ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸುವ ಪರಿವರ್ತನಶೀಲ ನಿರ್ಧಾರವು  ದುರ್ಬಲರ/ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸಬಲೀಕರಣದ ಹೊಸ ಯುಗವನ್ನು ತಂದಿದೆ ಹಾಗು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ಐತಿಹಾಸಿಕ ಕ್ರಮಕ್ಕೆ  ಇಂದಿಗೆ ಐದು ವರ್ಷಗಳಾಗುತ್ತಿವೆ
 
ಈ ಪ್ರದೇಶದ ಯುವಕರು ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಚಾಲನೆ ನೀಡಿದ್ದಾರೆ, ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮೋದಿ ಸರ್ಕಾರದ ಪ್ರಯತ್ನಗಳಿಗೆ ಅದ್ಭುತ ಯಶಸ್ಸನ್ನು ತಂದಿದ್ದಾರೆ
 
ಈ ಹೆಗ್ಗುರುತು ನಿರ್ಧಾರಕ್ಕಾಗಿ ನಾವು ಮೋದಿ ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಮತ್ತು ಪ್ರದೇಶದ ಆಕಾಂಕ್ಷೆಗಳು ಹಾಗು ಪರಿವರ್ತನಶೀಲ ಪ್ರಗತಿಯನ್ನು ಮುನ್ನಡೆಸುವ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸುತ್ತೇವೆ

Posted On: 05 AUG 2024 5:38PM by PIB Bengaluru

370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಪರಿವರ್ತನಪರ ನಿರ್ಧಾರವು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸಬಲೀಕರಣದ ಹೊಸ ಯುಗವನ್ನು ತೆರೆದಿದೆ ಹಾಗು  ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ.

ಎಕ್ಸ್  ಪ್ಲಾಟ್ಫಾರ್ಮ್ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಶ್ರೀ ಅಮಿತ್ ಶಾ ಅವರು , "ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ಐತಿಹಾಸಿಕ ಕ್ರಮಕ್ಕೆ  ಇಂದು ಐದು ವರ್ಷಗಳಾಗುತ್ತಿವೆ.  ಈ ಪರಿವರ್ತನಾತ್ಮಕ ನಿರ್ಧಾರವು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸಬಲೀಕರಣದ ಹೊಸ ಯುಗಕ್ಕೆ ನಾಂದಿ ಹಾಡಿದೆ ಹಾಗು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ಈ ಪ್ರದೇಶದ ಯುವಜನತೆ ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಚಾಲನೆ ನೀಡಿದ್ದಾರೆ, ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮೋದಿ ಸರ್ಕಾರದ ಪ್ರಯತ್ನಗಳಿಗೆ  ಅದ್ಭುತ ಯಶಸ್ಸನ್ನು ತಂದಿದ್ದಾರೆ. ಈ ಹೆಗ್ಗುರುತು ನಿರ್ಧಾರಕ್ಕಾಗಿ ನಾವು ಮೋದಿ ಜೀ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಮತ್ತು ಪ್ರದೇಶದ ಆಕಾಂಕ್ಷೆಗಳು ಹಾಗು  ಪರಿವರ್ತನಾತ್ಮಕ  ಪ್ರಗತಿಯನ್ನು ಮುನ್ನಡೆಸುವ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸುತ್ತೇವೆ.” ಎಂದು ಹೇಳಿದ್ದಾರೆ.

 

 

*****


(Release ID: 2041999) Visitor Counter : 55