ಜಲ ಶಕ್ತಿ ಸಚಿವಾಲಯ
ಜಲ ಜೀವನ್ ಮಿಷನ್‌ನಿಂದ ಗುಣಮಟ್ಟದ ನೀರು ಪೂರೈಕೆ
ಕಳೆದ 5 ವರ್ಷಗಳಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ಪೀಡಿತ ವಸತಿಗಳ ಸಂಖ್ಯೆಯಲ್ಲಿ ಗಮನಾರ್ಹ ಕಡಿತ
ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಸ್ಥಾಪಿಸಲಾದ 2,163 ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳು; ಭಾರತದಾದ್ಯಂತ ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು ಬಳಸಿಕೊಂಡು 24.61 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೀರು ಪರೀಕ್ಷೆಯ ತರಬೇತಿ ಪಡೆದಿದ್ದಾರೆ
Posted On:
05 AUG 2024 1:57PM by PIB Bengaluru
ಭಾರತ ಸರ್ಕಾರವು, ರಾಜ್ಯಗಳ ಸಹಭಾಗಿತ್ವದಲ್ಲಿ, ದೇಶದ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ, ನಿಗದಿತ ಗುಣಮಟ್ಟದಲ್ಲಿ ಮತ್ತು ನಿಯಮಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಕುಡಿಯುವ ನಲ್ಲಿ ನೀರನ್ನು ಒದಗಿಸಲು ಆಗಸ್ಟ್, 2019 ರಿಂದ ಜಲ ಜೀವನ್ ಮಿಷನ್ (ಜೆಜೆಎಂ) ಅನ್ನು ಜಾರಿಗೊಳಿಸುತ್ತಿದೆ. ಕುಡಿಯುವ ನೀರು ರಾಜ್ಯದ ವಿಷಯವಾಗಿರುವುದರಿಂದ, ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳ ಯೋಜನೆ, ಅನುಮೋದನೆ, ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳದ್ದಾಗಿದೆ. ಭಾರತ ಸರ್ಕಾರವು ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವ ಮೂಲಕ ರಾಜ್ಯಗಳಿಗೆ ಬೆಂಬಲ ನೀಡುತ್ತದೆ.
15ನೇ ಆಗಸ್ಟ್ 2019 ರಂದು ಜಲ ಜೀವನ್ ಮಿಷನ್ ಘೋಷಣೆಯ ಸಮಯದಲ್ಲಿ, 3.23 ಕೋಟಿ (17%) ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಲ್ಲಿಯವರೆಗೆ, 31.07.2024 ರವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, ಸುಮಾರು 11.80 ಕೋಟಿ ಹೆಚ್ಚುವರಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಹೀಗಾಗಿ, 31.07.2024 ರವರೆಗೆ, ದೇಶದ 5.83 ಲಕ್ಷ ಹಳ್ಳಿಗಳಲ್ಲಿ 19.32 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ, 15.03 ಕೋಟಿ (77.81%) ಗೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳಲ್ಲಿ ನಲ್ಲಿ ನೀರು ಸರಬರಾಜು ಪಡೆಯುತ್ತಿವೆ ಎಂದು ವರದಿಯಾಗಿದೆ. ಇದಲ್ಲದೆ, 31.07.2024 ರವರೆಗೆ ಸುಮಾರು 2.31 ಲಕ್ಷ ಹಳ್ಳಿಗಳು "ಹರ್ ಘರ್ ಜಲ್" ಆಗಿವೆ ಎಂದು ವರದಿಯಾಗಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ, ಅಸ್ತಿತ್ವದಲ್ಲಿರುವ ಭಾರತೀಯ ಮಾಪನ ಬ್ಯೂರೋ ಮಾರ್ಗಸೂಚಿಗಳ ಪ್ರಕಾರ, ಬಿಐಎಸ್: 10500 ಮಾನದಂಡಗಳನ್ನು ಕೊಳವೆ ನೀರು ಸರಬರಾಜು ಯೋಜನೆಗಳ ಮೂಲಕ ಸರಬರಾಜು ಮಾಡುವ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮಾನದಂಡಗಳಾಗಿ ಅಳವಡಿಸಿಕೊಳ್ಳಲಾಗಿದೆ. ಜೆಜೆಎಂ ಅಡಿಯಲ್ಲಿ, ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡಲು ನೀರು ಸರಬರಾಜು ಯೋಜನೆಗಳನ್ನು ಯೋಜಿಸುವಾಗ, ಗುಣಮಟ್ಟ-ಬಾಧಿತ ವಸತಿಗಳಿಗೆ ಆದ್ಯತೆ ನೀಡಲಾಗುತ್ತದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಹಂಚಿಕೆ ಮಾಡುವಾಗ, ಆರ್ಸೆನಿಕ್ ಮತ್ತು ಫ್ಲೋರೈಡ್ ಸೇರಿದಂತೆ ರಾಸಾಯನಿಕ ಮಾಲಿನ್ಯಕಾರಕಗಳಿಂದ ಪ್ರಭಾವಿತವಾಗಿರುವ ವಾಸಸ್ಥಳಗಳಲ್ಲಿ ವಾಸಿಸುವ ಜನಸಂಖ್ಯೆಗೆ ಶೇ.10 ರಷ್ಟು ಆದ್ಯತೆಯನ್ನು ನೀಡಲಾಗುತ್ತದೆ.
