ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಫಾಸ್ಟ್ ಟ್ರ್ಯಾಕ್ ವಲಸೆ-ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ

Posted On: 30 JUL 2024 4:31PM by PIB Bengaluru

ಸರ್ಕಾರವು 22.06.2024 ರಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ)ದ ಟಿ -3 ಟರ್ಮಿನಲ್ ನಲ್ಲಿ ಫಾಸ್ಟ್ ಟ್ರ್ಯಾಕ್ ವಲಸೆ-ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮವನ್ನು (ಎಫ್ ಟಿಐ-ಟಿಟಿಪಿ) ಪ್ರಾರಂಭಿಸಿದೆ. ಎಫ್ ಟಿಐ-ಟಿಟಿಪಿಯು ವೇಗವಾಗಿ, ಸುಗಮ ಮತ್ತು ಸುರಕ್ಷಿತ ವಲಸೆ ಅನುಮತಿಯೊಂದಿಗೆ ಅಂತರರಾಷ್ಟ್ರೀಯ ಚಲನಶೀಲತೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ, ಇದನ್ನು ಭಾರತೀಯ ಪ್ರಜೆಗಳು ಮತ್ತು ಒಸಿಐ ಕಾರ್ಡ್ ಹೊಂದಿರುವವರಿಗೆ ಉಚಿತ ಆಧಾರದ ಮೇಲೆ ಪ್ರಾರಂಭಿಸಲಾಗಿದೆ.

ಎಫ್ ಟಿಐ-ಟಿಟಿಪಿಯನ್ನು ಆನ್ಲೈನ್ ಪೋರ್ಟಲ್ https://ftittp.mha.gov.in ಮೂಲಕ ಜಾರಿಗೆ ತರಲಾಗಿದೆ. ಅರ್ಜಿದಾರರು ತಮ್ಮ ವಿವರಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಪೋರ್ಟಲ್ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಅರ್ಜಿದಾರರ ಬಯೋಮೆಟ್ರಿಕ್ಸ್ ಅನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್.ಆರ್.ಆರ್.ಒ) ಅಥವಾ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ ಸಮಯದಲ್ಲಿ ಸೆರೆಹಿಡಿಯಲಾಗುತ್ತದೆ. ನೋಂದಾಯಿತ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳು ನೀಡಿದ ಬೋರ್ಡಿಂಗ್ ಪಾಸ್ ಅನ್ನು ಇ-ಗೇಟ್ಗಳಲ್ಲಿ ಸ್ಕ್ಯಾನ್ ಮಾಡಬೇಕು ಮತ್ತು ನಂತರ ಅವನ / ಅವಳ ಪಾಸ್ಪೋರ್ಟ್ ಅನ್ನು ಸ್ಕ್ಯಾನ್ ಮಾಡಬೇಕು.  ಪ್ರಯಾಣಿಕರ ಬಯೋಮೆಟ್ರಿಕ್ಸ್ ಅನ್ನು ಇ-ಗೇಟ್ ಗಳಲ್ಲಿ ದೃಢೀಕರಿಸಲಾಗುತ್ತದೆ. ಅಂತಹ ದೃಢೀಕರಣದ ಮೇಲೆ, ಇ-ಗೇಟ್ ಸ್ವಯಂಚಾಲಿತವಾಗಿ ತೆರೆಯುತ್ತದೆ ಮತ್ತು ವಲಸೆ ಅನುಮತಿ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಬ್ಯೂರೋ ಆಫ್ ಇಮಿಗ್ರೇಷನ್ ಸಂಸ್ಥೆಯು ಎಫ್ ಟಿಐ-ಟಿಟಿಪಿ ಕಾರ್ಯಕ್ರಮ ಅನುಷ್ಠಾನದ ನೋಡಲ್ ಏಜೆನ್ಸಿಯಾಗಿದೆ.

ಎಫ್ ಟಿಐ-ಟಿಟಿಪಿ ಯನ್ನು 22.06.2024 ರಂದು ಹೊಸದಿಲ್ಲಿಯ ಐಜಿಐ ವಿಮಾನ ನಿಲ್ದಾಣದ ಟಿ -3 ಟರ್ಮಿನಲ್ ನಲ್ಲಿ ಅಳವಡಿಸಲಾಗಿದೆ. ಮೊದಲ ಹಂತದಲ್ಲಿ ದಿಲ್ಲಿ ವಿಮಾನ ನಿಲ್ದಾಣವಲ್ಲದೆ, ಪ್ರಮುಖ ವಿಮಾನ ನಿಲ್ದಾಣಗಳಾದ ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಅಹಮದಾಬಾದ್ ಗಳನ್ನು ಕಾರ್ಯಕ್ರಮಕ್ಕೆ ಗುರುತಿಸಲಾಗಿದೆ.

ಗೃಹ ವ್ಯವಹಾರಗಳ ಸಹಾಯಕ ಸಚಿವ ಶ್ರೀ ಬಂಡಿ ಸಂಜಯ್ ಕುಮಾರ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ವಿಷಯ ತಿಳಿಸಿದರು.

 

*****


(Release ID: 2039444) Visitor Counter : 50