ರೈಲ್ವೇ ಸಚಿವಾಲಯ

ಪ್ರತಿದಿನ 20 ಸಾವಿರಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ನಿರ್ವಹಿಸುತ್ತಿರುವ ಅವಿರತ ವಾಗಿ ಶ್ರಮಿಸುತ್ತಿರುವ 12 ಲಕ್ಷಕ್ಕೂ ಅಧಿಕ ರೈಲ್ವೆ ಇಲಾಖೆ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಿದ ಅಶ್ವಿನಿ ವೈಷ್ಣವ್ 


ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು 26.52 ಲಕ್ಷಕ್ಕೂ ಹೆಚ್ಚು ಅಲ್ಟ್ರಾಸಾನಿಕ್ ದೋಷ ಪತ್ತೆ ಪರೀಕ್ಷೆಗಳನ್ನು ನಡೆಸುವುದರ ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ರೈಲು ಹಳಿಗಳು ಮುರಿಯುವ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 85% ಕಡಿಮೆಯಾಗಿದ್ದು,  2013-14ರಲ್ಲಿ ಇವುಗಳ ಸಂಖ್ಯೆ 2,500 ರಷ್ಟಿದ್ದರೆ 2024 ರಲ್ಲಿ ಇದು 324 ಕ್ಕೆ ಇಳಿದಿದೆ

ಕಳೆದ 10 ವರ್ಷಗಳಲ್ಲಿ ಆಗಿರುವ 44,000 ಕಿಮೀ ಉದ್ದದ ರೈಲು ಮಾರ್ಗಗಳ ವಿದ್ಯುದ್ದೀಕರಣದಿಂದಾಗಿ 640 ಕೋಟಿ ಲೀಟರ್ ನಷ್ಟು ಡೀಸೆಲ್ ಉಳಿತಾಯವಾಗುತ್ತಿದೆ ಮತ್ತು 400 ಕೋಟಿ ಕಿಲೋಗಳಷ್ಟು ಕಾರ್ಬನ್ ಡೈಆಕ್ಸಾಯ್ಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ

Posted On: 01 AUG 2024 6:01PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಸಂಸತ್ತಿನಲ್ಲಿ 2024-25 ರ ಹಣಕಾಸು ವರ್ಷಕ್ಕೆ ರೈಲ್ವೆ ಸಚಿವಾಲಯದ ನಿಯಂತ್ರಣದಲ್ಲಿರುವ ಅನುದಾನಗಳ ಬೇಡಿಕೆಗಳ ಕುರಿತು ತಮ್ಮ ಭಾಷಣದಲ್ಲಿ ಭಾರತೀಯ ರೈಲ್ವೆಯ  ಮಹತ್ವದ ಸಾಧನೆಗಳು ಮತ್ತು ಭವಿಷ್ಯದ ಯೋಜನೆಗಳ ಸಾದರ ಪಡಿಸಿದರು. ತಮ್ಮ ಭಾಷಣದಲ್ಲಿ ಅವರು ರೈಲ್ವೆ ಉದ್ಯೋಗಿಗಳ ಸಮರ್ಪಣೆ,  ರೈಲ್ವೆ ಸುರಕ್ಷತೆಯಲ್ಲಿನ ಪ್ರಗತಿ ಮತ್ತು ರೈಲ್ವೆ ವಿದ್ಯುದ್ದೀಕರಣದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆಯೂ ತಿಳಿಸಿದರು. 

ರೈಲ್ವೆ ನೌಕರರ ಶ್ಲಾಘನೆ 

ಪ್ರತಿದಿನ ಸುಮಾರು 20,000 ರೈಲುಗಳ ಸುಗಮ ಕಾರ್ಯಾಚರಣೆಯನ್ನು ಸಾಧ್ಯವಾಗಿಸುವ ಮೂಲಕ ಹಗಲಿರುಳು ಶ್ರಮಿಸುತ್ತಿರುವ ಸುಮಾರು 12 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಶ್ರೀ ವೈಷ್ಣವ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ರೈಲ್ವೆಯನ್ನು ದೇಶದ ಜೀವನಾಡಿ ಎಂದು  ಬಣ್ಣಿಸಿದ ಅವರು ರಾಷ್ಟ್ರದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. 