ಜೆಜೆಎಂ ಅಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿನ ಮಾಲಿನ್ಯವನ್ನು ವಾಸಸ್ಥಳದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಜಲ ಜೀವನ್ ಮಿಷನ್ ಪ್ರಾರಂಭವಾದಾಗಿನಿಂದ, ಆರ್ಸೆನಿಕ್ ಮತ್ತು ಫ್ಲೋರೈಡ್ ಪೀಡಿತ ವಸತಿಗಳ ಸಂಖ್ಯೆಯು ಕಡಿಮೆಯಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, 31.07.2024 ರಂತೆ, ದೇಶದಲ್ಲಿ 316 ಆರ್ಸೆನಿಕ್ ಮತ್ತು 265 ಫ್ಲೋರೈಡ್ ಪೀಡಿತ ಗ್ರಾಮೀಣ ವಸತಿಗಳಿವೆ. ಈ ಎಲ್ಲಾ ಉಳಿದ 316 ಆರ್ಸೆನಿಕ್ ಪೀಡಿತ ಮತ್ತು 265 ಫ್ಲೋರೈಡ್ ಪೀಡಿತ ವಾಸಸ್ಥಳಗಳಲ್ಲಿ ಸಮುದಾಯ ನೀರು ಶುದ್ಧೀಕರಣ ಘಟಕಗಳ (ಸಿಡಬ್ಲ್ಯುಪಿಪಿ) ಮೂಲಕ ಅಡುಗೆ ಮತ್ತು ಕುಡಿಯುವ ಅವಶ್ಯಕತೆಗಳಿಗಾಗಿ ನೀರನ್ನು ಒದಗಿಸಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಜೆಜೆಎಂ-ಐಎಂಐಎಸ್ ನಲ್ಲಿ ವರದಿ ಮಾಡಿದಂತೆ ಆರ್ಸೆನಿಕ್ ಮತ್ತು ಫ್ಲೋರೈಡ್ ಪೀಡಿತ ವಸತಿಗಳ ವರ್ಷವಾರು ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ:
ಮಾಲಿನ್ಯಕಾರಕ
|
ಆರ್ಸೆನಿಕ್/ಫ್ಲೋರೈಡ್ ಪೀಡಿತ ವಸತಿಗಳ ಸಂಖ್ಯೆ
|
1.4.2019
|
1.4.2020
|
1.4.2021
|
1.4.2022
|
1.4.2023
|
1.4.2024
|
31.7.2024
|
ಆರ್ಸೆನಿಕ್
|
14,020
|
4,568
|
1,717
|
800
|
507
|
378
|
316
|
ಫ್ಲೋರೈಡ್
|
7,996
|
5,796
|
1,021
|
638
|
393
|
348
|
265
|
|
|
|
|
|
|
ಮೂಲ: JJM-IMIS
|
ಕಾರ್ಯಾಚರಣಾ ಮಾರ್ಗಸೂಚಿಗಳ ಪ್ರಕಾರ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಾರ್ಷಿಕ ನಿಧಿಯ ಶೇ.2 ರವರೆಗೆ ಜೆಜೆಎಂ ಅಡಿಯಲ್ಲಿ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು (WQM&S) ಚಟುವಟಿಕೆಗಳಿಗೆ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ಬಲಪಡಿಸುವುದು, ಉಪಕರಣಗಳ ಖರೀದಿಯನ್ನು ಒಳಗೊಂಡಿರುತ್ತದೆ. ಉಪಕರಣಗಳು, ರಾಸಾಯನಿಕಗಳು, ಗಾಜಿನ ಸಾಮಾನುಗಳು, ಉಪಭೋಗ್ಯ ವಸ್ತುಗಳು, ನುರಿತ ಮಾನವಶಕ್ತಿಯನ್ನು ನೇಮಿಸಿಕೊಳ್ಳುವುದು, ಕ್ಷೇತ್ರ ಪರೀಕ್ಷಾ ಕಿಟ್‌ಗಳನ್ನು (ಎಫ್ ಟಿ ಕೆ) ಬಳಸಿಕೊಂಡು ಸಮುದಾಯದಿಂದ ಕಣ್ಗಾವಲು, ಜಾಗೃತಿ ಮೂಡಿಸುವಿಕೆ, ನೀರಿನ ಗುಣಮಟ್ಟದ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳು, ಪ್ರಯೋಗಾಲಯಗಳ ಮಾನ್ಯತೆ/ಮನ್ನಣೆ ಇತ್ಯಾದಿಗಳಿಗೆ ಬಳಸಬಹುದು.
