ರೈಲ್ವೇ ಸಚಿವಾಲಯ

2024-25ರಲ್ಲಿ ಭಾರತೀಯ ರೈಲ್ವೆಯಾದ್ಯಂತ ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ಹಳಿ ದ್ವಿಗುಣಗೊಳಿಸುವ ಯೋಜನೆಗಳಿಗೆ 68,634 ಕೋಟಿ ರೂ.ಗಳ ಸರಾಸರಿ ವಾರ್ಷಿಕ ಬಜೆಟ್ ಹಂಚಿಕೆ


ಭಾರತೀಯ ರೈಲ್ವೆಯು 2014 ರಿಂದ 2024 ರವರೆಗೆ ಹೊಸ ಮಾರ್ಗಗಳು, ಗೇಜ್ ಪರಿವರ್ತನೆಗಳು ಮತ್ತು ಹಳಿ ದ್ವಿಗುಣಗೊಳಿಸುವ ವಿಭಾಗಗಳಲ್ಲಿ ದಿನಕ್ಕೆ ಸರಾಸರಿ 8.54 ಕಿಮೀ ಕಾರ್ಯಾಚರಣೆ ದರದೊಂದಿಗೆ 31,180 ಕಿಮೀಗಳ ಗಮನಾರ್ಹ ವಿಸ್ತರಣೆಯನ್ನು ಸಾಧಿಸಿದೆ

Posted On: 26 JUL 2024 7:16PM by PIB Bengaluru

ರೈಲ್ವೆ ಯೋಜನೆಗಳು ರಾಜ್ಯದ ಗಡಿಗಳಿಂದಾಚೆಗೂ ವ್ಯಾಪಿಸಬಹುದಾದ್ದರಿಂದ ರೇಲ್ವೆ ಯೋಜನೆಳ ಸಮೀಕ್ಷೆ/ಮಂಜೂರಾತಿ/ಅನುಷ್ಠಾನವನ್ನು ರಾಜ್ಯ/ಪ್ರದೇಶವಾರು/ಜಿಲ್ಲಾವಾರು ಪ್ರಕಾರವಲ್ಲದೆ, ವಲಯ ರೈಲ್ವೇವಾರು ಮಾಡಲಾಗುತ್ತದೆ. ಇದಲ್ಲದೆ, ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಲಾಭದಾಯಕತೆ, ಕೊನೆಯ ಮೈಲಿ ಸಂಪರ್ಕ, ಮಿಸ್ಸಿಂಗ್ ಲಿಂಕ್‌ ಗಳು ಮತ್ತು ಪರ್ಯಾಯ ಮಾರ್ಗಗಳು, ದಟ್ಟಣೆಯ ಮಾರ್ಗಗಳ ವರ್ಧನೆ, ಸಾಮಾಜಿಕ-ಆರ್ಥಿಕ ಪರಿಗಣನೆಯ ಅನ್ವಯ ಚಾಲ್ತಿಯಲ್ಲಿರುವ ಯೋಜನೆಗಳ ಹೊಣೆಗಾರಿಕೆಗಳು, ನಿಧಿಯ ಒಟ್ಟಾರೆ ಲಭ್ಯತೆ ಮತ್ತು ಲಭ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.

ಪ್ರಸ್ತುತ, ವಿವಿಧ ಆರ್ಥಿಕ ವಲಯಗಳಿಗೆ ಮಲ್ಟಿಮೋಡಲ್ ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಎನ್‌ ಎಮ್‌ ಪಿ) ಅಡಿಯಲ್ಲಿ ಭಾರತೀಯ ರೈಲ್ವೆಯಲ್ಲಿ ಒಟ್ಟು 49,983 ಕಿಮೀ ಉದ್ದವನ್ನು ಹೊಂದಿರುವ 651 ಸಮೀಕ್ಷೆಗಳನ್ನು (ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ಹಳಿ ದ್ವಿಗುಣಗೊಳಿಸುವಿಕೆ) ತೆಗೆದುಕೊಳ್ಳಲಾಗಿದೆ. ಸಮಗ್ರ ಯೋಜನೆ, ವರ್ಧಿತ ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಕೈಗಾರಿಕಾ ಸಮೂಹಗಳು, ಬಂದರುಗಳು, ಗಣಿಗಳು, ವಿದ್ಯುತ್ ಸ್ಥಾವರಗಳು, ಪ್ರವಾಸಿ ಮತ್ತು ಸಾಂಸ್ಕೃತಿಕ ತಾಣಗಳು, ಕೃಷಿ ವಲಯಗಳು ಇತ್ಯಾದಿಗಳಿಗೆ ಸಂಪರ್ಕವನ್ನು ಒಳಗೊಂಡಂತೆ ಜನರು, ಸರಕು ಮತ್ತು ಸೇವೆಗಳ ತಡೆರಹಿತ ಚಲನೆಗೆ ಅಂತರವನ್ನು ತೆಗೆದುಹಾಕುವ ಉದ್ದೇಶವನ್ನು ಇವು ಹೊಂದಿವೆ.