ರೈಲ್ವೆ ಸುರಕ್ಷತೆ

ರೈಲ್ವೆ ಸುರಕ್ಷತೆ ಕುರಿತು ಮಾತನಾಡಿದ ಶ್ರೀ ವೈಷ್ಣವ್ ಅವರು ಕಳೆದ ಒಂದು ದಶಕದಲ್ಲಿ ಈ ನಿಟ್ಟಿನಲ್ಲಿ ಮಾಡಿದ ಪ್ರಗತಿಯನ್ನು ತಿಳಿಸಿದರು. ಸುಮಾರು 26,52,000 ಅಲ್ಟ್ರಾಸಾನಿಕ್ ದೋಷ ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ರೈಲು ಹಳಿಗಳು ಮುರಿಯುವ, ಬಿರುಕು ಬಿಡುವ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 85% ಕಡಿಮೆಯಾಗಿದ್ದು, 2013-14ರಲ್ಲಿ ಇವುಗಳ ಸಂಖ್ಯೆ 2,500 ರಷ್ಟಿದ್ದರೆ 2024 ರಲ್ಲಿ ಇದು 324 ಕ್ಕೆ ಇಳಿದಿದೆ.  ಇದಲ್ಲದೆ, ರೈಲ್ವೆ ನಿಲ್ದಾಣಗಳು ಇವುಗಳ ಮೇಲೆ ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಮೂಲಕ ನಿಯಂತ್ರಣವನ್ನು ಹೊಂದಿವೆ ಎಂದು ಅವರು ಹೇಳಿದರು.  2004 ಮತ್ತು 2014 ರ ನಡುವೆ ಕೇವಲ 837 ನಿಲ್ದಾಣಗಳು ಈ ತಂತ್ರಜ್ಞಾನವನ್ನು ಹೊಂದಿದ್ದವು.  ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿದ್ದು 2,964 ಕೇಂದ್ರಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. 

ರೈಲ್ವೆ ವಿದ್ಯುದ್ದೀಕರಣದ ಪ್ರಗತಿ 

ರೈಲ್ವೆ ವಿದ್ಯುದೀಕರಣದಲ್ಲಿ ಕಳೆದ ದಶಕದಲ್ಲಿ ಮಾಡಿದ ಗಮನಾರ್ಹ ಪ್ರಗತಿಯ ಕುರಿತು ವಿವರಿಸಿದ ಸಚಿವರು ಕಳೆದ 50 ವರ್ಷಗಳಲ್ಲಿ ಕೇವಲ 20,000 ಕಿ.ಮೀ ನಷ್ಟು ರೈಲು ಮಾರ್ಗಗಳು ವಿದ್ಯುದೀಕರಗೊಂಡಿದ್ದರೆ, ಕಳೆದ 10 ವರ್ಷಗಳಲ್ಲಿ 44,000 ಕಿ.ಮೀ ವಿದ್ಯುದೀಕರಣಗಳಿಸಲಾಗಿದೆ. ಇದರಿಂದಾದ ಪ್ರಯೋಜನಗಳು ಹಲವು.  600 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಾಟ ಮಾಡಲು ಸಾಧ್ಯವಾಗಿದ್ದು, ಸುಮಾರು 640 ಕೋಟಿ ಲೀಟರ್ ನಷ್ಟು ಡೀಸೆಲ್ ಉಳಿತಾಯ ಮಾಡಲಾಗಿದೆ. 400 ಕೋಟಿ ಕಿಲೋಗಳಷ್ಟು  ಕಾರ್ಬನ್ ಡೈಆಕ್ಸಾಯ್ಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ.  ಇದು 16 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ. 

ಈ ಮೈಲಿಗಲ್ಲುಗಳು ಭಾರತೀಯ ರೈಲ್ವೇಯನ್ನು ಆಧುನೀಕರಿಸುವ ಮತ್ತು ಅದನ್ನು ಸುರಕ್ಷಿತ,  ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಕುರಿತು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

 

*****



(Release ID: 2040654) Visitor Counter : 25