ರೈಲ್ವೇ ಸಚಿವಾಲಯ
ಮುಂಗಾರು ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸಿಗ್ನಲ್ ವ್ಯವಸ್ಥೆ ಕಾರ್ಯ ನಿರ್ವಹಿಸುವಂತೆ ಕ್ರಮಗಳನ್ನು ಕೈಗೊಂಡ ಭಾರತೀಯ ರೈಲ್ವೆ
ಭಾರೀ ಮಳೆ ಸಂದರ್ಭದಲ್ಲಿ ಮಾರ್ಗದಲ್ಲಿ ವಿಶೇಷ ಗಸ್ತು: ಪ್ರಾದೇಶಿಕ ಹವಾಮಾನ ಕೇಂದ್ರಗಳು ಮತ್ತು ಜಿಲ್ಲಾಡಳಿತಗಳೊಂದಿಗೆ ಸಮನ್ವಯವನ್ನು ಸಹ ಖಾತರಿಪಡಿಸಲಾಗುತ್ತದೆ
Posted On:
25 JUL 2024 4:07PM by PIB Bengaluru
ರೈಲ್ವೆ ಸೇತುವೆಗಳು ಮತ್ತು ಮಾರ್ಗಗಳಲ್ಲಿ ತಪಾಸಣೆಗಾಗಿ ಸೂಕ್ತ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ನಿರ್ದಿಷ್ಟ ಮಾರ್ಗಗಳಲ್ಲಿ ರೈಲ್ವೆ ಟ್ರ್ಯಾಕ್ ಗಳ ತಪಾಸಣೆಗಾಗಿ ಅಧಿಕಾರಿಗಳನ್ನು ನಿಯೋಜಿಲಾಗುತ್ತಿದೆ. ಇದರ ಜೊತೆಗೆ ನಿಯಮಿತ ನಿರ್ವಹಣೆಗಾಗಿ ನಿಗದಿತ ವೇಳಾಪಟ್ಟಿಯ ಜೊತೆಗೆ ಮುಂಗಾರು ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸಿಗ್ನಲ್ ವ್ಯವಸ್ಥೆ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಜೊತೆಗೆ ಭಾರತೀಯ ರೈಲ್ವೆ ಈ ಕೆಳಗಿನಂತೆ ಕ್ರಮಗಳನ್ನು ಕೈಗೊಂಡಿದೆ.
(i) ಅಂಗಳದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲಾಗಿದೆ.
(ii) ಟ್ರ‍್ಯಾಕ್ ಸರ್ಕ್ಯೂಟ್ ಗಳ ವೈಫಲ್ಯಕ್ಕಾಗಿ ಗುರುತಿಸಲಾದ ದುರ್ಬಲ ಸ್ಥಳಗಳನ್ನು ಮುಂಚಿತವಾಗಿ ಪರಿಶೀಲಿಸಲಾಗುತ್ತದೆ.
(iii) ತಪಾಸಣಾ ಕೇಂದ್ರಗಳು ಮತ್ತು ಟ್ರ್ಯಾಕ್ ಸರ್ಕ್ಯೂಟ್ ಗಳಲ್ಲಿ ಟ್ರ್ಯಾಕ್ ಮತ್ತು ಸಿಗ್ನಲಿಂಗ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
(iv) ನೀರು ನಿಲುಗಡೆಗೆ ಗುರಿಯಾಗುವ ಪ್ರದೇಶಗಳಲ್ಲಿ ಆಕ್ಸಲ್ ಕೌಂಟರ್ ಗಳನ್ನು ಒದಗಿಸಲಾಗುತ್ತಿದೆ.
ಗುರುತಿಸಲಾದ ವಲಯಗಳಲ್ಲಿ ಮುಂಗಾರು ಗಸ್ತು ವ್ಯವಸ್ಥೆಯಂತಹ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದುರ್ಬಲ ಕೇಂದ್ರಗಳಲ್ಲಿ ಕಾವಲುಗಾರರನ್ನು ನಿಯೋಜಿಸಲಾಗುತ್ತದೆ. ಭಾರೀ ಮಳೆ ಸಂದರ್ಭದಲ್ಲಿ ಮಾರ್ಗಗಳಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಲಾಗಿದೆ. ಅಣೆಕಟ್ಟೆಗಳು/ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಕುರಿತಂತೆ ಜಿಲ್ಲಾಡಳಿತಗಳಿಂದ ಮಾಹಿತಿ ಪಡೆಯಲಾಗುವುದು ಮತ್ತು ಇತ್ತೀಚಿನ ಮಾಹಿತಿಗಾಗಿ ಸಂಬಂಧಪಟ್ಟ ಪ್ರಾದೇಶಿಕ ಹವಾಮಾನ ಕೇಂದ್ರಗಳೊಂದಿಗೆ ಸಮನ್ವಯತೆ ಸಾಧಿಸಲಾಗುವುದು.
24.07.2024 ರಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ತಂತ್ರಜ್ಞಾನ, ರೈಲ್ವೆ ಸಚಿವರಾದ ಶ್ರೀ ಅಶ್ವನಿ ವೈಷ್ಣವ್ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
*****
(Release ID: 2037022)
Visitor Counter : 41