ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎನ್‌ ಎಫ್‌ ಡಿ ಸಿ ಮತ್ತು ನೆಟ್‌ಫ್ಲಿಕ್ಸ್ ಸಹಯೋಗದಲ್ಲಿ ಭಾರತದಲ್ಲಿನ ಹಿನ್ನೆಲೆ ಧ್ವನಿ ಕಲಾವಿದರಿಗಾಗಿ ಉನ್ನತ ಕೌಶಲ್ಯ ಕಾರ್ಯಕ್ರಮ "ದ ವಾಯ್ಸ್‌ಬಾಕ್ಸ್" ಅನ್ನು ಪ್ರಾರಂಭಿಸಲಿದೆ

Posted On: 18 JUL 2024 6:38PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ ಎಫ್‌ ಡಿ ಸಿ), ಭಾರತದಲ್ಲಿನ ಹಿನ್ನೆಲೆ ಧ್ವನಿ  ಕಲಾವಿದರಿಗಾಗಿ "ದಿ ವಾಯ್ಸ್‌ಬಾಕ್ಸ್" ಎಂಬ ಉನ್ನತ ಕೌಶಲ್ಯದ ಕಾರ್ಯಕ್ರಮವನ್ನು ಪ್ರಾರಂಭಿಸಲು ನೆಟ್‌ಫ್ಲಿಕ್ಸ್ ಇಂಡಿಯಾದೊಂದಿಗೆ ಕೈಜೋಡಿಸಿದೆ.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಶ್ರೀಮತಿ ವೃಂದಾ ದೇಸಾಯಿ, ನೆಟ್‌ಫ್ಲಿಕ್ಸ್‌ ನ ಕಾನೂನು ನಿರ್ದೇಶಕ ಶ್ರೀ ಆದಿತ್ಯ ಕುಟ್ಟಿ, ನೆಟ್‌ಫ್ಲಿಕ್ಸ್‌ ನ ಸ್ಪರ್ಧಾತ್ಮಕ ನೀತಿಯ ಮುಖ್ಯಸ್ಥ ಶ್ರೀ ಫ್ರೆಡ್ಡಿ ಸೋಮ್ಸ್ ಮತ್ತು ಪರ್ಲ್ ಅಕಾಡೆಮಿ ಅಧ್ಯಕ್ಷ ಶ್ರೀ ಶರದ್ ಮೆಹ್ರಾ ಮತ್ತಿತರರು ಉಪಸ್ಥಿತರಿದ್ದರು.

ಇಂದು ಶಾಸ್ತ್ರಿ ಭವನದಲ್ಲಿ, ಈ ಕುರಿತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌ ಎಫ್‌ ಡಿ ಸಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪ್ರಸಾರ II) ಶ್ರೀ ಪೃಥುಲ್ ಕುಮಾರ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ವ್ಯಾಪಾರ ಮತ್ತು ಕಾನೂನು ವ್ಯವಹಾರಗಳ ಸಾಮಾನ್ಯ ಸಲಹೆಗಾರ ಮತ್ತು ಹಿರಿಯ ನಿರ್ದೇಶಕ ಶ್ರೀ ಕಿರಣ್ ದೇಸಾಯಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಇದು ಎನ್‌ ಎಫ್‌ ಡಿ ಸಿ ಮತ್ತು ನೆಟ್‌ಫ್ಲಿಕ್ಸ್‌ ನ ಸಂಯೋಜಿತ ದೃಷ್ಟಿಯೊಂದಿಗೆ ಭಾರತೀಯ ಸಿನಿಮಾವನ್ನು ಉತ್ತೇಜಿಸುತ್ತದೆ ಮತ್ತು ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಪ್ರತಿಭೆಯನ್ನು ಪೋಷಿಸುತ್ತದೆ.