ನೀರಿನ ಗುಣಮಟ್ಟಕ್ಕಾಗಿ ನೀರಿನ ಮಾದರಿಗಳನ್ನು ಪರೀಕ್ಷಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಸಕ್ರಿಯಗೊಳಿಸಲು ಮತ್ತು ಕುಡಿಯುವ ನೀರಿನ ಮೂಲಗಳ ಮಾದರಿ ಸಂಗ್ರಹಣೆ, ವರದಿ, ಮೇಲ್ವಿಚಾರಣೆ ಮತ್ತು ಕಣ್ಗಾವಲುಗಾಗಿ, ಆನ್‌ಲೈನ್ ಜೆಜೆಎಂ - ನೀರಿನ ಗುಣಮಟ್ಟ ನಿರ್ವಹಣೆ ಮಾಹಿತಿ ವ್ಯವಸ್ಥೆ (WQMIS) ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. WQMIS ಮೂಲಕ ವರದಿ ಮಾಡಲಾದ ನೀರಿನ ಗುಣಮಟ್ಟದ ಪರೀಕ್ಷೆಯ ರಾಜ್ಯವಾರು ವಿವರಗಳು ಸಾರ್ವಜನಿಕ ಡೊಮೇನ್ ನಲ್ಲಿ ಲಭ್ಯವಿವೆ ಮತ್ತು ಅವುಗಳನ್ನು ಇಲ್ಲಿ ನೋಡಬಹುದು:
https://ejalshakti.gov.in/WQMIS/Main/report
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, ಇದುವರೆಗೆ 2,163 ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳು ವಿವಿಧ ಹಂತಗಳಲ್ಲಿವೆ. ರಾಜ್ಯ, ಪ್ರಾದೇಶಿಕ, ಜಿಲ್ಲೆ, ಉಪ-ವಿಭಾಗ ಮತ್ತು/ಅಥವಾ ಬ್ಲಾಕ್ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನೀರಿನ ಗುಣಮಟ್ಟ ಪರೀಕ್ಷೆಯನ್ನು ಉತ್ತೇಜಿಸಲು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಜನಸಾಮಾನ್ಯರಿಗೆ ತಮ್ಮ ನೀರಿನ ಮಾದರಿಗಳನ್ನು ಅತ್ಯಲ್ಪ ದರದಲ್ಲಿ ಪರೀಕ್ಷಿಸಲು ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ತೆರೆದಿವೆ.
ಜೆಜೆಎಂ ಡ್ಯಾಶ್‌ಬೋರ್ಡ್ ನಲ್ಲಿ 'ಸಿಟಿಜನ್ ಕಾರ್ನರ್' ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಿಡಬ್ಲ್ಯುಎಸ್ ಮೂಲಕ ಸರಬರಾಜಾಗುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಮತ್ತು ವಿಶ್ವಾಸವನ್ನು ಮೂಡಿಸಲು ಸಾರ್ವಜನಿಕ ಡೊಮೇನ್ ನಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಫಲಿತಾಂಶಗಳ ಪ್ರದರ್ಶನವನ್ನು ಇದು ಒಳಗೊಂಡಿದೆ.
ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಮುದಾಯಗಳನ್ನು ಸಶಕ್ತಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು (ಎಫ್ ಟಿ ಕೆ) ಬಳಸಿಕೊಂಡು ನೀರಿನ ಗುಣಮಟ್ಟ ಪರೀಕ್ಷೆಯನ್ನು ನಡೆಸಲು ಪ್ರತಿ ಹಳ್ಳಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ 5 ವ್ಯಕ್ತಿಗಳನ್ನು ಗುರುತಿಸಲು ಮತ್ತು ತರಬೇತಿ ನೀಡಲು ಸಲಹೆ WQMIS ನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, ಇಲ್ಲಿಯವರೆಗೆ 24.61 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು ಗಳನ್ನು ಬಳಸಿಕೊಂಡು ನೀರು ಪರೀಕ್ಷಿಸುವ ತರಬೇತಿ ನೀಡಲಾಗಿದೆ.
ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಜಲಶಕ್ತಿ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಈ ವಿಷಯ ತಿಳಿಸಿದ್ದಾರೆ.
*****
(Release ID: 2041719)
Visitor Counter : 82