ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ತಾಂಜಾನಿಯಾ ಸಂಸತ್ತಿನ ಸ್ಪೀಕರ್ ರಾಷ್ಟ್ರಪತಿಯವರನ್ನು ಭೇಟಿ ಮಾಡಿದರು

Posted On: 24 JUL 2024 6:09PM by PIB Bengaluru

ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜಾನಿಯಾದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮತ್ತು ಇಂಟರ್-ಪಾರ್ಲಿಮೆಂಟರಿ ಯೂನಿಯನ್ ಅಧ್ಯಕ್ಷರಾದ ಡಾ ತುಲಿಯಾ ಆಕ್ಸನ್ ಅವರು ಇಂದು (ಜುಲೈ 24, 2024) ರಾಷ್ಟ್ರಪತಿ ಭವನದಲ್ಲಿ  ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಡಾ. ಆಕ್ಸನ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ರಾಷ್ಟ್ರಪತಿಯವರು, 2023-26ಕ್ಕೆ ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು ಭಾರತವು ಸುಧೀರ್ಘ ಕಾಲದಿಂದ ಐಪಿಯು ಸದಸ್ಯತ್ವ ಹೊಂದಿದೆ ಎಂದು  ಹೇಳಿದರು. ನಮ್ಮ ಸಂಸದರು ಕಾರ್ಯಕಾರಿ ಸಮಿತಿ ಸೇರಿದಂತೆ ಅದರ ವಿವಿಧ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಸಂಸದರಿಗೆ ವೇದಿಕೆ ಒದಗಿಸಿದ್ದಕ್ಕಾಗಿ ಅವರು ಐಪಿಯು ಅನ್ನು ಶ್ಲಾಘಿಸಿದರು. ಐಪಿಯು ಅಧ್ಯಕ್ಷರಾಗಿ,  ಡಾ. ಆಕ್ಸನ್ ಅವರು, ಸದಸ್ಯ ರಾಷ್ಟ್ರಗಳ ನಡುವಿನ ಪರಸ್ಪರ ಅರ್ಥೈಸಿಕೆ ಮತ್ತು ಸಂವಾದವನ್ನು ಮತ್ತಷ್ಟು ಬಲಪಡಿಸುತ್ತಾರೆ ಮತ್ತು ಅಂತರಾಷ್ಟ್ರೀಯ ಸಂಸದರ ಒಕ್ಕೂಟದ ಮೌಲ್ಯಗಳು ಮತ್ತು ಉದ್ದೇಶಗಳನ್ನು ಎತ್ತಿಹಿಡಿಯುವಲ್ಲಿ ಕಾರ್ಯನಿರ್ವಹಿಸುತ್ತಾರೆ.  ಜೊತೆಗೆ, ಗ್ಲೋಬಲ್ ಸೌತ್‌ಗೆ ಸಂಬಂಧಿಸಿದ ವಿಷಯಗಳನ್ನು ಎತ್ತಿಹಿಡಿಯಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ ಎಂದು  ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಮತ್ತು ತಾಂಜಾನಿಯಾ ದೇಶಗಳು ಸಾಂಪ್ರದಾಯಿಕವಾಗಿ ನಿಕಟ ಮತ್ತು ಸ್ನೇಹಪೂರ್ಣ ಸಂಬಂಧವನ್ನು ಹೊಂದಿವೆ. ತಾಂಜಾನಿಯಾದಲ್ಲಿನ ಭಾರತೀಯ ಸಮುದಾಯವು ಭಾರತ-ತಾಂಜಾನಿಯಾ ಸ್ನೇಹದ ಪ್ರಮುಖ ಸೇತುವೆಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಅಲ್ಲದೆ  2023ರ ಅಕ್ಟೋಬರ್‌ನಲ್ಲಿ ತಾಂಜಾನಿಯಾ ಅಧ್ಯಕ್ಷರಾದ ಸಾಮಿಯಾ ಸುಲುಹು ಹಸನ್ಭಾರತಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ  ಅವರೊಂದಿಗೆ ನಡೆಸಿದ್ದ ಚರ್ಚೆಗಳನ್ನು ಕೂಡ ರಾಷ್ಟ್ರಪತಿಯವರು ಪ್ರೀತಿಯಿಂದ ನೆನಪಿಸಿಕೊಂಡರು.

 

*****


(Release ID: 2036707)