“ದ ವಾಯ್ಸ್‌ಬಾಕ್ಸ್” ಕಾರ್ಯಕ್ರಮವು ಇಂಗ್ಲಿಷ್, ಹಿಂದಿ, ಮರಾಠಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು ಮತ್ತು ಗುಜರಾತಿ ಭಾಷೆಗಳನ್ನು ಕೇಂದ್ರೀಕರಿಸಿ ಹಿನ್ನೆಲೆ ಧ್ವನಿ  ಕಲಾವಿದರಿಗೆ ಪೂರ್ವ ಕಲಿಕೆಯ (RPL) ತರಬೇತಿಯನ್ನು ನೀಡುತ್ತದೆ. ಕಾರ್ಯಕ್ರಮದ ಭಾಗವಾಗಿ, ತರಬೇತಿ (ಅತಿಥಿ ಉಪನ್ಯಾಸಗಳು ಮತ್ತು ಮಾರ್ಗದರ್ಶಿ ಸೆಷನ್‌) ಒಳಗೊಂಡಿರುವ ರಚನಾತ್ಮಕ ಕಾರ್ಯಾಗಾರಗಳನ್ನು ಮೌಲ್ಯಮಾಪನದ ನಂತರ ಭಾರತದ ಏಳು - ನವದೆಹಲಿ, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಮತ್ತು ಕೊಚ್ಚಿ- ಪ್ರಮುಖ ನಗರಗಳಲ್ಲಿ ನಡೆಸಲಾಗುತ್ತದೆ. ಪ್ರತಿ ತಂಡನಲ್ಲಿ 30 ಅಭ್ಯರ್ಥಿಗಳಿಗೆ ಅವಕಾಶವಿದ್ದು, 210 ಭಾಗವಹಿಸುವವರನ್ನು ಪ್ರಾಥಮಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಭಾಗವಹಿಸುವವರಲ್ಲಿ ಕನಿಷ್ಠ ಶೇ.50 ರಷ್ಟು ಮಹಿಳೆಯರು ಇರುತ್ತಾರೆ.

ಭಾರತದ ಪ್ರಮುಖ ವಿನ್ಯಾಸ ಸಂಸ್ಥೆಯಾದ ಪರ್ಲ್ ಅಕಾಡೆಮಿ ಈ ಕಾರ್ಯಕ್ರಮಕ್ಕೆ ತರಬೇತಿ ಪಾಲುದಾರರಾಗಿ ಸೇರಿಕೊಳ್ಳಲಿದೆ. ನೆಟ್‌ಫ್ಲಿಕ್ಸ್‌ ನ ವಿಶೇಷ ಯೋಜನೆಯಾದ “ಆಜಾದಿ ಕಿ ಅಮೃತ್ ಕಹಾನಿಯಾ”ಗೆ ಕೊಡುಗೆ ನೀಡಲು ಪ್ರತಿ ತಂಡದಿಂದ ಏಳು ಪ್ರಮುಖ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ, ಅಲ್ಲಿ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಕಥೆಗಳ ನಿರೂಪಣೆಗೆ ತಮ್ಮ ಧ್ವನಿಯನ್ನು ನೀಡುತ್ತಾರೆ.

ಹಿನ್ನೆಲೆ ಧ್ವನಿಯಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಉತ್ಸುಕರಾಗಿರುವ ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ವೃತ್ತಿಪರರಿಗೆ, ಮೊದಲನೆಯದಾಗಿ ಮಹಿಳೆಯರಿಗೆ ಕಾರ್ಯಕ್ರಮವು ಮುಕ್ತವಾಗಿದೆ.

ಈ ವಾಯ್ಸ್‌ಬಾಕ್ಸ್ ಕಾರ್ಯಕ್ರಮವನ್ನು ಸೃಜನಶೀಲತೆಯ ಸಮಾನತೆಗಾಗಿ ನೆಟ್‌ಫ್ಲಿಕ್ಸ್ ಫಂಡ್ ಪ್ರಾಯೋಜಿಸಿದೆ, ಇದು ಪ್ರಪಂಚದಾದ್ಯಂತದ ಕಾರ್ಯಕ್ರಮಗಳ ಮೂಲಕ ಟಿವಿ ಮತ್ತು ಚಲನಚಿತ್ರ ಉದ್ಯಮಗಳಲ್ಲಿ ಕಡಿಮೆ ಯಶಸ್ಸು ಪ್ರತಿನಿಧಿಸುವ ಸಮುದಾಯಗಳ ಅಡಿಯಲ್ಲಿ ಐದು ವರ್ಷಗಳಲ್ಲಿ ವರ್ಷಕ್ಕೆ 100 ಮಿಲಿಯನ್ ಡಾಲರ್‌ ಅನ್ನು ಮೀಸಲಿಟ್ಟಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, ಎನ್‌ ಎಫ್‌ ಡಿ ಸಿ ಯ ವೆಬ್‌ಸೈಟ್ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಿಗೆ ಭೇಟಿ ನೀಡಿ.

 

*****

 

 



(Release ID: 2034162) Visitor Counter : 10