ಗ್ರಾಮೀಣಾಭಿವೃದ್ಧಿ ಸಚಿವಾಲಯ

ಆತ್ಮನಿರ್ಭರ ಗ್ರಾಮಗಳ ನಿರ್ಮಾಣ 

Posted On: 26 JUL 2024 2:37PM by PIB Bengaluru

ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು  ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ, ಇದರಲ್ಲಿ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವುದು, ಗ್ರಾಮೀಣ ಮಹಿಳೆಯರ ಸಬಲೀಕರಣ, ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿಯ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು, ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಮುಖ್ಯ ಗಮನ ಹರಿಸಲಾಗಿದೆ. ಸಚಿವಾಲಯದ ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾರತವನ್ನು 'ಆತ್ಮನಿರ್ಭರ'ವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗ), ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ), ದೀನದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈಎನ್ಆರ್ಎಲ್ಎಂ) ದೀನದಯಾಳ್ ಉಪಾಧ್ಯಾಯ   ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಮತ್ತು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್ ಎಸ್ ಎಪಿ) ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯೀ ಯೋಜನೆ (ಡಬ್ಲ್ಯೂಡಿಸಿ-ಪಿಎಂಕೆಎಸ್ ವೈ)ಯ  ಜಲಾನಯನ ಅಭಿವೃದ್ಧಿ ಘಟಕ (ಡಬ್ಲ್ಯೂಡಿಸಿ ) ದಂತಹ ಹಲವಾರು ಉದ್ದೇಶಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಮಳೆಯಾಶ್ರಿತ ಮತ್ತು ಹಾನಿಗೊಳಗಾದ ಭೂಮಿಯನ್ನು ಅಭಿವೃದ್ಧಿಪಡಿಸುವುದು ಉದ್ದೇಶವಾಗಿದೆ. 

ಈ ಸಚಿವಾಲಯವು ಹಳ್ಳಿಗಳಲ್ಲಿ ನಾಗರಿಕ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಮತ್ತು ಕೃಷಿ ಮೂಲಸೌಕರ್ಯಗಳನ್ನು ಮಾರುಕಟ್ಟೆಗೆ ಹತ್ತಿರ ತರಲು ಪ್ರಯತ್ನಗಳನ್ನು ಮಾಡಿದೆ. ಪಿಎಂಜಿಎಸ್ ವೈ ಒಂದು ಸರ್ವಋತು ರಸ್ತೆಯ ಮೂಲಕ ಗ್ರಾಮೀಣ ರಸ್ತೆ ಜಾಲದಲ್ಲಿನ ಸರಿಯಾದ ಸಂಪರ್ಕವಿಲ್ಲದ ವಸತಿಗಳನ್ನು ಸಂಪರ್ಕಿಸುವುದು ಭಾರತ ಸರ್ಕಾರದ ಯೋಜನೆಯಾಗಿದೆ. ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸುವ ಮೂಲಕ ಗ್ರಾಮೀಣ ಜನರಿಗೆ ಮೂಲಭೂತ ಸೇವೆಗಳಿಗೆ ಪ್ರವೇಶಮಾರ್ಗ  ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಯ ಕ್ರಮವಾಗಿ 2000 ರಲ್ಲಿ ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಪ್ರಾರಂಭವಾದಾಗಿನಿಂದ ಜುಲೈ 22, 2024 ರವರೆಗೆ ಒಟ್ಟು 8,27,419 ಕಿಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ 7,65,512 ಕಿಮೀ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ.

ಇತ್ತೀಚೆಗೆ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (ಪಿವಿಟಿಜಿ) ಸೇರಿದ ವಸತಿಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಲು ಪಿಎಂಜಿಎಸ್ ವೈ ಅಡಿಯಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಉದ್ದೇಶಿತ ರಸ್ತೆಯ ಉದ್ದವು 5 ವರ್ಷಗಳ ಅವಧಿಯಲ್ಲಿ (2023-24 ರಿಂದ 2027-28) ಒಟ್ಟು 8,000 ಕಿಲೋಮೀಟರ್ ಆಗಿದೆ. ಪ್ರಧಾನ ಮಂತ್ರಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನ್ಮನ್) ಅಡಿಯಲ್ಲಿ ಇದುವರೆಗೆ ಈಗಾಗಲೇ 2,813.11 ಕಿ.ಮೀ. ಮಂಜೂರು ಮಾಡಲಾಗಿದೆ.

ಪಿಎಂಎವೈ-ಜಿ ಯೋಜನೆಯು ಕುಟುಂಬಗಳಿಗೆ  ಮೂಲಭೂತ ಸೌಕರ್ಯಗಳೊಂದಿಗೆ ಶಾಶ್ವತ ಮನೆಗಳನ್ನು ನಿರ್ಮಿಸಲು ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದು ಫಲಾನುಭವಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೊದಲ ಹೆಜ್ಜೆಯಾಗಿದೆ. ಈ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳಿಗೆ ಶೌಚಾಲಯಗಳು, ಅಡುಗೆ  ಅನಿಲದ (ಎಲ್ಪಿಜಿ) ಸಂಪರ್ಕಗಳು, ವಿದ್ಯುತ್ ಸಂಪರ್ಕಗಳು, ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ, ಶುದ್ಧ ಶಕ್ತಿಗಾಗಿ ಸೌರ ಮೇಲ್ಛಾವಣಿ, ಸ್ವಸಹಾಯ ಗುಂಪುಗಳಿಗೆ (ಎಸ್ಎಚ್ ಜಿ) ದಾಖಲಾತಿ, ಇತ್ಯಾದಿಗಳಿಗೆ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಯೋಜನೆಗಳೊಂದಿಗೆ  ಪರಸ್ಪರ ಜೋಡಿಸಲು ನಿಬಂಧನೆಗಳನ್ನು ಮಾಡಲಾಗಿದೆ. ಒಟ್ಟು 2.95 ಕೋಟಿ ಗುರಿಯಲ್ಲಿ 2.94 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 2.64 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್ ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

 

*****



(Release ID: 2037830) Visitor Counter : 7


Read this release in: English , Urdu , Hindi , Tamil