೆ. “ಈ ಗೆಲುವು ನಿಮ್ಮ ಪರಿಶ್ರಮ, ತಂಡದ ಒಟ್ಟಾರೆ ಕೆಲಸ ಮತ್ತು ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ನೀವು ಭಾರತಕ್ಕೆ ಅಪಾರ ವೈಭವವನ್ನು ತಂದಿದ್ದೀರಿ ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಅವರ ಕನಸುಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿದ್ದೀರಿ” ಎಂದು ಸಚಿವರು ಹೇಳಿದರು.

 

ತಂಡದ ಯಶಸ್ಸಿನಲ್ಲಿ, ತಂಡದ ದಣಿವರಿಯದ ಪ್ರಯತ್ನಗಳನ್ನು, ಪ್ರತಿ ಕ್ರೀಡಾಳುವಿನ ನಿರ್ಣಾಯಕ ಪಾತ್ರಗಳನ್ನು ಗುರುತಿಸುವ ಮೂಲಕ ತರಬೇತಿ ಸಿಬ್ಬಂದಿ ನೀಡಿರುವ ಸಕಾಲಿಕ ಬೆಂಬಲವನ್ನು ಕೇಂದ್ರ ಸಚಿವರು ವಿವರಿಸಿದರು. ಭಾರತದಲ್ಲಿ ಹಾಕಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ದೇಶದ ಕ್ರೀಡಾ ಪ್ರತಿಭೆಯನ್ನು ಪೋಷಿಸಲು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಸರ್ಕಾರದ ಬದ್ಧತೆಯನ್ನು ಕೇಂದ್ರ ಸಚಿವರು ಪುನರುಚ್ಚರಿಸಿದರು.

"ಹಾಕಿ ನಮಗೆ ಕೇವಲ ಒಂದು ಕ್ರೀಡೆಗಿಂತ ಹೆಚ್ಚು-ಇದು ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ತಂಡವು ಪ್ರದರ್ಶಿಸಿದ ಕಠಿಣ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹವು ಈ ಐತಿಹಾಸಿಕ ಯಶಸ್ಸಿಗೆ ಕಾರಣವಾಗಿದೆ. ತಂಡದ ದೃಢ ಸಂಕಲ್ಪ ಮತ್ತು ಸಂಕಲ್ಪದಿಂದ ಏನನ್ನು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ'' ಎಂದು ಸಚಿವ ಡಾ.ಮಾಂಡವಿಯವರು ಹೇಳಿದರು.

ಡಾ. ಮಾಂಡವೀಯ ಅವರು ಆಟಗಾರರೊಂದಿಗೆ ಸಂವಾದ ನಡೆಸುವಾಗ, ಉತ್ಕೃಷ್ಟತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳತ್ತ ತಮ್ಮ ದೃಷ್ಟಿಯನ್ನು ಕದೇಕಚಿತ್ತದಿಂದ ಇಡುವಂತೆ ಕ್ರೀಡಾಪಟುಗಳಿಗೆ ಹಿತನುಡಿದು ಪ್ರೋತ್ಸಾಹಿಸಿದರು.

 

*****



(Release ID: 2044119) Visitor Counter : 29