ಉಕ್ಕು ಸಚಿವಾಲಯ
azadi ka amrit mahotsav

ವಿಶಾಖಪಟ್ಟಣಂ ಉಕ್ಕು ಘಟಕಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಮತ್ತು ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮಾ

Posted On: 11 JUL 2024 5:00PM by PIB Bengaluru

ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮಾ ಅವರೊಂದಿಗೆ ವಿಶಾಖಪಟ್ಟಣಂ ಉಕ್ಕು ಘಟಕ [ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ – ಆರ್.ಐ.ಎನ್.ಎಲ್]ಕ್ಕೆ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಉಕ್ಕು ಘಟಕದ ಕೆಲವು ಪ್ರಮುಖ ಉತ್ಪಾದನಾ ತಾಣಗಳಿಗೆ ಅವರು ಭೇಟಿ ನೀಡಿದರು. ಆರ್.ಐ.ಎನ್.ಎಲ್ ನ ಆಡಳಿತ ಮಂಡಳಿಯ ಪ್ರಮುಖರ ಜೊತೆ ಅವರು ವಿಸ್ತೃತ ಮಾತುಕತೆ ನಡೆಸಿದರು ಮತ್ತು ಘಟಕದ ಸಾಮರ್ಥ್ಯದ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ತಪಾಸಣೆ ನಂತರ ಸಚಿವರು ಘಟಕದ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರು.  

ಆರ್.ಎನ್.ಐ.ಎಲ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅತುಲ್ ಭಟ್, ಜಂಟಿ ಕಾರ್ಯದರ್ಶಿ ಸಂಜಯ್ ರಾಯ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

 

*****


(Release ID: 2032471) Visitor Counter : 82