01.04.2024 ರಂತೆ, ಭಾರತೀಯ ರೈಲ್ವೆಯಾದ್ಯಂತ, 488 ರೈಲ್ವೆ ಮೂಲಸೌಕರ್ಯ ಯೋಜನೆಗಳು (187 ಹೊಸ ಮಾರ್ಗ, 40 ಗೇಜ್ ಪರಿವರ್ತನೆ ಮತ್ತು 261 ಹಳಿ ದ್ವಿಗುಣಗೊಳಿಸುವಿಕೆ) ಅಂದಾಜು 7.44 ಲಕ್ಷ ಕೋಟಿ ರೂ ವೆಚ್ಚದಲ್ಲಿ ಒಟ್ಟು ಉದ್ದ 44,488 ಕಿಮೀ ಯೋಜನೆ/ಅನುಮೋದನೆ/ನಿರ್ಮಾಣ ಹಂತದಲ್ಲಿದೆ. ಈ ಪೈಕಿ 2024ರ ಮಾರ್ಚ್‌ವರೆಗೆ 2.92 ಲಕ್ಷ ಕೋಟಿ ಅಂದಾಜು ವೆಚ್ಚದ 12,045 ಕಿ.ಮೀ ಉದ್ದವನ್ನು ಕಾರ್ಯಾರಂಭ ಮಾಡಲಾಗಿದೆ.

ಎಲ್ಲಾ ರೈಲ್ವೆ ಯೋಜನೆಗಳ ವಲಯವಾರು ಮತ್ತು ವರ್ಷವಾರು ವಿವರಗಳನ್ನು ಭಾರತೀಯ ರೈಲ್ವೇ ವೆಬ್‌ಸೈಟ್‌ ನಲ್ಲಿ ಸಾರ್ವಜನಿಕವಾಗಿ ಲಭ್ಯಗೊಳಿಸಲಾಗಿದೆ.

ಭಾರತೀಯ ರೈಲ್ವೆಯಾದ್ಯಂತ ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ಹಳಿ ದ್ವಿಗುಣಗೊಳಿಸುವ ಯೋಜನೆಗಳಿಗೆ ಸರಾಸರಿ ವಾರ್ಷಿಕ ಬಜೆಟ್ ಹಂಚಿಕೆಯನ್ನು ಕೆಳಗೆ ನೀಡಲಾಗಿದೆ:

ಅವಧಿ

ಸರಾಸರಿ ವೆಚ್ಚ

2009-14ಕ್ಕೆ ಹೋಲಿಸಿದರೆ ಸರಾಸರಿ ಹಂಚಿಕೆಯ ಹೆಚ್ಚಳ

2009-14

11,527 ಕೋಟಿ/ವರ್ಷ

-

2024-25

68,634 ಕೋಟಿ

ಸುಮಾರು 6 ಪಟ್ಟು

 

ಭಾರತೀಯ ರೈಲ್ವೆಯಾದ್ಯಂತ ಹೊಸ ಮಾರ್ಗಗಳು, ಗೇಜ್ ಪರಿವರ್ತನೆ ಮತ್ತು ಹಳಿ ದ್ವಿಗುಣಗೊಳಿಸುವ ವಿಭಾಗಗಳ ಕಾರ್ಯಾರಂಭದ ವಿವರಗಳನ್ನು ಕೆಳಗೆ ನೀಡಲಾಗಿದೆ:

