ರಕ್ಷಣಾ ಸಚಿವಾಲಯ

ಮಾಜಿ ಸೈನಿಕರಿಗಾಗಿ ಜುಲೈ 19 , 2024 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಡೈರೆಕ್ಟರೇಟ್ ಜನರಲ್ ರಿ-ಸೆಟ್ಲಮೆಂಟ್ ಅವರು ಆಯೋಜಿಸಲಿದ್ದಾರೆ 

Posted On: 18 JUL 2024 7:09PM by PIB Bengaluru

ಕೇಂದ್ರ ರಕ್ಷಣಾ ಸಚಿವಾಲಯದ ಡೈರೆಕ್ಟರೇಟ್ ಜನರಲ್ ರೀ-ಸೆಟಲ್‌ಮೆಂಟ್ (ಡಿಜಿಆರ್), ಜುಲೈ 19, 2024 ರಂದು ಬೆಂಗಳೂರಿನ ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿ (ಎಂಟಿ ಕಾಂಪ್ಲೆಕ್ಸ್), ಜಾಲಹಳ್ಳಿ ಪಶ್ಚಿಮ (ಸಿಟಿಐ ಹತ್ತಿರ) ನಲ್ಲಿ ಮಾಜಿ ಸೈನಿಕರಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ.  ಎರಡನೇ ಅವಕಾಶವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು, ಮಾಜಿ ಸೈನಿಕರಿಗೆ (ಇ.ಎಸ್.ಎಂ) ಪರಸ್ಪರ ಸಂಪರ್ಕ ಏರ್ಪಡಿಸಿ ಅವರುಗಳಿಗೆ ನೂತನ ಅವಕಾಶವನ್ನು ಸೃಷ್ಟಿಸಿಕೊಡುವ ಗುರಿಯನ್ನು ಈ ಉದ್ಯೋಗ ಮೇಳವು ಹೊಂದಿದೆ.

ಎಲ್ಲಾ ಮಾಜಿ ಸೈನಿಕರ ನೋಂದಣಿಯು ಆ ದಿನ ಬೆಳಿಗ್ಗೆ 7 ರಿಂದ 10 ರವರೆಗೆ ಸೂಚಿತ ಸ್ಥಳದಲ್ಲಿ ನಡೆಯುತ್ತದೆ.  ನೋಂದಾಯಿಸಲು, ಇ.ಎಸ್.ಎಂ. ಗಳು  ತಮ್ಮ ಇ.ಎಸ್.ಎಂ. ಗುರುತಿನ ಚೀಟಿ ಮತ್ತು ಸಂಪೂರ್ಣ ವ್ಯಕ್ತಿ ಪರಿಚಯ ಅಥವಾ ಜೈವಿಕ ಡೇಟಾದ ಐದು ಪ್ರತಿಗಳನ್ನು ಇತ್ತೀಚಿನ ಛಾಯಾಚಿತ್ರದೊಂದಿಗೆ ತರಬೇಕು. ಇ.ಎಸ್.ಎಂ ಉದ್ಯೋಗಾಕಾಂಕ್ಷಿಗಳು ಬಹು ಉದ್ಯೋಗಾವಕಾಶಗಳಿಗೆ ಮತ್ತು ರಗಳೆ-ಮುಕ್ತ ನೇಮಕಾತಿ ಪ್ರಕ್ರಿಯೆಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ವಿವಿಧ ಕಾರ್ಪೊರೇಟ್‌ಗಳು ಸಂದರ್ಶನದ ತರುವಾಯ ಹಿರಿಯ ಮೇಲ್ವಿಚಾರಕರು, ಮಧ್ಯಮ/ಹಿರಿಯ ಮಟ್ಟದ ವ್ಯವಸ್ಥಾಪಕರಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರವರೆಗಿನ ನೇಮಕಾತಿಗಳಲ್ಲಿ ಸೂಕ್ತ ಇ.ಎಸ್.ಎಂ.ಗಳನ್ನು ತಕ್ಷಣವೇ ಉದ್ಯೋಗದಲ್ಲಿ ನೇರವಾಗಿ ನೇಮಿಸಿಕೊಳ್ಳುತ್ತವೆ.


ಮಾಜಿ ಸೈನಿಕರು ಹೆಚ್ಚಿನ ಮಾಹಿತಿಗಾಗಿ ಮತ್ತು ಸಹಾಯಕ್ಕಾಗಿ, ವಾರಂಟ್ ಅಧಿಕಾರಿ ಆರ್‌.ಕೆ. ಸಿಂಗ್ ಅವರನ್ನು 9742998194 ಮತ್ತು ಮಾಸ್ಟರ್ ವಾರಂಟ್ ಅಧಿಕಾರಿ ಆರ್. ಕುಮಾರ್ ಅವರನ್ನು 8618387821 ಸಂಖ್ಯೆಯಲ್ಲಿ  ಸಂಪರ್ಕಿಸಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಪೇಕ್ಷಿಸುವ ಕಂಪನಿಗಳು/ ಕಾರ್ಪೊರೇಟ್‌ಗಳು/ ಉದ್ಯೋಗದಾತರು http://www.dgrindia.gov.in ಮೂಲಕ ಆನ್‌ ಲೈನ್‌ ನಲ್ಲಿ  ನೋಂದಾಯಿಸಿಕೊಳ್ಳಬಹುದು ಮತ್ತು ಸಂಸ್ಥೆಗಳು ತಮ್ಮ ಸ್ಟಾಲ್‌ ಗಳನ್ನು ಮುಂಗಡವಾಗಿ ಕಾದಿರಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು (ಎಸ್.ಇ. ಮತ್ತು ಸಿಐ), ಡೈರೆಕ್ಟರೇಟ್ ಜನರಲ್ ರಿ-ಸೆಟಲ್‌ಮೆಂಟ್ ವೆಸ್ಟ್ ಬ್ಲಾಕ್ IV, ಆರ್.ಕೆ.ಪುರಂ, ನವದೆಹಲಿ-110066 ವಿಳಾಸವನ್ನು ಅಥವಾ ದೂರವಾಣಿ ಸಂಖ್ಯೆ : 011- 20862542 ರಲ್ಲಿ ಸಂಪರ್ಕಿಸಬಹುದು ಹಾಗೂ ಇಮೇಲ್ ವಿಳಾಸ : http://seopadgr@desw.gov.in , http://drzspne@desw.gov.in ಮೂಲಕ ತಮ್ಮ ಅಪೇಕ್ಷಿತ ವಿವರಣೆ ಪಡೆಯಬಹುದು. 

 

 *****



(Release ID: 2034158) Visitor Counter : 10


Read this release in: English , Urdu , Hindi , Tamil