ರೈಲ್ವೇ ಸಚಿವಾಲಯ
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ "ಕವಚ್" ಅನ್ನು ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ 1465 ರೂಟ್ ಕಿ.ಮೀ. ಮತ್ತು 144 ಇಂಜಿನ್‌ಗಳಿಗೆ ಅಳವಡಿಸಲಾಗಿದೆ
"ಕವಚ" ಯೋಜನೆಯಡಿ ಇಲ್ಲಿಯವರೆಗೆ ₹ 1216.77 ಕೋಟಿ ಬಳಸಲಾಗಿದೆ; 2024-25ನೇ ಸಾಲಿನಲ್ಲಿ ₹ 1112.57 ಕೋಟಿ ಹಣ ಹಂಚಿಕೆ ಮಾಡಲಾಗಿದೆ
Posted On:
24 JUL 2024 7:08PM by PIB Bengaluru
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ ಕವಚ್ ಮತ್ತು ಹೆಚ್ಚು ತಂತ್ರಜ್ಞಾನದ ವ್ಯವಸ್ಥೆಯಾಗಿದ್ದು, ಇದು ಅತ್ಯುನ್ನತ ಸುರಕ್ಷತೆ ಪ್ರಮಾಣೀಕರಣವಾಗಿದೆ..
ಲೋಕೋ ಪೈಲಟ್ ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ನಿಗದಿತ ವೇಗದ ಮಿತಿಯೊಳಗೆ ಚಲಿಸುವ ರೈಲಿನಲ್ಲಿ ಲೋಕೋ ಪೈಲಟ್ ಗೆ "ಕವಚ್" ಸಹಾಯ ಮಾಡುತ್ತದೆ ಮತ್ತು ಪ್ರತಿಕೂಲ ಹವಾಮಾನದಲ್ಲಿ ರೈಲು ಸುರಕ್ಷಿತವಾಗಿ ಸಂಚರಿಸಲು ಸಹಾಯ ಮಾಡುತ್ತದೆ.
ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ ಅತ್ಯುನ್ನತ ಮಟ್ಟದ ಸುರಕ್ಷತಾ ಸಮಗ್ರತೆಯ ಮಟ್ಟ - SIL4 ಗಾಗಿ ಕವಚ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಅದರ SIL ವೈಶಿಷ್ಟ್ಯಗಳ ಮೂಲಕ ಬ್ಲಾಕ್ ವಿಭಾಗಗಳಲ್ಲಿ ಮತ್ತು ರೈಲು ಮಾರ್ಗಗಳಲ್ಲಿ ರೈಲು ಘರ್ಷಣೆಯ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಕವಚ ವ್ಯವಸ್ಥೆಯನ್ನು ಇತರ ದೇಶಗಳು ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಕವಚದ ಅನುಷ್ಠಾನವು ಅನೇಕ ಚಟುವಟಿಕೆಗಳ ಕಾರ್ಯಗತಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ, ಅವುಗಳೆಂದರೆ:
ಎ. ಪ್ರತಿ ನಿಲ್ದಾಣದಲ್ಲಿ ಸ್ಟೇಷನ್ ಕವಚ ಅಳವಡಿಕೆ.
ಬಿ. ಟ್ರ್ಯಾಕ್ ಉದ್ದಕ್ಕೂ RFID ಟ್ಯಾಗ್‌ಗಳ ಅಳವಡಿಕೆ.
ಸಿ. ವಿಭಾಗದ ಉದ್ದಕ್ಕೂ ಟೆಲಿಕಾಂ ಟವರ್‌ಗಳ ಸ್ಥಾಪನೆ.
ಡಿ. ಟ್ರ್ಯಾಕ್ ಉದ್ದಕ್ಕೂ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ.
ಇ. ಭಾರತೀಯ ರೈಲ್ವೆಯಲ್ಲಿ ಚಾಲನೆಯಲ್ಲಿರುವ ಪ್ರತಿಯೊಂದು ಲೋಕೋ ಮೋಟಿವ್‌ನಲ್ಲಿ ಲೋಕೋ ಕವಚ ಒದಗಿಸಲಾಗುವುದು.
* ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕವಚವನ್ನು ಇಲ್ಲಿಯವರೆಗೆ 1465 ರೂಟ್ ಕಿ.ಮೀ. ಮತ್ತು 144 ಲೋಕೋಮೋಟಿವ್‌ಗಳಲ್ಲಿ (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೇಕ್‌ಗಳನ್ನು ಒಳಗೊಂಡಂತೆ) ನಿಯೋಜಿಸಲಾಗಿದೆ.
ಪ್ರಸ್ತುತ, ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಕಾರಿಡಾರ್‌ಗಳಲ್ಲಿ (ಅಂದಾಜು 3000 ರೂಟ್ ಕಿಮೀ) ಕವಚ್‌ಗೆ ಸಂಬಂಧಿಸಿದ ಮುಖ್ಯ ವಸ್ತುಗಳ ಪ್ರಗತಿಯು ಕೆಳಕಂಡಂತಿದೆ:
(i) ಆಪ್ಟಿಕಲ್ ಫೈಬರ್ ಕೇಬಲ್ ಹಾಕುವುದು: 4275 ಕಿ.ಮೀ
(ii) ಟೆಲಿಕಾಂ ಟವರ್‌ಗಳ ಸ್ಥಾಪನೆ: 364
(iii) ನಿಲ್ದಾಣಗಳಲ್ಲಿ ಕವಚ ಸಲಕರಣೆಗಳನ್ನು ಒದಗಿಸುವುದು: 285
(iv) ಲೋಕೋದಲ್ಲಿ ಕವಚ ಸಲಕರಣೆಗಳನ್ನು ಒದಗಿಸುವುದು: 319
(v) ಕವಚ ಟ್ರ್ಯಾಕ್ ಸೈಡ್ ಸಲಕರಣೆಗಳ ಅಳವಡಿಕೆ : 1384 ಕಿಮೀ. ರೂಟ್
ಇದಲ್ಲದೆ, ವಿವರವಾದ ಯೋಜನಾ ವರದಿ (DPR) ಮತ್ತು ವಿವರವಾದ ಅಂದಾಜು 6000 RKms ಅನ್ನು ಭಾರತೀಯ ರೈಲ್ವೆಯಲ್ಲಿ ಅನುಮೋದಿಸಲಾಗಿದೆ. ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅನುಷ್ಠಾನವನ್ನು ಹೆಚ್ಚಿಸಲು, ಹೆಚ್ಚಿನ OEM ಗಳ ಪ್ರಯೋಗಗಳು ವಿವಿಧ ಹಂತಗಳಲ್ಲಿವೆ.
ಕವಚ 4.0
16.07.2024 ರಂದು, ಕವಚ 4.0 ವಿವರಣೆಯನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಅನುಮೋದಿಸಿದೆ. ಈ ಆವೃತ್ತಿಯು ವೈವಿಧ್ಯಮಯ ರೈಲ್ವೆ ನೆಟ್‌ವರ್ಕ್‌ಗೆ ಅಗತ್ಯವಿರುವ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಅಲ್ಪಾವಧಿಯಲ್ಲಿಯೇ, ಭಾರತೀಯ ರೈಲ್ವೆಯು ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಪರೀಕ್ಷಿಸಿದೆ ಮತ್ತು ನಿಯೋಜಿಸಲು ಪ್ರಾರಂಭಿಸಿದೆ.
ಇದುವರೆಗೆ ಕವಚ ಕಾಮಗಾರಿಗೆ ಬಳಸಲಾದ ಹಣ ₹1216.77 ಕೋಟಿ ಮತ್ತು 2024-25ನೇ ಸಾಲಿನಲ್ಲಿ ₹1112.57 ಕೋಟಿ ಹಣ ಹಂಚಿಕೆಯಾಗಿದೆ. ಕವಚಕ್ಕೆ ಮಂಜೂರಾದ ಹಣವನ್ನು ಕವಚಕ್ಕೆ ಮಾತ್ರ ಬಳಸಲಾಗುತ್ತಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
*****
(Release ID: 2036736)
Visitor Counter : 43