 

ಅವಧಿ

ಕಾರ್ಯಾರಂಭ ಮಾಡಿದ ಒಟ್ಟು ಉದ್ದ

ಕಾರ್ಯಾರಂಭ ಮಾಡಿದ ಸರಾಸರಿ ಉದ್ದ

2009-14ಕ್ಕೆ ಹೋಲಿಸಿದರೆ ಸರಾಸರಿ ಕಾರ್ಯರಂಭದ ಹೆಚ್ಚಳ

2009-14

7,599 ಕಿಮೀ

4.2 ಕಿಮಿ/ದಿನಕ್ಕೆ

-

2014-24

31,180 ಕಿಮೀ

8.54 ಕಿಮೀ/ದಿನಕ್ಕೆ

2 ಪಟ್ಟುಗಿಂತ ಹೆಚ್ಚು

 

ಉತ್ತರ ಪ್ರದೇಶ

ಉತ್ತರ ಪ್ರದೇಶದ ರೈಲ್ವೆ ಯೋಜನೆಗಳು ಉತ್ತರ ರೈಲ್ವೆ, ಉತ್ತರ ಮಧ್ಯ ರೈಲ್ವೆ, ಈಶಾನ್ಯ ರೈಲ್ವೆ, ಪೂರ್ವ ಮಧ್ಯ ರೈಲ್ವೆ ಮತ್ತು ಭಾರತೀಯ ರೈಲ್ವೆಯ ಪಶ್ಚಿಮ ಮಧ್ಯ ರೈಲ್ವೆ ವಲಯಗಳಿಂದ ಆವರಿಸಲ್ಪಟ್ಟಿವೆ.

ಪ್ರಸ್ತುತ, ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಸಂಪೂರ್ಣವಾಗಿ/ಭಾಗಶಃ 4814 ಕಿಮೀ ಉದ್ದವನ್ನು ಹೊಂದಿರುವ 70 ಸಮೀಕ್ಷೆಗಳನ್ನು (17 ಹೊಸ ಮಾರ್ಗ ಮತ್ತು 53 ದ್ವಿಗುಣಗೊಳಿಸುವಿಕೆ) ತೆಗೆದುಕೊಳ್ಳಲಾಗಿದೆ.

01.04.2024 ರಂತೆ, 92,001 ಕೋಟಿ ವೆಚ್ಚದ ಒಟ್ಟು 5,874 ಕಿಮೀ ಉದ್ದದ 68 ಯೋಜನೆಗಳು (16 ಹೊಸ ಮಾರ್ಗ, 03 ಗೇಜ್ ಪರಿವರ್ತನೆ ಮತ್ತು 49 ದ್ವಿಗುಣಗೊಳಿಸುವಿಕೆ) ಉತ್ತರ ಪ್ರದೇಶದಲ್ಲಿ ಸಂಪೂರ್ಣವಾಗಿ/ಭಾಗಶಃ/ಅನುಮೋದನೆ/ನಿರ್ಮಾಣ ಹಂತದಲ್ಲಿವೆ. ಈ ಪೈಕಿ ಮಾರ್ಚ್ 2024 ರವರೆಗೆ 28,366 ಕೋಟಿ ರೂ. ವೆಚ್ಚದ 1313 ಕಿಮೀ ಉದ್ದವು ಕಾರ್ಯಾರಂಭ ಮಾಡಿದೆ.

