ಉಕ್ಕು ಸಚಿವಾಲಯ
azadi ka amrit mahotsav

ಉಕ್ಕು ಸಚಿವಾಲಯದಿಂದ ‘ಉಕ್ಕು ಆಮದು ನಿಗಾ ವ್ಯವಸ್ಥೆ’ 2.0 ಪೋರ್ಟಲ್ ಅನಾವರಣ


ಈ ಪೋರ್ಟಲ್ ದೃಢವಾದ ದತ್ತಾಂಶ ದಾಖಲಾತಿ ವ್ಯವಸ್ಥೆ ಹೊಂದಿದೆ, ಸ್ಥಿರ ಮತ್ತು ಅಧಿಕೃತ ದತ್ತಾಂಶವನ್ನು ಖಾತ್ರಿಪಡಿಸುತ್ತದೆ, ಇದು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುತ್ತದೆ

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಿಂದ ಎರಡನೇ ಆವೃತ್ತಿಯ ‘ಉಕ್ಕು ವಲಯದಲ್ಲಿ ಕಬ್ಬಿಣ ಸುರಕ್ಷತೆ ಕುರಿತ ಮಾರ್ಗಸೂಚಿ’ ಬಿಡುಗಡೆ

“ಈ ಮಾರ್ಗಸೂಚಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯಲ್ಲಿ ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ಅಡಕಗೊಳಿಸಿಕೊಳ್ಳಲು ಮತ್ತು ಅಪಘಾತಗಳನ್ನು ನಿರ್ಮೂಲನೆ ಮಾಡಲು ಸಾಧ್ಯ” ; ಕೇಂದ್ರ ಸಚಿವರು

Posted On: 25 JUL 2024 5:09PM by PIB Bengaluru

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾದ ಶ್ರೀ  ಎಚ್.ಡಿ. ಕುಮಾರ ಸ್ವಾಮಿ ಅವರು ಸಿಮ್ಸ್ 2.0 ವ್ಯವಸ್ಥೆಯನ್ನು ಅನಾವರಣಗೊಳಿಸಿದರು. ಇದು ಉಕ್ಕು ಆಮದು ನಿಗಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ, ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರ ನಾಥ್ ಸಿನ್ಹಾ ಮತ್ತು ಭಾರತ ಸರ್ಕಾರದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

2019 ರಲ್ಲಿ ಸಿಮ್ಸ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ದೇಶೀಯ ಕೈಗಾರಿಕಾ ವಲಯಕ್ಕೆ ಇದು ಅಗತ್ಯವಾಗಿರುವ ಉಕ್ಕು ಆಮದು ಕುರಿತಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿತ್ತು. ಕೈಗಾರಿಕೆಗಳಿಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಈ ಪೋರ್ಟಲ್ ಅನ್ನು ಸಚಿವಾಲಯ ಪುನಶ್ಚೇತನಗೊಳಿಸಿದ್ದು, ಮತ್ತಷ್ಟು ಪರಿಣಾಮಕಾರಿಯಾಗುವಂತೆ ಸಿಮ್ಸ್ 2.0 ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಉಕ್ಕು ವಲಯದ ಆಮದು ಮತ್ತು ದೇಶೀಯ ಉಕ್ಕು ಕೈಗಾರಿಕೆಗೆ ಅಗತ್ಯವಾಗಿರುವ ಪ್ರಗತಿಯನ್ನು ಉತ್ತೇಜಿಸಲು ಸಾಧ್ಯವಾಗಲಿದೆ. ಇಂತಹ ಅಗತ್ಯ ಮಾಹಿತಿಯ ಲಭ್ಯತೆಯಿಂದ ನೀತಿ ನಿರೂಪಣೆಗೆ ಮಾಹಿತಿಯನ್ನಷ್ಟೇ ಒದಗಿಸುವುದಿಲ್ಲ, ಬದಲಿಗೆ ದೇಶೀಯ ಉಕ್ಕು ಕೈಗಾರಿಕೆಗಳ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.

