ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ - ಕುಸುಮ್ ಯೋಜನೆ

Posted On: 06 AUG 2024 2:56PM by PIB Bengaluru

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ - ಕುಸುಮ್ ಯೋಜನೆಯನ್ನು ಮಾರ್ಚ್, 2019 ರಲ್ಲಿ ಪ್ರಾರಂಭಿಸಿತು. ರೈತರಿಗೆ ಇಂಧನ ಮತ್ತು ನೀರಿನ ಭದ್ರತೆಯನ್ನು ಒದಗಿಸುವುದು, ಅವರ ಆದಾಯವನ್ನು ಹೆಚ್ಚಿಸುವುದು, ಕೃಷಿ ವಲಯವನ್ನು ಡೀಸೆಲ್ ರಹಿತ ಕೃಷಿಯಾಗಿ ಮಾಡುವುದು ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಜನವರಿ 2024 ರಲ್ಲಿ ಉನ್ನತೀಕರಣಗೊಳಿಸಲಾಯಿತು.

ಪ್ರಧಾನಮಂತ್ರಿ - ಕುಸುಮ್ ಯೋಜನೆಯಡಿಯಲ್ಲಿ ಮೂರು ವರ್ಗೀಕೃತ ಘಟಕಗಳು ರೈತರಿಗೆ ಈ ಕೆಳಗಿನ ಪ್ರಯೋಜನವನ್ನು ನೀಡುತ್ತವೆ:-

i. ಘಟಕ-ಎ: ರೈತರು ತಮ್ಮ ಭೂಮಿಯಲ್ಲಿ 2ಎಂಡಬ್ಯೂ ಸಾಮರ್ಥ್ಯದವರೆಗೆ ವಿಕೇಂದ್ರೀಕೃತ ಗ್ರೌಂಡ್/ಸ್ಟಿಲ್ಟ್ ಮೌಂಟೆಡ್ ಗ್ರಿಡ್ ಸಂಪರ್ಕಿತ ಸೌರ ಅಥವಾ ಇತರ ನವೀಕರಿಸಬಹುದಾದ ಶಕ್ತಿ ಆಧಾರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬಹುದು. ನವೀಕರಿಸಬಹುದಾದ ಇಂಧನ ವಿದ್ಯುತ್ ಸ್ಥಾವರವನ್ನು (ಆರ್.ಇ.ಪಿ.ಪಿ) ರೈತರು / ಡೆವಲಪರ್ ತಮ್ಮ ಸ್ವಂತ ಭೂಮಿಯಲ್ಲಿ ನೇರವಾಗಿ ಅಥವಾ ರೈತರು/ಸಹಕಾರಿ ಸಂಸ್ಥೆಗಳು/ ಪಂಚಾಯತ್ ಗಳು/ ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿ.ಒ.)/ನೀರು ಬಳಕೆದಾರರ ಸಂಘಗಳ (ಡಬ್ಲ್ಯೂ.ಯು.ಎ) ಸಹಭಾಗಿತ್ವದಲ್ಲಿ ಸ್ಥಾಪಿಸಬಹುದು. ಈ ವಿದ್ಯುತ್ ಸ್ಥಾವರದಿಂದ ಉತ್ಪಾದಿಸುವ ನವೀಕರಿಸಬಹುದಾದ ಶಕ್ತಿಯನ್ನು ಡಿಸ್ಕಾಂಗಳು ಪೂರ್ವ-ನಿಗದಿತ ಲೆವೆಲೈಸ್ಡ್ ಸುಂಕದಲ್ಲಿ ಖರೀದಿಸುತ್ತವೆ. ರೈತರು ತಮ್ಮ ಭೂಮಿಯನ್ನು ಡೆವಲಪರ್ ಗೆ ಗುತ್ತಿಗೆ ನೀಡಿದರೆ ಅವರು ಗುತ್ತಿಗೆ ಬಾಡಿಗೆಗೆ ಅರ್ಹರಾಗಿರುತ್ತಾರೆ.

ಡಿ ಐ ಎಸ್ ಸಿ ಓ ಎಂ ಗಳಿಂದ ಯೂನಿಟ್ ಗೆ  ರೂ. 0.40 ರಂತೆ ಖರೀದಿ  ಅಥವಾ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಪ್ರತಿ ಎಂಡಬ್ಯೂ ಸಾಮರ್ಥ್ಯದ ಸ್ಥಾಪನೆಗೆ ರೂ. 6.6 ಲಕ್ಷ ಸಹಾಯ, ಇದರಲ್ಲಿ ಯಾವುದು ಕಡಿಮೆ ಇರುತ್ತದೋ ಅದು ಎಂಬ ಆಧಾರದಲ್ಲಿ, ಪರ್ಫಾರ್ಮೆನ್ಸ್ ಬೇಸ್ಡ್ ಇನ್ಸೆಂಟಿವ್ (ಪಿ.ಬಿ.ಐ) ನೀಡಲಾಗುವುದು. ಡಿಸ್ಕಾಂಗಳು ಬಯಸಿದರೆ, ಈ ಘಟಕದ ಅಡಿಯಲ್ಲಿ, ನವೀಕರಿಸಬಹುದಾದ ಇಂಧನ ವಿದ್ಯುತ್ ಸ್ಥಾವರಗಳ (ಆರ್.ಇ.ಪಿ.ಪಿ) ಮಾಲೀಕರಿಗೆ ಆರ್.ಇ ಪವರ್ ನ ಹೆಚ್ಚು ಸ್ಪರ್ಧಾತ್ಮಕ ಸುಂಕವನ್ನು ಪಡೆಯಲು, ಕೇಂದ್ರ ಸರ್ಕಾರವು ಅವರಿಗೆ ನೀಡುವ ಪರ್ಫಾರ್ಮೆನ್ಸ್ ಬೇಸ್ಡ್ ಇನ್ಸೆಂಟಿವ್ (ಪಿ.ಬಿ.ಐ) ಅನ್ನು ಕೂಡಾ ಹೆಚ್ಚುವರಿಯಾಗಿ ನೀಡಬಹುದು. 

