ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು, 2011 ರಲ್ಲಿ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ


ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಪೂರ್ವ-ಪ್ಯಾಕೇಜ್ ಮಾಡಿದ (ಮೊದಲೇ ಪ್ಯಾಕ್ ಮಾಡಲಾದ) ಸರಕುಗಳ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಘೋಷಿಸಲು ತಿದ್ದುಪಡಿ ಪ್ರಸ್ತಾಪಿಸಿದೆ

ಈ ತಿದ್ದುಪಡಿಯು ಯಾವುದೇ ಪ್ರಮಾಣದ ಪ್ಯಾಕೇಜ್ ಮಾಡಿದ ಸರಕುಗಳ ತಯಾರಕರು / ಪ್ಯಾಕ್ ಮಾಡಿದವರು / ಆಮದುದಾರರು ಚಿಲ್ಲರೆ ಮಾರಾಟಕ್ಕಾಗಿ
ಪ್ಯಾಕ್ ಮಾಡಿದ್ದರೆ ಘೋಷಣೆಗಳನ್ನು ಮಾಡಲು ಸ್ಪಷ್ಟತೆಯನ್ನು ತರುತ್ತದೆ

ಕೈಗಾರಿಕಾ ಗ್ರಾಹಕರು/ಬಳಕೆದಾರರು ಅಥವಾ ಸಾಂಸ್ಥಿಕ ಗ್ರಾಹಕರಿಗೆ ಮೀಸಲಾಗಿರುವ ಪ್ಯಾಕೇಜ್ ಮಾಡಿದ ಸರಕುಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ

ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಸ್ತಾವಿತ ಕಾನೂನು ಮಾಪನಶಾಸ್ತ್ರ ತಿದ್ದುಪಡಿಯ ಬಗ್ಗೆ 29.7.2024 ರೊಳಗೆ ಪ್ರತಿಕ್ರಿಯೆ/ಹಿಮ್ಮಾಹಿತಿಯನ್ನು ಕೋರಿದೆ

Posted On: 14 JUL 2024 12:52PM by PIB Bengaluru

ಆಫ್ಲೈನ್ ಮತ್ತು ಆನ್ಲೈನ್ ವೇದಿಕೆಗಳು (ಪ್ಲಾಟ್ಫಾರ್ಮ್ಗಳು) ಸೇರಿದಂತೆ ಹೆಚ್ಚುತ್ತಿರುವ ಮಾರುಕಟ್ಟೆಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ಯಾಕೇಜ್ ಮಾಡಿದ ಸರಕುಗಳಿಗೆ ಏಕರೂಪತೆಯನ್ನು ಸ್ಥಾಪಿಸಲು ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು, 2011 ರಲ್ಲಿ ತಿದ್ದುಪಡಿ ಮಾಡಲು ಮುಂದಾಗಿದೆ.  ಕೈಗಾರಿಕಾ ಗ್ರಾಹಕರು ಅಥವಾ ಸಾಂಸ್ಥಿಕ ಗ್ರಾಹಕರಿಗೆ ಮೀಸಲಾಗಿರುವ ಪ್ಯಾಕೇಜ್ ಮಾಡಿದ ಸರಕುಗಳನ್ನು ಹೊರತುಪಡಿಸಿ, ಚಿಲ್ಲರೆ ವ್ಯಾಪಾರದಲ್ಲಿ ಚೀಲಗಳಲ್ಲಿ ಮಾರಾಟವಾಗುವ ಎಲ್ಲಾ ಪ್ಯಾಕೇಜ್ ಮಾಡಿದ ಸರಕುಗಳಿಗೆ ನಿಯಮಗಳು ಅನ್ವಯವಾಗುತ್ತವೆ ಎಂದು ಪರಿಷ್ಕೃತ ನಿಬಂಧನೆಯಲ್ಲಿ ಹೇಳಲಾಗಿದೆ.  

ಪರಿಷ್ಕೃತ ನಿಬಂಧನೆಯು ಪ್ಯಾಕೇಜ್ ಮಾಡಿದ ಸರಕುಗಳಿಗೆ ಏಕರೂಪದ ಮಾನದಂಡಗಳು / ಅವಶ್ಯಕತೆಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ, ವಿವಿಧ ಬ್ರಾಂಡ್ ಗಳು ಮತ್ತು ಉತ್ಪನ್ನಗಳಲ್ಲಿ ಸ್ಥಿರತೆ ಮತ್ತು ನ್ಯಾಯಸಮ್ಮತತೆಯನ್ನು ಉತ್ತೇಜಿಸುತ್ತದೆ ಹಾಗು ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಗ್ರಾಹಕರಿಗೆ ಸಹಾಯ ಮಾಡುತ್ತದೆ.

ಇಲಾಖೆಯು 2024 ರ ಜುಲೈ 29 ರವರೆಗೆ 15 ದಿನಗಳಲ್ಲಿ ಮಧ್ಯಸ್ಥಗಾರರಿಂದ/ಭಾಗೀದಾರರಿಂದ  ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದೆ.

ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು, 2011 ರ ಪ್ರಕಾರ, ಉತ್ಪಾದಕ / ಪ್ಯಾಕರ್ / ಆಮದುದಾರರ ಹೆಸರು ಮತ್ತು ವಿಳಾಸ, ಯಾವ ದೇಶದಿಂದ ಬಂದಿದೆ, ಸರಕಿನ ಸಾಮಾನ್ಯ ಅಥವಾ ರಾಸಾಯನಿಕ (ಜೆನೆರಿಕ್) ಹೆಸರು, ನಿವ್ವಳ ಪ್ರಮಾಣ, ತಯಾರಿಕೆಯ ತಿಂಗಳು ಮತ್ತು ವರ್ಷ, ಗರಿಷ್ಠ ಬೆಲೆ (ಎಂ.ಆರ್.ಪಿ) , ಯುನಿಟ್ ಮಾರಾಟ ಬೆಲೆ, ಸರಕು ಮಾನವ ಬಳಕೆಗೆ ಅನರ್ಹವಾಗುವ ಸಂದರ್ಭದಲ್ಲಿ ಯಾವ ದಿನಾಂಕದ ಮೊದಲು ಬಳಕೆಗೆ ಉತ್ತಮ/ ಈ ದಿನಾಂಕದ ಮೊದಲು ಬಳಕೆ ಎಂಬಿತ್ಯಾದಿ ಬಳಕೆದಾರ ಜಾಗೃತಿ ಕಡ್ಡಾಯ ಮಾಹಿತಿಯನ್ನು ಘೋಷಿಸಬೇಕಾಗುತ್ತದೆ.  ಗ್ರಾಹಕರ ಹಿತದೃಷ್ಟಿಯಿಂದ ಎಲ್ಲಾ ಪೂರ್ವ-ಪ್ಯಾಕ್ ಮಾಡಿದ ಸರಕುಗಳ ಮೇಲೆ ಈ ಗ್ರಾಹಕ ಆರೈಕೆ ವಿವರಗಳು ಕಡ್ಡಾಯವಾಗಿ ನಮೂದಾಗಿರಬೇಕಾಗುತ್ತದೆ.

ಕೆಳಗಿನವುಗಳನ್ನು ಹೊರತುಪಡಿಸಿ ಎಲ್ಲಾ ಪೂರ್ವ-ಪ್ಯಾಕೇಜ್ (ಮೊದಲೇ ಪ್ಯಾಕ್) ಮಾಡಲಾದ  ಸರಕುಗಳಿಗೆ ನಿಯಮಗಳು ಅನ್ವಯವಾಗುತ್ತವೆ:

(ಎ) 25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿರುವ ಸರಕುಗಳ ಪ್ಯಾಕೇಜುಗಳು;

(ಬಿ) 50 ಕಿಲೋಗ್ರಾಂಗಿಂತ ಹೆಚ್ಚು ತೂಕದ ಚೀಲಗಳಲ್ಲಿ ಮಾರಾಟವಾಗುವ ಸಿಮೆಂಟ್, ರಸಗೊಬ್ಬರ ಹಾಗು ಕೃಷಿ ಉತ್ಪನ್ನಗಳು; ಮತ್ತು

(ಸಿ) ಕೈಗಾರಿಕಾ ಗ್ರಾಹಕರು ಅಥವಾ ಸಾಂಸ್ಥಿಕ ಗ್ರಾಹಕರಿಗೆ ಮೀಸಲಾಗಿರುವ ಪ್ಯಾಕೇಜ್ ಮಾಡಿದ ಸರಕುಗಳು.

50 ಕಿಲೋಗ್ರಾಂಗಿಂತ ಹೆಚ್ಚಿನ ತೂಕದ ಚೀಲಗಳಲ್ಲಿ ಮಾರಾಟವಾಗುವ ಸಿಮೆಂಟ್, ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳಿಗೆ ಹಾಗು 25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿರುವ ಪ್ಯಾಕೇಜ್ ಮಾಡಿದ ಸರಕುಗಳಿಗೆ ನಿಯಮಗಳು ಅನ್ವಯಿಸುವುದಿಲ್ಲ, ಏಕೆಂದರೆ ಚಿಲ್ಲರೆ ಮಾರಾಟಕ್ಕೆ ಉದ್ದೇಶಿಸಲಾಗುವ ಪ್ಯಾಕೇಜ್ ಮಾಡಿದ ಸರಕುಗಳು 25 ಕೆಜಿಗಿಂತ ಹೆಚ್ಚು ಇರುವುದಿಲ್ಲ ಎಂದು ಭಾವಿಸಲಾಗಿದೆ.  ಆದಾಗ್ಯೂ, 25 ಕೆಜಿಗಿಂತ ಹೆಚ್ಚಿನ ತೂಕದ ಪ್ಯಾಕೇಜ್ ಮಾಡಿದ ಸರಕುಗಳು ಚಿಲ್ಲರೆ ಮಾರಾಟಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂಬುದನ್ನೂ  ಗಮನಿಸಲಾಗಿದೆ, ಆದರೆ ಇದು ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಪೂರ್ವ-ಪ್ಯಾಕೇಜ್ (ಮೊದಲೇ ಪ್ಯಾಕ್ ಮಾಡಲಾದ)   ಸರಕುಗಳ ಮೇಲೆ ಎಲ್ಲಾ ಘೋಷಣೆಗಳನ್ನು ಮಾಡುವ ಉದ್ದೇಶಕ್ಕೆ ಅನುಗುಣವಾಗಿಲ್ಲ,  ಅಂದರೆ ಘೋಷಣೆ ಮಾಡಬೇಕಾದ ಅವಶ್ಯಕತೆ ಇಲ್ಲ.

 

*****



(Release ID: 2033205) Visitor Counter : 32