ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಸಬ್ಸಿಡಿ ದರದ ಟೊಮೆಟೊ ಕೆಜಿಗೆ 60 ರೂ. ಮಾರಾಟಕ್ಕೆ ಚಾಲನೆ ನೀಡಿದರು


ಮೂರು ಕೇಂದ್ರಗಳಿಂದ ಟೊಮೆಟೊ ಖರೀದಿಸಲಾಗಿದೆ, ಬೆಲೆ ಸ್ಥಿರೀಕರಣ ನಿಧಿಯನ್ನು ಬಳಸಲಾಗಿಲ್ಲ: ಶ್ರೀ ಜೋಶಿ

ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಲು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಕ್ರಮ: ಶ್ರೀ ಜೋಶಿ

Posted On: 29 JUL 2024 2:44PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಇಲ್ಲಿ ಕೆಜಿಗೆ 60 ರೂ.ಗೆ ಟೊಮೆಟೊ ಮಾರಾಟ ಯೋಜನೆಗೆ ಚಾಲನೆ ನೀಡಿದರು. ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ವ್ಯಾನ್‌ಗಳು ಟೊಮೆಟೊಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲಿವೆ. ನೋಯ್ಡಾ ಮತ್ತು ಗುರ್ಗಾಂವ್ ಜೊತೆಗೆ ದೆಹಲಿಯಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲಾಗುತ್ತದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಸ್ಥಿರಗೊಳಿಸಲು ಕೇಂದ್ರವು ಈ ಮಾರುಕಟ್ಟೆ ಮಧ್ಯಸ್ಥಿಕೆ ಕ್ರಮವನ್ನು ಕೈಗೊಂಡಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜೋಶಿ, ಪ್ರಮುಖ ನಗರಗಳಲ್ಲಿ, ವಿಶೇಷವಾಗಿ ದೆಹಲಿಯಲ್ಲಿ ಟೊಮೆಟೊ ಬೆಲೆ ಏರಿಕೆಯನ್ನು ಪರಿಶೀಲಿಸಲು, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಈ  ಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಹೇಳಿದರು. ಇಂದಿನಿಂದ ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಕೆಜಿಗೆ 60 ರೂ.ಗೆ ಮಾರಾಟವಾಗಲಿದೆ ಎಂದು ಜೋಶಿ ಹೇಳಿದರು.

ಶ್ರೀ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ, ಏರುತ್ತಿರುವ ಆಹಾರ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಬೆಲೆ ಸ್ಥಿರೀಕರಣ ನಿಧಿಯನ್ನು (PSF) ಸ್ಥಾಪಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು. "ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ, ನಾವು ಸರಕುಗಳನ್ನು ಸಂಗ್ರಹಿಸಲು PSF ಅನ್ನು ಬಳಸುತ್ತೇವೆ. ಈ ಅಗತ್ಯ ವಸ್ತುಗಳನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ, ಇದು ಮಧ್ಯವರ್ತಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಹಕರಿಗೆ ಉತ್ಪನ್ನಗಳು ಲಭ್ಯತೆವಾಗುವಂತೆ ನೋಡಿಕೊಳ್ಳುತ್ತದೆ" ಎಂದು ಶ್ರೀ ಜೋಶಿ ಹೇಳಿದರು. ಆದರೆ ಟೊಮೆಟೊಗಳನ್ನು ನೇರವಾಗಿ ಮಂಡಿಗಳಿಂದ ಖರೀದಿಸಿದ ಕಾರಣ PSF ಅನ್ನು ಬಳಸಲಾಗಿಲ್ಲ. ಈ ಕ್ರಮವು ಟೊಮೆಟೊ ಬೆಲೆಯನ್ನು ಕಡಿಮೆ ಮಾಡುತ್ತದೆ, ಮಾರುಕಟ್ಟೆಯನ್ನು ಸ್ಥಿರಗೊಳಿಸುತ್ತದೆ ಮತ್ತು ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ,.

ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಸ್ಥಿರಗೊಳಿಸಲು ಎನ್‌ಸಿಸಿಎಫ್ ಮಾರುಕಟ್ಟೆಯ ಮಧ್ಯಸ್ಥಿಕೆಯನ್ನು ಪ್ರಾರಂಭಿಸಿದೆ. ಎನ್‌ಸಿಸಿಎಫ್ ಸಗಟು ಮಂಡಿಗಳಿಂದ ಟೊಮೆಟೊಗಳನ್ನು ಖರೀದಿಸುತ್ತಿದೆ ಮತ್ತು ಅವುಗಳನ್ನು ಸಮಂಜಸವಾದ ಚಿಲ್ಲರೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಕ್ರಮವು ಚಿಲ್ಲರೆ ಮಟ್ಟದಲ್ಲಿ ಸಮಂಜಸವಾದ ಲಾಭಾಂಶವನ್ನು ನೀಡುವುದಲ್ಲದೆ ಮಧ್ಯವರ್ತಿಗಳ ಲಾಭಕೋರತನವನ್ನು ತಡೆಗಟ್ಟುತ್ತದೆ.  ಆ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಈ ಮೂಲಕ ಎನ್‌ಸಿಸಿಎಫ್ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅಲ್ಲದೆ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಇದು  ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಸ್ಥಿರವಾದ ಮಾರುಕಟ್ಟೆ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಎನ್‌ಸಿಸಿಎಫ್ ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಟೊಮೆಟೊ ಮಾರಾಟವು ಇಂದಿನಿಂದ (29 ಜುಲೈ 2024) ಪ್ರತಿ ಕಿಲೋಗ್ರಾಂಗೆ 60 ರೂ. ದರದಲ್ಲಿ ಪ್ರಾರಂಭವಾಗಲಿದೆ.   ರಾಜೀವ್ ಚೌಕ್ ಮೆಟ್ರೋ, ಪಟೇಲ್ ಚೌಕ್ ಮೆಟ್ರೋ, ನೆಹರು ಪ್ಲೇಸ್, ಕೃಷಿ ಭವನ, CGO ಕಾಂಪ್ಲೆಕ್ಸ್, ಲೋಧಿ ಕಾಲೋನಿ, ಹೌಜ್ ಖಾಸ್ ಹೆಡ್ ಆಫೀಸ್, ಪಾರ್ಲಿಮೆಂಟ್ ಸ್ಟ್ರೀಟ್, INA ಮಾರ್ಕೆಟ್, ಮಂಡಿ ಹೌಸ್, ಕೈಲಾಶ್ ಕಾಲೋನಿ, ITO, ಸೌತ್ ಎಕ್ಸ್ಟೆನ್ಶನ್, ಮೋತಿ ನಗರ, ದ್ವಾರಕಾ, ನೋಯ್ಡಾ (ಸೆಕ್ಟರ್ 14 ಮತ್ತು 76), ರೋಹಿಣಿ, ಗುರುಗ್ರಾಮ್ ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಟೊಮೆಟೊ ಮಾರಾಟ ಸ್ಥಳಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

 

*****



(Release ID: 2038564) Visitor Counter : 27