ii ಘಟಕ-ಬಿ: ಇದರ ಅಡಿಯಲ್ಲಿ ಘಟಕ ರೈತರು ನೀರಾವರಿಗಾಗಿ ಸ್ಟ್ಯಾಂಡ್ ಎಲೋನ್  ಸೌರ ಕೃಷಿ ಪಂಪ್ ಗಳನ್ನು ಸ್ಥಾಪಿಸಬಹುದು. ಸ್ಟ್ಯಾಂಡ್ ಎಲೋನ್  ಸೌರ ಕೃಷಿ ಪಂಪ್ ಗಾಗಿ ಸರ್ಕಾರವು ಕೇಂದ್ರ ಹಣಕಾಸು ನೆರವು (ಸಿ.ಎಫ್.ಎ.) 30% ರಷ್ಟು (ಅಥವಾ ಈಶಾನ್ಯ ಪ್ರದೇಶ/ ಗುಡ್ಡಗಾಡು ಪ್ರದೇಶ/ದ್ವೀಪಗಳಿಗೆ 50%) ಒದಗಿಸುತ್ತದೆ.

iii ಕಾಂಪೊನೆಂಟ್-ಸಿ: ಈ ಘಟಕವು ಅದರ ವೈಯಕ್ತಿಕ ಪಂಪ್ ಸೋಲಾರೈಸೇಶನ್ (ಐಪಿಎಸ್) ಮೋಡ್ನ ಅಡಿಯಲ್ಲಿ ಗ್ರಿಡ್-ಸಂಪರ್ಕಿತ ಕೃಷಿ ಪಂಪ್ಗಳ ಸೌರೀಕರಣವನ್ನು ಸಕ್ರಿಯಗೊಳಿಸುತ್ತದೆ. ಕೃಷಿ ಹೊರೆಯ ಫೀಡರ್ ಮಟ್ಟದ ಸೋಲಾರೈಸೇಶನ್ (ಎಫ್ಎಲ್ಎಸ್) ಅನ್ನು ಸಹ ಸಕ್ರಿಯಗೊಳಿಸುತ್ತದೆ. ಐಪಿಎಸ್  ಮತ್ತು ಎಫ್.ಎಲ್.ಎಸ್. ಎರಡಕ್ಕೂ ಕಾಂಪೊನೆಂಟ್-ಸಿ ಅಡಿಯಲ್ಲಿ ಸರ್ಕಾರವು ಕೇಂದ್ರ ಹಣಕಾಸು ನೆರವು (ಸಿ.ಎಫ್.ಎ.) 30% ರಷ್ಟು (ಅಥವಾ ಈಶಾನ್ಯ ಪ್ರದೇಶ/ ಗುಡ್ಡಗಾಡು ಪ್ರದೇಶ/ದ್ವೀಪಗಳಿಗೆ 50%) ಒದಗಿಸುತ್ತದೆ. ಇದು ರೈತರಿಗೆ ಹಗಲಿನಲ್ಲಿ ಖಚಿತವಾದ ಸೌರಶಕ್ತಿ ವಿದ್ಯುತ್ತನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ದಿನಾಂಕ 30.06.2024 ರ ಮಾಹಿತಿಯಂತೆ ದೇಶದಲ್ಲಿ ಪ್ರಧಾನಮಂತ್ರಿ – ಕುಸುಮ್ ಯೋಜನೆಯ ಮೂಲಕ ಪ್ರಯೋಜನ ಪಡೆದ ರೈತರ ಒಟ್ಟು ಸಂಖ್ಯೆ 4,11,222.

ಉತ್ತರ ಪ್ರದೇಶದಲ್ಲಿ “ರಾಜ್ಯ ಅನುಷ್ಠಾನ ಸಂಸ್ಥೆ”ಯು 29.07.2024 ರವರೆಗೆ ಒದಗಿಸಿದ ಮಾಹಿತಿಯ ಪ್ರಕಾರ,  ಪ್ರಧಾನಮಂತ್ರಿ - ಕುಸುಮ್ ಯೋಜನೆಯನ್ನು ಉತ್ತರ ಪ್ರದೇಶ ರಾಜ್ಯದ ಒಟ್ಟಾರೆ 51,097 ರೈತರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ.

ಪ್ರಧಾನಮಂತ್ರಿ - ಕುಸುಮ್  ಯೋಜನೆಯ ಕಾಂಪೊನೆಂಟ್-ಬಿ ಮತ್ತು ಕಾಂಪೊನೆಂಟ್-ಸಿ ಅಡಿಯಲ್ಲಿ, ಸ್ವತಂತ್ರ ಕೃಷಿ ಪಂಪ್ಗಳು ಮತ್ತು ಗ್ರಿಡ್-ಸಂಪರ್ಕಿತ ಕೃಷಿ ಪಂಪ್ ಗಳ ಸೌರೀಕರಣಗಳಿಗಾಗಿ, ಭಾರತ ಸರ್ಕಾರವು ಕೇಂದ್ರ ಹಣಕಾಸು ನೆರವು (ಸಿ.ಎಫ್.ಎ.) 30% (ಅಥವಾ ಈಶಾನ್ಯ ಪ್ರದೇಶ/ಗುಡ್ಡಗಾಡು ಪ್ರದೇಶ/ದ್ವೀಪಗಳಿಗೆ 50%) ಒದಗಿಸುತ್ತದೆ. 

ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(Release ID: 2042318) Visitor Counter : 58