ಉಕ್ಕು ಸಚಿವಾಲಯ
azadi ka amrit mahotsav g20-india-2023

ಉಕ್ಕು ವಲಯದಲ್ಲಿ ಸರ್ಕಾರದ ಉಪಕ್ರಮಗಳು ಮತ್ತು ನೀತಿಗಳು

Posted On: 26 JUL 2024 2:57PM by PIB Bengaluru

ದೇಶದಲ್ಲಿ ಮೌಲ್ಯವರ್ಧಿತ ಉಕ್ಕು ('ಸ್ಪೆಷಾಲಿಟಿ ಸ್ಟೀಲ್' ) ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಆಮದನ್ನು ಕಡಿಮೆ ಮಾಡಲು ಸರ್ಕಾರವು ವಿಶೇಷ ಉಕ್ಕಿಗಾಗಿ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದೆ.  ವಿಶೇಷ ಉಕ್ಕಿಗಾಗಿ ಪಿಎಲ್ಐ ಯೋಜನೆಯಡಿ 29,500 ಕೋಟಿ ರೂ.ಗಳ ನಿರೀಕ್ಷಿತ ಹೆಚ್ಚುವರಿ ಹೂಡಿಕೆ ಮತ್ತು ವಿಶೇಷ ಉಕ್ಕಿಗಾಗಿ ಸುಮಾರು 25 ಮಿಲಿಯನ್ ಟನ್ (ಎಂಟಿ) ಹೆಚ್ಚುವರಿ ಸಾಮರ್ಥ್ಯ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ.

ಉಕ್ಕು ಒಂದು ಅನಿಯಂತ್ರಿತ (ನಿಯಂತ್ರಣರಹಿತ) ವಲಯವಾಗಿದೆ.  ಉಕ್ಕು ವಲಯದ ಅಭಿವೃದ್ಧಿಗೆ ಅನುಕೂಲಕರ ನೀತಿ ವಾತಾವರಣವನ್ನು ಸೃಷ್ಟಿಸುವ ಮೂಲಕ ಸರ್ಕಾರವು ಅದಕ್ಕೆ ಉತ್ತೇಜಕ ವ್ಯವಸ್ಥೆ /ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ದೇಶದಲ್ಲಿ ಉಕ್ಕಿನ ಉತ್ಪಾದನೆ ಮತ್ತು ಬಳಕೆಯನ್ನು ಸುಧಾರಿಸಲು ಸರ್ಕಾರ ಕೈಗೊಂಡ ಕ್ರಮಗಳು ಈ ಕೆಳಗಿನಂತಿವೆ:-

i. ಸರ್ಕಾರಿ ಖರೀದಿಗಾಗಿ ಮೇಡ್ ಇನ್ ಇಂಡಿಯಾ ಉಕ್ಕನ್ನು ಉತ್ತೇಜಿಸಲು ದೇಶೀಯವಾಗಿ ತಯಾರಿಸಿದ ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ (ಡಿಎಂಐ ಮತ್ತು ಎಸ್ ಪಿ) ನೀತಿಯ ಅನುಷ್ಠಾನ.

ii. ದೇಶದಲ್ಲಿ 'ಸ್ಪೆಷಾಲಿಟಿ ಸ್ಟೀಲ್' ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಆಮದನ್ನು ಕಡಿಮೆ ಮಾಡಲು ಸರ್ಕಾರವು ವಿಶೇಷ ಉಕ್ಕಿಗಾಗಿ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದೆ.  ವಿಶೇಷ ಉಕ್ಕಿಗಾಗಿ ಪಿಎಲ್ಐ ಯೋಜನೆಯಡಿ 29,500 ಕೋಟಿ ರೂ.ಗಳ ನಿರೀಕ್ಷಿತ ಹೆಚ್ಚುವರಿ ಹೂಡಿಕೆ ಮತ್ತು ವಿಶೇಷ ಉಕ್ಕಿಗಾಗಿ ಸುಮಾರು 25 ಮಿಲಿಯನ್ ಟನ್ (ಎಂಟಿ) ಹೆಚ್ಚುವರಿ ಸಾಮರ್ಥ್ಯ ಸೃಷ್ಟಿಯಾಗುವ ನಿರೀಕ್ಷೆ ಇದೆ..

iii ಮೇಕ್ ಇನ್ ಇಂಡಿಯಾ ಉಪಕ್ರಮ ಮತ್ತು ಪಿಎಂ ಗತಿ-ಶಕ್ತಿ ರಾಷ್ಟ್ರೀಯ ಮಹಾ ಯೋಜನೆ (ಮಾಸ್ಟರ್ ಪ್ಲಾನ್)ಯೊಂದಿಗೆ ರೈಲ್ವೆ, ರಕ್ಷಣಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ, ನಾಗರಿಕ ವಿಮಾನಯಾನ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳು ಸೇರಿದಂತೆ ಸಂಭಾವ್ಯ ಬಳಕೆದಾರರೊಂದಿಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯೊಂದಿಗೆ ಉಕ್ಕಿನ ಬಳಕೆಯನ್ನು ಹೆಚ್ಚಿಸಲು ಕ್ರಮ, ಉಕ್ಕಿನ ಒಟ್ಟಾರೆ ಬೇಡಿಕೆ ಹೆಚ್ಚಿಸಲು ಹಾಗು  ದೇಶದಲ್ಲಿ ಉಕ್ಕು ವಲಯದಲ್ಲಿ ಹೂಡಿಕೆ ಹೆಚ್ಚಿಸಲು ಕ್ರಮ..

iv ಉಕ್ಕು ತಯಾರಿಕೆಗೆ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚು ಅನುಕೂಲಕರವಾದ ನಿಯಮಗಳಡಿ ಲಭ್ಯವಾಗುವಂತೆ ಮಾಡಲು ಸಚಿವಾಲಯಗಳು ಮತ್ತು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸುವುದು.

v ದೇಶೀಯವಾಗಿ ಉತ್ಪತ್ತಿಯಾಗುವ ಗುಜರಿ (ಸ್ಕ್ರ್ಯಾಪ್ ) ಗಳ ಲಭ್ಯತೆಯನ್ನು ಹೆಚ್ಚಿಸಲು ಸ್ಟೀಲ್ ಸ್ಕ್ರ್ಯಾಪ್ ಮರುಬಳಕೆ ನೀತಿಯ ಅಧಿಸೂಚನೆ.

vi ಪ್ರಮಾಣೀಕೃತವಲ್ಲದ ಉಕ್ಕಿನ ಉತ್ಪಾದನೆ ಮತ್ತು ಆಮದನ್ನು ತಡೆಗಟ್ಟಲು ಮತ್ತು ಗುಣಮಟ್ಟದ ಉಕ್ಕಿನ ಉತ್ಪನ್ನಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು 145 ಉಕ್ಕಿನ ಗುಣಮಟ್ಟ ನಿಯಂತ್ರಣ ಆದೇಶಗಳ ಅಧಿಸೂಚನೆ.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.

 

*****
 



(Release ID: 2037588) Visitor Counter : 35