ಉತ್ತರ ಪ್ರದೇಶದಲ್ಲಿ ಸಂಪೂರ್ಣ/ಭಾಗಶಃ ಮೂಲಸೌಕರ್ಯ ಯೋಜನೆಗಳು ಮತ್ತು ಸುರಕ್ಷತಾ ಕಾರ್ಯಗಳಿಗೆ ಸರಾಸರಿ ಬಜೆಟ್ ಹಂಚಿಕೆ ಈ ಕೆಳಗಿನಂತಿದೆ:

ಅವಧಿ

ಸರಾಸರಿ ವೆಚ್ಚ

2009-14ಕ್ಕೆ ಹೋಲಿಸಿದರೆ ಸರಾಸರಿ ಹಂಚಿಕೆಯ ಹೆಚ್ಚಳ

2009-14

1,109 ಕೋಟಿ/ವರ್ಷ

-

2023-24

17,507 ಕೋಟಿ

16 ಪಟ್ಟುಗಿಂತ ಹೆಚ್ಚು

2024-25

19,848 ಕೋಟಿ

18 ಪಟ್ಟುಗಿಂತ ಹೆಚ್ಚು

 

ಉತ್ತರ ಪ್ರದೇಶ ರಾಜ್ಯದಲ್ಲಿ ಸಂಪೂರ್ಣ/ಭಾಗಶಃ ಹೊಸ ಮಾರ್ಗಗಳು, ಗೇಜ್ ಪರಿವರ್ತನೆ ಮತ್ತು ದ್ವಿಗುಣಗೊಳಿಸುವ ವಿಭಾಗಗಳ ಕಾರ್ಯಾರಂಭದ ವಿವರಗಳು ಕೆಳಕಂಡಂತಿವೆ:

ಅವಧಿ

ಕಾರ್ಯಾರಂಭ ಮಾಡಿದ ಒಟ್ಟು ಉದ್ದ

ಕಾರ್ಯಾರಂಭ ಮಾಡಿದ ಸರಾಸರಿ ಉದ್ದ

2009-14ಕ್ಕೆ ಹೋಲಿಸಿದರೆ ಸರಾಸರಿ ಕಾರ್ಯರಂಭದ ಹೆಚ್ಚಳ

2009-14

996 ಕಿಮೀ

199.2 ಕಿಮಿ/ವರ್ಷಕ್ಕೆ

-

2014-24

4,902 ಕಿಮೀ

490.2 ಕಿಮೀ/ವರ್ಷಕ್ಕೆ

2.47 ಪಟ್ಟುಗಿಂತ ಹೆಚ್ಚು

2023-24ರಲ್ಲಿ 1752 ಕಿ.ಮೀ. ಟ್ರ್ಯಾಕ್ ಅನ್ನು ಕಾರ್ಯಾರಂಭ ಮಾಡಲಾಗಿದೆ.

ಯಾವುದೇ ರೈಲ್ವೇ ಯೋಜನೆ(ಗಳು) ಪೂರ್ಣಗೊಳಿಸುವಿಕೆಯು ರಾಜ್ಯ ಸರ್ಕಾರದಿಂದ ತ್ವರಿತ ಭೂಸ್ವಾಧೀನ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅರಣ್ಯ ಅನುಮತಿ, ವೆಚ್ಚ ಹಂಚಿಕೆ ಯೋಜನೆಗಳಲ್ಲಿ ರಾಜ್ಯ ಸರ್ಕಾರದಿಂದ ವೆಚ್ಚದ ಪಾಲು, ಯೋಜನೆಗಳ ಆದ್ಯತೆ, ಸೌಲಭ್ಯಗಳ ಸ್ಥಳಾಂತರ, ವಿವಿಧ ಪ್ರಾಧಿಕಾರಗಳ ಅನುಮತಿ, ಪ್ರದೇಶದ ಭೌಗೋಳಿಕ ಪರಿಸ್ಥಿತಿಗಳು, ಯೋಜನೆ (ಗಳ) ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ಹವಾಮಾನ ಪರಿಸ್ಥಿತಿಗಳಿಂದಾಗಿ ನಿರ್ದಿಷ್ಟ ಯೋಜನಾ ಪ್ರದೇಶದಲ್ಲಿ ವರ್ಷದಲ್ಲಿ ಕೆಲಸದ ತಿಂಗಳುಗಳ ಸಂಖ್ಯೆ ಇತ್ಯಾದಿಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ. ಮತ್ತು ಈ ಎಲ್ಲಾ ಅಂಶಗಳು ಯೋಜನೆ(ಗಳ) ಪೂರ್ಣಗೊಳ್ಳುವ ಸಮಯ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ.

ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

 

*****



(Release ID: 2037823) Visitor Counter : 36