ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಆಪೇಕ್ಷಿಸದ ಮತ್ತು ಅನಧಿಕೃತ ವ್ಯಾಪಾರ ಸಂವಹನ ನಿಯಂತ್ರಣ - 2024 ಕುರಿತಾದ ಕರಡು ಮಾರ್ಗಸೂಚಿಗೆ ಆಕ್ಷೇಪಣೆಗಳು ಮತ್ತು ಮಾಹಿತಿ ನೀಡುವ ಕಾಲಮಿತಿ ವಿಸ್ತರಣೆ
ಕರಡು ಮಾರ್ಗಸೂಚಿ ಕುರಿತು ಸ್ವೀಕರಿಸುವ ಸಲಹೆಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಪರಿಗಣಿಸಲಿದೆ
Posted On:
25 JUL 2024 10:55AM by PIB Bengaluru
ಅನಪೇಕ್ಷನೀಯ ಮತ್ತು ಅನಗತ್ಯ ವ್ಯಾಪಾರ ಸಂವಹನ ನಿಯಂತ್ರಣ - 2024 ಕುರಿತಾದ ಕರಡು ಮಾರ್ಗಸೂಚಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ಕುರಿತ ಕಾಲಮಿತಿ ವಿಸ್ತರಿಸುವಂತೆ ವಿವಿಧ ಸಂಘಟನೆಗಳು, ಒಕ್ಕೂಟಗಳು ಮತ್ತು ಪಾಲುದಾರರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಕಾಲಮಿತಿಯನ್ನು 21.07.2024 ರಿಂದ ಅನ್ವಯವಾಗುವಂತೆ 15 ದಿನಗಳ ಕಾಲ ವಿಸ್ತರಣೆ ಮಾಡಿದೆ.
ಆಕ್ಷೇಪಣೆಗಳನ್ನು 05.08.2024 ರ ವರೆಗೆ ಸಲ್ಲಿಸಬಹುದಾಗಿದೆ. (ಈ ಕೆಳಕಂಡಂತೆ ನೀಡಿರುವ ಕೊಂಡಿಯ ಮೂಲಕ ಸಲ್ಲಿಕೆ ಮಾಡಬಹುದು):
(https://consumeraffairs.nic.in/sites/default/files/file-uploads/latestnews/Date_Extend_0.pdf)
ಇಲಾಖೆಯು ವಿವಿಧ ಸಲಹೆಗಳು/ಆಕ್ಷೇಪಣೆಗಳನ್ನು ಸ್ವೀಕರಿಸಿದ್ದು, ಅವುಗಳು ಪ್ರಸ್ತುತ ಪರಿಶೀಲನೆಯಲ್ಲಿವೆ. ಸಲಹೆಗಳನ್ನು ಈ js-ca[at]nic[dot]in ಇಮೇಲ್ ಮೂಲಕ ಸಲ್ಲಿಸಬಹುದು ಮತ್ತು ಕರಡು ಮಾರ್ಗ ಸೂಚಿಗಾಗಿ ಇಲ್ಲಿ ಒದಗಿಸಿದ ಕೊಂಡಿ ಮೂಲಕ ಪ್ರವೇಶಿಸಬಹುದು:
(https://consumeraffairs.nic.in/sites/default/files/file-uploads/latestnews/Guidelines%20for%20the%20Prevention%20and%20Regulation%20of%20Unsolicited%20and%20Unwarranted%20Business%20Communication%2C%202024.pdf)
*****
(Release ID: 2036849)
Visitor Counter : 52