ಸಿಮ್ಸ್ 2.0 ಎಪಿಐ ಸೇರಿದಂತೆ ಸರ್ಕಾರದ ವಿವಿಧ ಪೋರ್ಟಲ್ ಗಳ ಜೊತೆ ಸಂಯೋಜನೆಗೊಂಡಿದೆ. ಇದರಿಂದ ಗುಣಮಟ್ಟ ನಿಯಂತ್ರಣ ಮತ್ತು ಸಮರ್ಥ ಮತ್ತು ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿಯಾಗಲಿದೆ. ಈ ಪೋರ್ಟಲ್ ದತ್ತಾಂಶ ಸಂಗ್ರಹ ವ್ಯವಸ್ಥೆಗೆ ಪುಷ್ಠಿ ನೀಡಲಿದ್ದು, ಸ್ಥಿರ ಮತ್ತು ವಿಶ್ವಾಸಾರ್ಹ ಮಾಹಿತಿ ನೀಡಲಿದೆ. ವಿವಿಧ ದತ್ತಾಂಶಗಳ ಏಕೀಕರಣವು ಅಪಾಯದ ಪ್ರದೇಶಗಳನ್ನು ಗುರುತಿಸಲು ಪಾಲುದಾರರನ್ನು ಸಕ್ರಿಯಗೊಳಿಸುತ್ತದೆ ಮತ್ತು ಆ ಮೂಲಕ ಉತ್ತಮ ಅಪಾಯ ನಿರ್ವಹಣೆಗೆ ಅನುಮತಿಸುತ್ತದೆ, ಉದಾಹರಣೆಗೆ ಆಮದು ಮಾಡುವಾಗ ಬಿಐಎಸ್  ನಿಂದ ಪರವಾನಗಿ ಪಡೆಯದ ನಿರ್ದಿಷ್ಟ ಆಮದು ಮೂಲವನ್ನು ಘೋಷಿಸಿದರೆ, ಅದರ ಆಮದನ್ನು ಶಿಫಾರಸು ಮಾಡದಂತೆ ಸಚಿವಾಲಯವನ್ನು ಸಕ್ರಿಯಗೊಳಿಸುತ್ತದೆ. ವಿವರವಾದ ದತ್ತಾಂಶವು ಉಕ್ಕಿನ ಆಮದುಗಳ ಉತ್ತಮ ವಿಶ್ಲೇಷಣೆ ಮತ್ತು ಸುಂಕ ವ್ಯವಸ್ಥೆಯಲ್ಲಿ ಅಪಾಯ ನಿರ್ವಹಣೆಯನ್ನು ನಡೆಸಲು ನೆರವಾಗುತ್ತದೆ.

ಸಿಮ್ಸ್ 2.0 ಅನ್ನು ಡಿಜಿಎಫ್ಟಿ, ಬಿಐಎಸ್ ಮತ್ತು ಎಂಎಸ್ಟಿಸಿ ಲಿಮಿಟೆಡ್, ಸಿಪಿಎಸ್ಸಿ ಸಂಸ್ಥೆಗಳ ಪರಿಣಾಮಕಾರಿ ಪಾಲುದಾರಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಕೇಂದ್ರ ಉಕ್ಕು ಸಚಿವರಾದ ಶ್ರೀ ಎಚ್.ಡಿ. ಕುಮಾರ ಸ್ವಾಮಿ ಅವರು ಮಾತನಾಡಿ, ಸಿಮ್ಸ್ 2.0 ಅನಾವರಣ ಅತ್ಯಂತ ಪರಿಣಾಮಕಾರಿ ಸಾಧನೆಯಾಗಿದೆ. ಇದನ್ನು ಸರ್ಕಾರದ 100 ದಿನಗಳ ಸಾಧನೆಗಳ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು ಎಂದು ಒತ್ತಿ ಹೇಳಿದರು. ಈ ಮೈಲಿಗಲ್ಲು ದೇಶೀಯ ಉಕ್ಕು ಉದ್ಯಮವನ್ನು ಉತ್ತೇಜಿಸುವ ಮತ್ತು ಉಕ್ಕಿನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ರಾಷ್ಟ್ರದ ಪ್ರಯತ್ನದಲ್ಲಿ ನಿರ್ಣಾಯಕ ಹೆಜ್ಜೆಯನ್ನು ಇಡುತ್ತದೆ. ಇದು ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಹೊಂದಾಣಿಕೆಯಾಗುತ್ತದೆ ಎಂದರು.  

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಮಾತನಾಡಿ, ಈ ಮೇಲ್ದರ್ಜೆಗೇರಿದ ಪೋರ್ಟಲ್ ಪಾಲುದಾರರಿಗೆ ಕ್ರಿಯಾಶೀಲ ಬುದ್ಧಿವಂತಿಕೆ ಮತ್ತು ದತ್ತಾಂಶ - ಚಾಲಿತ ಒಳನೋಟಗಳನ್ನು ಒದಗಿಸುತ್ತದೆ, ಹೆಚ್ಚು ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ಮತ್ತು ಕಾರ್ಯತಂತ್ರದ ಯೋಜನೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಿದರು.

ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರ ನಾಥ್ ಸಿನ್ಹಾ ಮಾತನಾಡಿ, ಭಾರತ ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದಿಸುವ ದೇಶವಾಗಿದೆ. 2023 – 24 ರಲ್ಲಿ ದೇಶ ಆಮದು ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದು, 8 ದಶಲಕ್ಷ ಟನ್ ಗಳಿಗೆ ತಗ್ಗಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಉಕ್ಕಿನ ಆಮದು ಮೇಲೆ ನಿಖರವಾಗಿ ನಿಗಾ ವಹಿಸುವ ವ್ಯವಸ್ಥೆಯಿಂದ ವ್ಯಾಪಾರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಬೆಳವಣಿಗೆ ಹೆಚ್ಚಾಗಲಿದ್ದು, ಉಕ್ಕು ಕೈಗಾರಿಕಾ ವಲಯದಲ್ಲಿ ಭಾರತಕ್ಕೆ ಸುಸ್ಥಿರ ಹೂಡಿಕೆಯನ್ನು ಆಕರ್ಷಿಸಲು ನೆರವಾಗಲಿದೆ. ಮೇಲ್ದರ್ಜೇಗೇರಿದ ಸಿಮ್ಸ್ 2.0 ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದೆ ಎಂದರು.

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಇದೇ ಸಂದರ್ಭದಲ್ಲಿ ಎರಡನೇ ಆವೃತ್ತಿಯ ‘ಉಕ್ಕು ವಲಯದಲ್ಲಿ ಕಬ್ಬಿಣ ಸುರಕ್ಷತೆ ಕುರಿತ ಮಾರ್ಗಸೂಚಿ’ ಬಿಡುಗಡೆ ಮಾಡಿದರು. ಇದರಲ್ಲಿ 16 ಬಗೆಯ ಕಬ್ಬಿಣ ಮತ್ತು ಉಕ್ಕು ವಲಯದಲ್ಲಿ ಮಾರ್ಗದರ್ಶನ ಮಾಡಲಿದೆ. ನಿರ್ದಿಷ್ಟ ಅಪಾಯಗಳನ್ನು ತಗ್ಗಿಸಲು 2020 ರಲ್ಲಿ ಉಕ್ಕು ಸಚಿವಾಲಯ ಪ್ರಕಟಿಸಿದ 25 ಸುರಕ್ಷತಾ ಮಾರ್ಗಸೂಚಿಯನ್ನು ಇದು ವಿಸ್ತರಿಸುತ್ತದೆ. ಈ ಮಾರ್ಗಸೂಚಿಗಳು ಪ್ರಸ್ತುತ ಪ್ರಕೃತಿಯಲ್ಲಿ ಸ್ವಯಂಪ್ರೇರಿತವಾಗಿದ್ದರೂ, ಉದ್ಯಮವು ಅಂತಹ ಮಾರ್ಗಸೂಚಿಯಗಳನ್ನು ಸ್ವಾಗತಿಸಿದೆ, ಏಕೆಂದರೆ ಇವುಗಳನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ರಚಿಸಲಾಗಿದೆ. ಸುರಕ್ಷತೆಯನ್ನು ತಿಳಿಸುವುದರ ಜೊತೆಗೆ, ಈ ಮಾರ್ಗ ಸೂಚಿಗಳು ಉತ್ಪಾದಕತೆಯ ಮೇಲೆ ಧನಾತ್ಮಕ ಪ್ರಭಾವವನ್ನು ಹೊಂದಲಿದೆ.

“ಈ ಆವೃತ್ತಿಯನ್ನು ಬಿಡುಗಡೆ ಮಾಡಲು ತಮಗೆ ಸಂತಸವಾಗುತ್ತಿದೆ ಮತ್ತು ಉಕ್ಕು ಮತ್ತು ಕಬ್ಬಿಣ ಕೈಗಾರಿಕಾ ವಲಯ ವಿಸ್ತೃತವಾಗಿ ಈ ಮಾರ್ಗಸೂಚಿಗಳನ್ನು ಅಡಕಗೊಳಿಸಿಕೊಳ್ಳುವ ವಿಶ್ವಾಸವಿದೆ. ಈ ಮಾರ್ಗಸೂಚಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯಲ್ಲಿ ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ಅಡಕಗೊಳಿಸಿಕೊಳ್ಳಲು ಮತ್ತು ಅಪಘಾತಗಳನ್ನು ನಿರ್ಮೂಲನೆ ಮಾಡಲು ಇದರಿಂದ ಸಾಧ್ಯ ಎಂದು ಸಚಿವರು ಹೇಳಿದರು.

 

*****



(Release ID: 2037297) Visitor Counter : 48